ನಾನು ಮಹಾನಟಿಯಾಗಿದ್ದು ಹೇಗೆ? ಸೀರಿಯಲ್​ ನಾಯಕಿಯರು ಏನೆಲ್ಲಾ ಹೇಳಿದ್ರು ಕೇಳಿ...

Published : Mar 28, 2024, 03:49 PM ISTUpdated : Mar 28, 2024, 03:50 PM IST
ನಾನು ಮಹಾನಟಿಯಾಗಿದ್ದು ಹೇಗೆ? ಸೀರಿಯಲ್​ ನಾಯಕಿಯರು ಏನೆಲ್ಲಾ ಹೇಳಿದ್ರು ಕೇಳಿ...

ಸಾರಾಂಶ

ಮಹಾನಟಿ ರಿಯಾಲಿಟಿ ಷೋ ಆರಂಭವಾಗಲಿದ್ದು, ತಾವು ನಾಯಕಿಯಾಗಿರುವ ಕುರಿತು ಕೆಲವು ಸೀರಿಯಲ್​ ಹೀರೊಯಿನ್​ಗಳು ಮಾತನಾಡಿದ್ದಾರೆ. ಅವರು ಏನು ಹೇಳಿದ್ರು ಕೇಳಿ...  

ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಹೌದು. ಸ್ಯಾಂಡಲ್​ವುಡ್​ನಲ್ಲಿ ನಟಿಸುವ ಅವಕಾಶ ಇದಾಗಿದ್ದು, ಹಲವು ಕಡೆಗಳಲ್ಲಿ ಆಡಿಷನ್​ ನಡೆದಿದೆ. 

ಈ ಆಡಿಷನ್​ನಲ್ಲಿ ಭಾಗವಹಿಸಿ ಹಲವಾರು ಮಂದಿ ಅದೃಷ್ಟ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.  ಇದರಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಾಗಿ  ಬಣ್ಣದ ಲೋಕಕ್ಕೆ ಎಂಟ್ರಿಯಾಗುವ ಅದೃಷ್ಟವಂತರು ಯಾರು ಎನ್ನುವುದು ಇನ್ನಷ್ಟೇ ಇರುವ ಕೌತುಕ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.  ಕರ್ನಾಟಕದ 16 ಜಿಲ್ಲೆಗಳಲ್ಲಿ  ಆಡಿಷನ್​ ನಡೆದಿದ್ದು, ಇಲ್ಲಿ ಸೆಲೆಕ್ಟ್​ ಆದವರಿಗೆ ರಿಯಾಲಿಟಿ ಷೋನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅಲ್ಲಿ ಕೆಲವೊಂದು ಸ್ಪರ್ಧೆಗಳನ್ನು ಎದುರಿಸಿ, ಜಯಶೀಲರಾದರೆ  ಸ್ಯಾಂಡಲ್​ವುಡ್​ ತಾರೆಯಾಗಲಿದ್ದೀರಿ ಎಂದು ಈ ಹಿಂದೆ ವಾಹಿನಿ ಹೇಳಿತ್ತು.  18ರಿಂದ 28 ವರ್ಷದ ಸಹಸ್ರಾರು ಯುವತಿಯರು ಇದರಲ್ಲಿ ಭಾಗವಹಿಸಿದ್ದರು.

ಡುಮ್ಮ ಸರ್​ಗೆ ಶುರುವಾಯ್ತಪ್ಪಾ ಲವ್ವು... ಅಲರ್ಜಿಯಾಗ್ತಿರೋ ಮಲ್ಲಿಗೆನೂ ಇಷ್ಟವಾಗ್ತಿದೆಯಂತೆ!

 ನಾಡಿದ್ದು ಅಂದರೆ  ಮಾರ್ಚ್‌ 3೦ನೇ ತಾರೀಖಿನಿಂದ ಮಹಾನಟಿ ಷೋ ಆರಂಭವಾಗಲಿದೆ.  ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ  ಪ್ರಸಾರವಾಗಲಿದೆ. ಈ ಷೋನಲ್ಲಿ ಖ್ಯಾತ ನಿರ್ದೇಶಕ, ನಟ ರಮೇಶ್‌ ಅರವಿಂದ್‌ (Ramesh Aravind),  ನಟಿ ಪ್ರೇಮ, ಕಾಟೇರದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಟಿ ಷೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಾಗಲೇ ಮಹಾನಟಿಗೆ ಸಂಬಂಧಿಸಿದಂತೆ ಹಲವಾರು ಪ್ರೊಮೋಗಳು ಬಿಡುಗಡೆಯಾಗಿವೆ. ನಟಿಯಾಗಲು ಬಣ್ಣ ಮುಖ್ಯವಲ್ಲ, ಟ್ಯಾಲೆಂಟ್​ ಮುಖ್ಯ ಎನ್ನುವ ಮೂಲಕ ನಿಶ್ವಿಕಾ ನಾಯ್ಡು, ಪ್ರತಿಭೆ ಇರುವವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇದೀಗ ತಾವು ಹೇಗೆ ಮಹಾನಟಿಯಾದೆವು ಎಂಬ ಬಗ್ಗೆ ವಿವಿಧ ಸೀರಿಯಲ್​ಗಳ ನಾಯಕಿಯರು ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ನಟಿಯಾಗುವ ಕನಸು ಹೊತ್ತ ಅದೆಷ್ಟೋ ಯುವ ನಟಿಯರಿಗೆ, ಸರಿಯಾದ ವೇದಿಕೆ ಸಿಗದೆ ಅವರ ಕನಸುಗಳು ಕರಗುವ ಹೊತ್ತಿನಲ್ಲಿ, ಅದನ್ನ ಪೋಷಿಸಿ ಬೆಳೆಸಲು ಮಾಡುತ್ತಿರುವ ಹೊಸ ಪ್ರಯತ್ನವೇ 'ಮಹಾನಟಿ' ಎನ್ನುವ ಪ್ರೊಮೋ ರಿಲೀಸ್​ ಮಾಡಲಾಗಿದೆ. ಇದರಲ್ಲಿ ಕೆಲವು ತಾರೆಯರು ತಾವು ನಟಿಯಾದ ಬಗ್ಗೆ ಮಾತನಾಡಿದ್ದಾರೆ. ಭೂಮಿಗೆ ಬಂದ ಭಗವಂತ, ಸೀತಾರಾಮ, ಶ್ರಾವಣಿ ಸುಬ್ರಹ್ಮಣ್ಯ ಸೇರಿದಂತೆ ಜೀ ಕನ್ನಡದ ಹಲವು ನಾಯಕಿಯರು ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. ಅವರೇನು ಹೇಳಿದ್ದಾರೆ ಅವರ ಬಾಯಲ್ಲಿಯೇ ಕೇಳಿ.... 

ಅಳುಮುಂಜಿಯಿಂದ ಸಿಡಿದೇಳುವವರೆಗೆ... ಬದಲಾಗ್ತಿವೆ ಇಂದಿನ ಧಾರಾವಾಹಿಗಳ ಕಾನ್​ಸೆಪ್ಟ್​...


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!