YouTube Love: 18ನೇ ವಯಸ್ಸಿಗೆ ಓಡಿಬಂದಳು, ಪೊಲೀಸರ ಲಾಠಿ ಏಟು ತಿಂದರೂ ಕೈಬಿಡಲಿಲ್ಲ! ವರ್ಷದಲ್ಲಿ ಡಿವೋರ್ಸ್!

Published : Feb 11, 2026, 08:50 PM IST
Mallu family

ಸಾರಾಂಶ

'ಮಲ್ಲು ಫ್ಯಾಮಿಲಿ' ಖ್ಯಾತಿಯ ಯೂಟ್ಯೂಬರ್ ಜೋಡಿ ಸುಜಿನ್ ಮತ್ತು ನಿದಾ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಶ್ರೀಮಂತ-ಬಡವನ ಅಂತರ, ಪೊಲೀಸ್ ದೌರ್ಜನ್ಯದಂತಹ ಹಲವು ಅಡೆತಡೆಗಳನ್ನು ಮೀರಿ ಒಂದಾಗಿದ್ದ ಇವರ ಸಿನಿಮೀಯ ಪ್ರೇಮಕಥೆ, ವಿಚ್ಛೇದನದ ಸುದ್ದಿಯ ನಡುವೆ ಮತ್ತೆ ಮುನ್ನೆಲೆಗೆ ಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯ 'ಮಲ್ಲು ಫ್ಯಾಮಿಲಿ' ಯೂಟ್ಯೂಬರ್‌ಗಳಾದ ಸುಜಿನ್ ಮತ್ತು ನಿದಾ ಅವರದ್ದೇ ಚರ್ಚೆ. ವರ್ಷಗಳ ಪ್ರೀತಿ, ಸಂಸಾರದ ನಂತರ ಇಬ್ಬರೂ ಈಗ ಬೇರೆಯಾಗಿದ್ದಾರೆ. ಇನ್ನು ಮುಂದೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈ ನಡುವೆ, ಇವರಿಬ್ಬರ ಸಿನಿಮೀಯ ಪ್ರೇಮಕಥೆ ಮತ್ತೆ ವೈರಲ್ ಆಗಿದೆ. ನಿದಾಗೆ 18, ಸುಜಿನ್‌ಗೆ 23 ವರ್ಷವಿದ್ದಾಗ ಇಬ್ಬರೂ ಮದುವೆಯಾಗಿದ್ದರು. ಆ ಲವ್ ಸ್ಟೋರಿ ಇಲ್ಲಿದೆ ನೋಡಿ.

ಮಲ್ಲು ಫ್ಯಾಮಿಲಿಯ ಪ್ರೇಮಕಥೆ (ಸುಜಿನ್ ಹೇಳಿದ್ದು)

'ನಾನು ಆಟೋ ಓಡಿಸುತ್ತಿದ್ದ ಕಾಲ ಅದು. ಅವಳು ಆಗಿನ್ನೂ ಸ್ಕೂಲಲ್ಲಿ ಓದುತ್ತಿದ್ದಳು. ಆದರೆ, ನಾನು ಅವಳನ್ನು ಆಗ ನೋಡಿಯೇ ಇರಲಿಲ್ಲ. ಫೇಸ್‌ಬುಕ್‌ನಲ್ಲಿ ನಾನು ಸಖತ್ ಆ್ಯಕ್ಟಿವ್ ಆಗಿದ್ದೆ. ಪ್ರತಿದಿನ ಬೆಳಗ್ಗೆ ಒಂದೊಂದು ಡೈಲಾಗ್ ಬರೆದು ಪೋಸ್ಟ್ ಮಾಡುತ್ತಿದ್ದೆ. ಆ ಸ್ಕೂಲಿನಿಂದ 10 ಕ್ಲಾಸ್ ಮುಗಿಸಿ ಅವಳು ತನ್ನ ಊರಿಗೆ ವಾಪಸ್ ಹೋಗಿದ್ದಳು. ಒಬ್ಬ ಫ್ರೆಂಡ್ ಮೂಲಕ ಅವಳ ಪರಿಚಯವಾಯ್ತು. ಹೆಸರು ನಿದಾ, ಊರು ತ್ರಿಶೂರ್ ಅಂತೆಲ್ಲಾ ಹೇಳಿದ. ಅವನ ಫ್ರೆಂಡ್ಸ್‌ಗಳನ್ನೆಲ್ಲಾ ಅವಳು ಫೇಸ್‌ಬುಕ್‌ನಲ್ಲಿ ಬ್ಲಾಕ್ ಮಾಡಿದ್ದಳು. ಹಾಗೆ ಹೇಳಿದಾಗ, ಒಳ್ಳೆ ಹುಡುಗಿ ಅಲ್ವಾ ಅಂತ ನನಗನ್ನಿಸಿತು. ಕೊನೆಗೆ ಒಂದು ದಿನ ಅವಳ ಕ್ಲಾಸ್‌ಮೇಟ್ ಒಬ್ಬನ ಆಟೋಗ್ರಾಫ್‌ನಿಂದ ನಂಬರ್ ಪತ್ತೆ ಹಚ್ಚಿ ವಾಟ್ಸಾಪ್‌ನಲ್ಲಿ 'ಹಾಯ್' ಅಂತ ಮೆಸೇಜ್ ಕಳಿಸಿದೆ. 

ಆಗ ನಾನು ದೇವಸ್ಥಾನದಲ್ಲಿ ಕೂತಿದ್ದೆ. 'ಯಾರು ನೀವು?' ಅಂತ ಅವಳಿಂದ ರಿಪ್ಲೈ ಬಂತು. ಫ್ರೆಂಡ್ ಕೊಟ್ಟ ನಂಬರ್‌ನ ಹುಡುಗಿಯೇ ಇವಳು ಅಂತ ನನಗೂ ಗೊತ್ತಿರಲಿಲ್ಲ. ಎಲ್ಲರನ್ನೂ ಬ್ಲಾಕ್ ಮಾಡುವ ಅವಳು ನನ್ನನ್ನು ಬ್ಲಾಕ್ ಮಾಡಲಿಲ್ಲ. (ಆತ ಸರಿ ಇಲ್ಲ ಅಂತ ನನಗೆ ಗೊತ್ತಿತ್ತು, ಅದಕ್ಕೆ ಮಾತುಕತೆ ನಿಲ್ಲಿಸಿದ್ದೆ - ನಿದಾ). ಹೀಗಿರುವಾಗ, ಹೊಸ ವರ್ಷದ ದಿನ ಎಲ್ಲರಿಗೂ ವಿಶ್ ಮಾಡುವಾಗ ನನಗೂ ಕಾಲ್ ಮಾಡಿದಳು. ಒಂದನೇ ತಾರೀಖು ಕರೆ ಮಾಡಿ, 7ನೇ ತಾರೀಖು ಇಷ್ಟ ಅಂತ ಹೇಳಿದಳು. ಕೊನೆಗೆ ಒಂದು ದಿನ ಅವಳನ್ನು ನೋಡೋಕೆ ಹೋದೆ. ಆಗ ಅಲ್ಲಿ ಒಂದು ಕಾರ್ಯಕ್ರಮ ನಡೀತಿತ್ತು. ನಾನು ನೋಡಿದಾಗ ಅವಳು ದೇವಿಯ ವೇಷದಲ್ಲಿದ್ದಳು. ವಾಪಸ್ ಬರುವಾಗ ಅವಳೇ ನನಗೆ ಇಷ್ಟ ಅಂತ ಹೇಳಿದಳು. ನಂತರ ನಾವು ಬೇರೆ ಕಡೆ ಭೇಟಿಯಾದೆವು. ಕೊನೆಗೆ ನನ್ನ ಆಟೋದಲ್ಲಿ ಅವಳ ಆಂಟಿ ಮನೆಗೆ ಡ್ರಾಪ್ ಮಾಡಿದೆ. ಅಂದೇ ನಾನು ಇವಳು ನನ್ನವಳು ಅಂತ ನಿರ್ಧರಿಸಿದೆ.

ಸಾಹಸಮಯ ಪ್ರೇಮ ಪಯಣ

'ನನ್ನ ಮನೆಯಿಂದ ಅವಳ ಮನೆಗೆ 87 ಕಿಲೋಮೀಟರ್ ದೂರ. ಬಡ್ಡಿಗೆ ದುಡ್ಡು ತೆಗೆದುಕೊಂಡು ನಾನು  ಅವಳನ್ನು ನೋಡೋಕೆ ಹೋಗಿದ್ದೆ. ಕೊನೆಗೆ ಈ ವಿಚಾರ ಮನೆಯವರಿಗೆ ಗೊತ್ತಾದಾಗ ಒಳ್ಳೆ ಏಟು ಕೂಡ ಬಿತ್ತು. ಆದರೆ, ಈ ವಿಷಯ ಮನೆಯಲ್ಲಿ ಗೊತ್ತಾಗುವ ಮೊದಲೇ ಅವಳು ಹೆದರಿಕೊಂಡು ನನಗೆ ಸಮಸ್ಯೆ ಆಗುವುದಾಗಿ ಹೇಳಿದ್ದಳು. ನಾನು ಆಟೋ ಡ್ರೈವರ್ ಆಗಿದ್ದರಿಂದ ಅವಳ ಮನೆಯವರಿಗೆ ಇಷ್ಟವಿರಲಿಲ್ಲ. ಅವಳು ಒಬ್ಬಳೇ ಮಗಳು, ಅಪ್ಪ ಗಲ್ಫ್‌ನಲ್ಲಿದ್ದರು. ಕ್ಯಾನನ್ ಕಂಪನಿಯ ಸೇಲ್ಸ್ ಎಕ್ಸಿಕ್ಯೂಟಿವ್ ಮ್ಯಾನೇಜರ್ ಆಗಿದ್ದರು. ತಿಂಗಳಿಗೆ ಎರಡರಿಂದ ಮೂರು ಲಕ್ಷ ಸಂಬಳ. 30 ವರ್ಷಗಳಿಂದ ಅಲ್ಲೇ ಕೆಲಸ ಮಾಡುತ್ತಿದ್ದರು. ವಿಷಯ ದೊಡ್ಡದಾದ ಮೇಲೆ ಪೊಲೀಸರು ನಮ್ಮನ್ನು ಹಿಡಿದರು. ನಾವಿಬ್ಬರೂ ಬೈಕ್‌ನಲ್ಲಿ ಹೋಗುವಾಗ ನಮ್ಮನ್ನು ಹಿಡಿದು ತ್ರಿಪ್ರಯಾರ್ ಸ್ಟೇಷನ್‌ಗೆ ಕರೆದುಕೊಂಡು ಹೋದರು.

'ಅಲ್ಲಿ ನನಗೆ ಲಾಠಿಯಿಂದ ಹಿಗ್ಗಾಮುಗ್ಗಾ ಬಾರಿಸಿದರು. 'ಒಳ್ಳೇ ಮನೆ ಹುಡುಗೀನ ಯಾಕೆ ಪ್ರೀತಿ ಮಾಡ್ತೀಯಾ?' ಅಂತ ಬೈದು ಹೊಡೆದರು. ಆದರೂ ನಾನು ಅವಳನ್ನು ಬಿಟ್ಟುಕೊಡುವುದಿಲ್ಲ ಅಂತ ಪಟ್ಟು ಹಿಡಿದೆ. ನನ್ನ ಧೈರ್ಯ ನೋಡಿ, ಫ್ರೆಂಡ್ಸ್ ಕೊಡಿಸಿದ ಜಾಮೀನಿನ ಮೇಲೆ ನನ್ನನ್ನು ಬಿಟ್ಟು ಕಳಿಸಿದರು. ನಾವಿಬ್ಬರೂ ಬೇರೆಯಾದೆವು ಅಂತ ಎಲ್ಲರೂ ಅಂದುಕೊಂಡಿದ್ದರು.

ತುಂಬಾ ನೋವಿನಿಲ್ಲಿದ್ದ ಅವಳನ್ನು ಮನೆಯವರು ಕೌನ್ಸೆಲಿಂಗ್‌ಗೆಲ್ಲಾ ಕರೆದುಕೊಂಡು ಹೋಗಿದ್ದರು. ಎರಡು ತಿಂಗಳು ನಾನು ಅವಳಿಗಾಗಿ ಕಾದೆ. ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ನಾನು ಗಲ್ಫ್‌ಗೆ ಹೋಗಲು ವೀಸಾ ಎಲ್ಲ ರೆಡಿಯಾಗಿದ್ದಾಗ ಅವಳ ಫೋನ್ ಬಂತು. ನಾನು ತಕ್ಷಣ ವೀಸಾ ಕ್ಯಾನ್ಸಲ್ ಮಾಡಿ, ಅವಳನ್ನು ಕರೆದುಕೊಂಡು ಬಂದು ಮದುವೆಯಾದೆ. ಆಗ ನನಗೆ 23, ಅವಳಿಗೆ 18 ವರ್ಷ.' ಈ ಲವ್ ಸ್ಟೋರಿಯನ್ನು ಅವರು 'ಸೈನಾ ಪ್ಲಸ್' ಜೊತೆ ಹಂಚಿಕೊಂಡಿದ್ದರು. ಇದೀಗ ಹಳೆಯ ಲವ್ ಸ್ಟೋರಿ ವೈರಲ್ ಆಗುತ್ತಿದೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಮುದ್ದು ಸೊಸೆ’ ಧಾರಾವಾಹಿಯ ಕ್ವಾಟ್ಲೆ ನಿಶಿತ್ ರಾಜ್ ಶೆಟ್ಟಿ
'ಜಗದ್ಧಾತ್ರಿ'ಯಾಗಿ ನಟಿ ಮೋಕ್ಷಿತಾ ಪೈ ಎಂಟ್ರಿ! ಕ್ರೈಂ ಬ್ರ್ಯಾಂಚ್​ ಆಫೀಸರ್​- ಏನಿದು ಸ್ಟೋರಿ? ನಾಯಕ ಯಾರು?