ಗೆಲ್ಲಬೇಕು ಅಂದ್ರೆ ನೀನು ಬೇರೆಯವರ *** ನೆಕ್ಕುತ್ತೀಯಾ; ಲಾಕಪ್‌ ಶೋನಲ್ಲಿ ಫುಲ್ ಬೀಪ್ ಪದಗಳು!

By Suvarna News  |  First Published Apr 12, 2022, 3:43 PM IST

ಬೇಕೆಂದು ಜಗಳ ಮಾಡಿ ಫ್ರೆಂಡ್‌ಶಿಪ್‌ ಚೆಕ್ ಮಾಡೋದು ಲಾಕಪ್‌ ಶೋನಲ್ಲಿ ಮಾತ್ರ. ಸ್ನೇಹಿತೆನೇ ನಾಮಿನೇಟ್ ಮಾಡಿದಳು ಎಂದು ಅತ್ತ ಪೂನಂ


ರಿಯಾಲಿಟಿ ಶೋ ನೋಡುವ ಕ್ರೇಜ್ ನಿಮಗಿಲ್ಲ ಅಂದ್ರೆ ಲಾಕಪ್ ಶೋ ನೋಡುವ ಗೋಜಿಗೆ ಹೋಗಬೇಡಿ. ಗೆಲ್ಲಬೇಕು ಎನ್ನುವ ಹಠಕ್ಕೆ ಅಲ್ಲಿನ ಸ್ಪರ್ಧಿಗಳು ಯಾವ ಹಂತಕ್ಕೆ ಬೇಕಿದ್ದರೂ ಹೋಗುತ್ತಾರೆ ಅವರ ಮೆಂಟಲ್‌ ಹೆಲ್ತ್‌ ಮಾತ್ರವಲ್ಲ ನೋಡುವವರ ಹೆಲ್ತ್‌ ಕೂಡ ಹಾಳು. ಲವ್ ಟೆಸ್ಟ್‌, ಸ್ಟ್ರೆಂಥ್ ಟೆಸ್ಟ್‌ ಮಾಡೋದು ಓಕೆ ಆದರೆ ಇಲ್ಲಿನ ಸ್ಪರ್ಧಿಗಳು ಫ್ರೆಂಡ್‌ಶಿಪ್‌ ಟೆಸ್ಟ್‌ ಕೂಡ ಮಾಡಿಸುತ್ತಾರೆ. ಇಷ್ಟು ದೊಡ್ಡವರು ಹೀಗೂ ವರ್ತಿಸುತ್ತಾರಾ ಅನಿಸಬಹುದು ಆದರೆ ಕಂಗನಾ ಕೈಯಿಂದ ಟ್ರೋಫಿ ಪಡೆಯುವುದಕ್ಕೆ ಮಾಡುತ್ತಿರುವ ಗಿಮಿಕ್ ಎಂದು ವೀಕ್ಷಕರಿಗೆ ಮಾತ್ರ ಗೊತ್ತು...

ಮಂದನ ಕರಿಮಿ, ಅಲಿ ಮರ್ಚಂಟ್ ಮತ್ತು ಜೀಶನ್ ಲಾಕಪ್‌ನ ಗಾರ್ಡನ್‌ ಏರಿಯಾದಲ್ಲಿ ಕ್ಯಾಚ್ ಕ್ಯಾಚ್ ಗೇಮ್ ಅಡುತ್ತಿದ್ದರು, ಇಡೀ ಮನೆ ಇವರು ಆಟವನ್ನು ನೋಡುತ್ತಿತ್ತು.  ಹ್ಯಾಪಿ ಮೂಡ್‌ನಲ್ಲಿದ್ದ ಎಲ್ಲರು ಇದ್ದಕ್ಕಿದ್ದಂತೆ ಗರಂ ಆದರು. ಬಾಲ್ ಕೊಡು ಅಂದರೂ ಕೊಡದೇ ಆಟ ಆಡಿಸಿದಕ್ಕೆ ಜೀಶನ್‌ ಮೇಲೆ ಮಂದನ ಕೋಪ ಮಾಡಿಕೊಂಡರು. ಕೋಪದಲ್ಲಿ 'ಗೇಮ್ ದೊಡ್ಡದಿರಲ್ಲಿ ಚಿಕ್ಕದಿರಲ್ಲಿ ನೀನು ಗೆಲ್ಲಬೇಕು ಅಂದ್ರೆ ನೀನು ಬೇರೆಯವರ *** ನೆಕ್ಕುತ್ತೀಯಾ' ಎಂದು ಮಂದನ ಹೇಳುತ್ತಾಳೆ. ಮಂದನ ಬಳಸಿದ ಪದಗಳಿಂದ ಇಡೀ ಮನೆ ಶಾಕ್ ಆಗುತ್ತದೆ, ತಕ್ಷಣವೇ 'ನೀನು ಹುಚ್ಚಿನಾ' ಎಂದು ಜೀಶನ್‌ ಹೇಳುತ್ತಾನೆ. 

Tap to resize

Latest Videos

ದಿನದ ಕೊನೆಯಲ್ಲಿ ಚಾರ್ಚ್‌ಶೀಟ್‌ನಲ್ಲಿ ಯಾರೆಲ್ಲರ ಹೆಸರು ಇರಬೇಕು ಎಂದು ಸ್ಪರ್ಧಿಗಳು ಮಾತುಕತೆ ಮಾಡುತ್ತಿದ್ದರು. ಆಗ ಮಂದನ ಯಾವ ಕಾರಣಕ್ಕೆ ಸಣ್ಣ ವಿಚಾರಕ್ಕೆ ಬೇಕೆಂದು ಜಗಳ ಮಾಡಿಕೊಂಡಿದ್ದು ಎಂದು ಹೇಳಿದ್ದಾರೆ. 'ನಾನು ಬೇಕೆಂದು ಜೀಶನ್‌ ಜೊತೆ ಜಗಳ ಮಾಡಿದೆ. ಕೋಪ ಮಾಡಿಕೊಂಡಾಗ ನಾನು ಕೂಡ ಅವರಂತೆ ವರ್ತಿಸುತ್ತೀನಾ ಎಂದು ಚೆಕ್ ಮಾಡುವುದಕ್ಕೆ. ನಾನು ಈ ರೀತಿ ಕೋಪ ಮಾಡಿಕೊಂಡರೆ ನನ್ನ ಸ್ನೇಹಿತ ಹೇಗೆ ರಿಯಾಕ್ಟ್ ಮಾಡುತ್ತಾನೇ ನೋಡಬೇಕಿತ್ತು. ಆತ ನನ್ನ ಸ್ನೇಹಿತನಾಗಿ ಅದರಲ್ಲೂ ಇಲ್ಲಿ ಎಲ್ಲರಿಗಿಂತ ಅವನೇ ನನಗೆ ಕ್ಲೋಸ್‌ ಅದೆಲ್ಲಾ ಆಗ ತೆಲೆಗೆ ಬರಲೇ ಇಲ್ಲ. ಆತ ನನ್ನ ಹೆಸರು ಎರಡು ಮೂರು ಸಲ ತೆಗೆದ ಆದರೆ ಒಂದು ನಿಮಿಷನೂ ಯೋಚನೆ ಮಾಡಿ ನನ್ನ ಬಳಿ ಬಂದು ನಾನು ಯಾಕೆ ಈ ರೀತಿ ಮಾತನಾಡಿದೆ ಅಂತ ಕೇಳಲಿಲ್ಲ. ಇದೇ ರೀತಿ ಪರಿಸ್ಥಿತಿ ಎದುರಾದರೆ ನನ್ನ ಸ್ನೇಹಿತರು ನನ್ನ ಪರ ನಿಲ್ಲುತ್ತಾರ ಎಂದು ಚೆಕ್ ಮಾಡಬೇಕಿತ್ತು ಅದಿಕ್ಕೆ ಹೀಗೆ ಮಾಡಿದೆ' ಎಂದು ಮಂದನ ಹೇಳಿಕೊಂಡಿದ್ದಾರೆ. 

ನನ್ನ ಪತಿ ಬೇರೆ ಮಹಿಳೆಯರ ಜೊತೆ ಮಲಗಿದ್ದರು; ಮಂದನಾ ಕರೀಮಿ ಗಂಭೀರ ಆರೋಪ

ಯಾರ ಸಹವಾಸವೂ ಬೇಡ ಎಂದು ಸುಮ್ಮನೆ ಕುಳಿತಿದ್ದ ಪೂನಂ ಮತ್ತು ಪಾಯಲ್ ಬಳಿ ಹೋಗಿ ಮಂದನ 'ಆಲಿ ಸುಮ್ಮನೆ ಫೇಕ್ ಕಹಾನಿಗಳನ್ನು ಕಟ್ಟಿ ಗಾಸಿಪ್ ಮಾಡುತ್ತಿದ್ದಾನೆ. ಅವನು ಜೀಶನ್‌ಗೆ ಹೋಗಿ ಹೇಳಿದ್ದಾನೆ ನಾನು ಅವನನ್ನು Man whore ಎಂದು ಕರೆದಿರುವೆ ಎಂದು. ಎಂಥಾ ಡ್ರಾಮ ಇವನು' ಎಂದು ಹೇಳಿದ್ದಾರೆ. 

ಮಾತುಕಥೆ ಮತ್ತು ಜಗಳ ನಂತರ ಚಾರ್ಚ್‌ಶೀಟ್‌ನಲ್ಲಿ ಇರಬೇಕಾದ ಹೆಸರು ಫೈನಲ್ ಮಾಡುತ್ತಾರೆ. ಆಗ ಪೂನಂ ಪಾಂಡೆ ಮತ್ತು ಸೈಶಾಗೆ ಬೇಸರವಾಗುತ್ತದೆ.ಇಬ್ಬರು ಮನೆಯ opposite ದಿಕ್ಕುಗಳಲ್ಲಿ ಕುಳಿತು ಅಳುತ್ತಾರೆ. ಮುನಾವರ್ ಮನೆಯಲ್ಲಿ ನಡೆಸುತ್ತಿರುವ ಗೇಮ್ ಪ್ಲ್ಯಾನ್ ಯಾರಿಗೂ ಗೊತ್ತಾಗುತ್ತಿಲ್ಲ ಹಾಗೆ ಟೀಂ ಒಳಗೆ ನಡೆಸುತ್ತಿರುವುದು ನನಗೆ ಗೊತ್ತಾಗುತ್ತಿಲ್ಲ ಎಂದು ಸೈಶಾ ಆಳುತ್ತಾರೆ. ನನ್ನ ಸ್ನೇಹಿತೆ ಅಂಜಲಿ ನನ್ನ ಮನಸ್ಸಿಗೆ ನೋವು ಮಾಡಿದ್ದಾಳೆ ಆಕೆ ನನ್ನ ಹೆಸರನ್ನು ಚಾರ್ಚ್‌ ಶೀಟ್‌ಗೆ ಹೇಳಿದ್ದಾಳೆ ಎಂದು ಪೂನಂ ಅಳುತ್ತಾಳೆ. 

ಜನರು ವೋಟ್ ಮಾಡಿದರೆ ಕ್ಯಾಮೆರಾ ಮುಂದೆ ಶರ್ಟ್‌ ಬಿಚ್ಚುವೆ: ಪೂನಂ ಪಾಂಡೆ

ಚಾರ್ಚ್‌ಶೀಟ್‌ನಲ್ಲಿರುವ ಇವರಿಬ್ಬರು ಮನೆಯ ಇನ್ನಿತ್ತರ ಸ್ಪರ್ಧಿಗಳ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ.ಮುನಾವರ್ ಎಷ್ಟು ಮ್ಯಾನುಪುಲೇಟ್ ಮಾಡುತ್ತಾರೆ ಎಂದು ಚರ್ಚೆ ಮಾಡುತ್ತಾರೆ ಹಾಗೇ ಅಂಜಲಿನ ಸೈಲೆಂಟ್ ಆಗಿ ಪ್ರೀತಿಸುತ್ತಿದ್ದಾನೆ ಎಂದು ಮಾತನಾಡಿಕೊಳ್ಳುತ್ತಾರೆ.

click me!