Latest Videos

ಜನಾರ್ದನನಿಗೆ ಮಾಧವ್​ ಕಪಾಳ ಮೋಕ್ಷ: ಒನ್​ ಮೋರ್​ ಒನ್​ ಮೋರ್​ ಎಂದ ಫ್ಯಾನ್ಸ್​...

By Suchethana DFirst Published May 22, 2024, 1:07 PM IST
Highlights

ಜನಾರ್ದನನ ಸತ್ಯ ಗೊತ್ತಾಗುತ್ತಿದ್ದಂತೆಯೇ ಮಾಧವ ಅವನ ಕೆನ್ನೆಗೆ ಹೊಡೆದಿದ್ದಾನೆ. ಇದನ್ನು ನೋಡಿದ ಸೀರಿಯಲ್​ ಫ್ಯಾನ್ಸ್​ ಏನೆಲ್ಲಾ ಹೇಳ್ತಿದ್ದಾರೆ ನೋಡಿ...
 

ಸತ್ಯವನ್ನು ಬಹಳ ದಿನ ಮುಚ್ಚಿಡಲು ಆಗುವುದಿಲ್ಲ ಎನ್ನುತ್ತಾರೆ. ಆದರೆ ಎಲ್ಲ ಸಮಯದಲ್ಲಿಯೂ ಬಹುಬೇಗನೇ ಸತ್ಯ ಹೊರಕ್ಕೆ ಬರುತ್ತದೆ ಎನ್ನಲಾಗದು. ಅದರಲ್ಲಿಯೂ ಸೀರಿಯಲ್​ಗಳಲ್ಲಿ ಹಲವು ವರ್ಷಗಳೇ ಬೇಕಾಗಬಹುದು. ಆದರೆ ಶ್ರೀರಸ್ತು ಶುಭಮಸ್ತುವಿನಲ್ಲಿ ಸತ್ಯ ಬಹು ಬೇಗನೆ ಹೊರಕ್ಕೆ ಬಂದುಬಿಟ್ಟಿದೆ. ಜನಾರ್ದನನ ಆಸ್ತಿಯ ಹಪಾಹಪಿ ಇಡೀ ಕುಟುಂಬಕ್ಕೆ ಗೊತ್ತಾಗಿದೆ. ಆಸ್ತಿಗಾಗಿ ಅನಾಥೆ ಪೂರ್ಣಿಯನ್ನು ಜನಾರ್ದನ ತನ್ನ ಹೆತ್ತ ಮಗಳು ಎಂದು ಹೇಳಿದ್ದ.  ಮುಗ್ಧೆ ಪೂರ್ಣಿ ನಿಜವಾಗಿಯೂ ಜನಾರ್ದನನ ಮಗಳೋ ಅಲ್ಲವೋ ಗೊತ್ತಿಲ್ಲ. ಆದರೆ ಜನಾರ್ದನ ಹೇಳಿದ್ದನ್ನು ನಂಬಿದ್ದಾಳೆ. ಅಷ್ಟಕ್ಕೂ ಇವಳೇ ತನ್ನ ಮಗಳು ಎಂದು ಬಿಂಬಿಸೋ ಹಿಂದಿರುವುದು ಮೊದಲ ಮಗಳ ಹೆಸರಿನಲ್ಲಿ ಇರುವ ಆಸ್ತಿ ಎಂದು ಯಾರಿಗೂ ತಿಳಿಯದ ವಿಷಯವಾಗಿದೆ.  ಆಸ್ತಿಗಾಗಿ ಅಪ್ಪ ಜನಾರ್ದನ ಮತ್ತು ಮಗಳು ದೀಪಿಕಾ ಸೇರಿ ಕುತಂತ್ರ ಮಾಡಿದ್ದಾರೆ. ಅನಾಥೆಯಾಗಿದ್ದ ಪೂರ್ಣಿಯನ್ನೇ ತನ್ನ ಹೆತ್ತ ಮಗಳು ಎಂದು ಎಲ್ಲರನ್ನೂ ನಂಬಿಸಿದ್ದಾನೆ ಜನಾರ್ದನ.  ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವ ಹಾಗೆ, ಇಷ್ಟು ದಿನ ಪೂರ್ಣಿಯನ್ನು ಅನಾಥೆ ಎಂದು ಹೀಯಾಳಿಸುತ್ತಿದ್ದ ದೀಪಿಕಾ ಕೂಡ ಅಕ್ಕ ಅಕ್ಕ ಕ್ಷಮಿಸು ಎನ್ನುತ್ತಾ ನಾಟಕವಾಡುತ್ತಿದ್ದಾಳೆ.

ಅದರೆ ಜನಾರ್ದನನ ಮೇಲೆ ಎಲ್ಲರಿಗೂ ಯಾಕೋ ಡೌಟು ಶುರುವಾಗಿತ್ತು. ಲಾಯರ್​ ಬಂದು ಈಕೆಯೇ ನಿನ್ನ ಮಗಳು ಎಂದು ಸಾಬೀತು ಮಾಡು ಎಂದಾಗ ಈ ವಿಷಯದಲ್ಲಿ ಲಾಯರ್​ ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಆ ಸಮಯದಲ್ಲಿ ಸಂಪೂರ್ಣ ಸತ್ಯ ಅಲ್ಲದಿದ್ದರೂ ಕೆಲವೊಂದಷ್ಟನ್ನು ಜನಾರ್ದನ ಬಾಯಿ ಬಿಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ. ಪೂರ್ಣಿಯ ಅಜ್ಜಿಯ ಒಡವೆ ಪೂರ್ಣಿಗೆ ಸೇರಬೇಕು, ಅದಕ್ಕಾಗಿ ಅವಳೇ ಮಗಳು ಎನ್ನುವುದನ್ನು ಸಾಬೀತು ಮಾಡಬೇಕಿದೆ ಎಂದಿದ್ದಾನೆ. ಇಷ್ಟು ಹೇಳುತ್ತಿದ್ದಂತೆಯೇ ಮಾಧವ, ತುಳಸಿಗೆ ಅನುಮಾನ ಶುರುವಾಗಿದೆ. ಮಾತ್ರವಲ್ಲದೇ ಖುದ್ದುಪತಿಯ ಮೇಲೆ ಪತ್ನಿ ಪಂಕಜಗೂ ಅನುಮಾನ ಬಂದಿದೆ. ಪೂರ್ಣಿ ನಿಜವಾದ ಮಗಳು ಹೌದೋ ಅಥವಾ ಆಸ್ತಿಗಾಗಿ ಗಂಡ ಹೀಗೆಲ್ಲಾ ಮಾಡುತ್ತಿದ್ದಾನೋ ಎನ್ನುವ ಗೊಂದಲದಲ್ಲಿ ಪಂಕಜಾ ಇದ್ದಾಳೆ.

ತಕಿಟ ತಕಿಟ ಎಂದು ರೀಲ್ಸ್​ ಮಾಡಿದ ಸತ್ಯ ಟೀಂ: ಕೂದಲು ಬಿಟ್ಟ ಸತ್ಯಳ ನೋಡಿ ಫ್ಯಾನ್ಸ್​ ಅಚ್ಚರಿ...

ಇದೇ ವೇಳೆ ಜನಾರ್ದನನ್ನು ಜರಾಸಂಧ ಎಂದೇ ಕರೆಯುತ್ತ ತಾತ ದತ್ತನ ಎಂಟ್ರಿಯಾಗಿತ್ತು. ಅಷ್ಟಕ್ಕೂ ಈತನನ್ನು ಕರೆದುಕೊಂಡು ಬಂದಿದ್ದು ವಕೀಲರು. ಜನಾರ್ದನನ ಬಣ್ಣ ದತ್ತನಿಗೆ ಇದಾಗಲೇ ಚೆನ್ನಾಗಿ ಅರಿವಾಗಿದೆ. ಅದಕ್ಕಾಗಿಯೇ ಸತ್ಯ ತಿಳಿದುಕೊಳ್ಳಲು ಪ್ಲ್ಯಾನ್​ ಮಾಡಿದ್ದ. ಕೊನೆಗೂ ಸತ್ಯ ಬಹಿರಂಗಗೊಂಡಿದೆ. ಆಸ್ತಿಗಾಗಿ ಪೂರ್ಣಿಯನ್ನು ಮಗಳು ಎಂದು ಹೇಳಿಕೊಂಡಿದ್ದಿಯಲ್ವಾ ಎಂದು ಕೇಳಿದ್ದಾನೆ. ತನ್ನ ಬಣ್ಣ ಬಯಲಾಗುತ್ತಿದ್ದಂತೆಯೇ ಜನಾರ್ದನ ಹೌದು. ಏನೀಗ? ಹಣಕ್ಕಾಗಿ ಮಾಡಿದೆ. ನಿಮಗೆ ಬೇಕಿದ್ರೆ ಎರಡು ಕೋಟಿ ಕೊಡುತ್ತೇನೆ. ನೀವೂ ಬಾಯಿ ಮುಚ್ಚಿಕೊಂಡು ಇದ್ದುಬಿಡಿ ಎಂದಿದ್ದಾನೆ.

ಇದನ್ನು ಕೇಳಿ ಮಾಧವನ ಮೈಯೆಲ್ಲಾ ಉರಿದು ಹೋಗಿದೆ. ಅದೇ ಇನ್ನೊಂದೆಡೆ ಪೂರ್ಣಿಗೆ ನೆಲವೇ ಕುಸಿದ ಅನುಭವವಾಗಿದೆ. ತಾನು ಅನಾಥೆಯೆಂದು ಅಂದುಕೊಂಡಿದ್ದ ಪೂರ್ಣಿಗೆ ಅಪ್ಪ-ಅಮ್ಮ ಸಿಕ್ಕ ಖುಷಿಯಾಗಿತ್ತು. ಇದರಿಂದ ಸಂತೋಷದಲ್ಲಿ ತೇಲಾಡಿದ್ದಳು. ಆದರೆ ಇದೆಲ್ಲವೂ ಸುಳ್ಳು ಎಂದು ತಿಳಿದಾಗ ಆಕೆಯ ಮನಸ್ಥಿತಿ ಹೇಗಾಗಿರಬೇಡ? ಇದರ ನಡುವೆಯೇ ಹಣದ ವಿಷಯ ಮಾತನಾಡಿದ್ದಾನೆ ಜನಾರ್ದನ. ಇದನ್ನು ಕೇಳಿದ ಮಾಧವ್​ ಹಿಂದೆ ಮುಂದೆ ಯೋಚಿಸದೇ ಜನಾರ್ದನನ ಕೆನ್ನೆಗೆ ಕಪಾಳಮೋಕ್ಷ ಮಾಡಿದ್ದಾನೆ. ಇದನ್ನು ನೋಡಿದ ಫ್ಯಾನ್ಸ್​ ಸರಿಯಾಯ್ತು, ಒನ್​ ಮೋರ್​, ಒನ್​ ಮೋರ್​ ಎನ್ನುತ್ತಿದ್ದಾರೆ. ಇದೇ ವೇಳೆ ಮನೆಯಲ್ಲಿ ಇರುವ ಆತನ ಮಗಳು ದೀಪಿಕಾಳ ಕೆನ್ನೆಗೂ ಬಾರಿಸಪ್ಪಾ ಎನ್ನುತ್ತಿದ್ದಾರೆ. ಇನ್ನು ಕೆಲವರು ಇದನ್ನೇ ನೀನು ಮಗ ಅಭಿಗೆ ಮಾಡಿದ್ದರೆ ಆತನಿಗೆ ಯಾವಾಗಲೋ ಬುದ್ಧಿ ಬರುತ್ತಿತ್ತು ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈಗ ಶ್ರೀರಸ್ತು ಶುಭಮಸ್ತು ಸೀರಿಯಲ್​ ಕುತೂಹಲದ ಘಟ್ಟ ತಲುಪಿದೆ. 

ಆಹಾ! ವೀಕ್ಷಕರು ಕಾತರದಿಂದ ಕಾಯ್ತಿರೋ ಆ ಅಣಿ ಮುತ್ತುಗಳು ಕೊನೆಗೂ ಉದುರಿಯೇ ಬಿಟ್ಟವು....

click me!