ಮನೆಯಲ್ಲಿದ್ದ ವಸ್ತು ಮಾರಿ ಜೀವಿಸಿದೆ, ತಿನ್ನೋಕೆ ಅನ್ನ ಇರಲಿಲ್ಲ: 'ಮಂಗಳ ಗೌರಿ' ಗಗನ್ ಚಿನ್ನಪ್ಪ!

By Suvarna NewsFirst Published Aug 24, 2021, 12:52 PM IST
Highlights

ನಾನು ಹುಟ್ಟಿದಾಗ ಮನೆಯಲ್ಲಿ ತಿನ್ನಲಿಕ್ಕೂ ಏನೂ ಇರಲಿಲ್ಲ.  ಮಿನಿ ಸೀಸನ್‌ನಲ್ಲಿ ಪೊಲೀಸಪ್ಪ ಜೀವನ ಕಥೆ ಕೇಳಿ ಭೇಷ್ ಎಂದ ವೀಕ್ಷಕರು. 
 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಖ್ಯಾತಿಯ ರಾಜೀವ್ ಅಲಿಯಾಸ್ ಗಗನ್ ಚಿನ್ನಪ್ಪ ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆ, ಸಂತೋಷ ಅಥವಾ ನೋವನ್ನು ಹಂಚಿಕೊಳ್ಳಬಹುದು ಎಂದು ಬಿಬಿ ಹೇಳಿದ್ದರು. ಈ ವೇಳೆ ಗಗನ್ ತಾವು ಬೆಳೆದು ಬಂದ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. 

'ತಂದೆ ತಾಯಿ ಇಬ್ಬರು ಮಕ್ಕಳು. ಅಕ್ಕ ಮತ್ತೆ ನಾನು. ಅಕ್ಕ ಹುಟ್ಟಿದಾಗ ಆರ್ಥಿಕವಾಗಿ ನನ್ನ ಕುಟುಂಬ ಚೆನ್ನಾಗಿತ್ತು. ನಾನು ಹುಟ್ಟಿದ ಮೇಲೆ ತಂದೆಗೆ ನಷ್ಟ ಆಯ್ತು. ಎಲ್ಲವ್ನೂ ಕಳೆದುಕೊಂಡರು. ನಾನು ಹುಟ್ಟಿದಾಗ ಮನೆಯಲ್ಲಿ ನಮ್ಮ ಅಪ್ಪ, ಅಮ್ಮ ತಿನ್ನೋಕೆ ಅನ್ನ ಕೂಡ ಇರಲಿಲ್ಲ. ನನ್ನ ತಾಯಿ ಸೊಪ್ಪನ್ನು ಬೇಯಿಸಿ ನನಗೆ ತಿನ್ನಿಸುತ್ತಿದ್ದರು. ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ. 7ನೇ ಕ್ಲಾಸ್‌ವರೆಗೂ ಒಳ್ಳೆಯ ಮಾರ್ಕ್ಸ್ ಪಡೆಯುತ್ತಿದ್ದೆ.  ಆಗ ಸ್ಕೂಲ್‌ಗೆ ತೆಗೆದುಕೊಂಡು ಹೋಗಲು ಲಂಚ್ ಬಾಕ್ಸ್ ಕೂಡ ಇರಲಿಲ್ಲ. ಊಟ ಇರುತ್ತಿರಲಿಲ್ಲ. ನಮಗೆ ಗೊತ್ತಿರುವವರ ಮನೆಯಲ್ಲಿ ನಾನು, ಅಕ್ಕ ಇದ್ವಿ. ಅವರು ನಮಗೆ ಊಟ ಹಾಕಿ, ಸ್ಕೂಲ್‌ಗೆ ಕಳುಹಿಸುತ್ತಿದ್ದರು. ಈ ನಡುವೆ ಅಕ್ಕನಿಗೆ ಆಪರೇಷನ್ ಅಯ್ತು. ಆಗಲೂ ಯಾರೂ ಸಹಾಯಕ್ಕೆ ಬರಲಿಲ್ಲ,' ಎಂದು ಗಗನ್ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. 

'ನಾನು ಆಗ ಪುಲ್ ರೆಬೆಲ್ ಅಗಿರುತ್ತಿದ್ದೆ. ನನ್ನ ನೋಡಿ ಅಪ್ಪ 'ರೆಬೆಲ್ ಸ್ಟಾರ್ ಅಂಬರೀಶ್' ಬರ್ತಿದ್ದಾನೆ, ನೋಡು ಅಂತ ಹೇಳುತ್ತಿದ್ದರು. ಸ್ಕೂಲ್‌ನಲ್ಲಿ ಇದ್ದಾಗ ನಾನು ಮನೆ ಮನೆಗೆ ಹೋಗಿ ಪೇಪರ್ ಹಾಕಿದ್ದೀನಿ. ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಡಿಗ್ರಿಗೆ ಹೋದಾಗ ತುಂಬಾ ಅವಮಾನ ಮಾಡುತ್ತಿದ್ದರು. ಕಾಲ್ ಸೆಂಟರ್‌ ಇಂಟರ್‌ವ್ಯೂಗೆ ಹೋಗಿದ್ದಾಗ ನಾನು ರಿಜೆಕ್ಟ್ ಆದೆ. ನನ್ನ ಇಂಗ್ಲಿಷ್ ಭಾಷೆ ಮೇಲಿನ ಹಿಡಿತ ಮತ್ತು ಗ್ರಾಮರ್ ಸರಿ ಇರಲಿಲ್ಲ ಅಂತ ಸಂದರ್ಶನದಲ್ಲಿ ರಿಜೆಕ್ಟ್ ಆಗಿದ್ದೆ. ಅವರನ್ನು ಕೇಳಿದೆ ಯಾಕೆ ರಿಜೆಕ್ಟ್ ಮಾಡಿದ್ದು ಅಂತ ಅವರೂ ಅದನ್ನೇ ಹೇಳಿದ್ದರು. ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ, ಎರಡು ತಿಂಗಳ ಬಳಿಕ ಅದೇ ಕಂಪನಿಯಲ್ಲಿ ಗ್ರೂಪ್ ಇಂಟರ್‌ವ್ಯೂನಲ್ಲಿ ಸೆಲೆಕ್ಟ್ ಆದೆ. ದುಡಿಯೋಕೆ ಶುರು ಮಾಡಿದೆ. ಜನರನ್ನು ತುಂಬಾ ಬೇಗ ನಂಬೋದು ಜಾಸ್ತಿ. ಒಂದು ಸಲ ಫ್ರೆಂಡ್ ಆದರೆ ಜೀವನ ಪರ್ಯಂತ ಫ್ರೆಂಡ್ ನಾನು. ಅವರ ರೂಮ್ ಬಾಡಿಗೆಯನ್ನೆಲ್ಲಾ ನಾನು ಕಟ್ಟಿದ್ದೇನೆ. ಒಂದು ದಿನ ನನಗೆ ಆಕ್ಸಿಡೆಂಟ್ ಆಯ್ತು. ಆಗ ಫ್ರೆಂಡ್ಸ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಆಗ ನನ್ನ ಫ್ರೆಂಡ್ ಬಂದು ದುಡ್ಡು ಕೊಡಬೇಕಂತೆ ಅಂತ ಹೇಳಿದರು. ನಿಮ್ಮ ಕಷ್ಟಕ್ಕೆ ಯಾರೂ ಬರಲ್ಲ, ನಿಮ್ಮ ಲೈಫ್ ನೀವೇ ಹೊಣೆ ಅಂತ ಅವತ್ತು ನಾನು ಕಲಿತೆ,' ಎಂದಿದ್ದಾರೆ.

ಕೈ ಕಾಲು ಇಲ್ಲದವರು ನಿತ್ಯವೂ ಪ್ರೇರಣೆಯಾಗ್ತಾರೆ: ನಿರಂಜನ್ ದೇಶಪಾಂಡೆ ಅಕ್ಕನ ಮದುವೆ ಕಥೆ!

'ಸಿನಿಮಾ ಆಫರ್ ಬಂತು ಅಂತ ಕೆಲಸ ಬಿಟ್ಟೆ. ಇದೇ ನಾನು ಮಾಡಿದ ದಡ್ಡ ಕೆಲಸ. ಸಿನಿಮಾ ಆದ್ಮೇಲೆ ನಾನು 11 ತಿಂಗಳು ತುಂಬಾ ಕಷ್ಟ ಪಟ್ಟಿದ್ದೀನಿ. ಕಾರು, ಚೈನ್, ಫ್ರಿಡ್ಜ್‌, ವಾಷಿಂಗ್ ಮಷಿನ್ ಎಲ್ಲವನ್ನೂ ಮಾರಿದೆ. ಮನೆಯಲ್ಲಾ ಖಾಲಿ ಖಾಲಿ. ಆ ಸಮಯದಲ್ಲಿ ನಾನು ತಿನ್ನುತ್ತಾ ಇದ್ದದ್ದು ಮೊಸರನ್ನ, ಉಪ್ಪಿನಕಾಯಿ, ಮೊಟ್ಟೆ ಅಷ್ಟೆ. ಈಗ ಇಲ್ಲೀವರೆಗೂ ಬಂದಿದ್ದೇನೆ. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಅಗಲ್ಲ ಅಂತ ಕೂತರೆ, ಯಾವುದೂ ಆಗಲ್ಲ. ಮಾಡ್ತೀನಿ ಅಂದ್ರೆ ಎಲ್ಲವೂ ತಾನಾಗಿಯೇ ಒಲಿದು ಬರುತ್ತದೆ ಅನ್ನೋದು ನನ್ನ ನಂಬಿಕೆ,' ಎಂದು ಗಗನ್ ಚಿನ್ನಪ್ಪ ಮಾತನಾಡಿದ್ದಾರೆ.

click me!