ಮಾಸ್ಟರ್ ಆನಂದ್ ಹೆಂಡ್ತಿ ಅಂತಿದ್ದವರು ಈಗ ಯಶಸ್ವಿನಿ ಅಂತಿದ್ದಾರೆ; ಸಂತಸದಲ್ಲಿ ರಿಯಾಲಿಟಿ ವಿನ್ನರ್!

Published : Apr 11, 2022, 05:37 PM ISTUpdated : Apr 11, 2022, 06:00 PM IST
ಮಾಸ್ಟರ್ ಆನಂದ್ ಹೆಂಡ್ತಿ ಅಂತಿದ್ದವರು ಈಗ ಯಶಸ್ವಿನಿ ಅಂತಿದ್ದಾರೆ; ಸಂತಸದಲ್ಲಿ ರಿಯಾಲಿಟಿ ವಿನ್ನರ್!

ಸಾರಾಂಶ

 ನನ್ನಮ್ಮ ಸೂಪರ್ ಸ್ಟಾರ್ ಟ್ರೋಫಿ ಪಡೆದುಕೊಂಡು ಫೇಮ್‌ ಎಂಜಾಯ್ ಮಾಡುತ್ತಿರುವ ಯಶಸ್ವಿನಿ ತಮ್ಮ identity ಬಗ್ಗೆ ಹಂಚಿಕೊಂಡಿದ್ದಾರೆ.

ಕಲರ್ಸ್ ಕನ್ನಡ (Colors Kannada) ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ಟ್ರೋಫಿ ಪಡೆದುಕೊಂಡ ವಂಶಿಕಾ ಮತ್ತು ಯಶಸ್ವಿನಿ ಸದ್ಯ ಸಂದರ್ಶಗಳಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟು ದಿನ ಎಲ್ಲರೂ ನನ್ನ ಮಾಸ್ಟರ್ ಆನಂದ್ ಪತ್ನಿ ಎಂದು ಕರೆಯುತ್ತಿದ್ದರು ಆದರೀಗ ಯಶಸ್ವಿನಿ ಎನ್ನುತ್ತಿದ್ದಾರೆ ಅದೇ ನನಗೆ ಬಿಗ್ ಖುಷಿ ಎಂದು ಹೇಳಿಕೊಂಡಿದ್ದಾರೆ.

'ನನ್ನಮ್ಮ ಸೂಪರ್ ಸ್ಟಾರ್ ಜೀವನದಲ್ಲಿ ಮರೆಯಲಾಗ ಅವಕಾಶ. ನನಗೆ ಮಾತ್ರವಲ್ಲ ಅಲ್ಲಿದ್ದ 11 ಸ್ಪರ್ಧಿಗಳಿಗೂ. ಸೆಟ್‌ನಲ್ಲಿ ಕಳೆದ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡ್ತೀನಿ. ನಾಲ್ಕು ತಿಂಗಳಲ್ಲಿ ಹಲವು ವಿಚಾರಗಳನ್ನು ಕಲಿತಿರುವೆ. ನಮ್ಮ18 ವಾರಗಳ ಶ್ರಮಕ್ಕೆ ಟ್ರೋಫಿ ಕೈ ಸೇರಿರುವುದು ಖುಷಿಯ ವಿಚಾರ. ನಾನು ಆನಂದ್ ಅವರ ಜೊತೆ ಶೋ ಚಿತ್ರೀಕರಣಕ್ಕೆ ಹೋಗಿದ್ದೀನಿ ಆದರೆ ಇದೇ ಮೊದಲು ನಾನು ಸ್ಪರ್ಧಿಯಾಗಿರುವುದು. ಇಲ್ಲಿ ನನ್ನದೆ identity ಪಡೆದುಕೊಂಡಿದ್ದೀನಿ ಜನರು ನನ್ನನ್ನು ಇಷ್ಟು ದಿನ ಮಾಸ್ಟರ್ ಆನಂದ್ ಪತ್ನಿ ಎಂದು ಕರೆಯುತ್ತಿದ್ದರು ಆದರೀಗ ಯಶಸ್ವಿನಿ ಎಂದು ಗುರುತಿಸುತ್ತಿದ್ದಾರೆ' ಎಂದು ಇಟೈಮ್ಸ್ ಸಂದರ್ಶನದಲ್ಲಿ ಯಶಸ್ವಿನಿ ಮಾತನಾಡಿದ್ದಾರೆ.

'ಶಾಲೆ ಕಾಲೇಜುಗಳನ್ನು ಜನಪ್ರಿಯತೆ ಪಡೆಯುವುದು ಬೇರೆ ಮದುವೆ ನಂತರ ಎಲ್ಲರೂ ನನ್ನ ಆನಂದ್ ಪತ್ನಿ ಎಂದು ಗುರುತಿಸುತ್ತಾರೆ ಅನ್ನೋದು ತಲೆಯಲ್ಲಿತ್ತು. ನನ್ನಮ್ಮ ಸೂಪರ್ ಸ್ಟಾರ್‌ ಶೋಯಿಂದ ಎಲ್ಲವೂ ಬದಲಾಗಿದೆ. ಕೆಲವರು ನನ್ನ ಮೊಬೈಲ್‌ನಲ್ಲಿ ಆನಂದ್ ಪತ್ನಿ ಎಂದು ನಂಬರ್ ಸೇವ್ ಮಾಡಿಕೊಳ್ಳುತ್ತಿದ್ದರು ಈಗ ಯಶಸ್ವಿನಿ ಎಂದು ಸೇವ್ ಮಾಡಿಕೊಂಡಿದ್ದಾರೆ. ಸಣ್ಣ ವಿಚಾರಗಳು ಈಗ ನನ್ನ ಜೀವನದಲ್ಲಿ ದೊಡ್ಡ ಬಲಾವಣೆ ತಂದಿದೆ' ಎಂದಿದ್ದಾರೆ ಯಶಸ್ವಿನಿ.

ನನ್ನಮ್ಮ ಸೂಪರ್‌ ಸ್ಟಾರ್ ವಿನ್ನರ್ ವಂಶಿಕಾ ಮತ್ತು ಯಶಸ್ವಿನಿ, ಕೈ ಸೇರಿದ ಮೊತ್ತ ಎಷ್ಟು ಗೊತ್ತಾ?

'ಅಲ್ಲಿದ್ದ 11 ಅಮ್ಮ-ಮಕ್ಕಳು ಜೋಡಿ ಎಂದೂ ನಾವು ಸ್ಪರ್ಧಿಗಳು ಅನ್ನುವ ಭಾವನೆ ಇರಲಿಲ್ಲ. ನಾವು ಒಳ್ಳೆಯ ಸ್ನೇಹಿತರಾಗಿದ್ದೀವಿ ನಮ್ಮ ಮಕ್ಕಳು ಕೂಡ ಜೊತೆಯಾಗಿದ್ದಾರೆ. ಶೋ ಮುಗಿದ ನಂತರವೂ ನಾನು ಭೇಟಿ ಮಾಡುತ್ತಿದ್ದೀವಿ. ನಮ್ಮ ಬಾಂಡ್ ಇನ್ನೂ ಗಟ್ಟಿಯಾಗಿದೆ. ಜಡ್ಜ್‌ ಆಗಿದ್ದ ಸೃಜನ್ ಲೋಕೇಶ್, ತಾರಾ ಅನುರಾದ ಮತ್ತು ಅನುಪ್ರಭಾಕರ್ ಅವರು ತುಂಬಾನೇ ಸಪೋರ್ಟ್ ಮಾಡಿದ್ದಾರೆ. ನಿರೂಪಕಿ ಅನುಪಮಾ ಮಕ್ಕಳ ಜೊತೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಇಡೀ ಟೀಂ ನಾವು ಸ್ಟೇಜ್‌ ಮೇಲೆ ಹೋದಾಗ ಧೈರ್ಯ ಕೊಟ್ಟಿದ್ದಾರೆ' ಎಂದು ಯಶಸ್ವಿನಿ ಹೇಳಿದ್ದಾರೆ.

'ಚಿಕ್ಕ ವಯಸ್ಸಿಗೆ ವಂಶಿಕಾ ಹೆಸರು ಮಾಡಿರುವುದಕ್ಕೆ ಖುಷಿಯಾಗಿದೆ. ಆಕೆ ಗುಣವೇ ಹಾಗೆ ಎಲ್ಲರೊಂದಿಗೆ ಮಾತನಾಡುತ್ತಾಳೆ ಎಲ್ಲರನ್ನು ನಗಿಸುತ್ತಾಳೆ. ಅಕೆ ನನ್ನ ರೀತಿ. ನನ್ನ ಇಬ್ಬರು ಮಕ್ಕಳ ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ತಾರೆ ಈ ಕ್ಷಣ ತುಂಬಾನೇ ಮುಖ್ಯ ಅನ್ನೋದು ಅವರಿಗೆ ಗೊತ್ತಿದೆ. ಯಾರಿಗಾದರೂ ನೋವು ಕೊಡಬೇಕು ಅನ್ನೋದು ಅವರ ತೆಲೆ ಬರೋದಿಲ್ಲ. ಆನಂದ್ ಮತ್ತು ನಾನು ನಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಡುತ್ತೀವಿ' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...