ಏನಿದು ಖರ್ಜೂರ ರಹಸ್ಯ? ಮಹೇಶ್​ ಮಾತಿನಿಂದ ಶಾರ್ವರಿಯ ಹೃದಯವೇ ಕಿತ್ತು ಬಂತಲ್ಲ!

Published : Apr 03, 2024, 05:18 PM IST
ಏನಿದು ಖರ್ಜೂರ ರಹಸ್ಯ? ಮಹೇಶ್​ ಮಾತಿನಿಂದ ಶಾರ್ವರಿಯ ಹೃದಯವೇ ಕಿತ್ತು ಬಂತಲ್ಲ!

ಸಾರಾಂಶ

ಶಾರ್ವರಿಯ ಬಳಿ ಮಹೇಶ್​ ಹಿಂದಿನ ಘಟನೆಗಳನ್ನು ಕೆದಕಿದ್ದಾನೆ. ಇದನ್ನು ಕೇಳಿ ಶಾರ್ವರಿಯ ಉಸಿರೇ ನಿಂತು ಹೋದ ಅನುಭವವಾಗಿದೆ. ಮಹೇಶ್​ ಹೇಳಿದ್ದೇನು?  

ತುಳಸಿ, ಪೂರ್ಣಿ ಮತ್ತು ಮಾಧವ್​ ಮೇಲೆ ಸದಾ ಕಿಡಿ ಕಾರುತ್ತಾ, ಅವರನ್ನು ತುಳಿಯಲು ನೋಡುತ್ತಾ, ಇನ್ನಿಲ್ಲದ ಮಸಲತ್ತು ಮಾಡುತ್ತಿರುವ ಶಾರ್ವರಿಗೆ ಈಗ ಸಂಕಟ ಎದುರಾಗಿದೆ. ಅದೂ ಖುದ್ದು ಪತಿ ಮಹೇಶ್​ನಿಂದಲೇ. ಮಹೇಶ್​ನಿಗೆ ಶಾರ್ವರಿಯ ಎಲ್ಲಾ ಮಸಲತ್ತುಗಳ ಪರಿಚಯ ಚೆನ್ನಾಗಿಯೇ ಇದೆ. ಮಾಧವ್​ ತನ್ನ ಮೊದಲ ಪತ್ನಿಯ ಅಪಘಾತಕ್ಕೆ ತಾನೇ ಕಾರಣ ಎಂದುಕೊಂಡಿದ್ದಾನೆ. ಆದರೆ ಅಸಲಿಗೆ ಅದನ್ನು ಮಾಡಿಸಿದ್ದು, ಶಾರ್ವರಿ ಎನ್ನುವ ಸತ್ಯ ಶಾರ್ವರಿಗೆ ಬಿಟ್ಟರೆ ಗೊತ್ತಿರುವುದು ಮಹೇಶ್​ಗೆ ಮಾತ್ರ. ಅದೇ ಅಪಘಾತದಲ್ಲಿ ಮಹೇಶ್​ ನೆನಪು ಕಳೆದುಕೊಂಡು ಹಾಸಿಗೆ ಹಿಡಿದಿದ್ದ. ಆತ ಹುಷಾರಾಗಿ ಬಿಟ್ಟರೆ ತನ್ನ ಗುಟ್ಟೆಲ್ಲಿ ಬಯಲಾಗುವುದೋ ಎಂದುಕೊಂಡಿದ್ದ ಶಾರ್ವರಿ, ಆತನಿಗೆ ಹುಷಾರು ಆಗದ ರೀತಿಯಲ್ಲಿ ಏನೇನೋ ಮಾತ್ರೆಗಳನ್ನು ನೀಡುತ್ತಿದ್ದಳು.

ಆದರೆ ತುಳಸಿ ಯಾವಾಗ ಆ ಮನೆಗೆ ಕಾಲಿಟ್ಟಳೋ ಎಲ್ಲವೂ ಬದಲಾಯಿತು. ಶಾರ್ವರಿಯ ತಂತ್ರ, ಕುತಂತ್ರ ಏನೂ ಅರಿಯದ ಮುಗ್ಧ ತುಳಸಿ ಮಹೇಶ್​ನ ಸೇವೆ ಮಾಡುತ್ತಲೇ, ಆತ ಹುಷಾರಾಗಿದ್ದಾನೆ. ಆತ ಹಾಸಿಗೆ ಮೇಲೆ ಇರುವಾಗಲೂ ಸದಾ ಖರ್ಜೂರ ಖರ್ಜೂರ ಎನ್ನುತ್ತ ಏನೋ ನೆನಪು ಮಾಡಿಕೊಳ್ಳುತ್ತಿದ್ದ. ಈ ಶಬ್ದ ಕೇಳುತ್ತಿದ್ದಂತೆಯೇ ಶಾರ್ವರಿ ಗರ ಬಡಿದವಳಂತೆ ಆಗುತ್ತಿದ್ದಳು. ಅಪಘಾತಕ್ಕೂ ಮುನ್ನ ಖರ್ಜೂರ ತಿಂದದ್ದಕ್ಕೂ, ಪೂರ್ಣಿಯ ಗರ್ಭಪಾತವಾಗುವುದಕ್ಕೂ ಎಲ್ಲದಕ್ಕೂ ಲಿಂಕ್​ ಇದೆ ಎನ್ನುವುದು ಅವನ ಮಾತಿನಿಂದ ತಿಳಿದು ಬರುತ್ತಿತ್ತು. ಆದರೆ ಅರೆಬರೆ ನೆನಪಿನಲ್ಲಿದ್ದ ಮಹೇಶ್​.

ರಿಯಲ್​ ಪತಿ ಜೊತೆ ಪುಟ್ಟಕ್ಕನ ಮಕ್ಕಳ ರಾಜಿ ಭರ್ಜರಿ ಡ್ಯಾನ್ಸ್​: ರೀಲ್​ ಪತಿ ಎಲ್ಲಮ್ಮಾ ಕೇಳಿದ ಫ್ಯಾನ್ಸ್​

ಇದೀಗ ಸಂಪೂರ್ಣವಾಗಿ ಹುಷಾರಾದ ಮೇಲೂ ಆ ವಿಷಯವನ್ನು ಕೆದಕಿರಲಿಲ್ಲ. ಆದರೆ ಪತ್ನಿ ಶಾರ್ವರಿಯ ಕುತಂತ್ರ ಆತನಿಗೆ ಚೆನ್ನಾಗಿ ಗೊತ್ತು. ಇದೀಗ ಪತ್ನಿಯನ್ನು ಹೊಗಳುವಂತೆ ಮಾಡಿ, ಮತ್ತೆ ಖರ್ಜೂರದ ವಿಷಯ ತೆಗೆದಿದ್ದಾನೆ. ತುಳಸಿ, ಪೂರ್ಣಿಯನ್ನು ಯಾಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮಹೇಶ್​ ಕೇಳಿದಾಗ, ಅವರಿಬ್ಬರೂ ಹೊರಗಿನವರಲ್ವಾ, ಅದಕ್ಕೆ ಹಾಗೆ ಅಂದಿದ್ದಾಳೆ ಶಾರ್ವರಿ. ಹಾಗಿದ್ದರೆ ದೀಪಿಕಾ ಕೂಡ ಹೊರಗಿನವಳಲ್ವಾ ಎಂದಿದ್ದಾನೆ ಮಹೇಶ್​. ಅದಕ್ಕೆ ಶಾರ್ವರಿ, ಹಾಗೇನು ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎನ್ನುವುದೇ ನನ್ನ ಆಸೆ ಎಂದಿದ್ದಾಳೆ.

ಆಗ ಕೂಡಲೇ ಮಹೇಶ್​, ಹಾಗಿದ್ದರೆ ಆ ದಿನ ಒಗ್ಗಟ್ಟು ಒಡೆಯುವುದೇ ನನ್ನ ಗುರಿ ಎಂದಿದ್ಯಲ್ಲಾ ಎಂದಿದ್ದಾನೆ. ಯಾವಾಗ ಎಂದು ಗಾಬರಿಯಿಂದ ಮಹೇಶ್​ ಕೇಳಿದಾಗ, ಖರ್ಜೂರದ ವಿಷಯ ಎತ್ತಿದ್ದಾನೆ. ಅಪಘಾತ ಆಗುವುದಕ್ಕಿಂತ ಮುಂಚೆ ಎಂದಿದ್ದಾನೆ. ಇದನ್ನು ಕೇಳಿ ಶಾರ್ವರಿಗೆ ಹೃದಯವೇ ಬಾಯಿಗೆ ಬಂದ ಅನುಭವವಾಯ್ತು. ಕೂಡಲೇ ನಾಟಕವಾಡಿದ ಮಹೇಶ್​, ನಾನು ಏನು ಹೇಳಿದೆ, ಏನೇನೋ ಹೇಳುತ್ತಿದ್ದೇನೆ ಎನಿಸುತ್ತಿದೆ ಎಂದಾಗ ಶಾರ್ವರಿ ಬೇರೆ ವಿಷಯ ಎತ್ತಿದ್ದಾಳೆ. ಆದರೆ ಮಹೇಶ್​ ಹೋಗುವ ಸಮಯದಲ್ಲಿ ಮತ್ತೆ ತಿರುಗಿ ಪತ್ನಿಯತ್ತ ನೋಡಿ ಅಪಘಾತದ ಘಟನೆಯನ್ನುನೆನಪು ಮಾಡಿಕೊಂಡಿದ್ದಾನೆ. ಏನಿದು ಖರ್ಜೂರ ರಹಸ್ಯ? ಪೂರ್ಣಿಗೂ, ಅಪಘಾತಕ್ಕೂ, ಖರ್ಜೂರಕ್ಕೂ ಇರುವ ನಂಟೇನು ಎನ್ನುವ ಕುತೂಹಲ ಸದ್ಯ ವೀಕ್ಷಕರದ್ದು. 

ಮಕ್ಕಳೆದುರು ತಾಂಡವ್​ ಶಾಕಿಂಗ್​ ಸತ್ಯ! ಹೆಣ್ಣಿನ ತಾಳ್ಮೆಗೆ ಬೆಲೆನೇ ಇಲ್ವಾ? ರೊಚ್ಚಿಗೆದ್ದ ಭಾಗ್ಯಲಕ್ಷ್ಮಿ ಫ್ಯಾನ್ಸ್​...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್
BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?