Lakshana Serial: ನಕ್ಷತ್ರಾ ಗೆ ಭೂಪತಿ ಮನೆಗೆ ಎಂಟ್ರಿ ಇಲ್ಲ, ಮತ್ತೆಲ್ಲಿ ಹೋಗ್ತಾಳವಳು?

Published : Apr 18, 2022, 12:45 PM IST
Lakshana Serial: ನಕ್ಷತ್ರಾ ಗೆ ಭೂಪತಿ ಮನೆಗೆ ಎಂಟ್ರಿ ಇಲ್ಲ, ಮತ್ತೆಲ್ಲಿ ಹೋಗ್ತಾಳವಳು?

ಸಾರಾಂಶ

Lakshana Serial Update: ಲಕ್ಷಣಾ ಸೀರಿಯಲ್‌ನಲ್ಲಿ ಕಳೆದ ವಾರದವರೆಗೂ ಭರ್ಜರಿ ಮದುವೆಯ ಎಪಿಸೋಡ್‌ಗಳಿದ್ದವು. ರೋಚಕ ಟ್ವಿಸ್ಟ್‌ನಲ್ಲಿ ನಕ್ಷತ್ರಾ ಕತ್ತಿಗೆ ಭೂಪತಿ ತಾಳಿ ಕಟ್ಟಿದ್ದಾನೆ. ಆದರೆ ಶಕುಂತಳಾ ದೇವಿ ಅವಳನ್ನು ಭೂಪತಿ ಮನೆಯೊಳಗೆ ಸೇರಿಸುತ್ತಿಲ್ಲ. ಅವಳು ಮತ್ತೆಲ್ಲಿ ಹೋಗುತ್ತಾಳೆ?

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರ ಆಗ್ತಿರುವ ಇಂಟರೆಸ್ಟಿಂಗ್ ಸೀರಿಯಲ್‌ಗಳಲ್ಲಿ 'ಲಕ್ಷಣಾ'ವೂ (Lakshana) ಒಂದು. ಕಪ್ಪು ಹುಡುಗಿ ನಕ್ಷತ್ರಾ ಇದರ ನಾಯಕಿ. ಬಣ್ಣದ ಕಾರಣಕ್ಕೆ ಚಿಕ್ಕ ವಯಸ್ಸಿಂದ ಮನೆಯವರ, ಸಮಾಜದ ಹೀಗಳಿಕೆಗೆ ತುತ್ತಾಗುತ್ತಾ ಬಂದವಳು, ಆದರೆ ಮಹಾನ್ ಧೈರ್ಯಶಾಲಿ. ಇದ್ಯಾವುದಕ್ಕೂ ತಲೆ ಕೆಡಿಸದೇ ಪ್ರಾಮಾಣಿಕವಾಗಿ ಬದುಕುತ್ತಿರುವ ಹುಡುಗಿ. ಅವಳ ಲೈಫಲ್ಲಿ ಇತ್ತೀಚೆಗೆ ತಿರುವಿನ ಮೇಲೆ ತಿರುವುಗಳಾಗುತ್ತಿವೆ. ಅಂಥಾ ತಿರುವುಗಳಲ್ಲೊಂದು ಅವಳ ಮದುವೆ. ತನ್ನ ಸ್ನೇಹಿತ ಭೂಪತಿ ಜೊತೆಗೆ ಅವಳ ಮದುವೆ (Marriage) ಆಗಿದೆ. ಆದರೆ ಈ ಮದುವೆಗೆ ಅವಳ ತಂದೆ ಬಿಟ್ಟರೆ ಮತ್ಯಾರ ಮನಃಪೂರ್ವಕ ಒಪ್ಪಿಗೆಯೂ ಸಿಕ್ಕಿಲ್ಲ. ಇದೀಗ ಭೂಪತಿ ಮನೆಗೆ ಮದುಮಗಳ ಉಡುಗೆಯಲ್ಲೇ ನಕ್ಷತ್ರಾ ಬಂದಿದ್ದಾಳೆ. ಆದರೆ ಭೂಪತಿ ಅಮ್ಮ ಶಕುಂತಳಾ ದೇವಿ ನಕ್ಷತ್ರಾ(Nakshatra)ಳನ್ನು ಮನೆಯೊಳಗೆ ಸೇರಿಸಿಕೊಳ್ಳೋದಿಲ್ಲ. ಹಾಗಿದ್ದರೆ ಮತ್ತೇನು ಮಾಡ್ತಾಳೆ ನಕ್ಷತ್ರಾ?

 

ನಕ್ಷತ್ರಾಗೆ ಮೊದಲಿಂದಲೂ ಭೂಪತಿ ಅಂದರೆ ಸ್ನೇಹಿತ ಅಷ್ಟೇ ಅಲ್ಲ. ಅದನ್ನೂ ಮೀರಿದ ಪ್ರೀತಿ (Love) ಅವಳಿಗೆ ಭೂಪತಿ ಮೇಲಿದೆ. ಆದರೆ ಅದನ್ನವಳು ಎಲ್ಲೂ ಹೇಳಿಕೊಂಡಿಲ್ಲ. ಭೂಪತಿಯ ಕೆಲವು ವರ್ತನೆಗಳು ಅವಳಿಗೆ ಅವನಿಗೂ ತನ್ನ ಮೇಲೆ ಇಷ್ಟ ಇದೆ ಅನ್ನುವಂತೆ ಕಂಡರೂ ಅವನ ಮದುವೆ ಶ್ವೇತಾ ಜೊತೆಗೆ ನಿಶ್ಚಯವಾದಾಗ ತಾನು ಭೂಪತ ಸ್ನೇಹಿತೆಯಾಗಿ ಆ ಮದುವೆಯನ್ನು ಕಣ್ತುಂಬಿಕೊಳ್ಳಲು ಬಯಸುತ್ತಾಳೆ. ಆದರೆ ಇಷ್ಟರಲ್ಲಿ ಮದುವೆ ಮಂಟಪದಲ್ಲೇ ಅವಳ ಹುಟ್ಟಿನ ರಹಸ್ಯ ಬಯಲಾಗುತ್ತದೆ. ಭೂಪತಿಯನ್ನು ಮದುವೆಯಾಗುತ್ತಿರುವ ಶ್ವೇತಾ ಶ್ರೀಮಂತ ದಂಪತಿ ಚಂದ್ರಶೇಖರ್‌ ಹಾಗೂ ಆರತಿ ಮಗಳಲ್ಲ. ಈ ಶ್ರೀಮಂತ ದಂಪತಿ ಮಗಳು ನಕ್ಷತ್ರಾ ಅನ್ನೋದು ತಿಳಿಯುತ್ತದೆ. ಇದಾಗಿಯೂ ಶಕುಂತಳಾ ದೇವಿ ಮಗ ಭೂಪತಿ ಮದುವೆಯನ್ನು ಶ್ವೇತಾ ಜೊತೆಗೇ ಮಾಡಲು ಬಯಸಿದರೂ ಕೊನೆಯ ಕ್ಷಣದಲ್ಲಿ ನಕ್ಷತ್ರಾಳ ಅಪ್ಪ ಚಂದ್ರಶೇಖರ್‌ಗೆ ನಕ್ಷತ್ರಾ ಭೂಪತಿಯನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿ, ನಕ್ಷತ್ರಾಳಿಗೇ ಭೂಪತಿಯಿಂದ ತಾಳಿ ಕಟ್ಟಿಸುವಂತೆ ಶಕುಂತಳಾ ದೇವಿಗೆ ಒತ್ತಡ ಹೇರುತ್ತಾರೆ.

KGF 2 ಹೀರೋ ಯಶ್ ರಾಧಿಕಾ ಪ್ರೇಮ ಕಹಾನಿಗೆ ಮತ್ತೆ ಜೀವ ಬಂತು! ಹರಿದಾಡ್ತಿದೆ ಹಳೇ ಫೋಟೋ

ಒಂದು ವೇಳೆ ಶಕುಂತಳಾ ದೇವಿ ಈ ಸಂಬಂಧಕ್ಕೆ ಒಪ್ಪದಿದ್ದರೆ ಆಕ್ಸಿಡೆಂಟ್ (Accident) ಕೇಸ್‌ನಲ್ಲಿ ಸಿಕ್ಕಾಕಿಕೊಂಡಿರುವ ಶಕುಂತಳಾ ಅವರ ಮತ್ತೊಬ್ಬ ಮಗನನ್ನು ಆ ಕೇಸ್‌ನಿಂದ ಬಚಾವ್ ಮಾಡಲ್ಲ ಎಂದು ಒತ್ತಡ ಹೇರುತ್ತಾರೆ. ಬೇರೆ ವಿಧಿಯಿಲ್ಲದೇ ಶಕುಂತಳಾ ದೇವಿ ಮಗನಿಗೆ ನಕ್ಷತ್ರಾಗೆ ತಾಳಿ ಕಟ್ಟವಂತೆ ಹೇಳುತ್ತಾಳೆ.

ಆದರೆ ಭೂಪತಿ ಮದುವೆ ಮಾಡಿಕೊಳ್ಳಬೇಕಿದ್ದ ಶ್ವೇತಾ ನಡೆದ ಘಟನೆಗಳಿಂದ ಸಿಟ್ಟು, ಆಘಾತಕ್ಕೆ(Shock) ತುತ್ತಾಗಿದ್ದಾಳೆ. ಶ್ವೇತಾ- ಭೂಪತಿಯ ಮದುವೆ ಮುರಿದು ಹಾಕುವ ಪಣ ತೊಟ್ಟಿದ್ದಾಳೆ. ಭೂಪತಿ ಮನದಲ್ಲಿ ನಕ್ಷತ್ರಾ ಬಗ್ಗೆ ವಿಷ ತುಂಬುತ್ತಿದ್ದಾಳೆ. ಹೀಗಾಗಿ ಭೂಪತಿ ನಕ್ಷತ್ರಾ ಬಗ್ಗೆ ಮನಸು ಕೆಡಿಸಿಕೊಂಡಿದ್ದಾನೆ. ಅತ್ತ ಶಕುಂತಳಾ ದೇವಿಯೂ ನಕ್ಷತ್ರಾಳನ್ನು ಸೊಸೆ ಅಂತ ಒಪ್ಪಿಕೊಳ್ಳುತ್ತಿಲ್ಲ.

ಸ್ಟಾರ್‌ ಸುವರ್ಣದಲ್ಲಿ ರಾಜಿ...ಪ್ರೀತಿಗೆ ಇವಳೇ ಆಸ್ತಿ

ಈಗ ನಕ್ಷತ್ರಾ ಮದುಮಗಳ ಉಡುಗೆಯಲ್ಲೇ ಭೂಪತಿ ಮನೆ ಮುಂದೆ ಬಂದು ನಿಂತಿದ್ದಾಳೆ. ಶಕುಂತಳಾ ಅವಳನ್ನು ಮನೆ ಒಳಗೆ ಸೇರಿಸಿಕೊಳ್ಳುತ್ತಿಲ್ಲ. ಅವಳನ್ನು ಮನೆಯೊಳಗೆ ಸೇರಿಸಿಕೊಳ್ಳಲೂ ಒಪ್ಪುತ್ತಿಲ್ಲ. ತನ್ನ ತವರಿಗೆ ಮರಳಲು ನಕ್ಷತ್ರಾಗೆ ಹೇಳುತ್ತಿದ್ದಾಳೆ. ಆದರೆ ನಕ್ಷತ್ರಾ ಭೂಪತಿ ತನ್ನನ್ನು ಮನೆಯೊಳಗೆ ಕರೆದುಕೊಂಡು ಹೋಗುವವರೆಗೂ ಮನೆ ಬಾಗಿಲಲ್ಲೇ ನಿಲ್ಲುವ ನಿರ್ಧಾರ ಮಾಡಿದ್ದಾಳೆ. ಶಕುಂತಳಾ ದೇವಿ ಎಷ್ಟು ಹೇಳಿದರೂ ವಾಪಾಸ್ ತವರಿಗೆ ಮರಳಲು ಒಪ್ಪುತ್ತಿಲ್ಲ. ಈ ಹಿಂದಿನ ನಕ್ಷತ್ರಾಳ ಗಟ್ಟಿ ನಿಲುವು ನೋಡಿದರೆ ಅವಳ ವಾಪಾಸ್ ತವರಿಗೆ ಹೋಗೋದು ಡೌಟ್ (Doubt). ಮನಸ್ಸು ಕಹಿ ಮಾಡಿಕೊಂಡಿರುವ ಭೂಪತಿ ಅವಳನ್ನು ಮನಸ್ಸಿಂದ ಆಚೆ ಇಟ್ಟಿದ್ದಾನೆ, ಇನ್ನು ಮನೆಯೊಳಗೆ ಕರೆಯೋದು ದೂರದ ಮಾತು. ಲಕ್ಷದಲ್ಲೊಬ್ಬಳಾಗಿ ಪ್ರೇಕ್ಷಕರ ಮನಸ್ಸಲ್ಲಿ ನೆಲೆಯೂರಿರುವ ನಕ್ಷತ್ರಾ ಹೇಗೆ ಮುಂದುವರಿಯುತ್ತಾಳೆ ಅನ್ನೋದು ಸದ್ಯದ ಕುತೂಹಲ.

ಟ್ರೋಲ್ ಆದ್ರೂ ಬಿಡಲ್ಲ; ಪತಿ ಕೆಲಸ ಮಾಡುತ್ತಿರುವಾಗ ಮತ್ತೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...