3 ತಿಂಗಳು ದುಬೈನಲ್ಲಿ ಬಾರ್‌ ಡ್ಯಾನ್ಸರ್‌ ಆಗಿದ್ದ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ; ರೋಚಕ ಸಾಧನೆ ಕಥೆ ವೈರಲ್

Published : Jan 14, 2023, 04:42 PM IST
3 ತಿಂಗಳು ದುಬೈನಲ್ಲಿ ಬಾರ್‌ ಡ್ಯಾನ್ಸರ್‌ ಆಗಿದ್ದ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ; ರೋಚಕ ಸಾಧನೆ ಕಥೆ ವೈರಲ್

ಸಾರಾಂಶ

 ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಅನೋಕರಿಗೆ ಸ್ಫೂರ್ತಿಯಾಗಿ ನಿಂತ ಚಿತ್ರಾಲ್ ರಂಗಸ್ವಾಮಿ. ಜೀವನ ಕಥೆ ಕೇಳಿ ಮೆಚ್ಚಿಕೊಂಡ ನೆಟ್ಟಿಗರು....  

ಕನ್ನಡ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿರುವ ಚಿತ್ರಾಲ್ ರಂಗಸ್ವಾಮಿ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ. ಎಷ್ಟೇ ಕಷ್ಟ ಬರಲಿ ಕೆಟ್ಟ ಕಾಮೆಂಟ್‌ ಬರಲಿ ತಲೆ ಕೆಡಿಸಿಕೊಳ್ಳದೆ ಸಾಧನೆ ಮಾಡುತ್ತಿದ್ದಾರೆ. ತಮ್ಮ ಜರ್ನಿಯನ್ನು ಹಂಚಿಕೊಂಡಿದ್ದಾರೆ.

ಚಿತ್ರಾಲ್ ರಂಗಸ್ವಾಮಿ ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. 'ನನ್ನ ತಂದೆ irresponsible father. ಅವರಿಗೆ ಜವಾಬ್ದಾರಿ ಇಲ್ಲದೆ ನಾನು 9ನೇ ತರಗತಿಯಲ್ಲಿರುವಾಗ ನಮ್ಮನ್ನು ಬಿಟ್ಟು ಹೋಗುತ್ತಾರೆ. ಓದಿಲ್ಲದ ನನ್ನ ತಾಯಿ ನಮ್ಮನ್ನು ಒಳ್ಳೆ ಸ್ಕೂಲ್‌ನಲ್ಲಿ ಓದಿಸುತ್ತಾರೆ. ರಂಗಸಂಗಮ ನಾಟಕ ಸಂಸ್ಥೆಗೆ ಸೇರಿಕೊಂಡು ನಟನೆ ಮೇಲೆ ಆಸಕ್ತಿ ಹೆಚ್ಚಾಗಿತ್ತು. ಟಿವಿ ನೋಡಿ ನೋಡಿ ನೆಗೆಟಿವ್ ಕ್ಯಾರೆಕ್ಟ್ ಮಾಡಬೇಕು ಅನಿಸುತ್ತದೆ. ಸಿಇಟಿ ಮತ್ತು ಕಾಲೇಜ್‌ ಫೀಸ್‌ ಕಟ್ಟಲು ತುಂಬಾ ಕಷ್ಟ ಅಗುತ್ತದೆ ನನಗೆ ಬಯೋ ಟೆಕ್ನಾಲಜಿ ಮಾಡಬೇಕು ಅನ್ನೋ ಇತ್ತು. ತಾಯಿಗೆ ಆಗದ ಕಾರಣ ಬೆಂಗಳೂರಿಗೆ ಬಂದು ಗರುಡ ಮಾಲ್ ಎದುರಿಗಿರುವ ಅಂಗಡಿಯಲ್ಲಿ ಸೇಲ್ಸ್‌ ಗರ್ಲ್‌ ಆಗಿ ಕೆಲಸ ಆರಂಭಿಸುತ್ತೀನಿ. 18 ವರ್ಷ ಹುಡುಗಿ ಆಗಿಲ್ಲ ಅಂತ ಕೆಲಸದಿಂದ ತೆಗೆಯುತ್ತಾರೆ, ಒಂದು ತಿಂಗಳಿನಿಂದ ಬಂದ 1500 ಸಂಬಳ ಬಳಸಿಕೊಂಡು ಪಾಸ್ ಮಾಡಿಸಿಕೊಳ್ಳುವೆ.' ಎಂದು ಜೋಶ್ ಟಾಕ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

'ಒಂದು ದಿನ ಡ್ಯಾನ್ಸ್‌ ಇವೆಂಟ್‌ ಇದೆ ಎಂದು 1 ಲಕ್ಷ 25 ಸಾವಿರ ಸಂಬಳ ಕೊಟ್ಟು ದುಬೈಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನನ್ನ ಪಾಸ್‌ಪೋರ್ಟ್‌ ಸೀಜ್‌ ಮಾಡಿಕೊಂಡು ಒಂದು ರೂಮ್‌ನಲ್ಲಿ ಲಾಕ್‌ ಮಾಡಿ ಬಾರ್‌ ಡ್ಯಾನ್ಸರ್‌ ಆಗಲು ಹೇಳುತ್ತಾರೆ. ಅಲ್ಲಿ ಸಿಲುಕಿಕೊಂಡು ಕಷ್ಟ ಪಟ್ಟೆ. ವಾಪಸ್‌ ಕಳುಹಿಸಲು ಕೇಳಿಕೊಂಡರೂ ನನ್ನನ್ನು ಕರೆ ತರಲು ಇಷ್ಟು ಹಣ ಖರ್ಚಾಗಿದೆ ಕೊಟ್ಟರೆ ಬಿಡುವುದಾಗಿ ಹೇಳುತ್ತಾರೆ. ನನ್ನ ಬಳಿ ಹಣ ಇರಲಿಲ್ಲ. ನನ್ನನ ತಾಯಿಗೆ ಹೇಳಿದಾಗ ಚಿನ್ನ ಅಡವಿಟ್ಟು ಸಹಾಯ ಮಾಡುವುದಾಗಿ ಹೇಳುತ್ತಾರೆ. ಅಲ್ಲಿ ನಾನು 3 ತಿಂಗಳು ಉಳಿದುಕೊಂಡು ಬಾರ್ ಡ್ಯಾನ್ಸರ್‌ ಆಗಿದೆ. ರಾತ್ರಿ 9ಕ್ಕೆ ಶುರುವಾಗಿ ಬೆಳಗ್ಗೆ 4 ಗಂಟೆಗೆ ಮುಗಿಯುತ್ತಿತ್ತು. ಮೂರು ತಿಂಗಳು ಸೂರ್ಯನನ್ನು ನಾನು ನೋಡಿಲ್ಲ ದಿನಕ್ಕೆ 30 ಟೋಕನ್‌ ಪಡೆದರೆ ಮಾತ್ರ ಬೆಂಗಳೂರಿಗೆ ಹಿಂತಿರುಗಲು ಸಾಧ್ಯ. ಪ್ರತಿ ದಿನವೂ ಡಿಪ್ರೆಶನ್‌ನಲ್ಲಿ ಕಳೆದಿರುವೆ. ಬೆಂಗಳೂರಿಗೆ ಬಂದು ಆಡಿಷನ್ ಕೊಡುತ್ತಿದ್ದೆ ಎಲ್ಲರೂ ಚೆನ್ನಾಗಿದೆ ಎನ್ನುತ್ತಿದ್ದರು ಆದರೆ ಯಾರೂ ಅವಕಾಶ ಕೊಡುತ್ತಿರಲಿಲ್ಲ.' ಎಂದು ಚಿತ್ರಾಲ್ ಹೇಳಿದ್ದಾರೆ. 

ನಟಿ ಜಯಸುಧಾ 3ನೇ ಮದುವೆ! 2 ವರ್ಷ ಹಿಂದೆ ಮಗನ ಮದುವೆ ಮಾಡಿ ಈಗ ನಿಮ್ದಾ? ಎಂದು ಕಾಲೆಳೆದ ನೆಟ್ಟಿಗರು

'ಎರಡು ವರ್ಷ ಡಿಪ್ರೆಶನ್‌ಗೆ ಒಳಗಾಗುವೆ. ಬೇರೆ ಕಲಾವಿದರನ್ನು ನೋಡಿದಾಗ ಬೇಸರವಾಗುತ್ತದೆ. ಮಾನಸಿಕವಾಗಿ ವೀಕ್ ಆಗ್ತೀನಿ. ಒಂದು ಸಿನಿಮಾದವರು ಹೇಳುತ್ತಾರೆ ಹೀರೋ ನಿಮ್ಮನ್ನು ಎತ್ತಿಕೊಂಡು ಹೋಗ ಬೇಕು ಆದರೆ ನೀವೇ ಹೀರೋನ ಎತ್ತುವ ರೀತಿ ಇದ್ದೀರ ಎಂದು. ಆಗ ನಾನು ಬದಲಾಗಬೇಕು ಎಂದು ತೀರ್ಮಾನ ಮಾಡಿದೆ. ಪರ್ಸನಲ್‌ ಲೈಫ್‌ನಲ್ಲಿ ಒಂದು ಲವ್‌ ಫೆಲ್ಯೂರ್ ಆಗಿರುತ್ತೆ. ಜಿಮ್‌ ಸೇರಿಕೊಂಡ ಮೇಲೆ 8 ತಿಂಗಳ ನಂತರ ನನ್ನಲ್ಲಿ ಬದಲಾವಣೆ ಕಾಣಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಗುರುತಿಸಲು ಶುರು ಮಾಡಿದ್ದರು. ಬಾಡಿ ಬಿಲ್ಡಿಂಗ್ ಕಾಂಪಿಟೇಷನ್‌ಗೆ ಹೋಗಿ ಅಲ್ಲಿ ಸ್ಪರ್ಧಿಸುತ್ತೀನಿ. ಅಲ್ಲಿ ಬಿಕಿನಿ ಧರಿಸಿ ಸ್ಪರ್ಧಿಸಬೇಕು. ಸ್ಟೇಟ್‌ ಲೆವೆಲ್‌ನಲ್ಲಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದುಕೊಂಡೆ. ನ್ಯಾಷನಲ್‌ ಲೆವೆಲ್‌ನಲ್ಲಿ ಸ್ಪರ್ಧಿಸಿ ನಾಲ್ಕನೇ ಸ್ಥಾನ ಪಡೆದುಕೊಂಡೆ. ವುಮೆನ್‌ ಬಿಕಿನಿ ಬಾಡಿ ಬಿಲ್ಡಿಂಗ್‌ 8 ಸ್ಪರ್ಧೆಯಲ್ಲಿ ಭಾಗಿಯಾಗಿದ್ದೆ.' ಎಂದಿದ್ದಾರೆ ಚಿತ್ರಾಲ್. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?