ಆರಂಭದಲ್ಲಿ ಸರ್ ಎಂದು ಕರೆಯುತ್ತಿದ್ದೆ, ನಂತರ ಅಣ್ಣ ಆದರು ಅಪ್ಪು. ಶೈನ್ ಶೆಟ್ಟಿ ಅಪ್ಪು ಬಾಂಧವ್ಯ ಹೇಗಿತ್ತು ನೋಡಿ...
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಕೊನೆಯದಾಗಿ ಭಾಗಿಯಾಗಿದ್ದ ಕಾರ್ಯಕ್ರಮಗಳಲ್ಲಿ ಶೈನ್ ಶೆಟ್ಟಿ ಹೋಟೆಲ್ (Hotel) ಉದ್ಘಾಟನೆಯೂ ಒಂದು. ಬನಶಂಕರಿಯಲ್ಲಿ (Banashanakari) ಹೋಟೆಲ್ ತೆರೆದು, ಪುನೀತ್ ಅವರನ್ನು ಸ್ಪೆಷಲ್ ಗೆಸ್ಟ್ ಆಗಿ ಆಹ್ವಾನಿಸಿದ್ದರು ಶೈನ್. ಇದರ ಜೊತೆಗೆ ಶೈನ್ ಮತ್ತು ಅಪ್ಪು ಒಟ್ಟಿಗೇ ಜೇಮ್ಸ್ (James) ಚಿತ್ರದಲ್ಲಿಯೂ ನಟಿಸಿದ್ದಾರೆ. ಇವರಿಬ್ಬರ ನಡುವೆ ಸಂಬಂಧ ಹೇಗಿತ್ತು ಎಂದು ಶೈನ್ ಹಂಚಿಕೊಂಡು, ಭಾವುಕರಾಗಿದ್ದಾರೆ.
ಪುನೀತ್ ಅವರನ್ನು ಶೈನ್ ಮೊದಲು ಭೇಟಿ ಮಾಡಿದ್ದು, ಜೇಮ್ಸ್ ಚಿತ್ರೀಕರಣದ ವೇಳೆ. 'ಹಾಯ್ ಶೈನ್ ಹೇಗಿದ್ದೀರಾ? ನೀವು ಆನ್‌ಸ್ಕ್ರೀನ್ ತುಂಬಾನೇ ಉದ್ದ ಕಾಣಿಸುತ್ತೀರಿ. ನಿಮ್ಮದೊಂದು ಫುಡ್ ಟ್ರೆಕ್ (Food truck) ಇದೆ ಅಲ್ವಾ? ನಾನು ವಿಡಿಯೋದಲ್ಲಿ ನೋಡಿದ್ದೀನಿ, ಎಂದು ಹೇಳಿದರು. ನಾನು ಅಪ್ಪು ಸರ್ ಅವರ ಬಗ್ಗೆ ತುಂಬಾ ಕೇಳಿದ್ದೆ. ಆದರೆ ಅಂದೇ ಮೊದಲು ನಾನು ಕಣ್ಣಾರೆ ಕಂಡಿದ್ದು. ನಿಜಕ್ಕೂ ನಂಬಲಾಗದ ಕ್ಷಣವದು. ಅಷ್ಟು ದೊಡ್ಡ ಸೂಪರ್ ಸ್ಟಾರ್‌ಗೆ ನನ್ನ ಹೆಸರು ಗೊತ್ತಿದೆ, ನಾನು ಏನು ಮಾಡುತ್ತಿರುವೆ ಎಂಬುವುದೂ ಗೊತ್ತಿದೆ. ನಮ್ಮ ಮೊದಲ ಭೇಟಿ ದೊಡ್ಡ ಇಂಪ್ಯಾಕ್ಟ್ ಮಾಡಿತ್ತು,' ಎಂದು ಶೈನ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ.
'ಅಪ್ಪು ಸರ್ ಅವರನ್ನು ಭೇಟಿ ಮಾಡಲು 5 ನಿಮಿಷ ಸಮಯ ಕೇಳಿದ್ದೆ. ಆದರೆ ಅವರು ನಮ್ಮ ಜೊತೆ ಎರಡೂವರೆ ಗಂಟೆ ಮಾತನಾಡಿದ್ದರು. ಎಲ್ಲರಿಗೂ ಪರ್ಸನಲ್ attenion ಕೊಡುತ್ತಿದ್ದರು. ಕುಟುಂಬದವರಂತೆ ಭಾಸವಾಗುತ್ತಿತ್ತು. ನಮ್ಮದು ತುಂಬಾ ಚಿಕ್ಕ ಸೆಟ್ಟಿಂಗ್ ಆಗಿರುವುದಕ್ಕೆ ಅವರನ್ನು ಕರೆಯಲು ಹಿಂಜರಿಯುತ್ತಿದ್ದೆ. ಆದರೆ ಅವರು ಒಂದೇ ಮಾತು ಹೇಳಿದ್ದು 'ಶೈನ್ ಡೇಟ್ (Date) ಹೇಳಿ, I will be there'ಎಂದು.
ಅಪ್ಪು ಸರ್ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ: ಭಾವುಕರಾದ ಶೈನ್ ಶೆಟ್ಟಿ'ಅವರು ನಮ್ಮ inaugration ಕಾರ್ಯಕ್ರಮಕ್ಕೆ ಆಗಮಿಸಿ ಕ್ಷಣ jubilant moment. ಈ ಹಿಂದೆ ನಾನು ತೋರಿಸಿದ ಫೋಟೋ ನೆನಪಿಟ್ಟುಕೊಂಡು ಅವರು ಒಂದೇ ಕ್ಷಣದಲ್ಲಿ ನನ್ನ ತಾಯಿಯನ್ನು ಗುರುತಿಸಿ, ಮಾತನಾಡಿಸಿದರು. ಅವರಿಗೆ ಮಂಗಳೂರು ಊಟ ಅಂದ್ರೆ ತುಂಬಾನೇ ಇಷ್ಟ, ನಾವು ಮಾಡಿದ ಅಡುಗೆ ತುಂಬಾನೇ ಎಂಜಾಯ್ ಮಾಡಿದ್ದರು. ಅವರಿಗೆ ಹೇಗೆ ಧನ್ಯವಾದಗಳನ್ನು ಹೇಳಬೇಕೋ ನನಗೇ ಗೊತ್ತೇ ಆಗಲಿಲ್ಲ. ಅದನ್ನು ಅವರಿಗೆ ಹೇಳಿದ್ದೆ. ಅದಕ್ಕೆ ಅವರು, 'ಶೈನ್ ನಾನು ಯುವಕರನ್ನು ತುಂಬಾನೇ ಪ್ರೋತ್ಸಾಹ ಮಾಡುವೆ. ಅವರು ಹೊಸ ಹೊಸದನ್ನು ಪ್ರಯೋಗ ಮಾಡಬೇಕು. ದೊಡ್ಡದಾಗಿ ಸಾಧನೆ ಮಾಡಬೇಕು,' ಎಂದರಂತೆ ಅಪ್ಪು.
ಅಷ್ಟೇ ಅಲ್ಲದೆ ಶೈನ್ ಫೋನ್ ಕಾಲ್‌ನಲ್ಲಿ ಮಾತನಾಡುವಾಗ ಮಿಸ್ ಕಾಲ್ ಬಂದಿದ್ದಂತೆ. ಆನಂತರ ಒಂದು ಮೆಸೇಜ್ ಸಹ ಬಂದಿತ್ತಂತೆ. ನೋಡಿದರೆ ಅಪ್ಪು ಸರ್ ಕರೆ. 'ಸಾರಿ ಬ್ರದರ್,, the call was by mistake' ಎಂದು ಮೆಸೇಜ್ ಮಾಡಿದ್ದರಂತೆ. ಸೂಪರ್ ಸ್ಟಾರ್ ಮಿಸ್ ಆಗಿ ಕಾಲ್ ಮಾಡಿದ್ದಕ್ಕೆ ಸಾರಿ ಎಂದು ಮೆಸೇಜ್ ಮಾಡ್ತಾರಾ? ಹೇಗೆ ವ್ಯಕ್ತಿ ಇಷ್ಟು ಸರಳವಾಗಿರಲು ಸಾಧ್ಯ?ಯಾವ ರೀತಿ ಅವರು ಬೆಳೆದಿರಬೇಕು? ನಾನು ಅವರು ತೆರೆ ಮೇಲೆ ನೋಡಿದಾಗ ಮೊದಲು ಭೇಟಿ ಮಾಡಿದಾಗ ಅಪ್ಪು ಸರ್ ಎಂದು ಕರೆಯುತ್ತಿದ್ದೆ. ಆನಂತರ ಅವರನ್ನು ಅಣ್ಣ ಎಂದು ಕರೆಯಲು ಶುರು ಮಾಡಿದೆ. ಅವರಲ್ಲಿ devine power ಇತ್ತು,.' ಎಂದು ಶೈನ್ ಹಂಚಿಕೊಂಡಿದ್ದಾರೆ.