ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಹೆಸರು ಕೇಳಿದ್ರೆ ಒಮ್ಮೆ ಮುಖದ ಮೇಲೆ ಮಂದ ಹಾಸ ಮೂಡಿಸುವುದಂತೂ ಗ್ಯಾರಂಟಿ. ಅಷ್ಟಕ್ಕೂ ಈ ಹೆಸರು ಹುಟ್ಟಿಕೊಂಡಿದ್ದು ಹೇಗೆ?
61 ಲಕ್ಷ ರೂ. ನಗದು, ದುಬಾರಿ ಟಾಟಾ ಕಾರೂ ಹಾಗೂ ಹೆಸರು ತಂದುಕೊಟ್ಟ ಬಿಗ್ ಬಾಸ್ ಟ್ರೋಫಿ ಎಲ್ಲವೂ ತಮ್ಮ ಮಡಿಲಿಗೆ ತುಂಬಿಸಿಕೊಂಡಿರುವ ಸಿಂಪಲ್ ಆ್ಯಂಡ್ ಹಂಬಲ್ ನಟ ಶೈನ್ ಶೆಟ್ಟಿ. ಹೆಸರು ಕೇಳಿದ್ರೆ ಇವರು ಹಿನ್ನೆಲೆ ಏನೆಂದು ತಿಳಿದುಕೊಳ್ಳುವ ಕುತೂಹಲ ಮತ್ತಷ್ಟೂ ಹೆಚ್ಚಾಗುತ್ತದೆ.
ಶೈನ್ ಶೆಟ್ಟಿ ಕೈ ಸೇರಿದ್ದು 50 ಲಕ್ಷವಲ್ಲ,61 ಲಕ್ಷ ಮತ್ತು ದುಬಾರಿ ಕಾರು!
ಶೈನ್ ತಂದೆ ಶರಶ್ಚಂದ್ರ ಹಾಗೂ ತಾಯಿ ಇಂದಿರಾ. ಇವರು ಮೂಲತಃ ಉಡುಪಿ ಪರ್ಕಳ ಸಮೀಪದ ಅತ್ರಾಡಿ ಅವರು. ತಂದೆ ಹೆಸರಿನಿಂದ sha ಹಾಗೂ ತಾಯಿ ಹೆಸರಿನಿಂದ IN ಸೇರಿಸಿ SHAIN ಎಂದು ಇವರಿಗೆ ಫೋಷಕರು ಹೆಸರಿಟ್ಟರಂತೆ.
BB7:ಕಿರುತೆರೆ ನಟ ರಸ್ತೆಯಲ್ಲಿ ದೋಸೆ ಮಾರಿ ಜೀವನ ಮಾಡುತ್ತಿದ್ದಾರೆ!
ಮಣಿಪಾಲದ ಎಂಪಿಎಂಸಿ ವಿದ್ಯಾರ್ಥಿಯಾಗಿರುವ ಶೈನ್ ನಟನೆ ಕಲಿತುಕೊಳ್ಳಲು ಮೊದಲು ಹೊರಟಿದ್ದು ಮುಂಬೈ ಎಂಬ ಮಾಯಾ ನಗರಿಗೆ. ಖ್ಯಾತ ನಿರ್ದೇಶಕ ಏಕ್ತಾ ಕಪೂರ್ ಸಂಸ್ಥೆಯಲ್ಲಿ ನಟನೆ ಕೋರ್ಸ್ ಮಾಡಿದ್ದು, ಪದವಿ ಪಡೆದುಕೊಂಡಿದ್ದಾರೆ. ಆನಂತರ ಅವರಿಗೆ ನಟನಾಗಿ ಅವಕಾಶ ಸಿಕ್ಕಿದ್ದು, ಧಾರಾವಾಹಿಗಳ ಮೂಲಕ. ಮೀರಾ ಮಾಧವ, ಲಕ್ಷ್ಮಿ ಬಾರಮ್ಮ, ಮನೆ ದೇವ್ರು, ಕೋಗಿಲೆ, ಕನಕ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.