
ಬಿಗ್ಬಾಸ್ನಲ್ಲಿ ಈ ಬಾರಿ ಎಲ್ಲರಿಗಿಂತ ಹೆಚ್ಚು ವಿಭಿನ್ನ ರೀತಿಯಲ್ಲಿ ಗಮನ ಸೆಳೆದವರು ಮೈಕೆಲ್ ಅಜಯ್. ಇದಕ್ಕೆ ಕಾರಣ ಇವರ ಕನ್ನಡ. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು, ಇಲ್ಲಿಯ ಅನ್ನ ತಿನ್ನುತ್ತಿರುವವರ ಪೈಕಿ ಕೆಲವರಿಗೆ ಕನ್ನಡದ ಒಂದಕ್ಷರವೂ ಬರುವುದಿಲ್ಲ. ಅದೇ ಇನ್ನೊಂದೆಡೆ, ಕನ್ನಡ ಬಂದರೂ ಮಾತೃಭಾಷೆಯಲ್ಲಿ ಮಾತನಾಡುವುದು ಎಂದರೆ ಅಳುಕು. ಅದಕ್ಕಾಗಿಯೇ ಇಂಗ್ಲಿಷ್, ಹಿಂದಿಯ ಮೊರೆ ಹೋಗಿ ತಾವು ದೊಡ್ಡಮಂದಿ ಎಂದು ಎನಿಸಿಕೊಳ್ಳುತ್ತಿದ್ದಾರೆ. ಇಂಥವರ ನಡುವೆ ಮೈಕೆಲ್ ಅವರು ಬಿಗ್ಬಾಸ್ನಲ್ಲಿ ಮಾತನಾಡಿದ ಕನ್ನಡ ಕೇಳಿ ಎಲ್ಲರೂ ಹೌಹಾರಿದ್ದಂತೂ ನಿಜ. ಕೆಲವು ವಾರಗಳು ಬಿಗ್ಬಾಸ್ನಲ್ಲಿ ಇದ್ದು, ಗ್ರ್ಯಾಂಡ್ ಫಿನಾಲೆಯವರೆಗೆ ತಲುಪದಿದ್ದರೂ ಕನ್ನಡಿಗರ ಮನಸ್ಸಿನಲ್ಲಿ ಈ ನೈಜೇರಿಯನ್ ಪ್ರಜೆ ಅಚ್ಚೊತ್ತಿ ಉಳಿದಿದ್ದಾರೆ.
ಮಾಡಲ್, ಬಾಸ್ಕೆಟ್ ಬಾಲ್, ಫಿಟ್ನೆಸ್ನಿಂದ ಮಾತಾಗಿರುವ ಮೈಕೆಲ್ ಅವರ ಕನ್ನಡ ಕೇಳಿ ನಟಿ ಶ್ರುತಿ ಕೂಡ ಅಬ್ಬಾ ಎಂದಿದ್ದರು. ಮೈಕೆಲ್ ಅವರು ಇನ್ನೂ ಒಂದು ರೀತಿಯಲ್ಲಿ ವಿಶೇಷವಾಗಿ ಕಾಣಿಸಲು ಕಾರಣ ಅವರ ಹೇರ್ಸ್ಟೈಲ್. ಅಷ್ಟಕ್ಕೂ ಆಫ್ರಿಕನ್ನಲ್ಲಿ ಬಹುತೇಕ ಮಂದಿಯ ಕೂದಲು ಇದೇ ರೀತಿ ಇರುತ್ತದೆ. ಆದರೆ ಇಲ್ಲಿ ಮಾತ್ರ ನೋಡುಗರಿಗೆ ಅದು ಕುತೂಹಲ ಎನ್ನಿಸುವುದು ಉಂಟು. ಅಷ್ಟಕ್ಕೂ ಮೈಕೆಲ್ ಅವರು ಹೇರ್‌ಸ್ಟೈಲ್‌ನಿಂದಲೇ ಕಿಚ್ಚ ಸುದೀಪ್ ಅವರ ಗಮನ ಸೆಳೆದಿರುವುದಾಗಿ ಅವರು ಒಮ್ಮೆ ಹೇಳಿದ್ದರು. ರೂಪದರ್ಶಿಯೂ ಆಗಿರುವ ಮೈಕೆಲ್ ಅಜಯ್ ಅವರಿಗೆ ರಿಯಾಲಿಟಿ ಶೋದಲ್ಲಿ ಭಾಗವಹಿಸಬೇಕು ಎಂಬ ಆಸೆ ಇತ್ತು. ಆ ಕನಸನ್ನು ಸುದೀಪ್ ನನಸು ಮಾಡಿದ್ದರು. ನೋಡೊದಕ್ಕೆ ವಿಲನ್ ಥರ ಇದ್ದೀನಿ.. ಆದರೆ, ನಾನು ಒಳ್ಳೆ ಹುಡುಗ ಎಂದು ಅಚ್ಚ ಕನ್ನಡದಲ್ಲಿ ತಮಾಷೆ ಮಾಡುವ ಮೂಲಕ ಮೈಕೆಲ್ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.
ಬಿಗ್ಬಾಸ್ನಲ್ಲಿ ಸಂಗೀತಾ-ಕಾರ್ತಿಕ್ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್ ಹೇಳಿದ್ದೇನು ಕೇಳಿ...
ಇದೀಗ ಮೈಕೆಲ್ ಅವರು ತಮ್ಮ ವ್ಲಾಗ್ನಲ್ಲಿ ತಮ್ಮ ಹೇರ್ಸ್ಟೈಲ್ ಕುರಿತು ವಿವರಿಸಿದ್ದಾರೆ. ಈ ಹೇರ್ಸ್ಟೈಲ್ಗೆ ಟ್ರೆಡ್ಲಾಗ್ಸ್ ಎಂದು ಕರೆಯಲಾಗುತ್ತದೆ ಎಂದಿರುವ ಅವರು, ತಾವು ಯಾವ ಸಲೂನ್ಗೆ ಹೋಗುತ್ತೇವೆ, ಅಲ್ಲಿ ಹೇಗೆ ಹೇರ್ಸ್ಟೈಲ್ ಮಾಡಿಸಿಕೊಳ್ಳುತ್ತೇವೆ ಎಂಬುದನ್ನು ತೋರಿಸಿದ್ದಾರೆ. ಹೀಗೆ ಹೇರ್ಸ್ಟೈಲ್ ಮಾಡುವುದು ಆಫ್ರಿಕನ್ ಸಲೂನ್ ನಡೆಸುವವರಿಗೆ ಮಾತ್ರ ಗೊತ್ತು ಎಂದಿರುವ ಮೈಕೆಲ್ ಅವರು, ಅಲ್ಲಿಯೇ ಹೇರ್ ಕಟ್ಟಿಂಗ್ ಮಾಡಿಸಿಕೊಂಡಿದ್ದಾರೆ. ಇದಾದ ಬಳಿಕ, ಪವಿ, ನಮ್ರತಾ, ವಿನಯ್ , ನಿಶಾನಿ, ಬುಲೆಟ್ ರಕ್ಷಕ್ ಸೇರಿದಂತೆ ಇತರ ಬಿಗ್ಬಾಸ್ ಸ್ಪರ್ಧಿಗಳ ಜೊತೆ ಭರ್ಜರಿ ಪಾರ್ಟಿಯನ್ನೂ ಮಾಡಿದ್ದಾರೆ.
ಕನ್ನಡದ ಭಾಷೆ ಮೇಲೆ ಅಷ್ಟೊಂದು ಪ್ರೀತಿ ಮತ್ತು ಗೌರವ ಹೊಂದಿರೋ ಮೈಕಲ್ ತಮ್ಮ ಕೈ ಮೇಲೆ ಮಣ್ಣಿನ ಮಗ ಅಂತ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಂದಹಾಗೆ, ಮೈಕೆಲ್ ಸದ್ಯ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಇವರು ಬರ್ಗರ್ ಶಾಪ್ ಕೂಡ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳನ್ನು ಮಾಡಬೇಕು ಅನ್ನೋ ಆಸೆಯಿದೆಯಂತೆ. ಈ ವಿಷಯವನ್ನು ಬಿಗ್ಬಾಸ್ನಲ್ಲಿ ಅವರು ಹೇಳಿಕೊಂಡಿದ್ದರು. ನಿಮ್ಮ ಆಸೆ ಬೇಗ ಈಡೇರಲಿ ಎನ್ನುತ್ತಿದ್ದಾರೆ ಅವರ ಫ್ಯಾನ್ಸ್.
ಎರಡೇ ವಾರಕ್ಕೆ ಕಳಿಸಿ ಎಂದ್ರೂ ರನ್ನರ್ ಅಪ್ ಮಾಡಿದ್ರು: ನನ್ನ ಉದ್ದೇಶವೇ ಬೇರೆಯಿತ್ತು ಎಂದ ಡ್ರೋನ್ ಪ್ರತಾಪ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.