ಬಿಗ್‌ಬಾಸ್ ಸೀಸನ್ 8 ಸಖತ್ ಜೋಶ್‌ನಿಂದ ನಡೆಯುತ್ತಿದೆ. ಈವರೆಗಿನ ಆಟ ನೋಡಿದರೆ ಈ ಸ್ಪರ್ಧಿಗಳು ಮನೇಲಿ ನೂರು ದಿನ ಪೂರೈಸೋದು ಗ್ಯಾರೆಂಟಿ.
ಬಿಗ್ ಬಾಸ್ ಸೀಸನ್ ೮ ಆರಂಭವಾಗಿ ಹತ್ತು ದಿನವಾಯ್ತು. ಹದಿನೇಳು ಸ್ಪರ್ಧಿಗಳ ಬಿಗ್‌ಬಾಸ್ ಮನೆ ಪ್ರವೇಶದೊಂದಿಗೆ ಟಾಸ್ಕ್ ಶುರುವಾಯ್ತು. ಸದ್ಯಕ್ಕೀಗ ದೊಡ್ಡ ಮನೆಯಲ್ಲಿ ಕೊರೋನಾ ಅಟ್ಟಹಾಸ ತಾರಕ್ಕೇರಿದೆ. ಇಲ್ಲೀವರೆಗೆ ಸ್ಪರ್ಧಿಗಳ ಒಂದು ಮುಖ ಕಂಡರೆ ಈಗ ಮತ್ತೊಂದು ಮುಖದ ಅನಾವರಣವಾಗುತ್ತಿದೆ. ಕ್ಯಾಪ್ಟನ್ ಬ್ರೊ ಗೌಡ, ಸಂಬರಗಿ, ನಿರ್ಮಲಾ ಸೇರಿ ಕೆಲವೊಂದಿಷ್ಟು ಜನ ಮೈ ಕೈ ಏಟು ಮಾಡಿಕೊಂಡು ಮುಖ ಧಮ್ಮಿಸಿಕೊಂಡು ಕೂತಿದ್ದಾರೆ. ಇಲ್ಲೀವರೆಗೆ ಒಂದು ಲೆವೆಲ್‌ಗೆ ಶಾಂತವಾಗಿದ್ದ ಮನೆಯಲ್ಲೀಗ ಅಲ್ಲೋಲ ಕಲ್ಲೋಲ ಎದ್ದಿದೆ. ಇಲ್ಲಿಗೆ ಬರುವ ಸ್ಪರ್ಧಿಗಳು ಬರೀ ಮೆಂಟಲ್ ಫಿಟ್‌ನೆಸ್ ಇಟ್ಟುಕೊಂಡರೆ ಸಾಕಾಗಲ್ಲ, ಫಿಸಿಕಲ್ ಫಿಟ್‌ನೆಸ್ ಸಹ ಬೇಕಾಗುತ್ತೆ ಅಂತ ಶುರುವಿಗೇ ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಈಗ ಕೊರೋನಾ ಟಾಸ್ಕ್ ಬಂದಿದೆ.
ಈವರೆಗಿನ ಟಾಸ್ಕ್ ಗಮನಿಸಿದರೆ ಕೆಲವೇ ಕೆಲವರು ಕೊನೇ ತನಕ ಉಳಿಯಬಹುದು ಅನಿಸುತ್ತಿದೆ. ಆದರೂ ಎಷ್ಟೋ ಸಲ ಇವತ್ತಿದ್ದ ಹಾಗೆ ಇನ್ನೊಮ್ಮೆ ಈ ಸ್ಪರ್ಧಿಗಳ ವರ್ತನೆ ಇರೋದಿಲ್ಲ. ಕಿಚ್ಚನ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ ಹುಚ್ಚ ವೆಂಕಟ್ ಇದಕ್ಕೆ ಸಾಕ್ಷಿ. ಆದರೆ ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಈ ಐದು ಜನ ಕೊನೇ ತನಕ ಉಳಿಯಬಲ್ಲರು ಅನಿಸುತ್ತೆ. ಅವರ್ಯಾರ್ಯಾರು ನೋಡೋಣ.
1. ಲ್ಯಾಗ್ ಮಂಜ
ಈಗೀಗ ಲ್ಯಾಗ್ ಮಂಜನಿಗೂ ಸಂಬರಗಿಗೂ ಕೊಂಚ ವೈಮನಸ್ಸು ಶುರುವಾಗಿದೆ. ಆದರೂ ಇವರ ಹಾಸ್ಯ ಪ್ರವೃತ್ತಿ ಎಲ್ಲವನ್ನೂ ಮರೆಸುತ್ತೆ ಅನ್ನೋದು ಪಕ್ಕಾ. ಇಬ್ಬರ ದಿವ್ಯಾರ ಮುದ್ದಿನ ಕೃಷ್ಣನಾಗುತ್ತಿರುವ ಮಂಜು ಪಾವಗಡ ಬಿಗ್‌ಬಾಸ್ ಮನೆಯಲ್ಲಿ ಕೊನೇವರೆಗೂ ಉಳಿದರೆ ಮನರಂಜನೆಗೆ ಖಂಡಿತಾ ಕೊರತೆಯಾಗಲ್ಲ. ಹೆಚ್ಚಿನ ಸ್ಪರ್ಧಿಗಳಿಗೆ ಮಂಜನ ಜೊತೆಗೆ ಉತ್ತಮ ರ್ಯಾಪೊ ನಿರ್ಮಾಣವಾಗಿದೆ. ಅವರು ಆಟ ಆಡೋ ರೀತಿ, ಉಳಿದ ಸ್ಪರ್ಧಿಗಳ ಜೊತೆಗಿನ ಒಡನಾಟ, ಹಾಸ್ಯಪ್ರವೃತ್ತಿ ಎಲ್ಲ ಇವ್ರಿಗೆ ಪಾಸಿಟಿವ್ ಆಗಲಿಕ್ಕಿದೆ. ಹೀಗಾಗಿ ಸದ್ಯದ ಸ್ಥಿತಿ ನೋಡಿದರೆ ಮಂಜು ಅವರು ಕೊನೇವರೆಗೂ ದೊಡ್ಡ ಮನೆಯಲ್ಲಿ ಉಳಿಯೋದು ಗ್ಯಾರೆಂಟಿ.
undefined
#BBK8: ಯೋಗ, ಡ್ರೆಸ್ ಮಾಡ್ಕೊಂಡೇ ವೈಷ್ಣವಿ ಸೈಲೆಂಟ್ ಆಗಿದ್ರೆ ಬೇಗ ಎಲಿಮಿನೇಟ್ ಆಗ್ತಾರಾ? ...
2. ಪ್ರಶಾಂತ್ ಸಂಬರಗಿ
ಇವರ ಕೆಲವೊಂದು ನೆಗೆಟಿವ್ ವರ್ತನೆಗಳಿಂದ ಮನೆಯಲ್ಲಿ ಕೊಂಚ ಇರಿಸುಮುರಿಸು ನಿರ್ಮಾಣವಾದರೂ ಇವರಿಗೆ ಜನರ ಓಟ್ ಸಿಗ್ತಿದೆ. ಪಕ್ಕಾ ಗೇಮ್ ಪ್ಲಾನಿಂಗ್ ಇರುವ ಇವರ ಆಟ ಹೆಚ್ಚಿನ ವೀಕ್ಷಕರಿಗೆ ಇಷ್ಟವಾದ ಹಾಗಿದೆ. ಈಗಾಗಲೇ ಬಿಗ್‌ಬಾಸ್ ಕುರಿತ ಕೆಲವು ಚರ್ಚೆಗಳಲ್ಲಿ ಜನ ಇವರನ್ನು ಬೆಂಬಲಿಸಿದ್ದಾರೆ. ಸದ್ಯದ ಇವರ ನಡೆ ನೋಡುತ್ತಿದ್ದರೆ ಕೊನೇತನಕ ಉಳಿಯೋದು ಗ್ಯಾರೆಂಟಿ ಅನಿಸುತ್ತಿದೆ. ಆದರೆ ಬಿಗ್ ಬಾಸ್ ವಿನ್ನರ್ ಆಗೋದರ ಬಗ್ಗೆ ಡೌಟ್ ಇದೆ.
3. ನಿಧಿ ಸುಬ್ಬಯ್ಯ
ಈಕೆ ತನ್ನ ಕಾಮಿಡಿ ಸೆನ್ಸ್ ನಿಂದಲೂ ಮನೆಮಂದಿ ಹಾಗೂ ಜನರಿಗೆ ಇಷ್ಟವಾಗ್ತಿದ್ದಾರೆ. ಒಂದು ಕಾಲದಲ್ಲಿ ಪಡ್ಡೆಗಳ ಎದೆಬಡಿತ ಹೆಚ್ಚಿಸಿರೋ ಈ ಕೊಡಗಿನ ಬ್ಯೂಟಿ ಆಟದಲ್ಲೂ ಎಚ್ಚರಿಕೆಯಿಂದಿದ್ದಾರೆ. ಎಲ್ಲರಿಗೂ ಇಷ್ಟವಾಗುವಂತೆ ಅವರ ನಡೆ ನುಡಿ ಇದೆ. ಜಗಳಗಂಟಿ ಅಲ್ಲ, ಸ್ನೇಹಮಯಿ ಸ್ವಭಾವ, ಕರೆಕ್ಟಾಗಿ ಪರಿಸ್ಥಿತಿಯನ್ನು ಜಡ್ಜ್ ಮಾಡೋ ರೀತಿ ಇವರಿಗೆ ಪಾಸಿಟಿವ್ ಆಗಲಿಕ್ಕಿದೆ. ಇವರ ಜೊತೆಗೆ ಶುಭಾ ಪೂಂಜಾ ಕೊನೆಯವರೆಗೂ ಉಳಿಯಬಹುದು ಅಂತ ಕೆಲವರು ಹೇಳ್ತಿದ್ದಾರೆ. ಅವರ ನಿಷ್ಕಲ್ಮಶ ಮನಸ್ಸೇ ವೀಕ್ಷಕರಿಂದ ಹೆಚ್ಚು ಓಟ್ ಪಡೆಯುವಂತೆ ಮಾಡಬಹುದು.
ಮನೆಯಲ್ಲಿ ವೈರಸ್ ಹಾವಳಿ.. ಬೀಪ್..ಬೀಪ್..ಬೀಪ್.. ಬೈಗುಳಗಳ ಸುರಿಮಳೆ ...
4. ದಿವ್ಯಾ ಸುರೇಶ್/ಗೀತಾ ಭಾರತಿ
ಈಕೆ ಮತ್ತು ಗೀತಾ ಭಾರತಿ ನಡುವೆ ಕೊಂಚ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಆದರೆ ದಿವ್ಯಾ ಮನೆಯಲ್ಲಿರುವ ಕೆಲವೊಂದು ಜನರ ಹೃದಯ ಕದ್ದ ಹುಡುಗಿಯಾಗಿ ಗುರುತಿಸಿಕೊಂಡಿದ್ದಾರೆ. ತಮಾಷೆಗೆ ಮಂಜನ ಜೊತೆಗೆ ಲವರ್ ನಂತೆ ಆಕ್ಟ್ ಮಾಡಿದರೂ ಅರವಿಂದ್, ಬ್ರೋ ಗೌಡ ಸೇರಿದಂತೆ ಮನೆಯ ಕೆಲವು ಗಂಡು ಜೀವಗಳ ನಿದ್ದೆಯನ್ನು ಕದ್ದವರು ಈಕೆ. ನೋಡೋಕೆ ಸುಂದರಿ, ಸ್ವಭಾವದಲ್ಲಿ ಒಳ್ಳೆತನ ಇದೆ. ಆಟಕ್ಕೆ ನಿಂತರೂ ಪ್ರಬಲ ಸ್ಪರ್ಧೆ ನೀಡಬಲ್ಲರು. ಈ ಎಲ್ಲ ಗುಣಗಳಿಂದ ಈಕೆ ಕೊನೇವರೆಗೆ ಉಳಿಯುವ ಸಾಧ್ಯತೆ ಇದೆ.
5. ಶಮಂತ್/ ವೈಷ್ಣವಿ
ಶಮಂತ್ ಕ್ಯಾಪ್ಟನ್ ಆಗಿದ್ದೂ ಖಚಿತ ನಿರ್ಧಾರ ತಗೊಳ್ಳೋದರಲ್ಲಿ ಮೊದಲ ವಾರ ಸೋತಿದ್ದಾರೆ. ಅವರು ಚೆನ್ನಾಗಿ ಆಟ ಆಡಿದ್ರೆ ಕೊನೆಯವರೆಗೂ ಉಳಿಯಬಹುದು. ವೈಷ್ಣವಿಯೂ ಸದ್ಯದ ತಮ್ಮ ಮನಸ್ಸು ಕೊಟ್ಟು ಆಡಿದರೆ ಕೊನೇ ಸುತ್ತಿಗೆ ಪ್ರವೇಶಿಸುವ ಸಾಧ್ಯತೆ ಇದೆ.
ನ್ಯೂಯಾರ್ಕ್‌ನಲ್ಲಿ ಭಾರತೀಯ ರೆಸ್ಟೋರೆಂಟ್ ತೆರೆದ ಪ್ರಿಯಾಂಕಾ ಚೋಪ್ರಾ! ...