ರಂಜನಿ ರಾಘವನ್ ಕೊನೆಗೂ ತನ್ನ ಪ್ರೀತಿಯನ್ನು, ಪ್ರೀತಿಸುವವರನ್ನು ರಿವೀಲ್ ಮಾಡಿದ್ದಾರೆ. ರಂಜನಿ ರಾಘವನ್ ಲವ್ಸ್ ಸಾಗರ್ ಭಾರಧ್ವಾಜ್ ಅಂತ ಹೇಳ್ಕೊಂಡಿದ್ದಾರೆ. ಇವರ ಲವ್‌ಸ್ಟೋರಿ ನಿಮಗೊತ್ತಾ?
ಪುಟ್ಟಗೌರಿ ಮದುವೆ, ಕನ್ನಡತಿ ಸೀರಿಯಲ್‌ಗಳ ಮೂಲಕ ಕನ್ನಡಿಗರ ಮನೆಮಾತಾದವರು ನಟಿ ರಂಜನಿ ರಾಘವನ್. ಈಕೆ ಸಿನಿಮಾದಲ್ಲೂ ನಟಿಸಿ ಸೈ ಅನಿಸಿಕೊಂಡವರು. ಜೊತೆಗೆ ಸಾಹಿತಿಯಾಗಿಯೂ ಗುರುತಿಸಿಕೊಂಡು 'ಕತೆಡಬ್ಬಿ' ಅನ್ನೋ ಕಥಾಸಂಕಲನದ ಮೂಲಕ ಸಹೃದಯರ ಗಮನ ಸೆಳೆದವರು. ಇದೀಗ ಒಂದು ಬ್ರೇಕಿಂಗ್ ನ್ಯೂಸ್ 'ಕನ್ನಡತಿ' ಕಡೆಯಿಂದಲೇ ಬಂದಿದೆ. ಯೆಸ್, ಇಷ್ಟು ದಿನದಿಂದ ಅವರ ಫ್ಯಾನ್ಸ್ ಮನಸ್ಸಲ್ಲಿ ಕುಣಿಯುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡತಿಯ ಭುವಿ ತಮ್ಮ ರಿಯಲ್ ಲವ್‌ಸ್ಟೋರಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದವರಿಗೆಲ್ಲ ಮನಸ್ಸಲ್ಲಿ ಏನೇನೋ ಪ್ರಶ್ನೆಗಳು ಓಡುತ್ತಿವೆ. ಸಾಮಾನ್ಯವಾಗಿ ಕಿರುತೆರೆ ಅಥವಾ ಹಿರಿತೆರೆ ನಟ, ನಟಿಯರ ಡೇಟಿಂಗ್, ಲವ್ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡೋದು ಸಾಮಾನ್ಯ. ಆದರೆ ಅವಕ್ಕೆಲ್ಲ ಉತ್ತರ ಅವರ ಮದುವೆಯಲ್ಲೇ ಸಿಗೋದೇ ಹೆಚ್ಚು. ಇವರ ಜೊತೆಗೆ ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂತ ಬೋಲ್ಡ್ ಆಗಿ ಪ್ರಕಟಿಸೋರು ಬಹಳ ಅಂದರೆ ಬಹಳ ಕಡಿಮೆ. ಹೆಚ್ಚಿನವರ ಲವ್‌ಸ್ಟೋರಿ ರಿವೀಲ್ ಆಗೋದೇ ಎಂಗೇಜ್‌ಮೆಂಟ್ ಹೊತ್ತಿಗೆ. ತಪ್ಪಿದರೆ ಅವರ ಮದುವೆಯಲ್ಲೇ ಅವರ ಪ್ರೀತಿ, ಪ್ರೇಮದ ಕಹಾನಿ ಹೊರಬೀಳುತ್ತೆ.
ಆದರೆ ಶುರುವಿಂದಲೇ ಉಳಿದ ನಟ, ನಟಿಯರಿಗಿಂತ ಭಿನ್ನವಾಗಿಯೇ ಇದ್ದವರು ಕನ್ನಡತಿ ಸೀರಿಯಲ್ ಖ್ಯಾತಿಯ ರಂಜನಿ. ಇವರು ಕನ್ನಡತಿ ಸೀರಿಯಲ್ ಮಾಡ್ತಿದ್ದಾಗ ಇವರು ಮತ್ತು ಇವರ ಸೀರಿಯಲ್ ಪಾರ್ಟನರ್ ಕಿರಣ್ ರಾಜ್ ಬಗ್ಗೆ ಜನ ಏನೇನೋ ಕಥೆ ಕಟ್ಟುತ್ತಿದ್ದರು. ಇವರಿಬ್ಬರ ಅಭಿನಯ ಅಷ್ಟು ಇಂಪ್ಯಾಕ್ಟ್‌ಫುಲ್ ಆಗಿತ್ತು. ಇವರೇ ಲೈಫ್ ಪಾರ್ಟರ್ ಆಗಲಿ ಅಂತ ಬಹಳ ಮಂದಿ ಹಾರೈಸಿದ್ರು. ಆದರೆ ಅದೆಲ್ಲ ನಡೆಯಲ್ಲ ಅನ್ನೋದನ್ನು ರಂಜನಿ ಇದೀಗ ತಮ್ಮ ರಿಯಲ್ ಕಂಪ್ಯಾನಿಯನ್ ಫೋಟೋ ಹಾಕುವ ಮೂಲಕ ರಿವೀಲ್ ಮಾಡಿದ್ದಾರೆ.
ಜೀವನ ಸಂಗಾತಿ ಬಗ್ಗೆ ಮಾಹಿತಿ ನೀಡಿದ ‘ಕನ್ನಡತಿ’ ರಂಜನಿ ರಾಘವನ್’ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು!
ಈ ಹಿಂದೆ ಸಂದರ್ಶನವೊಂದರಲ್ಲಿ ರಂಜನಿ ಹೇಳಿದ ಮಾತು ಸಖತ್ ವೈರಲ್ ಆಗಿತ್ತು.
ಬೆಸ್ಟ್ ಫ್ರೆಂಡ್ ಆಗಿರೋರೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನಾಗಿರತ್ತೆ ಎಂದು ಹೇಳಿದ್ರು ರಂಜನಿ, ಈಗ ಸಮಾಜನೆ ಹಾಗಿದೆ. ಮೊದಲೆಲ್ಲಾ ಗಂಡ ಅಂದ್ರೆ ಹೇಗಿರಬೇಕು ಅಂತ ಒಂದು ಮನಸ್ಥಿತಿ ಇತ್ತು. ಆದ್ರೆ ಈಗ ನಮ್ಮನ್ನ ಚೆನ್ನಾಗಿ ತಿಳಿಗೊಂಡಿರುವ ಬೆಸ್ಟ್ ಫ್ರೆಂಡ್ ಹುಡುಗನ್ನ ಮದ್ವೆ ಆದ್ರೆ ಚೆನ್ನಾಗಿರುತ್ತೆ. ಒಳ್ಳೆಯ ಗೆಳೆತನ , ಒಡನಾಟ ಇದ್ರೆ ಅದಕ್ಕಿಂತ ಇನ್ನೇನೂ ಬೇಕು, ನಂಗೂ ಅದೆ ಇಷ್ಟ ಅಂದಿದ್ದರು ರಂಜನಿ. ಆದರೆ ಇದಕ್ಕೆ ಕೆಲವು ಜನ ವಿರೋಧವನ್ನೂ ವ್ಯಕ್ತಪಡಿಸಿದ್ರು. 'ಇದು ತುಂಬಾ ದೊಡ್ಡ ತಪ್ಪು . ಪ್ರೀತಿನೇ ಬೇರೇ ಸ್ನೇಹನೇ ಬೇರೇ. ಈ ತರ ಕೆಟ್ಟ ಆಲೋಚನೆ ಇಂದಾನೆ ಒಳ್ಳೆ ಸ್ನೇಹಕ್ಕೆ ಕೆಟ್ಟ ಅರ್ಥಗಳು ಹುಟ್ಟಿಕೊಂಡಿರೋದು. ಒಂದು ನಿಜವಾದ ಸ್ನೇಹ ಯಾವತ್ತೂ ಪ್ರೀತಿ ಆಗೋಕೆ ಸಾಧ್ಯನೇ ಇಲ್ಲ. ಪ್ರೀತಿ ಅನ್ನೋದು ನೋ ಶೇರಿಂಗ್ ಓನ್ಲಿ ಕೇರಿಂಗ್ ಅದು ಇಬ್ಬರಿಗೆ ಸೀಮಿತ. ಆದ್ರೆ ಸ್ನೇಹ ಆಗಲ್ಲ ಅದನ್ನ ಎಲ್ಲರಿಗೂ ಶೇರ್ ಮಾಡುವಂತದ್ದು, ನಿಮ್ಮ ಮಾತು ಸಮಾಜಕ್ಕೆ ಒಳ್ಳೆ ಸಂದೇಶವಲ್ಲ ದಯಮಾಡಿ ಈ ತರ ಹೇಳಿಕೆ ಕೊಡೋದು ಸರಿ ಅಲ್ಲ' ಎಂಬ ಮಾತು ಕೇಳಿ ಬಂದಿತ್ತು.
ಆದರೆ ಇದೀಗ ತಾನು ಸುಮ್ ಸುಮ್ನೆ ಆ ಮಾತು ಆಡಿಲ್ಲ. ರಿಯಲ್ಲಾಗಿಯೂ ಬೆಸ್ಟ್ ಫ್ರೆಂಡ್ ಆಗಿದ್ದವರನ್ನೇ ಲೈಫ್ ಪಾರ್ಟನರ್ ಮಾಡ್ಕೊಳ್ತೀನಿ ಅನ್ನೋ ಮಾತನ್ನು ರಂಜನಿ ಹೇಳಿದ್ದಾರೆ. ತನ್ನ ಈ ಹಿಂದಿನ ಸಂದರ್ಶನದ ಕ್ಲಿಪ್ಪಿಂಗ್ ಅನ್ನೂ ಈಕೆ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾರೆ. ಸೋ ಸದ್ಯ ಇವರ ಫ್ಯಾನ್ಸ್ ಎಲ್ಲ ಸಾಗರ್ ಭಾರಧ್ವಾಜ್ ಯಾರು? ಏನ್ ಮಾಡ್ತಿದ್ದಾರೆ? ಇವರ ಲವ್‌ಸ್ಟೋರಿ ಏನು ಅಂತ ಸರ್ಚ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ.