ಭಾಗ್ಯಲಕ್ಷ್ಮಿ ಸೀರಿಯಲ್ ಗೆ ಸುಕೃತಾ ನಾಗ್ ಎಂಟ್ರಿ... ಇಲ್ಲೂ ಮನೆ ಹಾಳು ಮಾಡೋದ ಕೇಳ್ತಿದ್ದಾರೆ ವೀಕ್ಷಕರು

Published : Jan 29, 2025, 11:32 AM ISTUpdated : Jan 29, 2025, 11:48 AM IST
ಭಾಗ್ಯಲಕ್ಷ್ಮಿ ಸೀರಿಯಲ್ ಗೆ ಸುಕೃತಾ ನಾಗ್ ಎಂಟ್ರಿ... ಇಲ್ಲೂ ಮನೆ ಹಾಳು ಮಾಡೋದ ಕೇಳ್ತಿದ್ದಾರೆ ವೀಕ್ಷಕರು

ಸಾರಾಂಶ

ಸುಕೃತಾ ನಾಗ್, 'ಅಗ್ನಿ ಸಾಕ್ಷಿ' ಧಾರಾವಾಹಿಯಲ್ಲಿನ ಜನಪ್ರಿಯತೆ ಬಳಿಕ, ನಕಾರಾತ್ಮಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. 'ಲಕ್ಷಣ', 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಗಳಲ್ಲೂ ವಿಲನ್ ಆಗಿ ನಟಿಸಿದ್ದ ಇವರು, ಈಗ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಮತ್ತೊಂದು ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಕನ್ನಡ ಕಿರುತೆರೆಯ ಚಿರಪರಿಚಿತ ನಟಿ ಸುಕೃತಾ ನಾಗ್ (Sukrutha Nag). ಇವರು ಹಲವಾರು ವರ್ಷಗಳಿಂದ ಕನ್ನಡ ಸೀರಿಯಲ್ ಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಅದರಲ್ಲೂ ಅಗ್ನಿ ಸಾಕ್ಷಿ ಧಾರಾವಾಹಿಯ ಅಂಜಲಿ ಪಾತ್ರದಲ್ಲಿ ಇವರು ಮಿಂಚಿದ್ದರು. ಸಿಧಾರ್ಥ್ ತಂಗಿಯ ಪಾತ್ರ ಜನರಿಗೆ ಇಷ್ಟವಾಗಿತ್ತು. ನಂತರ ಸುಕೃತಾ ನಾಗ್ ನಟಿಸಿದ್ದೆಲ್ಲಾ ನೆಗೆಟೀವ್ ಶೇಡ್(Negative shade) ಪಾತ್ರಗಳಲ್ಲೇ ಇದೀಗ ಮತ್ತೊಂದು ಧಾರಾವಾಹಿಯಲ್ಲಿ ಮತ್ತೆ ನೆಗೆಟಿವ್ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. 

ಮೈಸೂರು ಸಿಲ್ಕ್ ಸೀರೆಯಲ್ಲಿ ನಟಿ ಸುಕೃತಾ ನಾಗ್ ಮಿಂಚಿಂಗ್… ಅಂದ ಹೊಗಳೋದು ಬಿಟ್ಟು, ಬಿಗ್ ಬಾಸ್ ಗೆ ಸ್ವಾಗತ ಅಂತಿದ್ದಾರೆ ಜನ!

ಈ ಹಿಂದೆ ಸುಕೃತಾ ನಾಗ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷಣ ಧಾರಾವಾಹಿಯಲ್ಲಿ (Lakshana serial) ಶ್ವೇತಾ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಶ್ರೀಮಂತಿಕೆಯ ಮದ ತುಂಬಿದ ವಿಲನ್ ಶ್ವೇತಾ ಪಾತ್ರ ಇವರದ್ದಾಗಿತ್ತು. ಅದಾದ ಬಳಿಕ ಸುಕೃತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾವೇರಿ ಕನ್ನಡ ಮೀಡೀಯಂ (Kaveri Kannada Medium) ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅಲ್ಲೂ ಕೂಡ ಇವರದ್ದು ವಿಲನ್ ಪಾತ್ರವಾಗಿತ್ತು. ಆದರೆ ನಟಿ ಅರ್ಧದಲ್ಲೇ ಕಾರಣಾಂತರಗಳಿಂದ ಸೀರಿಯಲ್ ನಿಂದ ಹೊರ ಬಂದಿದ್ದರು. ನಂತರ ಅವರ ಜಾಗಕ್ಕೆ ರಶ್ಮಿತಾ ಚಂಗಪ್ಪ ಬಂದಿದ್ದು, ಸದ್ಯ ಅವರೇ ವೃಂದಾ ಪಾತ್ರವನ್ನು ಮಾಡುತ್ತಿದ್ದಾರೆ. ಈ ಸೀರಿಯಲ್ ಬಳಿಕ ಸುಕೃತಾ ನಾಗ್ ಬೇರೆ ಯಾವ ಸೀರಿಯಲ್ ಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಭಾಗ್ಯ ಲಕ್ಷ್ಮೀ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾರೆ ಸುಕೃತಾ. 

ಕೆಣಕುತಿದೆ ನಿನ್ನ ಕಣ್ಣೋಟ; ಸುಕೃತಾ ನಾಗ್ ಕಾಲೆಳೆದ ನೆಟ್ಟಿಗರು!

ಹೌದು, ಭಾಗ್ಯಲಕ್ಷ್ಮೀ ಸೀರಿಯಲ್ (Bhagyalakshmi Serial) ಪ್ರೊಮೊ ರಿಲೀಸ್ ಆಗಿದ್ದು, ಇದರಲ್ಲಿ ಶ್ರೇಷ್ಠಾ ಜೊತೆ ಕೈ ಜೋಡಿಸಿ, ಭಾಗ್ಯ ಜೀವನದಲ್ಲಿ ಮುಳ್ಳಾಗುವ ಪ್ಲ್ಯಾನ್ ಮಾಡಿಕೊಂಡು ಬಂದಿರುವ ಹೊಸ ಪಾತ್ರ ಇವರದ್ದು. ನಾನು ಬಿಟ್ಟುಕೊಡೋ ಮಾತೇ ಇಲ್ಲ, ನಾನು ಕೊಡೋ ಒಂದೊಂದು ಏಟಿಗೂ ಆಕೆ ಕಣ್ಣೀರು ಹಾಕಬೇಕು ಎನ್ನುತ್ತಾ ತನ್ನ ವಿಲನ್ ಶೇಡ್ ತೋರಿಸಿದ್ದಾರೆ ಸುಕೃತಾ ನಾಗ್. ಭಾಗ್ಯಲಕ್ಷ್ಮಿಯಲ್ಲಿ ಮತ್ತೊಂದು ವಿಲನ್ ನೋಡಿ ವೀಕ್ಷಕರು ಕಿಡಿಕಾರಿದ್ದಾರೆ. ಅದರಲ್ಲೂ ಸುಕೃತಾ ನಾಗ್ ನೋಡಿ, ಅಯ್ಯೋ ಇಲ್ಲೂ ಬಂದ್ಯ ಮನೆ ಹಾಳೂ ಮಾಡೋಕೆ ಎಂದು ಕೇಳಿದ್ದಾರೆ. ಮತ್ತೊಬ್ಬರು ಅಯ್ಯೋ ಪಾಪಿ ಅಗ್ನಿಸಾಕ್ಷಿಲಿ ಸನ್ನೀಧಿನಾ ಹಿಂಸೆ ಕೊಟ್ಟೆ, ಇದೀಗ ಈ ಮನೆಹಾಳಿ ಜೊತೆ ಸೇರಿಕೊಂಡು ನೀನು ಭಾಗ್ಯಂಗೆ ಹಿಂಸೆ ಕೊಡೋಕೆ ಶುರು ಮಾಡಿದ್ಯಾ ಪಾಪಿಷ್ಠೆ ಎಂದು ಬರೆದಿದ್ದಾರೆ. ಇನ್ನು ಹೆಚ್ಚಿನ ಜನ ಕಥೆ ಎಳಿಬೇಕು ಅಂತ, ಏನೇನೋ ಕಥೆ ಹೇಳಬೇಡಿ, ದಯವಿಟ್ಟು ಸೀರಿಯಲ್ ನಿಲ್ಲಿಸಿ ಪುಣ್ಯಕಟ್ಟಿಕೊಂಡು ಬಿಡಿ ಎಂದು ಕೇಳಿಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?