Bigg Boss Kannada season 9: ಅರುಣ್ ಸಾಗರ್ ಮೇಲೆ ಸಿಟ್ಟಾದ ಮನೆಮಂದಿ!

By Gowthami K  |  First Published Sep 30, 2022, 12:13 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9ರ 5 ನೇ ದಿನದ ಟಾಸ್ಕ್ ನ ಫಲಿತಾಂಶದ ಬಳಿಕ ಮನೆ ಮಂದಿ ಅರುಣ್ ಸಾಗರ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ಮೊದಲ ವಾರ ಯಾವುದೇ ಕ್ಯಾಪ್ಟನ್ ಇಲ್ಲದೆ ಮನೆಯಲ್ಲಿ ಚಟುವಟಿಕೆಗಳು ನಡೆಯುತ್ತಿದೆ. ಬಿಗ್ ಬಾಸ್ ಆಡಲು ಬಂದಿರುವ 18 ಸ್ಪರ್ಧಿಗಳನ್ನು  ಮೊದಲ ವಾರ 9 ಜೋಡಿಗಳನ್ನಾಗಿ ಮಾಡಿರುವ ಬಿಗ್‌ಬಾಸ್ ಸ್ಪರ್ಧಿಗಳನ್ನು ಜೋಡಿಯಾಗಿ ಆಡಿಸುತ್ತಿದೆ. ಐದನೇ ದಿನ ಬಿಗ್‌ಬಾಸ್ 2 ಟಾಸ್ಕ್ ನೀಡಿದ್ದು, ಮೊದಲನೇ ಟಾಸ್ಕ್‌ ನಲ್ಲಿ ಅಭ್ಯರ್ಥಿಗಳು ತಮ್ಮ ದೈಹಿಕ ಶಕ್ತಿ ಪ್ರದರ್ಶನ ಮಾಡುವ ಬಗ್ಗೆ  ಟಾಸ್ಕ್ ನೀಡಲಾಗಿತ್ತು. ಕೈಲೇಶ ಎಂಬ ಟಾಸ್ಕ್ ನಲ್ಲಿ  ಇಟ್ಟಿಗೆಯನ್ನು ಒಡೆದು ಕೆಳಗಡೆ ಇರುವ ರಿಂಗ್ ಅನ್ನು ಯಾರು ಮೊದಲು ಪೆಡಸ್ಟ್ರಿಯಲ್ ನಲ್ಲಿ ಇಡುತ್ತಾರೋ ಅವರು ಈ ಟಾಸ್ಕ್ ಗೆದ್ದು 1 ಅಂಕ ಗಳಿಸುತ್ತಿದ್ದರು. ಯಾರು ಆಡಬೇಕು ಎಂದು ನಿರ್ಧರಿಸಿದ ಪ್ರಶಾಂತ್ ಸಂಬರ್ಗಿ ಮತ್ತು ವಿನೋದ್ ಗೊಬ್ಬರಗಾಲ ಜೋಡಿ ತಾವೇ ಆಟ ಆಡಲು ನಿಂತು ತಮ್ಮ ಪ್ರತಿಸ್ಪರ್ಧಿಯಾಗಿ ರೂಪೇಶ್ ರಾಜಣ್ಣ ಮತ್ತು ರಾಕೇಶ್ ಅಡಿಗ ಅವರನ್ನು ಆಯ್ಕೆ ಮಾಡಿಕೊಂಡರು ಮತ್ತು ಕನ್ಫೆಷನ್ ರೂಂ ನಲ್ಲಿ ಬಾಜಿ ಕಟ್ಟಲು ಅರುಣ್ ಸಾಗರ್ ಮತ್ತು ನವಾಜ್  ಜೋಡಿಯನ್ನು ಕಳುಹಿಸಿದರು.  ಕನ್ಫೆಷನ್ ರೂಂ ನಲ್ಲಿದ್ದ ಅರುಣ್ ಸಾಗರ್ ಮತ್ತು ನವಾಜ್ ರೂಪೇಶ್ ರಾಜಣ್ಣ ಮತ್ತು ರಾಕೆಶ್ ಅಡಿಗ  ಜೋಡಿ ಗೆಲ್ಲುತ್ತದೆ ಎಂದು ಬಾಜಿ ಕಟ್ಟಿದ್ದರು. ಆದರೆ  ಪ್ರಶಾಂತ್ ಸಂಬರ್ಗಿ ಮತ್ತು ವಿನೋದ್ ಗೊಬ್ರಗಾಲ ಗೆದ್ದು 1 ಅಂಕ ಪಡೆದರು.  

ಈ ಟಾಸ್ಕ್ ನಲ್ಲಿ ಪ್ರಶಾಂತ್ ಸಂಬರ್ಗಿ ಮತ್ತು ವಿನೋದ್ ಗೆದ್ದು 1 ಅಂಕ ಪಡೆದರು ಎಂದು ಬಿಗ್‌ಬಾಸ್ ಘೋಷಿಸಿದರು. ಅರುಣ್- ನವಾಜ್ ತಮ್ಮ  ಫಲಿತಾಂಶವನ್ನು ಘೋಷಿಸುವಾಗ  ಜೋರಾಗಿ ಬೊಬ್ಬೆ ಹೊಡೆದ ಕಾರಣ  ಅವರಿಗೆ ಅಂಕ ಸಿಕ್ಕಿದೆಯೋ ಇಲ್ಲವೋ ಎಂಬುದು ಬಿಗ್ ಬಾಸ್ ಹೇಳಿದ್ದು ಮನೆಯಲ್ಲಿದ್ದ ಇತರ ಸ್ಪರ್ಧಿಗಳಿಗೆ ಕೇಳಿಸಲಿಲ್ಲ, ಈ ಕಾರಣಕ್ಕೆ ಮನೆ ಮಂದಿಗೆ ಗೊಂದಲ ಉಂಟಾಯ್ತು. ಇದಕ್ಕೆ ಪ್ರಶಾಂತ್  ಅವರು ಬಿಗ್‌ಬಾಸ್ ಗೆ   ಫಲಿತಾಂಶವನ್ನು ಇನ್ನೊಂದು ಬಾರಿ ಹೇಳಲು ಮನವಿ ಮಾಡಿಕೊಂಡರು. ಬಳಿಕ ಸಂಬರಗಿ ಮನವಿಗೆ  ಬಿಗ್‌ಬಾಸ್  ರಾಕೇಶ್ ಮತ್ತು ರೂಪೇಶ್ ರಾಜಣ್ಣ ಜೋಡಿ ಗೆಲ್ಲುತ್ತದೆ ಎಂದು ಅರುಣ್- ನವಾಜ್ ಬಾಜಿ ಕಟ್ಟಿದ್ದರಿಂದ ಅವರು ಯಾವುದೇ ಅಂಕ ಪಡೆದಿಲ್ಲ ಎಂದು ಘೋಷಿಸಿದರು. 

Tap to resize

Latest Videos

ಫಲಿತಾಂಶ ತಿಳಿದ ಬಳಿಕ ಮನೆ ಮಂದಿ ಅರುಣ್ ಸಾಗರ್ ಮೇಲೆ ಬೇಸರ ಮಾಡಿಕೊಂಡರು. ಅರುಣ್ ಗೆ ಗೊತ್ತಿದ್ದು ಕೂಡ  ಗೊಂದಲ ಸೃಷ್ಟಿಸಿದ್ದಕ್ಕೆ ಮನೆಮಂದಿ ಬೇಸರ ವ್ಯಕ್ತಪಡಿಸಿದರು.  ರೂಪೇಶ್,  ಅನುಪಮಾ, ನೇಹಾ, ಅಮೂಲ್ಯ, ದೀಪಿಕಾ  ಕೂಡ  ಅರುಣ್ ಸಾಗರ್ ಪೂರ್ತಿಯಾಗಿ ಕೇಳಿಸಿಕೊಳ್ಳಲು ಬಿಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಗ್‌ಬಾಸ್9 ಸೆಪ್ಟೆಂಬರ್ 24ರಿಂದ ಆರಂಭವಾಗಿದ್ದು, ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಗಿಚ್ಚಿಗಿಲಿಗಿಲಿ), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, 15. ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಪಾಲ್ಗೊಂಡಿದ್ದಾರೆ. ಮೊದಲ ವಾರದ ಎಲಿಮನೇಟಿಗೆ ನಾಮನಿರ್ದೇಶನವಾಗಿದ್ದು, ಯಾರು ಎಲಿಮನೇಟ್ ಆಗುತ್ತಾರೆ ಮೊದಲ ವಾರದಲ್ಲಿ ಎಂಬುದನ್ನು ಕಾದು ನೋಡಬೇಕು. ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ಆವೃತ್ತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ವೀಕ್ಷಕರ ಹೃದಯ ಗೆದ್ದ ಅರುಣ್ ಸಾಗರ್‌ಗೆ ಲಕ್ ಕೈ ಹಿಡಿದಿರಲಿಲ್ಲ. ಅದಕ್ಕೆ ಈ ಸಾರಿ ಗೆಲ್ಲೋದು ಅವರೇ ಎಂದು ಊಹಿಸುತ್ತಿದ್ದಾರೆ.

click me!