
ಕನ್ನಡದ ಅನೇಕ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸಿದ್ದ ಅಮೃತಾ ನಾಯ್ಡು ಒಂದು ಕರಾಳ ಅಧ್ಯಾಯವನ್ನು ಮುಗಿಸಿ, ಹೊಸ ಜೀವನವನ್ನು ಆರಂಭಿಸಿದ್ದಾರೆ. ಮಗಳು ಸಮನ್ವಿ ಜೊತೆಗೆ ʼನನ್ನಮ್ಮ ಸೂಪರ್‌ಸ್ಟಾರ್ʼ ಶೋನಲ್ಲಿ ಭಾಗವಹಿಸಿದ್ದರು. ಕ್ರೂರ ವಿಧಿ, ಮಗಳನ್ನು ಅವರಿಂದ ದೂರ ಮಾಡಿತು. ಅಪಘಾತದಲ್ಲಿ ಸಮನ್ವಿ ನಿಧನಳಾದಳು.
ಅಮೃತಾ ನಾಯ್ಡು ಹೇಳಿದ್ದೇನು?
“ಮಗಳು ಹೋದ ದಿನ ಬೆಟ್ಟ ತಲೆ ಮೇಲೆ ಬಿದ್ದ ಹಾಗಾಯ್ತು. ನಮಗೆ ಯಾಕೆ ಹೀಗಾಯ್ತು ಅಂತ ನಾನು, ನನ್ನ ಗಂಡ ಯೋಚನೆ ಮಾಡುತ್ತಿರುತ್ತಿದ್ದೆವು. ಇದಕ್ಕೆಲ್ಲ ಉತ್ತರಗಳೇ ಸಿಗೋದಿಲ್ಲ. ಹತ್ತು ವರ್ಷಗಳ ಮುಂದಿನ ಪ್ಲ್ಯಾನ್ ಮಾಡಿರುತ್ತೇವೆ. ಆದರೆ ನಮ್ಮ ಕನಸಿನ ಸೌಧ ಕುಸಿದು ಬೀಳತ್ತೆ. ಎಂದಿಗೂ ನಾವು ಆ ಒಂದ ದಿನಕ್ಕೆ ಸಾಕ್ಷಿಯಾದೆವು. ಸಮನ್ವಿ ಬಾ ಮಗಳೇ ಅಂತ ನಾವೆಲ್ಲ ಪ್ರಾರ್ಥನೆ ಮಾಡುತ್ತಿದ್ದೆವು. ಆಗ ನಾನು ಗರ್ಭಿಣಿಯಾಗಿದ್ದೆ. ನನ್ನ ಮಗನ ಹೆಸರು ಹರ್ಷ್. ನಾನು ಪ್ಲ್ಯಾನ್ ಮಾಡದೆ ಮಗು ಆಯ್ತು. ದೇವರೇ ಈ ರೀತಿ ಪ್ಲ್ಯಾನ್ ಮಾಡಿದ್ದ ಅಂತ ಅನಿಸತ್ತೆ” ಎಂದು ಅಮೃತಾ ನಾಯ್ಡು ಹೇಳಿದ್ದಾರೆ.
'ನನಗೊಂದು ಲವ್ ಬ್ರೇಕಪ್ ಆಗಿದೆ, ಸದ್ಯಕ್ಕೆ ಲವ್ ಮಾಡಲ್ಲ..' ಬಾಯ್‌ಫ್ರೆಂಡ್ ಬಗ್ಗೆ ಸಪ್ತಮಿ ಗೌಡ ಮಾತು!
ಹರ್ಷ್ ಬಂದಿದ್ದಾನೆ!
“ನಮಗೆ ಒಂದು ಮಗು ಇರಲಿ ಅಂತ ದೇವರು ಹೀಗೆ ಮಾಡಿದ್ನೋ ಏನೋ! ಸಮನ್ವಿ ಇಲ್ಲ, ಮಗು ಇರಲಿ ಅಂತ ದೇವರು ಹರ್ಷ್‌ನನ್ನು ಕಳಿಸಿಕೊಟ್ಟ ಅಂತ ಅನಿಸತ್ತೆ. ಅಪಘಾತ ಆದ ಬಳಿಕ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಎರಡು ಗಂಟೆಗಳ ಕಾಲ ಚೆಕ್ ಮಾಡಿದರೂ ಕೂಡ ಮಗು ಹಾರ್ಟ್ ಬೀಟ್ ಸಿಗ್ತಾ ಇರಲಿಲ್ಲ. ಇನ್ನೇನು ವೈದ್ಯರು ಬಂದು ನಮಗೆ ಮಗು ಹಾರ್ಟ್ ಬೀಟ್ ನಿಂತು ಹೋಯ್ತು ಅಂತ ಘೋಷಣೆ ಮಾಡಬೇಕು ಎನ್ನುವಷ್ಟರಲ್ಲಿ ಹಾರ್ಟ್ ಬೀಟ್ ಸಿಗ್ತು. ಎಲ್ಲರೂ ಸಮನ್ವಿಗೆ ಏನೂ ಆಗಬಾರದು ಅಂತ ಪ್ರಾರ್ಥನೆ ಮಾಡುತ್ತಿದ್ದರು ಎಂದು ನನ್ನ ಸ್ನೇಹಿತರು ಆಮೇಲೆ ಹೇಳಿದರು. ಆಮೇಲೆ ದೇವರು ನೇರವಾಗಿ ಹರ್ಷ್ ಮೂಲಕ ಉತ್ತರ ಕೊಟ್ಟಿದ್ದಾನೆ” ಎಂದು ಅಮೃತಾ ನಾಯ್ಡು ಹೇಳಿದ್ದಾರೆ.
'ಹಾಸನದಲ್ಲಿ ಹುಡುಗ್ರು ಸಿಕ್ಕಾಪಟ್ಟೆ ರೇಗಿಸ್ತ್ರಿದ್ರು, ಪ್ರಪೋಸ್ ಯಾರೂ ಮಾಡಿರ್ಲಿಲ್ಲ': ಗಿಚ್ಚಿ ಗಿಲಿಗಿಲಿ ಜಾಹ್ನವಿ
“ಸಮನ್ವಿಯೇ ಹರ್ಷ್ ಆಗಿ ಬಂದಿದ್ದಾನೆ ಅಂತ ಅನಿಸ್ತಿದೆ. She ಇದ್ದವಳು He ಆಗಿದೆ ಅಂತ ಅನಿಸ್ತಿದೆ. ನನ್ನ ಕರ್ಮಫಲದಿಂದ ಈ ರೀತಿ ಆಯ್ತು ಅಂತ ಅನಿಸ್ತು. ನಾನು ಈಗ ಎಲ್ಲ ವಿಚಾರಗಳನ್ನು ಪಾಸಿಟಿವ್ ಆಗಿ ತಗೊಂಡು ಹೋಗಲು ಬಯಸುತ್ತೇನೆ. ಯಾವುದೋ ಪುಣ್ಯಕಾರ್ಯದಿಂದ ದೇವರು ನಮ್ಮ ಜೊತೆಗೆ ಇದ್ದಾನೆ ಅಂತ ಅನಿಸ್ತಿದೆ. ಈಗ ನಮ್ಮ ಮನೆಯಲ್ಲಿ ಹರ್ಷ್ ಮೂಲಕ ಖುಷಿ ಮನೆಮಾಡಿದೆ” ಎಂದು ಅಮೃತಾ ನಾಯ್ಡು ಹೇಳಿದ್ದಾರೆ.
'ನನ್ನಮ್ಮ ಸೂಪರ್ ಸ್ಟಾರ್' ನಂತರ ಡಿಫರೆಂಟ್ ವಿಡಿಯೋ ಮಾಡ್ತಿರುವ ಆರ್ಯಾ ಮತ್ತು ಪುನೀತಾ!
ಎಲ್ಲರ ಹಾರೈಕೆ ಇರಲಿ!
“ನನ್ನಮ್ಮ ಸೂಪರ್‌ಸ್ಟಾರ್ ಶೋ ಮೂಲಕ ನನ್ನ ಮಗಳು ಸಮನ್ವಿಗೆ ಎಲ್ಲರ ಆಶೀರ್ವಾದ, ಹಾರೈಕೆ ಸಿಕ್ಕಿದೆ. ಇಂದು ಹರ್ಷ್‌ಗೆ ಕೂಡ ಎಲ್ಲರೂ ಆಶೀರ್ವದಿಸಿದ್ದಾರೆ. ನನ್ನ ಕಷ್ಟದ ಸಮಯದಲ್ಲಿ ಜೊತೆಗೆ ನಿಂತ ಎಲ್ಲರೂ ನಮಗೆ ದೇವರೇಗಳು. ನಮ್ಮ ಜೀವನದಲ್ಲಿ ಪ್ರೀತಿ ಮುಖ್ಯ, ಉಳಿದ ಯಾವ ವಿಷಯವೂ ಲೆಕ್ಕಕ್ಕೆ ಬರೋದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ತಮ್ಮ ಖುಷಿ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದನ್ನು ನೋಡಿ ಎಲ್ಲರಿಗೂ ತಮ್ಮ ಲೈಫ್‌ನಲ್ಲಿ ಏನೂ ಇಲ್ಲ ಅಂತ ಅನಿಸಬಹುದು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಆಡಂಬರ ತೋರಿಸೋದು ಬೇಡ ಅಂತ ನನಗೆ ಅನಿಸ್ತಿದೆ” ಎಂದು ಅಮೃತಾ ನಾಯ್ಡು ಹೇಳಿದ್ದಾರೆ.
“ನಾನು ನಟನೆ ಫೀಲ್ಡ್‌ಗೆ ಬಂದಕೂಡಲೇ ಜನರು ಏನು ಹೇಳ್ತಾರೋ ಎನ್ನುವ ಭಯ ಇದೆ. ಇಷ್ಟು ಬೇಗ ಮಗಳ ಸಾವಿನ ನೋವನ್ನು ಮರೆತು ನಟಿಸೋಕೆ ಬಂದ್ರು ಅಂತ ಹೇಳಬಹುದು. ಆದರೆ ಈ ಎಲ್ಲ ಮಾತುಗಳನ್ನು ಮೀರಿ ನಿಂತಿದ್ದೇನೆ. ನನ್ನ ಮಗ ಚಿಕ್ಕವನು, ಅವನಿಗೆ ನಾನೀಗ ಸಮಯ ಕೊಡುತ್ತಿದ್ದೇನೆ” ಎಂದು ಅಮೃತಾ ನಾಯ್ಡು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.