ಲಾಕಪ್ ಶೋಯಿಂದ ಎಲಿಮಿನೇಟ್ ಆದ ಮಂದನಾ ಕರೀಮಿ. ಕಂಗನಾ ಎದುರು ಸ್ಟ್ರಾಂಗ್ ಸ್ಪರ್ಧಿಗಳಿಗೆ ಜಾಗವಿಲ್ಲ...
ಲಾಕಪ್ ಟ್ರೋಫಿ ಮಂದನಾ ಕೈ ಸೇರಲಿದೆ ಎಂದು ಲೆಕ್ಕಚಾರ ಹಾಕುತ್ತಿದ್ದ ನೆಟ್ಟಿಗರಿಗೆ ಬಿಗ್ ಶಾಕ್ ಎದುರಾಗಿದೆ. ಎಲಿಮಿನೇಷನ್‌ನಿಂದ ಪದೇ ಪದೇ ಪಾರಾಗುತ್ತಿದ್ದ ಮಂದನಾ ಈಗ ಜೈಲಿನಿಂದ ಹೊರ ಬಂದಿದ್ದಾರೆ. ತಮ್ಮ ನಡೆನಡುಯಿಂದ ಜೈಲರ್ ಕರಣ್ ಜೊತೆ ಸಿಕ್ಕಾಪಟ್ಟೆ ಕಿತ್ತಾಡಿರುವ ಮಂದನಾ ಕೊನೆಯಲ್ಲಿ ಹೇಳಿದ ಸಾಲುಗಳಿಗೆ ನೆಟ್ಟಿಗರು ಗರಂ ಆಗಿದ್ದಾರೆ.
'ಜನರನ್ನು ತಿಂದು ಹಾಕುವ ಅಥವಾ ಅವರ ಗಂಟಲು ಕತ್ತರಿಸುವ ಬುದ್ದಿ ಮತ್ತು ಆಸೆ ನನಗಿಲ್ಲ. ನನಗೆ ಜೀವನದಲ್ಲಿ ನೆಮ್ಮದಿ ಮುಖ್ಯ. ನಿಮ್ಮ ಜೊತೆ ಕೆಲಸ ಮಾಡುವುದಕ್ಕೆ ನಿಮ್ಮ ಎದುರು ನಿಂತು ಮಾತನಾಡುವುದಕ್ಕೆ ನಾನು ಪುಣ್ಯ ಮಾಡಿದ್ದೆ ಅಲ್ಲದೆ ನಿಮ್ಮ ಜೊತೆ ನನ್ನ ಜೀವನದ ಅನೇಕ ಸೀಕ್ರೆಟ್‌ಗಳನ್ನು ಹಂಚಿಕೊಂಡಿರುವೆ. ಬೇರೆಯವರ ಬಗ್ಗೆ ಮಾತನಾಡುವುದಕ್ಕೆ ಇಷ್ಟವಿಲ್ಲ' ಎಂದು ಹೇಳಿ ಲಾಕಪ್ ಶೋಗೆ ಗುಡ್ ಬೈ ಹೇಳಿದ್ದಾರೆ ಮಂದನಾ.
ಮಂದನಾ ಎಲಿಮಿನೇಷನ್‌ನಿಂದ ಪಾರಾಗಲು ತಮ್ಮ ಜೀವನದ ಅನೇಕ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡು ಲೆಕ್ಕವಿಲ್ಲದಷ್ಟು ಸಲ ಹೆಡ್‌ಲೈನ್ಸ್‌ನಲ್ಲಿದ್ದರು. ತಮ್ಮ ಮದುವೆ, ಡಿವೋರ್ಟ್, ನಿರ್ದೇಶಕನ ಜೊತೆಗಿರುವ ಅಫೇರ್, ಅಬಾರ್ಷನ್...ಹೀಗೆ ಪ್ರತಿಯೊಂದು ಹೇಳಿಕೊಂಡಿದ್ದಾರೆ. ಲಾಕಪ್ ಶೋಯಿಂದ ಮಂದನಾ ಹೊರ ಬರುತ್ತಿದ್ದಂತೆ ಪ್ರಿನ್ಸ್ ನರುಲ್ ಎಂಟ್ರಿ ಕೊಟ್ಟಿದ್ದಾರೆ. ಪ್ರಿನ್ಸ್ ಎಂಟರ್ ಆಗುತ್ತಿದ್ದಂತೆ ಕಂಗನಾ ಪ್ರತಿ ಸ್ಪರ್ಧಿಗೂ ವಾರ್ನ್ ಮಾಡಿದ್ದಾರೆ ಗೇಮ್ ಕೆಲವು ದಿನಗಳಲ್ಲಿ ಸ್ಟ್ರಾಂಗ್ ಆಗುತ್ತೆ ಅಂದಿದ್ದಾರೆ.
ಪ್ರಭಾವಿ ವ್ಯಕ್ತಿಗಳನ್ನು ಡೇಟ್ ಮಾಡಿರುವುದಾಗಿ ಒಪ್ಪಿಕೊಂಡ ನಟಿ ಮಂದನಾ!'ಲಾಕಪ್ ಶೋ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಶೋ ಆಯ್ಕೆ ಮಾಡಿಕೊಳ್ಳಲು ಕಾರಣವೇ ಇದು ಜಡ್ಜೆಂಟ್-ಫ್ರೀ. ತಮ್ಮ ಜೀವನದ ಕೆಲವೊಂದು ಸೀಕ್ರೆಟ್ ಹೇಳಿಕೊಂಡಾಗ ಜನರು ಜಡ್ಜ್ ಮಾಡುತ್ತಾರೆ ಆದರೆ ಲಾಕಪ್‌ನಲ್ಲಿ ಹಾಗಿಲ್ಲ. ನನಗೆ ಖುಷಿಯಾಗುತ್ತಿದೆ. ನಾನು ಸ್ಪರ್ಧಿಯಾಗಿ ಎಂಟರ್ ಆಗುತ್ತಿಲ್ಲ ಟ್ರಬಲ್‌ಮೇಕರ್ ಆಗಿ ಎಂಟರ್ ಆಗುತ್ತಿರುವುದು. ಇದು ಏಕ್ತಾ ಕಪೂರ್ ಶೋ ಅದು ನನಗೆ ಮುಖ್ಯ' ಎಂದು ಮನೆ ಪ್ರವೇಶಿಸಿದ ಪ್ರಿನ್ಸ್ ಹೇಳಿದ್ದಾರೆ.
ನಿರ್ದೇಶಕನ ಜೊತೆ ಅಫೇರ್:
'ಜನರು ನನ್ನನ್ನು ನೋಡಿದ ತಕ್ಷಣ ನಾನು ತುಂಬಾನೇ ಫ್ಯಾನ್ಸಿ ಅಂದುಕೊಳ್ಳುತ್ತಾರೆ ಅದರೆ ನಾನು ನನ್ನ ಹಣದಿಂದ ನನ್ನನ್ನು ನಾನು ನೋಡಿಕೊಳ್ಳುತ್ತಿರುವುದು.ನಾನು ಸಂಪಾದನೆ ಮಾಡಿರುವ ಹಣ. ಇಲ್ಲಿ ಇರುವವರಿಗೆ ನನ್ನ ಡೇಟಿಂಗ್ ಬಗ್ಗೆ ಚಿಂತೆ ಆದರೆ ಅದೂ ಕ್ಲಾರಿಟಿ ನೀಡುತ್ತೀನಿ. ಹೌದು ನಾನು ಕೆಲವು ಪ್ರಭಾವಿ ವ್ಯಕ್ತಿಗಳನ್ನು ಡೇಟ್ ಮಾಡಿದ್ದೀನಿ ಸತ್ಯ ಒಪ್ಪಿಕೊಳ್ಳುತ್ತೀನಿ ಅದರೆ ಅದು ಹಣಕ್ಕೆ ಅಂದರೆ ಮಾತ್ರ ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಸಾಕ್ಷಿ ಮತ್ತು ರೆಕಾರ್ಡ್ ನನ್ನ ಬಳಿ ಇದೆ ನಾನು ಪ್ರಭಾವಿ ವ್ಯಕ್ತಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುವುದಕ್ಕೆ ಕಾರಣ ಹಣ ಅಲ್ಲ ಅವರ ಸಮಯ ಎಂದು. ಇನ್ನೂ ಸತ್ಯ ಹೇಳಬೇಕು ಅಂದ್ರೆ ನಾನು ಅದೆಷ್ಟೊ ಕಳೆದುಕೊಂಡಿರುವೆ. ನನಗೆ ಕೆಟ್ಟ ಹೆಸರು ಬಂದಿದೆ ನನ್ನ ಜೀವನ ಹಾಳಾಗಿದೆ. ನನ್ನ ಎಕ್ಸ್ ಮಾಡಿರುವ ರೀತಿನೇ' ಎಂದು ಮಂದನಾ ಜೋರಾಗಿ ಹೇಳಿದ್ದಾರೆ.