ಖ್ಯಾತ ನಟನೊಂದಿಗೆ ಸಪ್ತಪದಿ ತುಳಿದ ಕಿರುತೆರೆ 'ಮಂಗಳ ಗೌರಿ'!

By Suvarna News  |  First Published Feb 14, 2020, 10:30 AM IST

ಕಿರುತೆರೆಯ ವಿಲನ್ ರಾಧಿಕಾ ಹಾಗೂ ಶ್ರವಂತ್ ಫೆಬ್ರವರಿ 13ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾರೊಟ್ಟಿಗೆ?
 


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್‌ ರೇಟೆಡ್‌ ಧಾರಾವಾಹಿ 'ಮಂಗಳ ಗೌರಿ ಮದುವೆ'. ಒಂದಾದ ಮೇಲೊಂದು ಕುತಂತ್ರ ಮಾಡುತ್ತಾ ಗೌರಿಯನ್ನು ತೊಂದರೆಗೆ ಸಿಲುಕಿಸುವುದೇ ಈಕೆಯ ಕೆಲಸ....That is ರಾಧಿಕಾ. 

ಸರಳ ವಿವಾಹಕ್ಕೆ ಸ್ಫೂರ್ತಿಯಾಯ್ತು 'ಆ ದಿನಗಳು' ಚೇತನ್‌- ಮೇಘ ಮದುವೆ!

Tap to resize

Latest Videos

ಇನ್ನು 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರವಂತ್‌ ಹಾಗೂ ರಾಧಿಕಾ ಸಾಂಪ್ರದಾಯಿಕವಾಗಿ ಫೆಬ್ರವರಿ 13ರಂದು ಸಪ್ತಪದಿ ಏರಿದ್ದಾರೆ. ಮದುವೆಗೆ ಸಾಕ್ಷಿಯಾದ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 

ರಾಧಿಕಾ ಕಿರುತೆರೆಯಲ್ಲಿ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡರೆ ಶ್ರವಂತ್ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅಸಲಿಗೆ ಶ್ರವಂತ್ ಅವರ ತಾತ ಮತ್ತು ತಂದೆ ಕನ್ನಡ ಚಿತ್ರರಂಗದ ನಿರ್ಮಾಪಕರು. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ರಾಜ ರಾಣಿ' ನಟ!

ಚಿತ್ರರಂಗದ ನಟ-ನಟಿಯರಿಗೆ 2020 ತುಂಬಾನೇ ಸ್ಪೆಷಲ್‌. ಫೆಬ್ರವರಿ 2ರಂದು 'ಆ ದಿನಗಳು' ಖ್ಯಾತಿಯ ಚೇತನ್‌ ಕುಮಾರ್‌ ಹಾಗೂ ಮೇಘ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಫೆಬ್ರವರಿ 10ರಂದು ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ರಾಮನಗರದ ಜಾನಪದ ಲೋಕದ ಸಮೀಪ ವಾಸ್ತು ಪ್ರಕಾರ ನಿರ್ಮಾಣವಾಗುತ್ತಿರುವ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

ಈಗಾಗಲೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ರಿವೀಲ್ ಆಗಿದೆ. ಇನ್ನು ಕಾದು ನೋಡಬೇಕು, ಯಾರ ಜೀವನದಲ್ಲಿ, ಯಾರು ಪ್ರವೇಶಿಸುತ್ತಾರೆ, ಹೊಸ ಬಾಳಿಗೆ ಕಾಲಿಡುವ ಶುಭ ಜೋಡಿಯಾಗುತ್ತಾರೆಂದು.

click me!