ಪ್ರೇಕ್ಷಕರಿಗೆ ವಿದಾಯ ಹೇಳ್ತಿದೆ 'ಮರಳಿ ಮನಸಾಗಿದೆ' ಧಾರಾವಾಹಿ; ಕೊನೆಯ ಸಂಚಿಕೆ ಯಾವಾಗ ಪ್ರಸಾರ?

By Suvarna News  |  First Published Jan 16, 2023, 1:11 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸಾಗಿದೆ ಧಾರಾವಾಹಿ ಸದ್ಯದಲ್ಲೇ ಪ್ರಸಾರ ನಿಲ್ಲಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ. 


ಕನ್ನಡ ಕಿರುತೆರೆಯಲ್ಲಿ ಅನೇಕ ಹೊಸ ಧಾರಾವಾಹಿಗಳು ಬರ್ತಿರುತ್ತೆ ಅನೇಕ ಧಾರಾವಾಹಿಗಳು ಪ್ರಸಾರ ನಿಲ್ಲಿಸುತ್ತಿರುತ್ತವೆ. ಟಿಆರ್‌ಪಿ, ಕಥೆಯಲ್ಲಿ ಬದಲಾವಣೆ ಹೀಗೆ ಅನೇಕ ಕಾರಣಗಳಿಂದ ಧಾರಾವಾಹಿಗಳು ಪ್ರಸಾರ ನಿಲ್ಲಿಸುತ್ತಿವೆ. ಇದೀಗ ಕನ್ನಡ ಕಿರುತೆರೆಯಲ್ಲಿ ಮತ್ತೊಂದು ಧಾರಾವಾಹಿ ತನ್ನ ಪ್ರಸಾರ ನಿಲ್ಲಿಸುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸಾಗಿದೆ ಧಾರಾವಾಗಹಿ ಸದ್ಯದಲ್ಲೇ ಮುಕ್ತಾಯವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಗಿಳಲ್ಲಿ ಮರಳಿ ಮನಸಾಗಿದೆ ಕೂಡ ಒಂದಾಗಿತ್ತು. ಆದೀಗ ಪ್ರಸಾರ ನಿಲ್ಲಿಸುತ್ತಿರುವುದು ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ. 

ಸತೀಶ್ ಕೃಷ್ಣ ನಿರ್ದೇಶನದಈ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಮತ್ತ ದಿವ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಂದನ್ ಕುಮಾರ್ ಎಸಿಪಿ ವಿಕ್ರಾಂತ್ ನಾಯಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ಪತ್ನಿ ಸ್ಪಂದನ ಪಾತ್ರದಲ್ಲಿ ದಿವ್ಯಾ ನಟಿಸಿದ್ದಾರೆ. ವೈಷ್ಣವಿಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ವಿನಯ್ ಗೌಡ, ನಂದಿನಿ ಗೌಡ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಈ ಧಾರಾವಾಹಿ ಮುಕ್ತಾಯದ ಹಂತಕ್ಕೆ ಬಂದಿದೆಯಂತೆ.

ಏನ್ರೀ ಸ್ಟೈಲ್‌ ನಿಮ್ದು; ಶಾಲಿನಿ ವಿಚಿತ್ರ ಬ್ಲೌಸ್‌ ನೋಡಿ ನೆಟ್ಟಿಗರು ಶಾಕ್

Tap to resize

Latest Videos

undefined

ಸ್ಪಂದನಾ ಕಾಲೇಜಿಗೆ ಹೋಗುವ ಹುಡುಗಿ. ಪೊಲೀಸ್ ಆಫೀಸರ್ ವಿಕ್ರಾಂತ್ ನಾಯಕ್ ಮದುವೆಯಾಗಿ ಮನೆಗೆ ಕರ್ಕೊಂಡು ಬರುತ್ತಾನೆ. ವಿಕ್ರಾಂತ್‌ಗೆ ವೈಷ್ಣವಿ ಜೊತೆ ಪ್ರೀತಿಯಾಗಿರುತ್ತದೆ. ಆದರೆ ವೈಷ್ಣವಿ, ವಿಕ್ರಾಂತ್ ಸಹೋದರ ಶಮಂತ್‌ನನ್ನು ಮದುವೆಯಾಗಿದ್ದಳು. ಶಮಂತ್ ಜೊತೆ ಮದುವೆಯಾಗಿದ್ದರೂ ವಿಕ್ರಾಂತ್ ಪ್ರೀತಿಯಲ್ಲೇ ಇದ್ದಳು ವೈಷ್ಣವಿ. ತನ್ನ ಗಂಡ ಬೇರೆಯವಳನ್ನು ಪ್ರೀತಿಸುವುದು ಸ್ಪಂದಾಗೆ ಇಷ್ಟವಿಲ್ಲದೆ ದಿನಲೂ ಕಿತ್ತಾಡುತ್ತಿದ್ದಳು. ಇದೀಗ ಕಾಣೆಯಾಗಿದ್ದ ಶಮಂತ್ ಮತ್ತೆ ವಾಪಾಸ್ ಆಗಿದ್ದಾನೆ. ಪತಿ ಶಮಂತ್‌ಗೆ ಪತ್ನಿಯಾಗಿ ಇರುವುದಾಗಿ ನಾಟಕ ಆಡುತ್ತಿದ್ದಾಳೆ ವೈಷ್ಣವಿ. ಆದರೆ ಶಮಂತ್ ಒಪ್ಪಿಕೊಳ್ಳುತ್ತಿಲ್ಲ. ಇತ್ತ ಸ್ಪಂದನಾಳನ್ನು ಪತ್ನಿಯಾಗಿ ಸ್ವೀಕರಿಸಲು ಚಂದನ್ ರೆಡಿಯಾಗಿದ್ದರೂ ಸ್ಪಂದನಾ ದೂರ ಆಗುವ ನಿರ್ಧಾರದಲ್ಲಿದ್ದಾಳೆ. ಕ್ಲೈಮ್ಯಾಕ್ಸ್ ನಲ್ಲಿ ಈ ಧಾರಾವಾಹಿ ಏನಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. 

Mukesh Gowda: ಹೊಂಗನಸು ಸೀರಿಯಲ್ ಆಂಗ್ರಿ ಯಂಗ್‌ ಮ್ಯಾನ್ ರಿಷಿ ಇವ್ರೇ ನೋಡಿ!

ಮೂಲಗಳ ಪ್ರಕಾರ ಈ ಧಾರಾವಾಹಿ ಇದೇ ತಿಂಗಳು ಕೊನೆಯಾಗುತ್ತಿದೆ. ಜನವರಿ 21ರಂದು ಕೊನೆಯ ಸಂಚಿಕೆ ಪ್ರಸಾರ ಆಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಧಾರಾವಾಹಿ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ವಿಕ್ರಾಂತ್ ಮತ್ತು ಸ್ಪಂದನಾ ಆಗಿ ಅಭಿಮಾನಿಗಳನ್ನು ರಂಜಿಸಿದ್ದ ಚಂದನ್ ಮತ್ತು ದಿವ್ಯಾ ಮತ್ತೊಂದು ಹೊಸ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಸಾಧ್ಯತೆ ಇದೆ. 

  

click me!