ಯಾವ ಪೇನ್​ ಕಿಲ್ಲರೂ ವರ್ಕ್​ ಆಗ್ಲಿಲ್ಲ, ನಾನ್ಯಾರು ಅಂತ ಕೇಳಿದೆ... ಅಪರ್ಣಾರ ಕರಾಳ ರಾತ್ರಿ ನೆನಪಿಸಿದ ನಾಗರಾಜ್​

By Suchethana D  |  First Published Aug 29, 2024, 12:38 PM IST

ಕ್ಯಾನ್ಸರ್​ ಎಂದು ತಿಳಿದರೂ ಧೈರ್ಯದಿಂದಲೇ ಇದ್ದ ನಿರೂಪಕಿ ಅಪರ್ಣಾ ಕೊನೆಯ ದಿನಗಳು ಅನುಭವಿಸಿದ ಹಿಂಸೆ ಎಂಥದ್ದು ಎನ್ನುವ ಬಗ್ಗೆ ಪತಿ ನಾಗರಾಜ್​ ವಸ್ತಾರೆ ಹೇಳಿದ್ದಾರೆ.
 


ಎರಡು ವರ್ಷಗಳಿಂದ ಕ್ಯಾನ್ಸರ್​ ಎಂಬ ಮಹಾಮಾರಿಯನ್ನು ತಮ್ಮೊಳಗೆ ಅಡಗಿಸಿಟ್ಟುಕೊಂಡು ಯಾರಿಗೂ ಹೇಳದೇ ನಿರೂಪಕಿ ಅಪರ್ಣಾ ಕಣ್ಮರೆಯಾಗಿ ಹೋಗಿದ್ದಾರೆ. ಇದನ್ನು ಕನ್ನಡಿಗರಿಗೆ ಇನ್ನೂ ಅರಗಿಸಿಕೊಳ್ಳಲು ಆಗದ ವಿಷಯವೇ. ಇವರ ಸಾವಿನ ಬಳಿಕ ಶ್ವಾಸಕೋಶದ ಕ್ಯಾನ್ಸರ್​ ಕುರಿತು ಜನರಲ್ಲಿ ಇನ್ನಷ್ಟು ಆತಂಕ ಮನೆಮಾಡಿದ್ದಂತೂ ಸತ್ಯ. ಏಕೆಂದರೆ, ಎಲ್ಲರಿಗೂ ತಿಳಿದಿರುವಂತೆ ಅಪರ್ಣಾ ಅತ್ಯಂತ ಸುಸಂಸ್ಕೃತ, ಆರೋಗ್ಯಕರ ಜೀವನ ನಡೆಸುತ್ತಿದ್ದರು. ಶ್ವಾಸಕೋಶದ ಕ್ಯಾನ್ಸರ್​ ಎಂದಾಕ್ಷಣ ಎಲ್ಲರ ಕಣ್ಣೆದುರಿಗೆ ಬರುವುದು ಸ್ಮೋಕಿಂಗ್​ ಮಾಡುವವರೇ. ಆದರೆ ಯಾವ ಚಟವೂ ಇಲ್ಲದಿದ್ದ ಅಪರ್ಣಾ, ಮಾತನ್ನೇ ಉಸಿರಾಗಿಸಿಕೊಂಡ ನಿರೂಪಕಿ,  ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾಗಿದ್ದು ಹೇಗೆ ಎಂಬುದು ಕೂಡ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಧಿಯಾಟದ ಮುಂದೆ ಎಲ್ಲವೂ ನಗಣ್ಯ ಎನ್ನುವುದನ್ನು ನಿರೂಪಿಸಿ ಹೋದವರು ಈಕೆ. 

ಇದೀಗ ಆ ಕರಾಳ ರಾತ್ರಿಯ ಬಗ್ಗೆ ಪತಿ ನಾಗರಾಜ್​ ವಸ್ತಾರೆ ನೆನಪಿಸಿಕೊಂಡಿದ್ದಾರೆ. ನಿರೂಪಕಿ ರ‍್ಯಾಪಿಡ್ ರಶ್ಮಿ ಷೋನಲ್ಲಿ, ಬದುಕಿನ ಹಲವು ಮಜಲುಗಳನ್ನು ತೆರೆದಿಟ್ಟಿರುವ ನಾಗರಾಜ್​ ಅವರು, ಅಪರ್ಣಾರಿಗೆ ಕ್ಯಾನ್ಸರ್​ ಇದೆ ಎಂದು ಗೊತ್ತಾದಾಗಿನಿಂದ ಆ ಕರಾಳ ರಾತ್ರಿಯವರೆಗೆ ಕಳೆದ ಕ್ಷಣಗಳನ್ನು ತೆರೆದಿಟ್ಟಿದ್ದಾರೆ. ಅವಳಿಗೆ ಆರಂಭದಲ್ಲಿ ಕ್ಯಾನ್ಸರ್​ ಆಗಿದೆ ಎಂದು ತಿಳಿದಿರಲಿಲ್ಲ. ಕೊನೆಗೆ ಡಾಕ್ಟರ್​ ಅದನ್ನು ನನ್ನ ಬಳಿ ಹೇಳಿದರು. ಆದರೆ ಅಪರ್ಣಾ ಆಗಲೂ ಜೋಕ್​ ಮಾಡಿದಳು. ಹೊಗೆ ಹಾಕಿಸಿಕೊಳ್ಳುವವಳು ನಾನ್​ ತಾನೆ? ಅವರಿಗೆ ಯಾಕೆ ಹೇಳ್ತೀರಿ ಎಂದು ಕೇಳಿದಳು ಎಂದು ನೆನಪಿಸಿಕೊಂಡಿದ್ದಾರೆ ನಾಗರಾಜ್​. ಹೊಗೆ ಹಾಕಿಸಿಕೊಳ್ಳುವ ಶಬ್ದ ಎಲ್ಲಾ ಅವಳ ಬಾಯಲ್ಲಿ ಬಂದದ್ದೇ ಇಲ್ಲ, ಅದು ಮಜಾ ಟಾಕೀಸ್​ ಭಾಷೆ. ಅದನ್ನೇ ಹೋಗಿ ಜೋಕ್​ ಮಾಡಿದ್ಲು. ಆದರೆ ಅವಳಿಗೆ ಬದುಕುತ್ತೇನೆ ಎನ್ನುವ ಛಲ ಇತ್ತು ಎಂದು ನೆನಪಿಸಿಕೊಂಡಿದ್ದಾರೆ.

Tap to resize

Latest Videos

undefined

ಸಂಸ್ಕೃತ ಬಲ್ಲ ಬ್ರಾಹ್ಮಣ ಸುಂದರಿಯೇ ಬೇಕೆ? ನಿರೂಪಕಿ ಅಪರ್ಣಾ ವಿರುದ್ಧ ಸರ್ಕಾರಕ್ಕೆ ಇದೆಂಥ ದೂರು?

ನನ್ನ ಮತ್ತು ಅಪರ್ಣಾ  ದೈಹಿಕ ಕಾಮನೆಗಳ ಆಚಿನ ಆತ್ಮದ ಮಟ್ಟದ ಸಾಂಗತ್ಯ ಇತ್ತು. ನಾವಿಬ್ಬರೂ ಹಂಚಿಕೊಳ್ಳದ ವಿಚಾರಗಳೇ ಇಲ್ಲ, ಆಡದ ಮಾತುಗಳೇ ಇಲ್ಲ. ಅಂಥ ಸಂಬಂಧ ನಮ್ಮದು ಎನ್ನುತ್ತಲೇ ಅಪರ್ಣಾ ನಿಧನರಾಗುವ ಎರಡು ದಿನ ಮುಂಚಿನ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ ನಾಗರಾಜ್​.   ಅವಳು ಎಷ್ಟರ ಮಟ್ಟಿಗೆ ನೋವನ್ನುಅನುಭವಿಸಿದ್ದಳು ಎಂದರೆ, ಒಂದೇ ಒಂದು ದಿನ ನೋವನ್ನು ತೋಡಿಕೊಂಡವಳಲ್ಲ. ಕೆಲವೇ ಕೆಲವು ಸಲ ಮಾತ್ರ ತುಂಬಾ ಅಳೋಳು. ಆಗೋದಿಲ್ಲ, ಹೊರಟು ಬಿಡ್ತೇನೆ ಅಂತಿದ್ಲು. ಅಷ್ಟು ನೋವು ಅವಳನ್ನು ಹಿಂಡಿ ಹಿಪ್ಪೆ ಮಾಡಿತ್ತು ಎಂದು ನಾಗರಾಜ್​ ವಸ್ತಾರೆ ಹೇಳಿದ್ದಾರೆ. ಅವಳು ಗುರುವಾರ (ಜುಲೈ 11) ಬಿಟ್ಟು ಹೊರಟಳು. ಎರಡು ದಿನ ಮುಂಚೆ ಅಂದ್ರೆ ಮಂಗಳವಾರ ರಾತ್ರಿ ತಲೆಯಲ್ಲಿ ತುಂಬಾ  ನೋವು ಅಂತಾ ಇದ್ಲು. ನೀರು ಕುಡಿಸೋಕೆ ಹೇಳಿದ್ಲು. ಮೆಡಿಸಿನ್​ ಕೊಡಲು ಹೇಳಿದ್ಲು. ಕೊಟ್ಟೆ. ಆದರೆ ಯಾವ ಪೇನ್​ ಕಿಲ್ಲರೂ ವರ್ಕ್​ ಆಗ್ಲಿಲ್ಲಾ. ಅಷ್ಟು ನೋವು ಅನುಭವಿಸುತ್ತಿದ್ದಳು ಆಕೆ. ಕೊನೆಗೆ 11ರ ಸುಮಾರಿಗೆ ಅವಳ ಚಡಪಡಿಕೆಯನ್ನು ನೋಡಿ  ಆಗಲೇ ಅಂತಿಮ ಕ್ಷಣ ಬಂತು ಎಂದು ತಿಳಿಯಿತು. ಅವಳಿಗೆ ನಾನು ಯಾರು ಅಂತ ಗೊತ್ತಾ ಅಂತ. ಅದಕ್ಕೆ ಅವಳು ಹೌದು ನಾಗರಾಜ ವಸ್ತಾರೆ ಎಂದಳು. ಅವಳು ಯಾವತ್ತಿಗೂ ನನ್ನನ್ನು ವಸ್ತಾರೆ ಅಂತಾನೇ ಕರೀತಾ  ಇದ್ದಳು. ಅಷ್ಟೇ ಕೊನೆ. ಇನ್ನೊಂದು ಸಲ ಎದ್ದು ಮಾತನಾಡುತ್ತಾಳೆ ಎಂದು ಎರಡು ದಿನ ಕಾದೆ. ಆ ದಿನ ಬರಲೇ  ಇಲ್ಲ ಎಂದು ಭಾವುಕರಾದರು ನಾಗರಾಜ್​. 

ಅಷ್ಟಕ್ಕೂ ಅಪರ್ಣಾ ಹೇಳಿದ್ದ ಮಾತುಗಳು ಹಲವು ವಿಡಿಯೋಗಳು ಅವರ ನಿಧನದ ಬಳಿಕ ವೈರಲ್​ ಆಗಿದ್ದವು. ಒಂದರಲ್ಲಿ ಅಪಣಾ ಅವರು, ಅವರಿಗೇನಪ್ಪಾ ಆರಾಮಾಗಿ ಇರ್ತಾರೆ ಅಂತಾರೆ. ಅದು ತಪ್ಪು. ಎಲ್ಲರ ಬೆನ್ನಹಿಂದೆಯೂ ಒಂದು ಕಥೆ ಇರುತ್ತೆ. ಒಂದು ಕಷ್ಟ ಇರುತ್ತದೆ.  ಆ ಕಷ್ಟವನ್ನು ಮೆಟ್ಟುನಿಂತು ಅದು ಇಲ್ಲದ ಹಾಗೆ ಬದುಕನ್ನು ಸವಾಲಾಗಿ ಸ್ವೀಕರಿಸುವುದೇ ಬದುಕು ಎಂದು ನಾನು ಹೇಳುವುದು... ಎಂದಿದ್ದರು ಅಪರ್ಣಾ. ಇಷ್ಟು ವರ್ಷದ ಬದುಕಿನಲ್ಲಿ ಕಂಡುಕೊಂಡಿದ್ದ ಮೂರ್ನಾಲ್ಕು ಸತ್ಯಗಳು ಎಂದರೆ, ಜೀವನ ಒಂದು ನಿತ್ಯೋತ್ಸವ. ಹಕ್ಕಿ ಹಾಡೋದು ಸಂಭ್ರಮ, ಹೂವು ಅರಳೋದು ಸಂಭ್ರಮ. ಅದನ್ನು ನೋಡುವ ದೃಷ್ಟಿ ನಮಗೆ ಬರಬೇಕು. ಇಷ್ಟು ಕೋಟಿ ಜನರು ಇದ್ದಾರೆ ಎಂದರೆ ಅಷ್ಟು ಕೋಟಿ ಮನಸ್ಸುಗಳು ಇರುತ್ತವೆ. ಅಷ್ಟು ಕೋಟಿ ಆಸೆ ಆಕಾಂಕ್ಷೆ, ಪರ-ವಿರೋಧ ನಿಲುವು ಇರುತ್ತವೆ. ಸರಿ ಹೋದರೆ ಒಪ್ಪಿಕೊಳ್ಳಿ, ಸರಿ ಇಲ್ಲ ಎನಿಸಿದರೆ ಬಿಟ್ಟಾಕಿ. ಮತ್ತೆ ನಗೋಣ... ಅಷ್ಟೇ... ಇದಿಷ್ಟು ನಾನು ತುಂಬಾ ನೇರವಾಗಿ ಕಲಿತದ್ದು ಎಂದಿದ್ದರು. 

ಅಪರ್ಣಾ, ಜೀವನವನ್ನು ನೋಡಿದ ಪರಿಯೇ ಸೊಗಸು... ಸಂದರ್ಶನವೊಂದರ ವಿಡಿಯೋ ತುಣುಕೀಗ ವೈರಲ್​

click me!