
ಸಾಮಾನ್ಯವಾಗಿ ಸಿನಿಮಾ, ಸೀರಿಯಲ್ ಕ್ಷೇತ್ರದಲ್ಲಿ ನಟನೆ, ನಿರ್ದೇಶನ ಅಥವಾ ನಿರ್ಮಾಣ ಅಂತ ಬ್ಯುಸಿ ಆದವರು ಹೋಟೆಲ್ ಉದ್ಯಮಕ್ಕೆ ಬಂದಿದ್ದು ತೀರಾ ಅಪರೂಪ. ಹಾಗೇನಾದ್ರೂ ಬೇರೆ ಕ್ಷೇತ್ರಕ್ಕೆ ಬಂದರೂ ಹೋಟೆಲ್ ಶುರು ಮಾಡುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ ಈಗ ಸುದ್ದಿಯಲ್ಲಿರುವ ನಟಿಯರ ಪೈಕಿ ಹೋಟೆಲ್ ಶುರು ಮಾಡಿದ ಮೊದಲ ನಟಿ ಎನಿಸಿಕೊಳ್ಳುತ್ತಿದ್ದಾರೆ ನಿರ್ಮಾಪಕಿ ಶ್ರುತಿ ನಾಯ್ಡು . ಆ ಮೂಲಕ ತಮ್ಮ ಬಹುದಿನದ ಕನಸು ನನಸಾಗಿಸಿದೆ ಎನ್ನುತ್ತಾರವರು.
ಜನರಿಗೆ ನೆರವಾಗುವುದೇ ನನಗೆ ಖುಷಿ: ಶ್ರುತಿ ನಾಯ್ಡು
‘ಓದುವ ದಿನಗಳಲ್ಲಿ ನನಗಿದ್ದ ಆಸಕ್ತಿ ಉದ್ಯಮ. ಅಲ್ಲಿದ್ದರೆ ನನ್ನೊಂದಿಗೆ ಒಂದಷ್ಟುಜನರಿಗೂ ಉದ್ಯೋಗ ನೀಡಬಹುದು ಎನ್ನುವುದು ಅದಕ್ಕೆ ಕಾರಣ. ಆದರೆ ಆಕಸ್ಮಿಕವಾಗಿ ನಾನು ಬಣ್ಣದ ಜಗತ್ತಿಗೆ ಬಂದೆ. ಇಲ್ಲಿ ನಟನೆ, ನಿರ್ಮಾಣ ಅಂತ ತೊಡಗಿಸಿಕೊಂಡರೂ ನನ್ನದೇ ಸಂಸ್ಥೆ ಮೂಲಕ ಒಂದಷ್ಟುಜನರಿಗೆ ಕೆಲಸ ಕೊಟ್ಟಖುಷಿಯಿದೆ.
ಆದರೂ ಮೈಸೂರಿನಲ್ಲಿ ಹೋಟೆಲ್ ಶುರು ಮಾಡಬೇಕೆನ್ನುವುದು ಬಹು ದಿನಗಳಿಂದ ಕಾಡುತ್ತಲೇ ಇತ್ತು. ಅದು ಈಗ ಈಡೇರಿದೆ. ಇದರ ಹಿಂದೆ ಲಾಭದ ಉದ್ದೇಶವಿಲ್ಲ.ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಬೇಕು, ಆ ಮೂಲಕ ಒಂದಷ್ಟುಜನರಿಗೆ ಕೆಲಸವೂ ಸಿಗಬೇಕು ಎನ್ನುವುದೇ ಆಗಿದೆ ಎನ್ನುತ್ತಾರೆ ಶ್ರುತಿ ನಾಯ್ಡು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.