ಮನೆಯಲ್ಲಿಯೇ ಲಾಕ್ ಆದ ಮಾನವ, ಸಮಯ, ಸಂದರ್ಭವನ್ನು ಖುಷ್ ಖುಷಿಯಾಗಿ ಬಳಸಿಕೊಳ್ಳುವುದು ಅನಿವಾರ್ಯ. ಅಂಥ ಕೆಲಸಕ್ಕೆ ಕೈ ಹಾಕಿದೆ ಈ ಫ್ಯಾಮಿಲಿ. ಟಿಕ್ ಟಾಕ್ ಮೂಲಕ ಮನಸ್ಸಿಗೆ ಬೇಜಾರು ಆಗದಂತೆ ನೋಡಿಕೊಳ್ಳುತ್ತಿದೆ ಈ ಫ್ಯಾಮಿಲಿ.
• ಕೋರೋನಾ ಹಾವಳಿಯಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ...ಜನರೆಲ್ಲರೂ ಮನೆಯಲ್ಲೇ ಲಾಕ್ ಆಗಿದ್ದಾರೆ...ಏರ್ಪಿಲ್ ಆರಂಭದಿಂದ ಮನೋರಂಜನರಗೂ ನ್ರೇಕ್ ಬಿದ್ದಿದ್ದು ರಿಪೀಟ್ ಟೆಲಿಕಾಸ್ಟ್ ಆಗ್ತಿರೊ ಧಾರವಾಹಿ ಹಾಗೂ ರಿಯಾಲಿಟಿ ಶೋ ನೋಡಿ ನೋಡಿ ಜನರೂ ಬೇಅತ್ತು ಹೋಗಿದ್ದಾರೆ...ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯಿತ್ತೆ ಅನ್ನೋ ಆಸೆಯಲ್ಲಿ ಮನೆಯಲ್ಲೇ ಕೇಕ್ .ಪಾನಿಪುರಿ. ಮಸಾಲೆಪುರಿ. ವಡಾ ಪಾವ್. ಪಾವ್ ಬಜಿ ಹೀಗೆ ಅನೇಕ ತಿಂಡಿ ತಿನುಸುಗಳನ್ನ ಮಾಡಿ ತಿಂದಿದ್ದು ಆಯ್ತು ಆದ್ರೆ ಈಗ ಲಾಕ್ ಡೌನ್ ಮತ್ತೆ ಮುಂದುವರೆದಿದೆ..ಟೈಂಪಾಸ್ ನಲ್ಲಿ ಏನ್ ಮಾಡೋದು ಅಂತ ಯೋಚನೆ ಮಾಡುತ್ತಿರುವವರ ಮಧ್ಯೆ ಮಂಡ್ಯಾದ ಸೂರಪ್ಪಚಾರ್ ಫ್ಯಾಮಿಲಿ ಅವ್ರು ಕ್ವಾರಟೈನ್ ಟೇ ಅನ್ನ ಸ್ಪೆಷಲ್ ಆಗಿ ಕಳಿಯೋದ್ರ ಜೊತೆಗೆ ಬೇರೆಯವ್ರನ್ನು ರಂಜಿಸುತ್ತಿದ್ದಾರೆ..
ಮಂಡ್ಯದಲ್ಲಿದೆ ಸೂಪರ್ ಟಿಕ್ ಟಾಕ್ ಫ್ಯಾಮಿಲಿ
ಮಂಡ್ಯದಲ್ಲೂಂದು ಸೂಪರ್ ಎನ್ನಿಸೋ ಟಿಕ್ ಟಾಕ್ ಫ್ಯಾಮಿಲಿ ಇದೆ..ಕರೋನಾ ದಿಂದ ಮನೆಯಲ್ಲಿ ಲಾಕ್ ಆಗಿರೋ ಸೂರಪ್ಪಚಾರ್ ಫ್ಯಾಮಿಲಿ ತಮಗಿರೋ ಇರೋ ಸಮಯವನ್ನ ಹಾಳು ಮಾಡದೇ ತಮ್ಮದೇ ಸ್ಟೈಲ್ ನಲ್ಲಿ ಟಿಕ್ ಟಾಕ್ ಮಾಡುತ್ತಾ ಕಳೆಯುತ್ತಾರೆ ..ಮನೆಯಲ್ಲಿರೋ20ಕ್ಕೂ ಹೆಚ್ಚು ಜನರು ಸೇರಿ ಒಂದೇ ಹಾಡಿಗೆ ಟಿಕ್ ಟಾಕ್ ಮಾಡ್ತಿರೋದು ಸ್ಪೆಷಲ್...
ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ಫ್ರಾನ್ಸ್ ಆಗಿರೋ ಇವ್ರೆಲ್ಲರೂ ಒಟ್ಟಿಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ನಂತ್ರ ಟಿಕ್ ಟಾಕ್ ಮಾಡ್ತಾರೆ..ವಿಷ್ಣು ದಾದನ ಪ್ರೀತಿಯೇ ನನ್ನುಸಿರು ಹಾಡಿಗೆ ಮಾಡಿರೋ ಟಿಕ್ ಟಾಕ್ ಸೋಷಿಯಲ್ ನೆಟ್ವರ್ಕ್ ನಲ್ಲಿ ಸಖತ್ ವೈರಲ್ ಆಗಿದೆ ..
ಬೆಂಗಳೂರಿನಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿರೋ ದಿಲೀಪ್ ಕೆ ಗೌಡ ಕರೋನಾ ಎಫೆಕ್ಟ್ ನಿಂದ ಮಂಡ್ಯದ ಮನೆಯಲ್ಲಿ ತಿಂಗಳಿಂದ ಕಾಲಕಳೆಯುತ್ತಿದ್ದಾರೆ...ಈ ಸಮಯವನ್ನ ಬಳಸಿಕೊಂಡು ಜನರನ್ನ ಎಂಟರ್ಟೈನ್ಮೆಂಟ್ ಮಾಡಲು ಫ್ಯಾಮಿಲಿ ಜೊತೆ ಟಿಕ್ ಟಾಕ್ ಮಾಡ್ತಿದ್ದಾರೆ. ದಿಲೀಪ್ ಕೊರಿಯೋಗ್ರಾಫ್ ಗೆ ಚಂದ್ರು.ಸುಶ್ಮಿತಾ. ಮಧು. ಶಶಿಶೇಖರ್. ಲೋಕೇಶ್. ಸಂತೋಶ್ .ಪ್ರ್ಈಪ್. ಆರ್ಯನ್. ಚಂದನ. ಆರ್ಯನ್ ಸೇರಿದಂತೆ ಸಣ್ಣವರಿಂದ ದೊಡ್ಡವರು ಎಲ್ಲರೂ ಸೇರಿ ಕುಣಿದು ಇಡೀ ರಾಜ್ಯದ ಜನರನ್ನೇ ರಂಜಿಸುತ್ತಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.