
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಲ್ ಕಪಲ್‌ಗಳ ರಿಯಾಲಿಟಿ ಗೇಮ್ ಶೋ ರಾಜಾ ರಾಣಿ (Raja Rani) ಫಿನಾಲೆ ಹಂತ ತಲುಪಿದೆ. ಕಳೆದ ವಾರ ಸಮೀರ್ ಆಚಾರ್ಯ (Sameer Acharya) ಮತ್ತು ಶ್ರಾವಣಿ (Shravani) ಎಲಿಮಿನೇಟ್ ಆದ ಕಾರಣ 6 ಜೋಡಿಗಳು ಮಾತ್ರವೇ ಫಿನಾಲೆ ತಲುಪಿದ್ದಾರೆ. ಸೋಷಿಯಲ್ ಮೀಡಿಯಾ (Social Media) ಮೂಲಕ ತಮ್ಮ ಫಾಲೋವರ್ಸ್ ಬಳಿ ವೋಟ್ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕನ್ನಡ Rapper ಚಂದನ್ ಶೆಟ್ಟಿ (Chandan Shetty) ಮತ್ತು ಗೊಂಬೆ ನಿವೇದಿತಾ ಗೌಡ (Niveditha Gowda) ಫಿನಾಲೆ ತಲುಪಿರುವ ಮೊದಲ ಜೋಡಿ. ಇಬ್ಬರೂ ವೈಯಕ್ತಿಕ ಜೀವನದ ಕೆಲವೊಂದು ಘಟನೆಗಳನ್ನು ಹಂಚಿಕೊಂಡು, ವೀಕ್ಷಕರನ್ನು ಮನೋರಂಜಿಸುತ್ತಿದ್ದರು. ಮದುವೆ (Marriage) ಆದ ಕೆಲವೇ ದಿನಗಳಿಗೆ ಲಾಕ್‌ಡೌನ್ (Lockdown) ಆದ ಕಾರಣ ಇಬ್ಬರೂ ಒಟ್ಟಿಗೆ ಇನ್‌ಸ್ಟಾಗ್ರಾಂ (Instagram) ಹೊರತು ಪಡಿಸಿ, ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇಬ್ಬರೂ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೇ ಈ ವೇದಿಕೆಯ ಮೇಲೆ ಚಂದನ್ ಶೆಟ್ಟಿ ಅವರು ನಿವೇದಿತಾಗೆ 'ನನ್ನವಳೆ..' ಹಾಡನ್ನು ಡೆಡಿಕೇಟ್ ಮಾಡಿದ್ದರು. ಯುಟ್ಯೂಬ್ ಟ್ರೆಂಡಿಂಗ್‌ನಲ್ಲಿ ಈ ಹಾಡು ಮೊದಲ ಸ್ಥಾನ ಪಡೆದುಕೊಂಡಿತ್ತು.
ಎರಡನೇ ಜೋಡಿ ಶ್ರೀಕಾಂತ್ (Srikanth) ಮತ್ತು ಹರಿಣಿ (Harini). ಧಾರಾವಾಹಿಗಳ ಮೂಲಕ ಹರಿಣಿ ವೀಕ್ಷಕರಿಗೆ ಚಿರ ಪರಿಚಿತ. ಆದರೆ ಈ ರಿಯಾಲಿಟಿ ಶೋ ಮೂಲಕ ಹರಿಣಿ ಅವರ ಪತಿ ಶ್ರೀಕಾಂತ್ ಎಲ್ಲರ ಗಮನ ಸೆಳೆದಿದ್ದಾರೆ. ಪ್ರತಿಯೊಂದೂ ಎಪಿಸೋಡ್‌ನಲ್ಲೂ ಅವರದ್ದೇ ಕಾಮಿಡಿ ಮಾಡಿಕೊಂ,ಡು ಸೆಟ್‌ನಲ್ಲಿದ್ದ ಪ್ರತಿಯೊಬ್ಬರನ್ನು ಮನೋರಂಜಿಸಿದ್ದಾರೆ. ಅದರಲ್ಲೂ ಶ್ರೀಕಾಂತ್ ಹೆಣ್ಣಿನ ರೀತಿ ಅಲಂಕರಿಸಿಕೊಂಡು, ಹರಿಣಿಗಿಂತ ಅದ್ಭುತವಾಗಿ ಹೆಜ್ಜೆ (Dance) ಹಾಕಿದ ವಿಡಿಯೋ ವೈರಲ್ ಆಗಿತ್ತು.
ಮೂರನೇ ಜೋಡಿ ಇಶಿತಾ (Ishitha) ಮತ್ತು ಮುರುಗಾನಂದ (Murugananda). ಅಗ್ನಿಸಾಕ್ಷಿ (Agnisakshi) ಸೇರಿದಂತೆ ಅನೇಕ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಇಶಿತಾ ನಟಿಸಿದ್ದಾರೆ. ಟಿವಿ ಕಾರ್ಯಕ್ರಮಗಳು ಹಾಗೂ ಈವೆಂಟ್‌ಗಳಿಗೆ ಮುರುಗಾ ನೃತ್ಯ ಸಂಯೋಜನೆ ಮಾಡುತ್ತಾರೆ. ಈ ವೇದಿಕೆಯ ಮೇಲೆ ಮುರುಗ ಪತ್ನಿಗೆ ಕಾರು (Car) ಗಿಫ್ಟ್ ಮಾಡಿದ್ದಾರೆ. ಅಲ್ಲದೇ ಈ ಶೋನಲ್ಲಿರುವ ಅನೇಕ ಜೋಡಿಗಳಿಗೂ ಮುರುಗಾನೇ ನೃತ್ಯ ಹೇಳಿಕೊಟ್ಟಿರುವುದು.
ನಾಲ್ಕನೇ ಜೋಡಿ ಪವನ್ (Pavan) ಮತ್ತು ಸುಮನ್ (Suman). ಸ್ಟ್ಯಾಂಡಪ್ ಕಾಮಿಡಿ (Standup comedian) ಮೂಲಕ ಪವನ್ ಸೋಷಿಯಲ್ ಮೀಡಿಯಾದಲ್ಲಿ ಫೇಮ್ ಗಳಿಸಿದರು ಆನಂತರ ರಾಜ ರಾಣಿ ವೇದಿಕೆ ಮೂಲಕ ತಮ್ಮ ಮದುವೆ ಪ್ರಸಂಗವನ್ನು ವಿವರಿಸಿ, ಇಡೀ ಕರ್ನಾಟಕದ (Karnataka) ಪ್ರೀತಿ ಗಳಿಸಿದ್ದಾರೆ. ತೆರೆ ಮೇಲೆ ಏನಾದರೂ ವಿಭಿನ್ನ ಪ್ರಯತ್ನ ಮಾಡಬೇಕು ಎಂದು ಸದಾ ಹೊಸ ವಿಚಾರಗಳನ್ನು ಪವನ್ ಹುಡುಕುತ್ತಲೇ ಇರುತ್ತಾರೆ.
ಐದನೇ ಜೋಡಿ ನೇಹಾ (Neha) ಮತ್ತು ಚಂದನ್ (Chandan). ಇವರಿಬ್ಬರು ಬಾಲ್ಯದಿಂದಲೂ ಪರಿಚಿತರು. ಒಂದೇ ಸ್ಕೂಲ್, ಒಂದೇ ಏರಿಯಾದಲ್ಲಿ ವಾಸ ಮಾಡಿ 25 ವರ್ಷಗಳಿಂದಲೂ ಜೊತೆಯಾಗಿ ಬೆಳೆದು, ಪ್ರೀತಿಸಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗಲೂ ಇವರಿಬ್ಬರು ಲವರ್ಸ್ ರೀತಿ ಇರುವುದನ್ನು ನೋಡಲು ಸಂತೋಷವಾಗುತ್ತದೆ ಎಂದು ಇನ್ನಿತರೆ ಸ್ಪರ್ಧಿಗಳು ಹೇಳುತ್ತಾರೆ. ಹಾಗೆಯೇ ಈ ವೇದಿಕೆ ಮೇಲೆ ಚಂದನ್ ನೇಹಾ ಅವರಿಗೆ 10ಕ್ಕೂ ಹೆಚ್ಚು ಸೀರೆಗಳನ್ನು (Saree) ಗಿಫ್ಟ್ ಮಾಡಿದ್ದು, ವೀಕ್ಷಕರ ಗಮನ ಸೆಳೆದಿತ್ತು.
6ನೇ ಜೋಡಿ ಪ್ರಶಾಂತ್ (Prashanth) ಮತ್ತು ರೂಪಾ (Roopa). ಇವರಿಬ್ಬರನ್ನೂ ನೋಡಿದ ಮೊದಲು ಎಲ್ಲರಿಗೂ ನೆನಪಾಗುವುದು ಸಿಲ್ಲಿ ಲಲ್ಲಿ (Silli Lalli) ಧಾರಾವಾಹಿ. ಇಬ್ಬರೂ ಈ ಧಾರಾವಾಹಿಯ ಫೇಮಸ್ ಆದಾಗಿನಿಂದಲೂ ಪ್ರೀತಿಸಿ, ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಮುದ್ದಾದ ಮಗನಿದ್ದಾನೆ. ಬ್ಯಾಂಕ್‌ನಲ್ಲಿ (Bank) ಲೋನ್ ನೀಡಲಾಗದ ಸಮಯದಲ್ಲಿ ರೂಪ ಅವರು ಮಾಂಗಲ್ಯವನ್ನು ಅಡವಿಟ್ಟಿದ್ದರು, ಈ ವೇದಿಕೆಯಲ್ಲಿ ಪ್ರಶಾಂತ್ ಮಾಂಗಲ್ಯವನ್ನು ಬಿಡಿಸಿಕೊಟ್ಟು, ರೂಪ ಅವರಿಗೆ ಮತ್ತೆ ತಾಳಿ ತಂದು ಕೊಟ್ಟಿದ್ದು ಈ ಕಾರ್ಯಕ್ರಮದ ವಿಶೇಷ ಸನ್ನಿವೇಶಗಳಲ್ಲಿ ಒಂದು.
ವೋಟ್ ಮಾಡಲು ಇಷ್ಟ ಪಡುವೆ ವೀಕ್ಷಕರ ವೂಟ್ ಆಪ್ (Voot app) ಮೂಲಕ ವೋಟ್ ಹಾಕಬಹುದು. ವೋಟಿಂಗ್ ಲೈನ್ಸ್‌ಗಳು ನವೆಂಬರ್ 13ರ ವರೆಗೂ ತೆರೆದಿರುತ್ತದೆ. ಹಾಸ್ಯ ಕಲಾವಿದ ರಾಜು ತಾಳಿಕೋಟೆಯವರು ತಮ್ಮ ಇಬ್ಬರು ಮಡದಿಯರೊಂದಿಗೆ ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಅವರ ಮೇಲೆ ಹಲ್ಲೆ ನಡೆದ ಕಾರಣದಿಂದ ಮಧ್ಯದಲ್ಲಿಯೇ ಶೋ ಬಿಟ್ಟು ತೆರಳಿದ್ದರು. ಅಲ್ಲದೇ ವೈಯಕ್ತಿಕ ಕಾರಣ ನೀಡಿ, ಕ್ರಿಕೆಟರ್ ಅಯ್ಯಪ್ಪ ಹಾಗೂ ನಟಿ ಅನು ಸಹ ಶೋನಿಂದ ಮಧ್ಯದಲ್ಲಿಯೇ ನಿರ್ಗಮಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.