ಮಜಾ ಟಾಕೀಸ್ ಗೆ ಬರ್ತಿದ್ದಾರೆ ಈ ಎಲ್ಲ ಆಕ್ಟರ್ಸ್, ಮತ್ತೊಮ್ಮೆ ಮಜಾ ನೀಡಲು ಡೇಟ್ ಫಿಕ್ಸ್

Published : Jan 15, 2025, 11:47 AM ISTUpdated : Jan 15, 2025, 12:02 PM IST
ಮಜಾ ಟಾಕೀಸ್ ಗೆ ಬರ್ತಿದ್ದಾರೆ ಈ ಎಲ್ಲ ಆಕ್ಟರ್ಸ್, ಮತ್ತೊಮ್ಮೆ ಮಜಾ ನೀಡಲು ಡೇಟ್ ಫಿಕ್ಸ್

ಸಾರಾಂಶ

ಮಜಾ ಟಾಕೀಸ್ ಫೆಬ್ರವರಿ 1 ರಿಂದ ಕಲರ್ಸ್ ಕನ್ನಡದಲ್ಲಿ ಮತ್ತೆ ಪ್ರಾರಂಭವಾಗಲಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ ಹೊಸ ತಂಡದೊಂದಿಗೆ ಕಾರ್ಯಕ್ರಮ ಬರುತ್ತಿದೆ. ಪ್ರಿಯಾಂಕಾ, ಕುರಿ ಪ್ರತಾಪ್, ಯೋಗರಾಜ್‌ ಭಟ್ ಮುಂತಾದವರು ತಂಡ ಸೇರಿದ್ದಾರೆ. ಇಂದ್ರಜಿತ್ ಲಂಕೇಶ್, ವರಲಕ್ಷ್ಮಿ, ಶ್ವೇತಾ ಚಂಗಪ್ಪ ಈ ಬಾರಿ ಇರುವುದಿಲ್ಲ. ಹೊಸ ತಂಡದಿಂದ ಹೆಚ್ಚಿನ ಮನರಂಜನೆಯ ನಿರೀಕ್ಷೆಯಿದೆ.

ಮಜಾ ಮಾಂಜಾ ಕೊಡೊಕೆ ಮಜಾ ಟಾಕೀಸ್ (Maja Talkies) ಮತ್ತೆ ಬರ್ತಿದೆ. ಪ್ರೋಮೋ (Promo) ಮೂಲಕ ಮಜಾ ಟಾಕೀಸ್ ವಾಫಸ್ ಆಗ್ತಿರುವ ಬಗ್ಗೆ ಸುಳಿವನ್ನು ಕಲರ್ಸ್ ಕನ್ನಡ (Colors Kannada) ಈ ಹಿಂದೆಯೇ ನೀಡಿತ್ತು. ಮೊದಲ ಪ್ರೋಮೊ ಬಿಡುಗಡೆ ಆಗ್ತಿದ್ದಂತೆ ವೀಕ್ಷಕರು ಈ ಬಾರಿ ಯಾರೆಲ್ಲ ಮಜಾ ಟೀಂನಲ್ಲಿ ಇರ್ತಾರೆ ಎಂಬ ಪ್ರಶ್ನೆ ಇಟ್ಟಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ ಬರ್ತಿರೋ ಮಜಾ ಟಾಕೀಸ್ ಗೆ ಒಂದಿಷ್ಟು ಹೊಸ ಕಲಾವಿದರ ಸೇರ್ಪಡೆಯಾಗಿದೆ.

ಕಲರ್ಸ್ ಕನ್ನಡ ಮಜಾ ಟಾಕೀಸ್ ಎರಡನೇ ಪ್ರೋಮೋ ಬಿಡುಗಡೆ ಮಾಡಿದೆ. ಅದ್ರಲ್ಲಿ ಕಲಾವಿದರ ಜೊತೆ ಯಾವಾಗಿನಿಂದ ಶೋ ಶುರುವಾಗುತ್ತೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಮಜಾ ಟಾಕೀಸ್ ಬರೋ ಫೆಬ್ರವರಿ ಒಂದರಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಸದ್ಯ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ (Kiccha Sudeep) ಬರ್ತಾ ಇದ್ರು. ಬಿಗ್ ಬಾಸ್ 11 ಫಿನಾಲೆ ಹಂತಕ್ಕೆ ಬಂದಿದೆ. ಜನವರಿ 25- 26ಕ್ಕೆ ಫಿನಾಲೆ ನಡೆಯುವ ಸಾಧ್ಯತೆ ಈಗ ಮತ್ತಷ್ಟು ದಟ್ಟವಾಗಿದೆ. ಬಿಗ್ ಬಾಸ್ ಮುಗಿಯುತ್ತಿದ್ದಂತೆ ಮಜಾ ಟಾಕೀಸ್ ಅಬ್ಬರ ಶುರುವಾಗಲಿದೆ.

ಅಮೃತಧಾರೆಯ ಜೀವ ಪಾತ್ರಧಾರಿ ಚೇಂಜ್‌! ಶಶಿ ಹೆಗಡೆ ರೀಲ್ಸ್‌ ಮಾಡ್ತಾ ಸೀರಿಯಲ್‌ನೇ ಮರ್ತುಬಿಟ್ರಾ?

ಟೀಂ ಜೊತೆ ಸಿದ್ಧವಾಗಿದೆ ಮಜಾ ಟಾಕೀಸ್ : ಸೃಜನ್ ಲೋಕೇಶ್ (Srujan Lokesh) ಮಜಾ ಟಾಕೀಸ್ ಗೆ ಹೊಸ ತಂಡವೇ ಸೇರಿದೆ ಅಂದ್ರೆ ತಪ್ಪಾಗೋದಿಲ್ಲ. ಮಜಾ ಭಾರತ ವೇದಿಕೆ ಮೇಲೆ ಮಿಂಚಿದ್ದ ಅನೇಕ ಕಲಾವಿದರು ಈಗ ಮಜಾ ಟಾಕೀಸ್ ಭಾಗವಾಗ್ತಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಚಂದ್ರಿಕಾ ಆಗಿ ಮಿಂಚಿದ್ದ, ವಿಲನ್ ಪಾತ್ರದ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಿಯಾಂಕಾ ಈ ಬಾರಿ ಮಜಾ ಟಾಕೀಸ್ ನಲ್ಲಿ ಮಜಾ ನೀಡಲಿದ್ದಾರೆ. 

ಈ ಬಾರಿಯೂ ಕುರಿ ಪ್ರತಾಪ್ ಮಜಾ ಟಾಕೀಸ್ ತಂಡದಲ್ಲಿದ್ದಾರೆ. ತುಕಾಲಿ, ಶಿವು, ಪ್ರಿಯಾಂಕಾ ಕಾಮತ್ ಪಿಕೆ ಮತ್ತು ಚಂದ್ರಪ್ರಭ ಅವರನ್ನು ನೀವು ಮಜಾ ಟಾಕೀಸ್ ನಲ್ಲಿ ನೋಡ್ಬಹುದು. ಈ ಬಾರಿಯ ಮತ್ತೊಂದು ವಿಶೇಷ ಅಂದ್ರೆ ಭಟ್ರು. ಫುಲ್ ಮೆಂಟಲ್ ಎನ್ನುತ್ತಲೇ ಯೋಗರಾಜ್‌ ಭಟ್ರನ್ನು  ತಂಡ ಎತ್ಕೊಂಡು ಹೋಗೋದನ್ನು ನೀವು ಪ್ರೋಮೋದಲ್ಲಿ ನೋಡ್ಬಹುದು. 

ಈ ಬಾರಿ ಮಿಸ್ ಆದ ಕಲಾವಿದರು : ಮಜಾ ಟಾಕೀಸ್ ನಲ್ಲಿ ಈ ಬಾರಿ ಇಂದ್ರಜಿತ್ ಲಂಕೇಶ್ ಮಿಸ್ ಆಗಿದ್ದಾರೆ. ಪ್ರೋಮೋದಲ್ಲಿ ಲಂಕೇಶ್ ಕಾಣಿಸ್ತಿಲ್ಲ. ಇಂದ್ರಜಿತ್ ಲಂಕೇಶ್ ಜಾಗಕ್ಕೆ ಭಟ್ರು ಬರ್ತಿದ್ದಾರೆ.  ಒನ್ ಆಂಡ್ ಒನ್ಲಿ ವರಲಕ್ಷ್ಮಿ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ನೋವಿನ ಸಂಗತಿ. ಇನ್ನೊಂದ್ಕಡೆ ಸೃಜನ್ ಪತ್ನಿಯಾಗಿ ಕಾಣಿಸಿಕೊಳ್ತಿದ್ದ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಕೂಡ ಪ್ರೋಮೋದಲ್ಲಿ ಮಿಸ್ ಆಗಿದ್ದಾರೆ. ಮುದ್ದು ಸರೋಜಾ ಎಂದೇ ಪ್ರಸಿದ್ಧಿಯಾಗಿದ್ದ ಪವನ್, ಮಂಡ್ಯ ರಮೇಶ್ ಸೇರಿದಂತೆ ಕೆಲ ಕಲಾವಿದರು ಮಿಸ್ ಆಗಿದ್ದಾರೆ. 

ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ ಈ ಸ್ಪರ್ಧಿಯನ್ನು ಹೊರಹಾಕಲು ಫ್ಯಾನ್ಸ್ ಒತ್ತಾಯ

ಪ್ರೋಮೋ ನೋಡಿದ ವೀಕ್ಷಕರು ಖುಷಿಯಾಗಿದ್ದಾರೆ. ಹೊಸ ತಂಡದಿಂದ ಹೆಚ್ಚು ಮನರಂಜನೆ ಸಿಗುವ ಭರವಸೆ ಇದೆ ಎಂದು ವೀಕ್ಷಕರು ಹೇಳಿದ್ದಾರೆ. 2015ರಲ್ಲಿ ಶುರುವಾದ ಮಜಾ ಟಾಕೀಸ್, 10 ವರ್ಷ ಪೂರೈಸುವ ಸಂಭ್ರಮದಲ್ಲಿದೆ. ಸೃಜನ್ ಬೇರೆ ಶೋಗಳಲ್ಲಿ ಬ್ಯೂಸಿಯಿದ್ದ ಕಾರಣ ಅವರು ಮಜಾ ಟಾಕೀಸ್ ಗೆ ಬ್ರೇಕ್ ನೀಡಿದ್ದರು. ಕೆಲವೇ ಕೆಲವು ಸೀಸನ್ ಮಾತ್ರ ಪ್ರಸಾರವಾಗಿದ್ರೂ ಜನರು ಮಜಾ ಟಾಕೀಸ್ ಮಜವನ್ನು ಮರೆತಿಲ್ಲ. ಈಗ್ಲೂ ಶೋ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?