ಕಲಾ ಸರಸ್ವತಿಗಾಗಿ ಸರ್ಕಾರಿ ನೌಕರಿ ತ್ಯಜಿಸಿದ ಮಿಮಿಕ್ರಿ ಗೋಪಿ ಅವರ ಸ್ಪೂರ್ತಿದಾಯಕ ಕಥೆ. ತಾಯಿಯ ಬೋಧನೆಗಳು, ಸೈನಿಕ ಸಹೋದರನ ಕರ್ತವ್ಯನಿಷ್ಠೆ - ಓದಲೇಬೇಕಾದ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.
ಬೆಂಗಳೂರು (ಸೆ.08): ಕನ್ನಡ ನಾಡಿನಲ್ಲಿ ವಿಭಿನ್ನ ಪ್ರತಿಭೆ ಹೊಂದಿರುವ ಮಿಮಿಕ್ರಿ ಗೋಪಿ ಅವರು ತಮ್ಮ ಕಲೆಯನ್ನು ರಾಜ್ಯಾದ್ಯಂತ ಪ್ರದರ್ಶನ ಮಾಡುವುದಕ್ಕೆಂದೇ ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಬಂದಿದ್ದಾರೆ.
ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Zee Kannada DKD) ನೃತ್ಯ ಕಾರ್ಯಕ್ರಮದ ಸ್ಪರ್ಧಿಯಾಗಿರುವ ನಾನ್ ಡ್ಯಾನ್ಸರ್ ಮಿಮಿಕ್ರಿ ಗೋಪಿ ಅವರು ಶ್ವೇತಾ ಅವರೊಂದಿಗೆ ಅದ್ಭುತವಾಗಿಯೇ ಡ್ಯಾನ್ಸ್ ಮಾಡುತ್ತಿದ್ದಾರೆ. ಆದರೆ, ಅವರು ಪ್ರತಿ ಬಾರಿ ವೇದಿಕೆಗೆ ಬಂದಾಗಲೂ ಹಲವು ಹಿರಿಯ ರಾಜಕಾರಣಿಗಳು, ಕನ್ನಡ ಚಿತ್ರನಟರ ಧ್ವನಿಗಳನ್ನು ಮಿಮಿಕ್ರಿ ಮಾಡಿ ತೋರಿಸುತ್ತಾರೆ. ಇದೀಗ ಮಿಮಿಕ್ರಿ ಗೋಪಿ ಅವರು ತಮ್ಮ ಕುಟುಂಬದ ಹಿನ್ನೆಲೆ, ಬೆಳೆದುಬಂದ ಹಾದಿ, ಶಿಕ್ಷಣ ಹಾಗೂ ಕಲೆಗೋಸ್ಕರ ಸರ್ಕಾರಿ ನೌಕರಿ ಬಿಟ್ಟುಬಂದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
undefined
ನನ್ನ ತಾಯಿ ಕಲಿಸಿಕೊಟ್ಟಿದ್ದು ಸರ್ ಇದು. ಎಲ್ಲೇ ಹೋಗು ನೀನು ಕೈಲಾದ ಸಹಾಯ ಮಾಡು. ಮೊದಲು ನೀನು ಎಲ್ಲರಿಗೂ ಗೌರವ ಕೊಡು. ನಿನ್ನ ನಾಲಿಗೆ ಶುದ್ಧಿಯಾಗಿರಲಿ. ಎಲ್ಲಿ ಹೋದರೂ ಯಾರೊಬ್ಬರಿಗೂ ನೀನು ಮೋಸ ಮಾಡಬೇಕು. ಒಂದು ವೇಳೆ ನಿನಗೆ ಮೋಸ ಮಾಡಿದರೂ ನೀನು ಅವರನ್ನು ಬಿಟ್ಟುಬಿಡು. ನಿನ್ನ ಮಾತು ಯಾವತ್ತೂ ಇನ್ನೊಬ್ಬರಿಗೆ ಸಿಹಿಯಾಗಿರಬೇಕು ಹೊರತು ಕಹಿಯಾಗಿರಬಾರದು. ನನ್ನ ತಾಯಿ ತುಂಬಾ ಬಡ ಕುಟುಂಬದಲ್ಲಿ ಜನಿಸಿದ್ದಾರೆ. ಅವರು ಓದಿದ್ದು ಕೇವಲ 1ನೇ ತರಗತಿಯೂ ಓದಲು ಆಗಲಿಲ್ಲ.
ಜರ್ಮನ್ ಖ್ಯಾತ ಯ್ಯೂಟೂಬರ್ ಯೂನೆಸ್ ಜರೂ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿ!
ನನ್ನಮ್ಮ ಎಲ್ಲ ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಿದ್ದಾರೆ. ನಾನು ಎಂಎಸ್ಸಿ ಮ್ಯಾಥಮೆಟಿಕ್ಸ್ ಮಾಡಿದೆ, ಎಂ.ಇಡಿ ಮಾಡಿದೆ, ಕೊನೆಗೆ ಥೀಸೀಸ್ (ಸಂಶೋಧನೆ) ಕೂಡ ಮಾಡಿದೆ. ಕೆಲಸವನ್ನೂ ಮಾಡಿದ್ದೇನೆ. ಆದರೆ, ಈ ಒಂದು ಕಲೆಗೆ ತೊಂದರೆ ಆಗಬಾರದೆಂದು ನಾನು ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟು 2014ರಿಂದ ಇದೇ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇನೆ. ಅದು ವಿದ್ಯಾ ಸರಸ್ವತಿ, ಇದು ಕಲಾ ಸರಸ್ವತಿ ಎರೆಡೂ ಒಂದೇ ಎಂದು ನಾನು ಭಾವಿಸಿದ್ದೇನೆ. ಯಾವತ್ತೂ ಕಲಾ ಸರಸ್ವತಿ ನನಗೆ ಇನ್ನೊಬ್ಬರಿಗೆ ಕೊಡು ಎಂತಲೇ ಹೇಳಿದ್ದಾಳೆ, ಹೊರತು ಯಾರಿಂದಲೂ ಕಿತ್ತುಕೊಂಡು ತಿನ್ನುವಂತೆ ಮಾಡಿಲ್ಲ ಎಂದು ಹೇಳಿದರು.
ಇನ್ನು ತಮ್ಮ ಮೊದಲ ಅಣ್ಣ ಸರ್ಕಾರಿ ಶಾಲೆ ಶಿಕ್ಷಕರಾಗಿಗೂ ಹಾಗೂ ಎರಡನೇ ಅಣ್ಣ ಭಾರತೀಯ ಸೇನೆಯಲ್ಲಿ ಯೋಧನಾಗಿಯೂ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿ ಬಂದಿದ್ದಾರೆ. ಇದೀಗ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಎರಡನೇ ಅಣ್ಣ ಕಾರ್ಗಿಲ್ ಯುದ್ಧ ಸೇರಿದಂತೆ ಹಲವು ದೇಶದ ಪ್ರಮುಖ ಯುದ್ಧಗಳಲ್ಲಿ ಭಾಗಿಯಾಗಿದ್ದಾನೆ. ದೇಶ ಕಾಯೋ ವೀರ ಯೋಧ ನನ್ನಣ್ಣ ಆಗಿದ್ದಾನೆ ಎಂಬುದೇ ನನಗೆ ಹೆಮ್ಮೆಯಾಗಿದೆ ಎಂದು ಮಿಮಿಕ್ರಿ ನಟ ಗೋಪಿ ಹೇಳಿಕೊಂಡಿದ್ದಾರೆ.
ರಸ್ತೆಗುಂಡಿ ಮುಚ್ಚದಿದ್ರೆ ಎಷ್ಟು ಜನ ಸಸ್ಪೆಂಡ್ ಆಗ್ತೀರೋ ಗೊತ್ತಿಲ್ಲ; ಡಿಕೆಶಿ ಖಡಕ್ ವಾರ್ನಿಂಗ್!
ಇತ್ತೀಚೆಗೆ ಮಿಮಿಕ್ರಿ ಗೋಪಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಣ್ಣ ಭಾರತೀಯ ಸೇನೆಯಿಂದ ನಿವೃತ್ತನಾಗಿ ಬಂದಿದ್ದು, ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ಬಗ್ಗೆ ಹೀಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 'ನನ್ನ ಎರಡನೇ ಅಣ್ಣ ರಾಜು..18ವರ್ಷ ಭಾರತೀಯ ಭೂ ಸೇನೆಯಲ್ಲಿ ಸೇವೆ ಮಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಸೇನಾನಿ ನನಗೆ ನನ್ನ ಅಣ್ಣ ದೇಶಕ್ಕಾಗಿ ಪ್ರಾಣವನ್ನು ಲೆಕ್ಕಿಸದೆ ಸೇವೆ ಮಾಡಿದ ಅವನ ಕರ್ತವ್ಯ ಹೆಮ್ಮೆ ಅನಿಸುತ್ತದೆ.(Rtd ಇಂಡಿಯನ್ ಆರ್ಮಿ ) ಪ್ರಸ್ತುತ ಚಾಮರಾಜನಗರ ಆರಕ್ಷಕರು. ಈ ದಿನ ಚಾಮರಾಜನಗರದ ಜೆಎಸ್ಎಸ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದು ತುಂಬು ಸಂತಸ ತಂದಿದೆ. ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ ಮೊದಲು ನಾವುಗಳು ಈ ಹೀರೋಗಳಿಗೆ ಗೌರವ ಕೊಡಬೇಕು. ಇವರುಗಳೇ ನಮ್ಮ ನಿಜವಾದ ಹೀರೋಗಳು' ಎಂದು ಬರೆದುಕೊಂಡಿದ್ದರು.