
ʼಜೊತೆ ಜೊತೆಯಲಿʼ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈಗ ಏನು ಮಾಡುತ್ತಿದ್ದಾರೆ ಎಂದು ಕೆಲವರಿಗೆ ಅನುಮಾನ ಇರಬಹುದು. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿರುವ ಮೇಘಾ ಶೆಟ್ಟಿ, ಈಗ ಹೊಸ ಧಾರಾವಾಹಿ ನಿರ್ಮಾಣಕ್ಕಿಳಿದಿದ್ದಾರೆ.
ʼಮುದ್ದು ಸೊಸೆʼ ಧಾರಾವಾಹಿ
ಹೌದು, ಮೇಘಾ ಶೆಟ್ಟಿ ಅವರು ʼಗೌರಿಶಂಕರʼ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಈ ಸೀರಿಯಲ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿದೆ. ಇನ್ನೊಂದು ಕಡೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ʼಮುದ್ದು ಸೊಸೆʼ ಎನ್ನುವ ಧಾರಾವಾಹಿಗೆ ಹಣ ಹೂಡುತ್ತಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
1 ವರ್ಷದೊಳಗಡೆ 2 ಕಾರ್; ಕಿಯಾ ಬಗ್ಗೆ ಕೇಳಿ ತುಕಾಲಿ ಸಂತೋಷ್‌ಗೆ ಹಳೇ ʼಆಕ್ಸಿಡೆಂಟ್ʼ ವಿಚಾರ ನೆನಪಿಸಿದ ನೆಟ್ಟಿಗರು!
ನಟಿ ಮೇಘಾ ಶೆಟ್ಟಿ ಏನಂದ್ರು?
ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಶೆಟ್ಟಿ ಅವರು. “ಇದು ನಮ್ಮ ಪ್ರೊಡಕ್ಷನ್‌ನ ಧಾರಾವಾಹಿ” ಎಂದು ಹೇಳಿಕೊಂಡಿದ್ದಾರೆ. ಅನೇಕರು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿಮಾ ಹೀರೋಯಿನ್!
ʼಮುದ್ದು ಸೊಸೆʼ ಧಾರಾವಾಹಿ ಪ್ರೋಮೋ ನೋಡಿ ಅನೇಕರು ʼಇದು ಪುಟ್ಟಗೌರಿ ಮದುವೆ 3’ ನಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರೋಮೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ʼಅಂತರಪಟʼ, ʼದೊರೆಸಾನಿʼ ಧಾರಾವಾಹಿಯಲ್ಲಿ ನಟಿಸಿದ್ದ ಪ್ರತಿಮಾ ಈ ಧಾರಾವಾಹಿ ನಾಯಕಿ. ಪ್ರತಿಮಾ ಅವರು ಡಿಗ್ರಿ ಶಿಕ್ಷಣ ಪಡೆಯುತ್ತಿದ್ದಾರೆ. ಈಗ ಈ ಸೀರಿಯಲ್‌ನಲ್ಲಿ ಅವರು ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ ಬರೆಯಬಹುದು.
ʼಹಣದ ವಿಚಾರಕ್ಕೆ ನಾನು, ನನ್ನ ಗರ್ಲ್‌ಫ್ರೆಂಡ್ ಬ್ರೇಕಪ್ ಮಾಡಿಕೊಂಡ್ವಿʼ: BBK 11 ರನ್ನರ್ ಅಪ್ ತ್ರಿವಿಕ್ರಮ್
ಪ್ರತಿಮಾಗೆ ಶುಭಾಶಯಗಳ ಸುರಿಮಳೆ!
ಈ ಪ್ರೋಮೋದಲ್ಲಿ ಎಲ್ಲ ಮಕ್ಕಳು ಪರೀಕ್ಷೆ ಬರೆಯುತ್ತಿರುತ್ತಾರೆ. ಕೆಲವರಿಗೆ ಏನು ಬರೆಯಬೇಕು ಎಂದು ಗೊತ್ತಾಗೋದಿಲ್ಲ, ಆಗ ಮುದ್ದುಸೊಸೆ ಅಡಿಶನಲ್ ಶೀಟ್ ಕೇಳುತ್ತಾಳೆ. ಈ ಬಗ್ಗೆ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋ ನೋಡಿ ನಟಿ ಜ್ಯೋತಿ ಕಿರಣ್ ಮುಂತಾದವರು ಶುಭಾಶಯ ತಿಳಿಸಿದ್ದಾರೆ.
ಬಿಗ್ ಬಾಸ್ ತ್ರಿವಿಕ್ರಮ್
ಈ ಧಾರಾವಾಹಿಯಲ್ಲಿ ತ್ರಿವಿಕ್ರಮ್ ಅವರು ಹೀರೋ ಎನ್ನಲಾಗಿದೆ. ಹೌದು, ʼಬಿಗ್ ಬಾಸ್ ಕನ್ನಡ 11ʼ ರನ್ನರ್ ಅಪ್ ತ್ರಿವಿಕ್ರಮ್ ಅವರು ಈ ಧಾರಾವಾಹಿಯ ನಾಯಕ ಎಂಬ ಮಾತು ಕೇಳಿ ಬರುತ್ತಿದೆ. ತ್ರಿವಿಕ್ರಮ್ ಅವರು ಸಿನಿಮಾ ಮಾಡಬೇಕು ಎಂಬ ಆಸೆ ಹೊಂದಿದ್ದರು. ಈಗ ಅವರು ಸೀರಿಯಲ್ ಮಾಡುತ್ತಾರಾ ಎಂಬ ಕುತೂಹಲ ಶುರುವಾಗಿದೆ. ಈಗ ತಾನೇ ಒಂದು ಪ್ರೋಮೋ ರಿಲೀಸ್ ಮಾಡಿರುವ ವಾಹಿನಿಯು ಇನ್ನೂ ಈ ಸೀರಿಯಲ್ ಆರಂಭದ ದಿನಾಂಕ ತಿಳಿಸಿಲ್ಲ.
ಫ್ಯಾನ್ಸ್ ಮನಸ್ಸು ಗೆದ್ದ ತ್ರಿವಿಕ್ರಮ್ ಗೆ ಬರ್ತಿದೆ ಆಫರ್, ಸಿಸಿಎಲ್ ರೂಲ್ಸ್ ಬಿಚ್ಚಿಟ್ಟ ಆಕ್ಟರ್
ಧಾರಾವಾಹಿಗಳು
ಒಟ್ಟಿನಲ್ಲಿ ಈ ಪ್ರೋಮೋ ಸಿಕ್ಕಾಪಟ್ಟೆ ಗಮನಸೆಳೆದಿದೆ. ಈಗಾಗಲೇ ʼಲಕ್ಷ್ಮೀ ಬಾರಮ್ಮʼ. ʼಭಾಗ್ಯಲಕ್ಷ್ಮೀʼ, ʼದೃಷ್ಟಿಬೊಟ್ಟುʼ, ʼಕರಿಮಣಿʼ, ʼನಿನಗಾಗಿʼ, ʼರಾಮಾಚಾರಿʼ ಮುಂತಾದ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಅವುಗಳ ಸಾಲಿಗೆ ʼಮುದ್ದು ಸೊಸೆʼ ಕೂಡ ಒಂದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.