
ಬೆಂಗಳೂರು (ಫೆ.19): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ಗೇಮ್ ಶೋನ ಸ್ಪರ್ಧಿ ಬೆಳಗಾವಿಯ ಗಟ್ಟಿಗಿತ್ತಿ ಪ್ರಿಯಾ ಸವದಿ ಧೈರ್ಯಕ್ಕೆ ನೀವೆಲ್ಲರೂ ಮೆಚ್ಚಲೇಬೇಕು. ಹಾವಿನ ಜಾತಿಗಳಲ್ಲಿ ಅತ್ಯಂತ ವಿಷವನ್ನು ಹೊಂದಿರುವ ನಾಗರ ಹಾವನ್ನು ಹಿಡಿದು ಆಟವಾಡಿಸಿದ್ದಾಳೆ.
ಕನ್ನಡದ ಟ್ರೆಂಡಿಂಗ್ ಯ್ಯೂಟೂಬರ್ ಹಾಗೂ ಸಖತ್ ಆಗಿ ಉತ್ತರ ಕರ್ನಾಟಕ ಶೈಲಿಯ ರೀಲ್ಸ್ ಮಾಡುವ ಚೆಲುವೆ ಎಂದಾಕ್ಷಣ ನಿಮಗೆ ನೆನಪಾಗೋದು ಬೆಳಗಾವಿಯ ಪ್ರಿಯಾ ಸವದಿ. ಈ ಪ್ರಿಯಾ ಉತ್ತರ ಕರ್ನಾಟಕದ ಹಲವು ಯೂಟೂಬರ್ ಕಜೊತೆಗೆ ಕೊಲ್ಯಾಬ್ರೇಷನ್ ವಿಡಿಯೋ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಏಕೆ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಿಂದ ನಡೆಸಲಾದ ನನ್ನ ಓಟು ನನ್ನ ಮಾತು ಕಾರ್ಯಕ್ರಮದಲ್ಲಿ ಸ್ಥಳೀಯ ಜನರನ್ನು ಮಾತನಾಡಿಸಿ, ಟಿವಿ ಕ್ಯಾಮೆರಾವನ್ನೂ ಎದುರಿಸಿದ್ದಾರೆ. ಇದೀಗ ಕನ್ನಡದ ಖ್ಯಾತ ಟಿವಿ ನಿರೂಪಕಿ ಅನುಪಮಾ ಗೌಡ ಅವರು ನಡೆಸಿಕೊಡುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಾಯ್ಸ್ ವರ್ಸಸ್ ಗರ್ಲ್ ಗೇಮ್ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಅಲ್ಲಿಯೂ ಉತ್ತರ ಕರ್ನಾಟಕ ಶೈಲಿಯಲ್ಲಿ ಖಡಕ್ ಆಗಿಯೇ ಎಲ್ಲರಿಗೂ ಉತ್ತರಿಸುತ್ತಾರೆ.
ಇದೀಗ ಪ್ರಿಯಾ ಸವದಿ ಎಲ್ಲರೂ ಉಸಿರು ಬಿಗಿ ಹಿಡಿದು ನೋಡುವಂತಹ ಕೆಲಸವೊಂದನ್ನು ಮಾಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಬುಸುಗುಡುತ್ತಾ ಓಡಾಡುತ್ತಿದ್ದ ನಾಗರ ಹಾವೊಂದನ್ನು ಕೈಯಲ್ಲಿ ಹಿಡಿದು ಆಟವಾಡಿಸಿದ್ದಾರೆ. ನಾಗರ ಹಾವು ಅತ್ಯಂತ ವಿಷಕಾರಿ ಹಾವು ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ, ಎಲ್ಲರೂ ಹಾವು ಕಂಡಾಕ್ಷಣ ಮಾರುದ್ದ ಓಡಿ ಹೋಗುತ್ತಾರೆ. ಅದರಲ್ಲಿಯೂ ಒಂದು ಸಣ್ಣ ಜಿರಳೆ, ಕಪ್ಪೆ, ಹಲ್ಲಿ ಕಂಡರೆ ಬೆಚ್ಚಿ ಬೀಳುವ ಮಹಿಳೆಯರ ನಡುವೆ ಪ್ರಿಯಾ ಸವದಿ ನಾಗರ ಹಾವನ್ನು ಹಿಡಿದು ಆಟವಾಡಿಸಿ ತಾನೆಷ್ಟು ಗಟ್ಟಿಗಿತ್ತಿ, ಧೈರ್ಯವಂತೆ ಎಂದು ಪ್ರದರ್ಶನ ಮಾಡಿದ್ದಾರೆ.
ಇದನ್ನೂ ಓದಿ: ಕುಂಭಮೇಳದಲ್ಲಿ ಕಚ್ಚಾ ಬಾದಾಮ್ ಹುಡುಗಿ ಅಂಜಲಿ ಅರೋರಾ; ಗಂಗಾ ನದಿ ಅಪವಿತ್ರವಾಯ್ತು ಎಂದ ನೆಟ್ಟಿಗರು!
ಪ್ರಿಯಾ ಸವದಿ ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಸುಮಾರು 4 ಅಡಿ ಉದ್ದನೆಯ ನಾಗರ ಹಾವಿನ ಬಾಲವನ್ನು ಬರಿಗೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿದ್ದಾರೆ. ಇನ್ನು ಹಾವು ಹಿಡಿಯುವಾಗ ಯಾವುದೇ ಸೇಫ್ಟಿ ಸ್ಟಿಕ್ ಕೂಡ ಬಳಕೆ ಮಾಡಿಲ್ಲ. ನಂತರ ಈ ಹಾವನ್ನು ಸ್ವಲ್ಪ ಹೊತ್ತು ಆಟವಾಡಿಸಿ ಅದನ್ನು ಒಂದು ಡಬ್ಬಿಯಲ್ಲಿ ತುಂಬಿಕೊಂಡು ಹೋಗಿರುವುದನ್ನು ಕಾಣಬಹುದು. ಈ ಮೂಲಕ ಜನವಸತಿ ಪ್ರದೇಶಕ್ಕೆ ಬಂದು ಆತಂಕಗೊಂಡಿದ್ದ ನಾಗರ ಹಾವನ್ನು ರಕ್ಷಣೆ ಮಾಡಿ ಕಾಡಿನ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಪ್ರಿಯಾ ಸವದಿ ಹಾವು ಹಿಡಿದು ರಕ್ಷಣೆ ಮಾಡಿದ ವಿಡಿಯೋ ನೋಡಿದ ನೆಟ್ಟಿಗರು ಆಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದರಲ್ಲಿ ಒಬ್ಬರು 'ಉತ್ತರ ಕರ್ನಾಟಕದ ಹೆಣ್ಣು ಹುಲಿ ಪ್ರಿಯ ಅಕ್ಕ.. ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಷ್ಟು ಧೈರ್ಯ ಬೇ ಅಕ್ಕಾ.? ಎಂದು, ಇನ್ನೊಬ್ಬರು ಅಕ್ಕಾ ನೀ ಹಾವ ಹಿಡಿಯಾಕಿ ಅದಿಯನಾ? ಎಂದು ಕೇಳಿದ್ದಾರೆ. ಮತ್ತೊಬ್ಬರು ಪ್ರಿಯಾ ಅವರೇ ಹಾವು ಹಿಡಿಯೋಕೆ ತುಂಬಾ ಧೈರ್ಯ ಬೇಕು, ಸೂಪರ್ ಪ್ರಿಯ ಎಂದು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. ಆದರೆ, ಆಕೆಯ ಧೈರ್ಯ ಅನುಮಾನಿಸಿದ ನೆಟ್ಟಿಗನೊಬ್ಬ ಹಲ್ಲು ಇಲ್ಲದ ಹಾವು ಸಣ್ಣ ಹುಡುಗರು ಹಿಡಿಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾನೆ.
ಇದನ್ನೂ ಓದಿ: ಮಕ್ಕಳಾದ್ಮೇಲೆ ನಟಿ ಅಮೂಲ್ಯ ಹಾಕೋ ಡ್ರೆಸ್‌ಗಳನ್ನು ನೋಡಿ ನೆಟ್ಟಿಗರು ಫುಕ್ ಶಾಕ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.