
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಸಿದ್ಧ ನಮ್ಮ ಊರಿನ ರಸಿಕರು ಕೃತಿಗೆ ಆಧರಿತ ಸರಣಿ ಕಟ್ಟೆ ಓಟಿಟಿಯಲ್ಲಿ ಪ್ರಸಾರವಾಗಲಿದೆ. ನಂದಿತಾ ಯಾದವ್ ಈ ಸರಣಿಯನ್ನು ನಿರ್ದೇಶಿಸಿದ್ದಾರೆ.
ರಾಜೇಶ್ ನಟರಂಗ, ಲಕ್ಷ್ಮೀ ಗೋಪಾಲಸ್ವಾಮಿ, ಮಂಡ್ಯ ರಮೇಶ್, ಪಿ. ಶೇಷಾದ್ರಿ, ಶೃಂಗ, ಬಿ. ಸುರೇಶ, ಸುನೇತ್ರಾ ಪಂಡಿತ್, ರಮೇಶ್ ಪಂಡಿತ್, ಸುಜಯ್ ಶಾಸ್ತ್ರಿ, ಸುಂದರ್ ವೀಣಾ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.
ಇನ್‌ಸ್ಟಾಗ್ರಾಂ ವಿಡಿಯೋ ಮಾಡ್ತಾ ಟೈಂ ಪಾಸ್ ಮಾಡ್ತಿದ್ದಾರೆ ನಟಿ
ಅಶೋಕ್ ಕಶ್ಯಪ್ ಸಿನಿಮಾಟೋಗ್ರಫಿ, ಸುರೇಶ್ ಅರಸ್ ಸಂಕಲನ, ಪ್ರಕಾಶ ಸೊಂಟಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ. ಮಲೆನಾಡಿನ ಪರಿಸರದಲ್ಲಿ ಈ ಸರಣಿ ಚಿತ್ರೀಕರಿಸಲಾಗಿದೆ. ಈ ಸರಣಿ ಸ್ವಾತಂತ್ರ್ಯ ಪೂರ್ವದ ಕತೆಯನ್ನು ಹೊಂದಿದೆ. ಗೊರೂರರ ನಮ್ಮ ಊರಿನ ರಸಿಕರು ಪುಸ್ತಕವನ್ನು ಓದಿದವರು, ಓದದವರು ಎಲ್ಲರೂ ಈ ಸರಣಿ ವೀಕ್ಷಿಸಬಹುದು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.