ತಲೆ ಬೋಳಿಸಿಕೊಳ್ಳುವಿರಾ ಎಂದ ನೆಟ್ಟಿಗನ ಉದ್ಧಟತನಕ್ಕೆ ಕೂಲಾಗಿ ಉತ್ತರಿಸಿದ ಶ್ವೇತಾ ಚೆಂಗಪ್ಪ..!

Published : Apr 10, 2022, 12:58 PM IST
ತಲೆ ಬೋಳಿಸಿಕೊಳ್ಳುವಿರಾ ಎಂದ ನೆಟ್ಟಿಗನ ಉದ್ಧಟತನಕ್ಕೆ ಕೂಲಾಗಿ ಉತ್ತರಿಸಿದ ಶ್ವೇತಾ ಚೆಂಗಪ್ಪ..!

ಸಾರಾಂಶ

ಪರ್ಸನಲ್ ಲೈಫ್‌ ಮತ್ತು ಪ್ರೋಫೆಷನಲ್ ಲೈಫ್‌ ಬಗ್ಗೆ ಪ್ರಶ್ನೆ ಕೇಳಿದ ನೆಟ್ಟಿಗರಿಗೆ ಯೂಟ್ಯೂಬ್ ಮೂಲಕ ಉತ್ತರ ಕೊಟ್ಟ ಶ್ವೇತಾ ಜಂಗಪ್ಪ..  

ಮದರ್‌ವುಡ್‌ ಎಂಜಾಯ್ ಮಾಡುತ್ತಿರುವ ಕಿರುತೆರೆ ರಾಣಿ ಶ್ವೇತಾ ಚಂಗಪ್ಪ (Shwetha Changappa) ವೇದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ನಡುವೆ ಯೂಟ್ಯೂಬ್ ಲೋಕದಲ್ಲಿ (Youtube) ಬ್ಯುಸಿಯಾಗಿರುವ ಶ್ವೇತಾ ತಮ್ಮ ಲೈಫ್‌ಸ್ಟೈಲ್ (Lifestyle), ಪುತ್ರ ಜಿಯಾ, ಹಬ್ಬದ ದಿನಗಳ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಳ್ಳುತ್ತಾರೆ. ಲಕ್ಷಗಟ್ಟಲೆ ವೀಕ್ಷಣೆ ಪಡೆಯುತ್ತಿರುವ ಬೆನ್ನಲೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆ ಕೇಳಿದ್ದಾರೆ, ಹೀಗಾಗಿ ವಿಡಿಯೋ ಮೂಲಕ ಶ್ವೇತಾ ಉತ್ತರ ಕೊಟ್ಟಿದ್ದಾರೆ. 

ನಿಮ್ಮ ಫೇವರೆಟ್‌ ಡಿಶ್ ಯಾವುದು?
ಚಿಲ್ಲಿ ಚಿಕನ್ ಮತ್ತು ಪೆಪ್ಪರ್ ಚಿಕನ್ ತುಂಬಾ ಇಷ್ಟ ಆಗುತ್ತೆ. ಸ್ವಲ್ಪ ದಿನಗಳಿಂದ ನಾನು ನಾನ್‌ ವೆಚ್‌ (Non-Veg) ಬಿಟ್ಟಿದ್ದೀನಿ. ಈಗ ಅಮ್ಮ ಮಾಡುವ ತರಕಾರಿ ಪಲಾವ್ (Vegetable Pulav) ಇಷ್ಟ.

ನೀವು ಇಷ್ಟು ಬೇಗ ಸಣ್ಣ ಆಗಿದ್ದು ಹೇಗೆ? ಸೀಕ್ರೆಟ್ ಹೇಳಿ...
ತುಂಬಾ ಬೇಗ ಸಣ್ಣ ಆಗಿಲ್ಲ ತುಂಬಾ ತಿಂಗಳುಗಳಿಂದ ಪ್ರಯತ್ನ ಮಾಡುತ್ತಿರುವುದು. ನನ್ನ ಲೈಫ್‌ಸ್ಟೈಲ್ ಬದಲಾವಣೆ ಮಾಡಿಕೊಂಡಿದ್ದೀನಿ ನಾನು. 

ನಿಮ್ಮ ಮೊದಲ (Crush) ಕ್ರಶ್
Usshhhhh

ಚಿಕ್ಕ ವಯಸ್ಸಿನವರು ಮೃತಪಡುತ್ತಿರುವ ಸಂಖ್ಯೆ ಹೆಚ್ಚಾಗಿದೆ ಯಾಕೆ ಏನು ಗೊತ್ತಿಲ್ಲ ಆದರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ತುಂಬಾ ಜನರಿಂದ ಈ ರೀತಿ ಬೇಸರದ ಸುದ್ದಿ ಸಿಗುತ್ತಿದೆ ನಾನು ಹೇಳೋದು ಇಷ್ಟೆ ಯಾವಾಗ ಯಾರು ಹೋಗ್ತೀನಿ ಅಂತ ಗೊತ್ತಿಲ್ಲ ಇರೋವರೆಗೂ ಚೆನ್ನಾಗಿರಿ ನಗು ನಗುತ್ತಾ ಇರಿ.

ನಿಮಿಗೆ ವಯಸ್ಸು ಆಗ್ತಾನೆ ಇಲ್ವಾ ದಿನದಿಂದ ದಿನಕ್ಕೆ ಇನ್ನು ಚಂದವಾಗಿ ಕಾಣ್ತಿದಿರ
ನಿಮ್ಮ complimentಗೆ ಥ್ಯಾಂಕ್ಸ್. ನಾವು ಸದಾ ನಗು ನಗುತ್ತಿರ ಬೇಕು ಏನೇ ಸಮಸ್ಯೆ ಇದ್ದರು ಜಾಸ್ತಿ ದಿನ ಮನಸ್ಸಿಗೆ ತೆಗೆದುಕೊಳ್ಳಬಾರದು. ಜೀವನದಲ್ಲಿ ಮುಂದೆ ನಡೆಯಬೇಕು.

Shiva Rajkumar: ವೇದ ಚಿತ್ರಕ್ಕೆ ಜತೆಯಾದ ಶ್ವೇತಾ ಚಂಗಪ್ಪ

ನಿಮ್ಮ ತ್ವಚ್ಛೆತ ರಹಸ್ಯೆ (Skin care) ಹೇಳಿ ಸಂತೂರ್ ಮಮ್ಮಿ
ಟ್ರೋಲ್ (Troll page) ಪೇಜ್‌ಗಳಿಗೆ ಥ್ಯಾಂಕ್ಸ್ ಹೇಳಬೇಕು. ಒಂದು ವಾರದಿಂದ ತುಂಬಾ ಜನರು ಶೇರ್ ಮಾಡುತ್ತಿದ್ದಾರೆ. ನನ್ನ ಮಗು ಜೊತೆ ನನ್ನ ಫೋಟೋ ಹಾಕಿ ಸಂತೂರ್ ಮಮ್ಮಿ (Santoor mummy) ಎಂದು ಹೇಳಿದ್ದಾರೆ ಆಗ ಖುಷಿಯಾಗುತ್ತೆ.

ತಲೆ ಬೋಳಿಸಿಕೊಳ್ಳುವಿರಾ.
ಖಂಡಿತ ಒಳ್ಳೆಯ ಉದ್ದೇಶವಿದ್ದರೆ ಮಾಡುತ್ತೀನಿ. ಅಯ್ಯೋ ಶೇವ್ (Head Shave) ಮಾಡ್ಬಾರ್ದು ಅಂತೇನು ಇಲ್ಲ ಅಥವಾ ನನ್ನ ಬ್ಯೂಟಿಗೆ ಹಾಳಾಗುತ್ತೆ ಅಂತೇನು ಇಲ್ಲ. ಕೂದಲಿಲ್ಲದೆ ಅನೇಕರು ಇದ್ದಾರೆ ನನ್ನ ಕುಟುಂಬದಲ್ಲಿ ಇದ್ದಾರೆ. ನನಗೆ ಉದ್ದೇಶ ಸಿಕ್ಕರೆ ಖಂಡಿತಾ ಮಾಡಿಸಿಕೊಳ್ಳುತ್ತೀನಿ. ಕಲಾವಿದೆಯಾಗಿ ನನಗೆ ಕೆಲವೊಮ್ಮೆ ಕೂದಲು ಬೇಕೇ ಬೇಕು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?