Model Suicide ಐಷಾರಾಮಿ ಹೋಟೆಲ್‌ನಲ್ಲಿ ಮಾಡಲ್ ನೇಣಿಗೆ ಶರಣು; ಡೆತ್‌ ನೋಟ್‌ನಲ್ಲಿತ್ತು ಸತ್ಯ

Published : Sep 30, 2022, 10:02 AM IST
Model Suicide ಐಷಾರಾಮಿ ಹೋಟೆಲ್‌ನಲ್ಲಿ ಮಾಡಲ್ ನೇಣಿಗೆ ಶರಣು; ಡೆತ್‌ ನೋಟ್‌ನಲ್ಲಿತ್ತು ಸತ್ಯ

ಸಾರಾಂಶ

ಡೆತ್‌ ನೋಟ್‌ನಲ್ಲಿ ಸಾವಿಗೆ ಕಾರಣ ಯಾರೆಂದು ಬರೆದಿಟ್ಟ ಮಾಡೆಲ್‌. ಪೊಲೀಸರ ಕಂಠಿಣ ತನಿಖೆ ಆರಂಭ..

ಇತ್ತೀಚಿನ ದಿನಗಳಲ್ಲಿ ಯುವ ನಟಿಯರು ಮತ್ತು ಮಾಡೆಲ್‌ಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ನೇಣಿಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಅಚ್ಚರಿಯ ವಿಚಾರ. ಈಗ ಮುಂಬೈನ ಅಂಧೇರಿಯಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 30 ವರ್ಷದ ಮಾಡೆಲ್ ಐಷಾರಾಮಿ ಹೋಟೆಲ್‌ನಲ್ಲಿ ಫ್ಯಾನ್‌ ಸಹಾಯದಿಂದ ನೇಣಿಗೆ ಶರಣಾಗಿದ್ದಾರೆ. 

ಮಾಡೆಲ್ ಹೆಸರು ತಿಳಿದು ಬಂದಿಲ್ಲ ಆದರೆ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮಾಡೆಲ್ ಸೆಪ್ಟೆಂಬರ್ 28 ಬುಧವಾರ ಹೋಟೆಲ್‌ಗೆ ಚೆಕ್‌ ಇನ್ ಮಾಡಿದ್ದು ರಾತ್ರಿ ಊಟ ಆರ್ಡ್‌ ಮಾಡಿದ್ದಾರೆ. ಗುರುವಾರ ಹೌಸ್‌ ಕೀಪಿಂಗ್ ಮಾಡುವವರು ಬಾಗಿಲು ತಟ್ಟಿದ್ದಾರೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಮ್ಯಾನೇಜರ್‌ಗೆ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಬಾಗಿಲು ತೆಗೆಸಲಾಗಿತ್ತು. 

ಕೊನೆವರೆಗೂ ನಿನ್ನೇ ಪ್ರೀತಿಸುವೆ.. ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ನಟಿ

ಪೊಲೀಸರು ತಕ್ಷಣವೇ ಹೋಟೆಲ್‌ಗೆ ಭೇಟಿ ಕೊಟ್ಟು ಮಾಸ್ಟರ್ ಕೀ ಸಹಾಯದಿಂದ ಬಾಗಿಲು ತೆಗೆದಿದ್ದಾರೆ. ರೂಮ್‌ನಲ್ಲಿರುವ ಫ್ಯಾನ್‌ಗ ಮಾಡಲ್ ನೇಣಿಗೆ ಬಿಗಿದುಕೊಂಡಿದ್ದಾರೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಪೋಸ್ಟ್‌ ಮಾರ್ಟಮ್ ತನಿಖೆ ಆರಂಭವಾಗಿದೆ. ಇಡೀ ರೂಮ್‌ನ ತನಿಖೆ ಮಾಡಲು ಆರಂಭಿಸಿದಾಗ ಹಾಸಿಗೆ ಮೇಲೆ ಡೆತ್‌ ನೋಟ್‌ ಪತ್ತೆಯಾಗಿದೆ. 

'ಮಹಾರಾಷ್ಟ್ರ| 30 ವರ್ಷ ಮಾಡಲ್ ಮುಂಬೈನ ಐಷಾರಾಮಿ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ರೂಮ್‌ನಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು. ADR ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳದಲ್ಲಿ ಮಾಡಲ್ ಮೃತಪಟ್ಟಿದ್ದಾರೆ ಎಂದು ತಿಳಿದಿದ್ದಾರೆ' ಎಂದು ANI ಟ್ವೀಟ್ ಮಾಡಿದೆ. 

ಡೆತ್ ನೋಟ್:

ಇಡೀ ರೂಮ್ ತನಿಖೆ ಮಾಡಿದ ಪೊಲೀಸರು ಹಾಸಿಗೆ ಮೇಲೆ ಡೆತ್‌ ನೋಟ್ ಪತ್ತೆಯಾಗಿದೆ. 'ನನ್ನನ್ನು ಕ್ಷಮಿಸಿ ಬಿಡಿ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ಖುಷಿಯಾಗಿಲ್ಲ. ನನಗೆ ನೆಮ್ಮದಿ ಬೇಕು' ಎಂದು ಬರೆದಿಕೊಂಡಿದ್ದಾರೆ. 

Suicide attempt: ಹಾಲ್ ಟಿಕೆಟ್ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಗೆಳತಿ ಸಾವಿನಿಂದ ಖಿನ್ನತೆಗೆ ಜಾರಿದ ಮಾಡೆಲ್ ಆತ್ಮಹತ್ಯೆ: 

ಜನಪ್ರಿಯ ರೂಪದರ್ಶಿ ಮಂಜುಷಾ ನಿಯೋಗಿ ( Manjusha Niyogi) ಅವರು ಕೋಲ್ಕತ್ತಾದ ತಮ್ಮ ನಿವಾಸದಲ್ಲಿ (Kolkata residence) ತಮ್ಮ ಕೊಠಡಿಯ ಸೀಲಿಂಗ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೋಲ್ಕತ್ತಾದ ಪಟುಲಿ ಪ್ರದೇಶದಲ್ಲಿ (Patuli area) ಮಂಜುಷಾ ತನ್ನ ಕುಟುಂಬದೊಂದಿಗೆ ಉಳಿದುಕೊಂಡಿದ್ದಳು. ಇದಕ್ಕೂ ಮೊದಲು ಬಿದಿಶಾ ಡಿ ಮಜುಂದಾರ್ ಎಂಬ ರೂಪದರ್ಶಿ ಸಾವಿಗೆ ಶರಣಾಗಿದ್ದರು. ಮಂಜುಷಾ ನಿಯೋಗಿ (Manjusha Niyogi) (ಮೇ 27 ರಂದು) ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತನ್ನ ಆಪ್ತ ಸ್ನೇಹಿತೆ ಬಿದಿಶಾ ಡಿ ಮಜುಂದಾರ್ ಸಾವಿನ ನಂತರ ಮಂಜುಷಾ ನಿಯೋಗಿ ತೀವ್ರ ಖಿನ್ನತೆಗೆ (depression) ಒಳಗಾಗಿದ್ದಳು ಎಂದು ಮಂಜುಷಾಳ ತಾಯಿ ಹೇಳಿಕೊಂಡಿದ್ದಾಳೆ. ಬಿದಿಶಾ  ಡಿ ಮಜುಂದಾರ್ ಅವರು ಮೇ 26 ರಂದು ಆತ್ಮಹತ್ಯೆ ಮಾಡಿಕೊಂಡರು. ಮಂಜುಷಾ ನಿಯೋಗಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲಸವಿಲ್ಲದ ಬಿಲ್ಡಿಂಗ್‌ನಿಂದ ಹಾರಿದ ಮಾಡೆಲ್:

ಪ್ರಿಯಾ ( ಭಾವನಾ) ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಾಕ್‍ಡೌನ್ ಮುಂಚೆ ಪ್ರಿಯಾ ಮುಂಬೈನಲ್ಲಿ ವಾಸವಾಗಿದ್ದು, ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ವೃತ್ತಿ ಜೀವನ ಚೇತರಿಕೆ ಕಾಣುತ್ತಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿದ್ದರು.ಎರಡನೇ ಸಾರಿ ಲಾಕ್‍ಡೌನ್ ಘೋಷಣೆಯಾದಾಗ ಪ್ರಿಯಾ ಗ್ರೇಟರ್ ನೋಯ್ಡಾದಲ್ಲಿರುವ ಸೋದರಿ ಬಳಿ ಬಂದು, ಅಲ್ಲಿಯೇ ಉಳಿದುಕೊಂಡಿದ್ದರು. ತನ್ನ ನೋವನ್ನು ಅನೇಕ ಸಾರಿ ಹೇಳಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?
Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?