Bharjari Bachelors:ರಕ್ತದಲ್ಲಿ ಪತ್ರ ಬರೆದು ಸಂಜನಾಗೆ ಪ್ರಪೋಸ್ ಮಾಡಿದ ಮನೋಹರ್

Published : Oct 21, 2023, 03:31 PM ISTUpdated : Oct 21, 2023, 03:33 PM IST
Bharjari Bachelors:ರಕ್ತದಲ್ಲಿ ಪತ್ರ ಬರೆದು ಸಂಜನಾಗೆ ಪ್ರಪೋಸ್ ಮಾಡಿದ ಮನೋಹರ್

ಸಾರಾಂಶ

ಜೀ ಕನ್ನಡದಲ್ಲಿ ವಾರಾಂತ್ಯದಲ್ಲಿ, ಶನಿವಾರ-ಭಾನುವಾರ ರಾತ್ರಿ 9.30 ರಿಂದ 11.00 ಗಂಟೆಗೆ ಪ್ರಸಾರವಾಗುವ ಭರ್ಜರಿ ಬ್ಯಾಚುಲರ್ಸ್‌, ಸಾಕಷ್ಟು ಜೋಡಿಗಳ ಮೂಲಕ ಮನರಂಜನೆ ನೀಡುತ್ತಿರುವ ಶೋ. ಇದರಲ್ಲಿ ಬಗೆಬಗೆಯ ರೀತಿಯಲ್ಲಿ ತಮ್ಮ ಪ್ರೇಮಿಗಳನ್ನು ಇಂಪ್ರೆಸ್ ಮಾಡಲು ಕಲಾವಿದ ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. 

ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9.30 ಕ್ಕೆ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್ಸ್‌'. ಈ ಶೋ, ಸಾಕಷ್ಟು ಸೆಲೆಬ್ರಟಿಗಳನ್ನು ಜೋಡಿ ಮಾಡಲಿದೆಯಾ ಹೇಗೆ ಎಂದು ಟಿವಿ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಸೆಲೆಬ್ರಟಿಗಳ ಸೃಷ್ಟಿ, ಇನ್ನೊಂದು ಕಡೆ ಸೆಲೆಬ್ರಿಟಿಗಳನ್ನು ಜೋಡಿ ಮಾಡುವ ಕೆಲಸ, ಇವೆರಡನ್ನೂ ಜತೆಯಾಗಿ ಮಾಡುತ್ತಿರುವ 'ಭರ್ಜರಿ ಬ್ಯಾಚುಲರ್ಸ್‌' ಗೆ ಈಗ ಸಾಕಷ್ಟು ಜನಪ್ರಿಯತೆ ದೊರೆಯತೊಡಗಿದೆ. ಇದೀಗ ಮನೋಹರ್ ಮತ್ತು ಸಂಜನಾ ಜೋಡಿ ಜನಪ್ರಿಯತೆ ಪಡೆಯುತ್ತಿದೆ ಎನ್ನಬಹುದು. 

ಜೀ ಕನ್ನಡದಲ್ಲಿ ವಾರಾಂತ್ಯದಲ್ಲಿ, ಶನಿವಾರ-ಭಾನುವಾರ ರಾತ್ರಿ 9.30 ರಿಂದ 11.00 ಗಂಟೆಗೆ ಪ್ರಸಾರವಾಗುವ ಭರ್ಜರಿ ಬ್ಯಾಚುಲರ್ಸ್‌, ಸಾಕಷ್ಟು ಜೋಡಿಗಳ ಮೂಲಕ ಮನರಂಜನೆ ನೀಡುತ್ತಿರುವ ಶೋ. ಇದರಲ್ಲಿ ಬಗೆಬಗೆಯ ರೀತಿಯಲ್ಲಿ ತಮ್ಮ ಪ್ರೇಮಿಗಳನ್ನು ಇಂಪ್ರೆಸ್ ಮಾಡಲು ಕಲಾವಿದ ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ಇಲ್ಲಿ ಮನೋಹರ್‌ಗೆ ಜೋಡಿಯಾಗಿ ಸಂಜನಾ ಇದ್ದಾರೆ. ಇದೀಗ ಇವರಿಬ್ಬರ 'ಭರ್ಜರಿ ಬ್ಯಾಚುಲರ್ಸ್‌' ಶೋದಲ್ಲಿ ಹೊಸದೊಂದು ಸಾಧನೆ ಮಾಡಿದ್ದಾರೆ ಮನೋಹರ್.

Jyothi Rai: ನನಗೆ ಕನ್ನಡಿಗರು 'ಹರ್ಟ್ ಮಾಡಿದ್ದಾರೆ, ಕೆಟ್ಟದಾಗಿ ಕಾಮೆಂಟ್ಸ್‌ ಮಾಡಿದ್ದಾರೆ!

 ಮನೋಹರ್ ತಮ್ಮ ಶೋ ಸಂಗಾತಿ ಸಂಜನಾಗೆ ತಮ್ಮ ಸ್ವಂತ ಬ್ಲಡ್‌ನಲ್ಲಿ ಡ್ರಾಯಿಂಗ್ ಒಂದನ್ನು ಬಿಡಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅವರ ಮುಂದೆ ಮಂಡಿಯೂರಿ ನಿಂತು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. " ನಮ್ಮಂತ ಹಳ್ಳಿ ಹುಡುಗರನ್ನ ಅಪ್ಡೇಟ್ ಮಾಡಿರುವವರು ನೀವು. ನನ್ನ ಲವ್ ಅಕ್ಸೆಪ್ಟ್‌ ಮಾಡ್ಕೊಳ್ಳಿ. ನಿನ್ನ ಲವ್‌ ಪಡೆಯೋಕೆ ಅಂತಾನೇ ನಾನು ನನ್ನ ಸ್ವಂತ ರಕ್ತದಲ್ಲಿ ನಿಮ್ಮ ಚಿತ್ರ ಬಿಡಿಸಿದ್ದೇನೆ" ಎಂದು ಹೇಳಿ ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಮುಂದೇನಾಗಬಹುದು ಎಂಬ ಕುತೂಹಲ ಭರ್ಜರಿ ಬ್ಯಾಚುಲರ್ಸ್‌ ಅಭಿಮಾನಿಗಳಲ್ಲೀಗ ಮನೆಮಾಡಿದೆ. 

BBK10: ಅದೆಷ್ಟೇ ಟಾರ್ಗೆಟ್ ಮಾಡಿದ್ರೂ ಈ ಮೂವರನ್ನ 'ದೊಡ್ಮನೆ'ಯಿಂದ ಮನೆಗೆ ಕಳಿಸಲು ಆಗದು!

ಮನೋಹರ್ ಪ್ರೇಮ ನಿವೇದನೆಗೆ ಸಂಜನಾ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಭರ್ಜರಿ ಬ್ಯಾಚುಲರ್ಸ್‌ ಜೋಡಿಗಳಲ್ಲಿ ಹಲವು ವಿಭಿನ್ನ ರೀತಿಯ ಕಲಾವಿದರಿದ್ದು, ಯಾರ ಈ ರಿಯಾಲಿಟಿ ಶೋದಲ್ಲಿ ಮೇಲುಗೈ ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಸದ್ಯಕ್ಕೆ ಮನೋಹರ್-ಸಂಜನಾ ಜೋಡಿ ಇಲ್ಲಿ ಹೈಲೈಟ್ ಆಗಿದೆ. ಮುಂದಿನ ಎಪಿಸೋಡ್‌ಗಳಲ್ಲಿ  ಈ ಶೋ ಹೊಸ ತಿರುವು ಪಡೆಯಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?