
'ಮಜಾ ಟಾಕೀಸ್' ಸುಂದರ ಚೆಲುವೆ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಸೆಪ್ಟೆಂಬರ್ 9, 2019ರಂದು ಮುದ್ದು ಕೃಷ್ಣನಿಗೆ ಜನ್ಮ ನೀಡಿದ್ದಾರೆ. ತಮ್ಮೆಲ್ಲಾ ಅಭಿಮಾನಿಗಳಿಗೆ ವಿಶೇಷ ದಿನದಂದು ಪುತ್ರನ ಮೊದಲ ಫೋಟೋ ಹಾಗೂ ಹೆಸರನ್ನು ರಿವೀಲ್ ಮಾಡಿದ್ದರು.
ಕೊಡವ ಯೋಧನೆಂದು ಪುತ್ರನ ಫೋಟೋ, ಹೆಸರು ರಿವೀಲ್ ಮಾಡಿದ ಶ್ವೇತಾ ಚಂಗಪ್ಪ!
ಕೊಡವ ಸ್ಟೈಲಿನಲ್ಲಿ ಪುತ್ರನಿಗೆ ಫೋಟೊ ಶೂಟ್ ಮಾಡಿಸಿ ಗಣರಾಜ್ಯೋತ್ಸವದ ದಿನವೇ 15 ವರ್ಷಗಳ ಹಿಂದೆ, ನಾನು ಮೊದಲು ಕ್ಯಾಮೆರಾ ಎದುರಿಸಿದ್ದೆ. ಅದೇ ದಿನ ಮಗನ ಫೋಟೋವನ್ನೂ ಶೇರ್ ಮಾಡುತ್ತಿದ್ದೇನೆಂದು ಕೊಡಗಿನ ಯೋಧನ ಫೋಟೋ ಶೇರ್ ಮಾಡಿಕೊಂಡಿದ್ದರು. ಮಗನಿಗೆ ಏನಪ್ಪಾ ಹೆಸರಿಟ್ಟರು ನಮ್ಮ ಮಜಾ ಟಾಕೀಸ್ ರಾಣಿ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಜಿಯಾನ್ ಅಯ್ಯಪ್ಪ ಎಂಬ ಹೆಸರಿಟ್ಟಿದ್ದಾಗಿಯೂ ಹೇಳಿದ್ದರು. ಅಂದೇ ಮಗನ ಹೆಸರಲ್ಲಿ ಇನ್‌ಸ್ಟಾಗ್ರಾಂ ಖಾತೆಯನ್ನೂ ತೆರೆದಿದ್ದರು. ಈಗಾಗಲೇ ಕಿರಣ್-ಶ್ವೇತಾ ದಂಪತಿ ಪುತ್ರ ಜಿಯಾನ್‌ಗೆ 6000ಕ್ಕೂ ಹೆಚ್ಚು ಫಾಲೋಯರ್ಸ್ ಇದ್ದಾರೆ.
ಶ್ವೇತಾ ಕಮ್ ಬ್ಯಾಕ್; ಟ್ರಾನ್ಸಫಾರ್ಮೇಶನ್ ಹೇಗಿದೆ ನೋಡಿ!
ಕೊಡಿಗಿನ ಇಗ್ಗುಟೊಪ್ಪ ಮಂದಿರದಲ್ಲಿ, ಕುಟುಂಬದ ಉಪಸ್ಥಿತಿಯಲ್ಲಿ ತಮ್ಮ ಮಗನಿಗೆ ಸಾಂಪ್ರಾದಾಯಿಕವಾಗಿ ಜಿಯಾನ್ ಅಯ್ಯಪ್ಪ ಎಂದು ನಾಮಕರಣ ಮಾಡಿದ್ದಾರೆ. ಅಯ್ಯಪ್ಪ ಕೊಡಗಿನ ಪ್ರಸಿದ್ಧ ಸರ್ ನೇಮ್ ಎಂಬುವವುದು ಎಲ್ಲರಿಗೂ ಗೊತ್ತು. ಈ ಮುದ್ದಾದ ಹೆಸರನ್ನು ನನ್ನ ಪತಿ ಹಾಗೂ ನಾನು ಸೇರಿ ಆಯ್ಕೆ ಮಾಡಿದ್ದಾಗಿಯೂ ತಮ್ಮ ಪೋಸ್ಟಿನಲ್ಲಿ ತಿಳಿಸಿದ್ದಾರೆ.
#SonShine ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಮಗನ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಶ್ವೇತಾ 'ಜಿಯಾನ್ ಎಂದರೆ ಸದಾ ಖುಷಿಯಾಗಿದ್ದು, ಸಂತೋಷ ಪಸರಿಸುವ ವ್ಯಕ್ತಿ' ಎಂಬ ಅದ್ಭುತವಾದ ಅರ್ಥವಿದೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.