
ಸೀರಿಯಲ್ ಲೋಕದಲ್ಲೇ ಇತಿಹಾಸ ಸೃಷ್ಟಿಸಿದ ಧಾರಾವಾಹಿ ಅಂದ್ರೆ 'ಅಗ್ನಿಸಾಕ್ಷಿ' . ದಿನೇ ದಿನೇ ಕುತೂಹಲ ಹೆಚ್ಚಿಸಿಕೊಂಡು ಕಡೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಧಾರಾವಾಹಿ ಇದು. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಹೆಂಗಳೆಯರ ಡ್ರೀಮ್ ಬಾಯ್ ಆಗಿದ್ದರು!
ಗುಳಿಕೆನ್ನೆ ಚೆಲುವೆಯೊಂದಿಗೆ ಸಪ್ತಪದಿ ತುಳಿದ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ!
ಸಿದ್ದಾರ್ಥ್ ಅಲಿಯಾಸ್ ವಿಜಯ್ ಸೂರ್ಯ 2019, ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಾರಿಯ ವ್ಯಾಲಂಟೈನ್ಸ್ ಡೇಗೆ ತಂದೆಯಾಗಿದ್ದಾರೆ. ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
‘ಅಗ್ನಿಸಾಕ್ಷಿ’ ವಿಜಯ್ ಸೂರ್ಯಗೆ ಇವರ ಮೇಲಿತ್ತು ಕ್ರಶ್!
ಡಿಂಪಲ್ ಜೋಡಿ ಮೊದಲನೇ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ಮಗ ಇನ್ನಷ್ಟು ಹೆಚ್ಚಿಸಿದ್ದಾನೆ. 'ನಿಮ್ಮೆಲ್ಲರ ಶುಭ ಹಾರೈಕೆಗೆ ಧನ್ಯವಾದಗಳು. ಜನವರಿ 1 ರಂದು ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಎಲ್ಲರಿಗೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ ' ಎಂದು ಸಂತಸ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.