ಸಿಡಿಮಿಡಿ ಅಂತಿರೋ ಗಂಡ ಏಕಾಏಕಿ ಒಳ್ಳೆಯವನಾದ್ರೆ ಹುಷಾರ್​ ಕಣ್ರಮ್ಮಾ... ನೆಟ್ಟಿಗರಿಂದ ಹೀಗೊಂದು ಕಿವಿಮಾತು...

By Suchethana D  |  First Published Jul 27, 2024, 4:25 PM IST

ಪತ್ನಿಗೆ ವಿಲನ್​ ಆಗಿರೋ ಜೈದೇವ ಏಕಾಏಕಿ ಒಳ್ಳೆಯವನಾಗಿದ್ದಾನೆ. ಆದರೆ ಪತ್ನಿ ಮಲ್ಲಿಗೆ ಇದು ನಾಟಕ ಎಂದು ತಿಳಿಯುತ್ತಲೇ ಇಲ್ಲ. ಇದನ್ನು ನೋಡಿದ ನೆಟ್ಟಿಗರು ಏನು ಹೇಳ್ತಿದ್ದಾರೆ ಕೇಳಿ...
 


ಅಮೃತಧಾರೆ ಸೀರಿಯಲ್​ನಲ್ಲಿ ಮಲ್ಲಿ ಮತ್ತು ಜೈದೇವ್​ ಪಾತ್ರ ಯಾರೂ ಮರೆಯುವಂತಿಲ್ಲ. ಮನೆ ಕೆಲಸದ ಮಲ್ಲಿಯನ್ನೇ ಪ್ರೆಗ್ನೆಂಟ್​ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ವಿಲನ್​ ಜೈದೇವ್​ನನ್ನು ಭೂಮಿಕಾ ಬಿಡಲಿಲ್ಲ. ಇಬ್ಬರನ್ನೂ ಕರೆಸಿ ಮದುವೆ ಮಾಡಿಸಿಬಿಟ್ಟಿದ್ದಾಳೆ. ಇದೇ ಕಾರಣಕ್ಕೆ ಜೈದೇವ್​ ಅತ್ತ ಪತ್ನಿ ಮಲ್ಲಿಯ ವಿರುದ್ಧ ಇತ್ತ ಭೂಮಿಕಾಳ ವಿರುದ್ಧ ಕೊತ ಕೊತ ಕುದಿಯುತ್ತಲೇ ಇದ್ದಾನೆ. ಇವರಿಬ್ಬರನ್ನೂ ಹೇಗಾದರೂ ಮುಗಿಸಬೇಕು ಎಂದು ತನ್ನ ತಾಯಿ ಲೇಡಿ ವಿಲನ್​ ಶಕುಂತಲಾ ದೇವಿ ಜೊತೆ ಮಸಲತ್ತು ಮಾಡುತ್ತಲೇ ಇದ್ದಾನೆ. ಈ ಹಿಂದೆ ಗೌತಮ್ ಗೆಳೆಯ ಆನಂದ್ ಮೇಲೆ ಕಳ್ಳತನದ ಆರೋಪ ಮಾಡಿದ್ದ ಜೈದೇವ್‌ ರೆಡ್ ಹ್ಯಾಂಡ್ ಆಗಿ ಭೂಮಿಕಾ ಕೈಗೆ ಸಿಕ್ಕಿ ಹಾಕಿಕೊಂಡಿದ್ದನು. ಮೋಸದಿಂದ ಅಪ್ಪಿಯನ್ನು ಮದುವೆಯಾಗಲು ಮುಂದಾಗಿದ್ದ ವೇಳೆಯೂ ಮಲ್ಲಿಗೆ ಭೂಮಿಕಾ ನ್ಯಾಯ ಕೊಡಿಸಿದ್ದಳು. ಹಾಗಾಗಿ ಭೂಮಿಕಾ ಕಂಡರೆ ಜೈದೇವ್ ಕೆಂಡವಾಗುತ್ತಾನೆ.  ಪತ್ನಿ ಮಲ್ಲಿಯನ್ನು ಕೊಲ್ಲಲು ಇದಾಗಲೇ ಹಲವು ಬಾರಿ ಸಂಚುಕೂಡ ರೂಪಿಸಿದ್ದಾನೆ. 

ಆದರೆ ಏಕಾಏಕಿ ಜೈದೇವ ಬದಲಾಗಿದ್ದಾನೆ. ಅಂದ್ರೆ ನಿಜವಾಗಿಯೂ ಬದಲಾಗಿಲ್ಲ, ಬದಲಾದ ಥರ ನಾಟಕ ಮಾಡುತ್ತಿದ್ದಾನೆ. ಪತ್ನಿ ಮಲ್ಲಿಯನ್ನು ಪೂಸಿ ಹೊಡೆದು ನಂಬಿಸುತ್ತಿದ್ದಾನೆ. ತುಂಬಾ ಪ್ರೀತಿ ಮಾಡುವಂತೆ ಆ್ಯಕ್ಟ್​ ಮಾಡುತ್ತಿದ್ದಾನೆ. ಇವರ ಈ ನಾಟಕಕ್ಕೆ ಖುದ್ದು ಭೂಮಿಕಾಳೇ ಸೋತು ಹೋಗಿದ್ದಾಳೆ, ಇದನ್ನು ನಿಜ ಎಂದು ನಂಬಿದ್ದಾಳೆ ಎಂದರೆ ಯಾವ ಪರಿಯಲ್ಲಿ ಜೈದೇವ ನಾಟಕ ಮಾಡುತ್ತಿದ್ದಾನೆ ಎಂದು ಅರ್ಥವಾಗುತ್ತದೆ. ಇದಾಗಲೇ ತನ್ನನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದ ಎಂದು ಗೊತ್ತಿದ್ದರೂ ಭೂಮಿಕಾ ಆತನನ್ನು ನಂಬಿಬಿಟ್ಟಿದ್ದಾಳೆ.

Tap to resize

Latest Videos

undefined

ರಾಜಾ ರಾಣಿ ಷೋನಲ್ಲಿ ದಿಢೀರ್​ ಕೆಳಕ್ಕೆ ಬಿದ್ದ ಸ್ಪರ್ಧಿ: ದಿಗ್ಭ್ರಮೆಯಿಂದ ಕೂಗಿಕೊಂಡ ತೀರ್ಪುಗಾರರು

ಇದೀಗ ಸ್ವಂತ ತಂಗಿಯೂ ಅಚ್ಚರಿಯಾಗುವ ರೀತಿಯಲ್ಲಿ ಮಲ್ಲಿಯ ಮೇಲೆ ಪ್ರೀತಿಯ ಧಾರೆ ಹರಿಸಿದ್ದಾನೆ ಜೈದೇವ. ಇದನ್ನು ನೋಡಿ ತಂಗಿಯೇ ಆಶ್ಚರ್ಯ ಪಟ್ಟುಕೊಂಡಿದ್ದಾಳೆ. ಮಲ್ಲಿಯ ಮೇಲೆ ಸೇಡು ತೀರಿಸಿಕೊಳ್ಳುವುದು, ಆಕೆಯನ್ನು ಕೊಲ್ಲಲು ಸಂಚು ರೂಪಿಸುವುದು ಇವೆಲ್ಲಾ ಇನ್ನ ತನಗೆ ಆಗಿ ಬರುವುದಿಲ್ಲ ಎಂದು ತಿಳಿದಿರುವ ಜೈದೇವ, ಅತ್ತ ಕಡೆ ಪರ ಹೆಣ್ಣುಗಳ ಮೇಲೆ ಕಣ್ಣು ಹಾಕುತ್ತಲೇ ಇತ್ತ ಮಲ್ಲಿಯನ್ನೂ ಒಲಿಸಿಕೊಳ್ಳುತ್ತಿದ್ದಾನೆ, ನಾಟಕವಾಡುತ್ತಿದ್ದಾನೆ. ಮಲ್ಲಿ ಕೂಡ ತನ್ನ ಗಂಡ ಬದಲಾಗಿದ್ದಾನೆ ಎಂದೇ ಅಂದುಕೊಂಡಿದ್ದಾಳೆ.

ಇದೀಗ ಇದರ ಪ್ರೊಮೋ ಬಿಡುಗಡೆಯಾಗಿದೆ. ಇದರಲ್ಲಿ ಜೈದೇವ ಮಲ್ಲಿಯನ್ನು ಪ್ರೀತಿಸಿದಂತೆ ಮಾಡಿ, ಮನಸ್ಸಿನಲ್ಲಿ ಇವಳಿಗೆ ಆಗಾಗ್ಗೆ ಹೀಗೇ ಪೂಸಿ ಹೊಡೆಯುತ್ತಾ, ಹೊಗಳ್ತಾ ಇರಬೇಕು. ಇಲ್ಲಾಂದ್ರೆ ಆ ಭೂಮಿಕಾ ಹತ್ರ ಅಕ್ಕವ್ರೇ ಅಕ್ಕವ್ರೇ ಅಂತ ಹೋಗಿ ಚಾಡಿ ಹೇಳ್ತಾಳೆ. ನಾನು ಬಚಾವಾಗಬೇಕು ಎಂದ್ರೆ ಹೀಗೆ ಮಾಡ್ತಾನೇ ಇರಬೇಕು, ಕರ್ಮ ಎಂದುಕೊಳ್ಳುತ್ತಿದ್ದಾನೆ. ಪಾಪ ಇದರ ಅರಿವು ಪತ್ನಿ ಮಲ್ಲಿಗೆ ಇಲ್ಲ. ಇದರ ಪ್ರೊಮೋ ನೋಡಿದ ನೆಟ್ಟಿಗರು, ಅಯ್ಯೋ ಪೆದ್ದು ಮಲ್ಲಿ ಎನ್ನುತ್ತಿದ್ದಾರೆ. ಜೊತೆಗೆ ದಿನವೂ ಟಾರ್ಚರ್​ ಕೊಡ್ತಿರೋ ಗಂಡ, ಕಿರಿಕಿರಿ ಅಂತಿರೋನು ಹೀಗೆ ಏಕಾಏಕಿ ಒಳ್ಳೆಯವನ ಥರ ಆಡಿದ್ರೆ ಹುಷಾರು ಕಣ್ರಮ್ಮಾ ಎಂದು ಕೆಲವರು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. ಇಂಥವರು ಯಾವಾಗ್ಲೂ ಬದಲಾಗಲ್ಲ. ಒಳ್ಳೆಯವ ಆಗೋದು ಹಾಗೂ ಒಳ್ಳೆಯವನ ಥರ ಆಡೋದು ಇವೆರಡರ ವ್ಯತ್ಯಾಸ ಹೆಂಡ್ತಿ ಅರಿತುಕೊಳ್ಳಬೇಕು ಎನ್ನುತ್ತಿದ್ದಾರೆ. 

ಡ್ರೋನ್​ ಪ್ರತಾಪ್​ನಿಂದ ನಾನು ಕೋಟ್ಯಧೀಶ್ವರೆ ಆದೆ: ಭಾವುಕರಾಗಿ ಕಣ್ಣೀರಾದ ಅಜ್ಜಿಯ ವಿಡಿಯೋ ವೈರಲ್​

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!