ವಿದೇಶಿಯರು ಕರ್ನಾಟಕದ ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಇಲ್ಲಿನ ಸಂಪ್ರದಾಯವನ್ನು ಮೆಚ್ಚಿಕೊಂಡು ಪಾಲಿಸುವುದಕ್ಕೆ ಬಯಸುತ್ತಾರೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಟೀಚರ್ ಆಗಿ ಆಗಮಿಸಿದ ಜರ್ಮನಿ ಹುಡುಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿರುವುದಲ್ಲದೆ ಕರ್ನಾಟಕದ ಕ್ರಶ್ ಆಗಿದ್ದಾರೆ.
ಹೌದು! ಜರ್ಮನಿ ದೇಶದ ಜೆನಿಫರ್ ಸ್ವಯಂ ಕಾರ್ಯಕರ್ತೆಯಾಗಿ ಮೈಸೂರಿನ ಶಾಲೆಯಲ್ಲಿ ಕೆಲ ತಿಂಗಳುಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ ಅಷ್ಟೇ ಅಲ್ಲದೆ ಹಿಂದಿ ಹಾಗೂ ಕನ್ನಡ ಭಾಷೆಯನ್ನು ಕಲೆತುಕೊಂಡಿದ್ದಾರೆ.
ಟಿಕ್‌ಟಾಕ್‌ನಲ್ಲಿ ಚಂದನ್ ಶೆಟ್ಟಿ ಹಾಡುಗಳಿಗೆ ಹೆಜ್ಜೆ ಹಾಕಿ, ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಪಟ್ಟಿರುವ ವಿಡಿಯೋ ಹಾಗೂ ಒಂದೊಂದೆ ಪದಗಳನ್ನು ಸ್ಪಷ್ಟವಾಗಿ ಮಾತನಾಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆಕೆಯ ಭಾಷಾಭಿಮಾನಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿ ಆಕೆಯನ್ನು ಸ್ಟೇಟ್ ಕ್ರಶ್ ಎಂದು ಕರೆಯುತ್ತಿದ್ದಾರೆ.
ಜಿನಿಫರ್ ಮೈಸೂರಿನಲ್ಲಿ ಇದ್ದ ವೇಳೆ ಮೂಗು ಚುಚ್ಚಿಸಿಕೊಂಡು ಸಾಂಪ್ರದಾಯಿಕ ಉಡುಪಿನಲ್ಲಿ ಕೃಷ್ಣ ರಾಜೇಂದ್ರ ಮಾರುಕಟ್ಟೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ' ಕನ್ನಡ ಗೊತ್ತಿದ್ದರೂ ಶೋಕಿಗೆ ಜನರು ಮಾತನಾಡುವುದಿಲ್ಲ . ಹೀಗಿರುವಾಗ ಈಕೆಯ ನಡೆ ಎಲ್ಲರಿಗೂ ಮಾದರಿ . ಏನಾದರೂ ಮಾಡಿ ಅಕ್ಕನ್ನ ಕರೆದುಕೊಂಡು ಬಂದು ಸನ್ಮಾನ ಮಾಡಬೇಕು' ಎಂದು ನೆಟ್ಟಿಗರು ಜೆನಿಫರ್ ಫೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.