ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ ಕಾರ್ಯಕ್ರಮದ ವೇಳೆ ಆ್ಯಂಕರ್ ಅನುಪಮಾ ಗೌಡ ತಾವು ಮದ್ವೆಯಾಗದೇ ಇರೋದಕ್ಕೆ ಉಪೇಂದ್ರ ಕಾರಣ ಎಂದು ಹೇಳಿ ಕಾರಣನೂ ಕೊಟ್ಟಿದ್ದಾರೆ!
ಹಿರಿತೆರೆ, ಕಿರುತೆರೆ ಎರಡರಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ನಟಿ ಅನುಪಮಾ ಗೌಡ. ನಟನೆಗೂ ಸೈ, ನಿರೂಪಣೆಗೂ ಸೈ ಎನ್ನುವುದನ್ನು ನಟಿ ಇದಾಗಲೇ ತೋರಿಸಿಕೊಡುತ್ತಿದ್ದಾರೆ. ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಈ ಮೂಲಕ ನಟಿ ಕಮ್ ನಿರೂಪಕಿ ಎಂದೇ ಫೇಮಸ್ ಆಗಿದ್ದಾರೆ. ಆದರೆ ಅನುಪಮಾ ಇದುವರೆಗೂ ಸಿಂಗಲ್ ಆಗಿಯೇ ಇದ್ದಾರೆ. ಅವರು ಪ್ರೀತಿಯ ವಿಷಯದಲ್ಲಿ ತುಂಬಾ ನೋವನ್ನುಂಡವರು. ನನ್ನ ಲವ್ ಬ್ರೇಕಪ್ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತು. ಅಷ್ಟು ವರುಷಗಳ ಕಾಲ ಪ್ರೀತಿಸಿ, ಇನ್ನು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್ ಆಗುತ್ತೇನೆ ಎನ್ನುವಾಗ ನನ್ನ ಲವ್ ಮುರಿದುಬಿತ್ತು ಎಂದು ಹಿಂದೊಮ್ಮೆ ಹೇಳುತ್ತಲೇ ಅದರ ಬಗ್ಗೆ ಮಾತನಾಡಿದ್ದರು. ಅದರ ನೋವಿನಲ್ಲಿಯೇ ಅವರು ಇಂದಿಗೂ ಮದುವೆಯಾಗಲಿಲ್ಲ.
ಆದರೆ ಇದೀಗ ಅವರು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ತಾವು ಮದುವೆಯಾಗದೇ ಇರೋದಕ್ಕೆ ಉಪೇಂದ್ರ ಅವರೇ ಕಾರಣ ಎಂದಿದ್ದಾರೆ! ಹೌದು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ ಬಂದಿದ್ದು, ಅವರ ಎದುರೇ ನಟಿ ಹೀಗೆ ಹೇಳಿದ್ದಾರೆ. ಅಷ್ಟಕ್ಕೂ ಅವರು ಅದನ್ನು ತಮಾಷೆಗಾಗಿ ಹೇಳಿದ್ದಾರೆ. ಪ್ರೀತಿ- ಪ್ರೇಮ ಪುಸ್ತಕದ ಬದನೆಕಾಯಿ ಅಂತ ಡೈಲಾಗ್ ಹೇಳಿಬಿಟ್ರು. ಅದಕ್ಕೇ ನಾನು ಇನ್ನೂ ಮದ್ವೆಯಾಗಿಲ್ಲ ಎಂದು ತಮಾಷೆ ಮಾಡಿದ್ರೆ ಡೈಲಾಗ್ ಕಿಂಗ್ ಉಪೇಂದ್ರ ಸುಮ್ನೇ ಇರ್ತಾರಾ? ಆ ಡೈಲಾಗೇ ಪುಸ್ತಕದ ಬದನೆಕಾಯಿ ಅಮ್ಮಾ ಎಂದ್ರು. ಅದಕ್ಕೆ ಅನುಪಮಾ ನಮಗೆ ನಿಮ್ಮನ್ನು ನೋಡಿದ್ರೆ ಹೊಟ್ಟೆ ಉರಿಯತ್ತೆ ಎಂದ್ರು. ಆಗ ಉಪೇಂದ್ರ ಹೊಟ್ಟೆ ಉರ್ಕೊಳ್ಳಿ ಅಂತನಾ ಮದ್ವೆಯಾಗಿದ್ದು ಅಂದ್ರು! ನಂತ್ರ ರೊಮಾಂಟಿಕ್ ಸಾಂಗ್ಗೆ ಡಾನ್ಸ್ ಮಾಡೋಣ ಎಂದ್ರೆ, ಪ್ರಿಯಾಂಕಾ ಇಲ್ಲೇ ಇದ್ದಾರೆ, ನೀವು ಬೇಕಾದ್ರೆ ಮಾಡಿಕೊಳ್ಳಿ ಅಂತ ತಮಾಷೆ ಮಾಡಿ ಹೋದರು.
undefined
ಇವನೇ ಸರ್ವಸ್ವ, ನನ್ನ ಜೀವದ ಗೆಳೆಯ ಎಂದು ಫ್ರೆಂಡ್ಷಿಪ್ ಡೇಗೆ ಸ್ನೇಹಿತನ ಹೀಗೆ ಪರಿಚಯಿಸಿದ ಅನುಪಮಾ ಗೌಡ
ಇನ್ನು ಅನುಪಮಾ ಕುರಿತು ಹೇಳುವುದಾದರೆ, ಲೋಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಟಿ, ಕೊನೆಗೆ ಮನೆ ಮನೆ ಮಾತಾಗಿದ್ದು, ಅಕ್ಕ ಸೀರಿಯಲ್ ಮೂಲಕ. ಈ ಸೀರಿಯಲ್ನಲ್ಲಿ ಎರಡು ಪಾತ್ರ ನಿರ್ವಹಿಸಿ, ನಾಯಕಿ, ವಿಲನ್ ಯಾವುದಕ್ಕೂ ಸೈ ಎನಿಸಿಕೊಂಡರು. ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದರು. ಇದಕ್ಕೂ ಮುನ್ನ ಅವರು ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ. ನಂತರ ಸಕತ್ ಫೇಮಸ್ ಆಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ ನಂತರ.
ತಮ್ಮ ಲವ್ ಫೆಲ್ಯೂರ್ ಕುರಿತು ಮಾತನಾಡಿದ್ದ ಅವರು, ನಾನು ಅಕ್ಷರಶಃ ಖಿನ್ನತೆಗೆ ಜಾರಿದ್ದ ವೇಳೆಯಲ್ಲಿ ನನ್ನನ್ನು ಕಾಪಾಡಿದ್ದು ನನ್ನ ಆತ್ಮೀಯ ಸ್ನೇಹಿತೆ ಹಾಗೂ ನನ್ನ ಗ್ರೇಟ್ ಫ್ರೆಂಡ್ಸ್ ಸರ್ಕಲ್ ಮಾತ್ರ. ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಲವ್ ಮಾಡುತ್ತಿದ್ದೆ ನಾನು. ಆದರೆ ಕಷ್ಟದ ಸಮಸಯದಲ್ಲಿ ಕೈ ಹಿಡಿದಿದ್ದು ಲವರ್ ಅಲ್ಲ, ಬದಲಿಗೆ ಫ್ರೆಂಡ್ಸ್. 'ಪ್ರೇಮಕ್ಕಿಂತ ಸ್ನೇಹ ದೊಡ್ಡದು' ಎಂಬ ಸತ್ಯವನ್ನು ನಾನು ಜೀವನದಲ್ಲಿ ಮೊದಲ ಬಾರಿಗೆ ಕಂಡುಕೊಂಡೆ. 'ಪ್ರೀತಿ ಕೆಲವೊಮ್ಮೆ ಸಾವಿಗೆ ಕಾರಣವಾದರೆ ಸ್ನೇಹ ಬದುಕಿಸಲು ಬಯಸುತ್ತದೆ'. ಈ 'ಲೈಫ್ ಟ್ರುಥ್' ಅನ್ನು ನಾನೆಂದಿಗೂ ಮರೆಯಲಾರೆ' ಎಂದಿದ್ದರು ಅವರು. ಅಂದಹಾಗೆ, ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಸೆಪ್ಟೆಂಬರ್ 20 ರಿಂದ 22ರವರೆಗೆ ಈ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ.
13 ದಿನದ ಶಮಿಕಾಳ ಉಸಿರು ನಿಂತಾಗ ನಡೆದಿತ್ತು ಪವಾಡ: ವಿಚಿತ್ರ ಘಟನೆ ನೆನಪಿಸಿದ ರಾಧಿಕಾ ಕುಮಾರಸ್ವಾಮಿ