ಲಕ್ಷ್ಮೀ ನಿವಾಸ: ಭಾವನಾಗೆ ತಾಳಿ ಕಟ್ಟಿದ್ದ ಸಿದ್ದೇಗೌಡ್ರು ತಗ್ಲಾಕೊಂಡ; ಮನೆಯವರಿಗೆ ಹೇಳ್ತಾನಾ ವೆಂಕಿ

By Sathish Kumar KH  |  First Published Jul 29, 2024, 7:45 PM IST

ಭಾವನಾಗೆ ರಾತ್ರಿ ವೇಳೆ ಕದ್ದು ತಾಳಿ ಕಟ್ಟಿದ್ದ ಸಿದ್ದೇಗೌಡ್ರು ಎನ್ನೋ ಬಗ್ಗೆ ಮಾಹಿತಿ ಸಿಕ್ಕೇಬಿಡ್ತು. ಮನೆಯವರಿಗೆ ಹೇಗೆ ಹೇಳ್ತಾನೆ ಮಾತನಾಡಲು ಬಾರ ಮೂಗ ವೆಂಕಿ. 


ಬೆಂಗಳೂರು (ಜು.29): ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾಗೆ ಸಿದ್ದೇಗೌಡ್ರು ರಾತ್ರಿ ವೇಳೆ ಕದ್ದು ತಾಳಿ ಕಟ್ಟಿದ್ದಾನೆ. ಅದನ್ನು ಯಾರು ನೋಡದಿದ್ದರೂ ಹೂಮಾರುವ ಕಣ್ಣು ಕಾಣದ ಬೆಟ್ಟಮ್ಮ ಮಾತ್ರ ಕೈ ಸ್ಪರ್ಶದ ಮೇಲೆ ಯಾರು ಎಂದು ತಿಳಿದುಕೊಂಡಿದ್ದಾರೆ. ಆದರೆ, ಈಗ ದೇವಸ್ಥಾನದಲ್ಲಿ ಕುಸಿದು ಬೇಳಿತ್ತಿದ್ದ ಬೆಟ್ಟಮ್ಮನನ್ನು ರಕ್ಷಣೆ ಮಾಡಲು ಹೋದ ಸಿದ್ದೇಗೌಡ್ರು ಈಗ ಬೆಟ್ಟಮ್ಮನ ಕೈಗೆ ಸಿಕ್ಕಿಬಿದ್ದಿದ್ದು, ಅವನ್ಯಾರು ಎಂದು ತಿಳಿದುಕೊಳ್ಳಲು ವೆಂಕಿಗೆ ಹೇಳಿದ್ದಾರೆ. ಈಗ ವೆಂಕಿ ಕೈಗೆ ಸಿದ್ದೇಗೌಡ್ರು ಸಿಕ್ಕಿಬಿದ್ದಿದ್ದಾನೆ.

ಹೌದು, ಜೀ ಕನ್ನಡ ವಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರವಾಹಿಯಲ್ಲಿ ಜೋಡಿಗಳಿಗೇನು ಕಮ್ಮಿಯೇ ಇಲ್ಲ. ಅದರಲ್ಲಿ ಭಾವನಾ ಮತ್ತು ಸಿದ್ದೇಗೌಡರ ಜೋಡಿಯೂ ವೀಕ್ಷಕರಿಗೆ ಥ್ರಿಲ್ ಕೊಡುತ್ತಿದೆ. ಧಾರಾವಾಹಿಯಲ್ಲಿ ಲಕ್ಷ್ಮಿ ಮತ್ತು ಶ್ರೀನಿವಾಸ ಅವರ ಮಕ್ಕಳಿಗೆಲ್ಲಾ ಸುಂದರ ಜೋಡಿಗಳನ್ನು ಮಾಡಿದ್ದಾರೆ. ಆದರೆ ಜಾಹ್ನವಿಗೆ ಜಯಂತ್ ಮದುವೆ ಮಾಡಿಸಿದ್ದರಲ್ಲಿ ವೀಕ್ಷಕರಿಗೆ ತುಸು ಕೋಪವಿದೆ. ಆದರೆ, ಭಾವನಾಗೆ ರಾತ್ರಿ ವೇಳೆ ಕದ್ದು ಮುಚ್ಚಿ ತಾಳಿ ಕಟ್ಟಿದ್ದ ಸಿದ್ದೇಗೌಡ್ರ ಬಗ್ಗೆ ವೀಕ್ಷಕರಿಗೆ ಒಳ್ಳೆಯ ಅಭಿಪ್ರಾಯವಿದ್ದರೂ ಕದ್ದು ಮುಚ್ಚಿ ತಾಳಿ ಕಟ್ಟಿ ಹೆಣ್ಣು ಹೆತ್ತಿರುವ ಕುಟುಂಬಕ್ಕೆ ತೊಂದರೆ ಕೊಡಬಾರದಿತ್ತು ಎಂದು ವೀಕ್ಷಕರು ಮರುಕ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಲಕ್ಷ್ಮಿ ನಿವಾಸ ವೆಂಕಿ -ಚೆಲುವಿ ಜೋಡಿ ಸೂಪರೋ ಸೂಪರ್ ರಂಗ…. ಅಂತಿದ್ದಾರೆ ವೀಕ್ಷಕರು

ಸಿದ್ದೇಗೌಡ್ರ ಅಪ್ಪ ಪಾರ್ವತಿ ಕಲ್ಯಾಣ ಪೂಜೆ ಮಾಡಿಸುವಾಗ ಹೆಣ್ಣು ದೇವರ ಮೇಲಿದ್ದ ತಾಳಿಯನ್ನು ತೆಗೆದುಕೊಂಡು ಹೋಗಿ ಭಾವನಾಳ ಕುತ್ತುಗೆಗೆ ರಾತ್ರಿ ವೇಳೆ ಕಟ್ಟಿರುತ್ತಾನೆ. ಆದರೆ, ಇದನ್ನು ಯಾರೊಬ್ಬರೂ ನೋಡಿರುವುದಿಲ್ಲ. ತನಗೆ ಯಾರು ತಾಳಿ ಕಟ್ಟಿದ್ದಾರೆ ಎಂಬ ವಿಚಾರ ಸ್ವತಃ ಭಾವನಾಳಿಗೆ ಗೊತ್ತಿರದೇ ಪರದಾಡುತ್ತಿದ್ದಾಳೆ. ಆದರೆ, ಅಂದು ರಾತ್ರಿ ವೇಳೆ ದೇವಸ್ಥಾನದ ಮಂದಿರದೊಳಗೆ ಮಲಗಿದ್ದ ಭಾವನಾಗೆ ತಾಳಿ ಕಟ್ಟಿ ವಾಪಸ್ ಹೋಗುವಾಗ ಅದೇ ಸಾಲಿನಲ್ಲಿ ಮಲಗಿದ್ದ ಕಣ್ಣಿಲ್ಲದ ಬೆಟ್ಟಮ್ಮ ಸಿದ್ದೇಗೌಡ್ರ ಕೈ ಹಿಡಿದುಕೊಂಡಿರುತ್ತಾಳೆ. ಆಗ ಕೈ ಕೊಸರಿಕೊಂಡು ಸಿದ್ದೇಗೌಡ್ರು ಅಲ್ಲಿಂದ ಹೋಗಿರುತ್ತಾರೆ.

ಈಗ ಬೆಟ್ಟಮ್ಮ ದೇವಸ್ಥಾನದಿಂದ ಮೆಟ್ಟಿಲು ಇಳಿದು ಬರುವಾಗ ಕುಸಿದು ಬೀಳುತ್ತಾಳೆ. ಆಗ, ದೇವಸ್ಥಾನದಿಂದ ಬರುತ್ತಿದ್ದ ಸಿದ್ದೇಗೌಡ್ರು ಹೋಗಿ ಬೆಟ್ಟಮ್ಮಳ ಕೈ ಹಿಡಿದುಕೊಂಡು ಕೂರಿಸುತ್ತಾನೆ. ಆಗ ನನ್ನ ಸಹಾಯಕ್ಕೆ ಯಾರು ಬಂದಿದ್ದಾರೆ ಎಂದು ತಿಳಿಸುಕೊಳ್ಳಲು ಸಿದ್ದೇಗೌಡ್ರ ಕೂ ಹಿಡಿದುಕೊಳ್ಳುತ್ತಾಳೆ. ಆಗ ಈ ಕೈ ದೇವಸ್ಥಾನಕ್ಕೆ ಹೋದಾಗ ರಾತ್ರಿ ವೇಳೆ ಬಂದವನ ಕೈ ಎಂಬುದು ತಿಳಿಯುತ್ತದೆ. ನೀರು ಕುಡಿದು ಸಾವರಿಸಿಕೊಂಡು ಮೆಟ್ಟಿಲ ಮೇಲೆ ಕುಳಿತುಕೊಳ್ಳುತ್ತಾಳೆ. ಕೆಲವು ಕ್ಷಣಗಳಲ್ಲಿ ಅಲ್ಲಿಗೆ ವೆಂಕಿ ಬರುತ್ತಾನೆ. ಕೂಡಲೇ ನನ್ನ ಬಳಿಯಿಂದ ಹೋದ ವ್ಯಕ್ತಿ ಯಾರು ಹೋಗಿ ನೋಡಿಕೊಂಡು ಬಾ ಎಂದು ಹೇಳಿ ಕಳಿಸುತ್ತಾಳೆ. 

ಲಕ್ಷ್ಮೀ ನಿವಾಸದ ಹಿರಿಯಜ್ಜಿ ಲಕ್ಷ್ಮೀ ದೇವಿಯವರ ಮೊಮ್ಮಗಳೂ ನಟಿಯೇ?

ಕೂಡಲೇ ದೇವಸ್ಥಾನದ ಮೆಟ್ಟಿಲುಗಳನ್ನು ಇಳಿದು ಹೋದ ವೆಂಕಿ ಕೈಗೆ ಸಿದ್ದೇಗೌಡ್ರು ಅಲ್ಲಿಗೆ ಹೋಗಿ ಬಂದಿದ್ದರು ಎಂದು ತಿಳಿದುಕೊಳ್ಳುತ್ತಾನೆ. ಆದರೆ, ಸಿದ್ದೇಗೌಡ್ರೇ ಭಾವನಾಗೆ ತಾಳಿ ಕಟ್ಟಿದ್ದು ಎಂದು ತಿಳಿಯುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ, ಬೆಟ್ಟಮ್ಮನಿಗೆ ಸಹಾಯ ಮಾಡಿದ್ದು ಸಿದ್ದೇಗೌಡ್ರು ಎಂಬುದನ್ನು ಹೇಗೆ ಹೇಳುತ್ತಾನೆ ಎಂಬುದು ಸವಾಲಿನ ವಿಷಯವಾಗಿದೆ. ಒಂದು ವೇಳೆ ಸಿದ್ದೇಗೌಡ್ರು ಭಾವನಾಗೆ ತಾಳಿ ಕಟ್ಟಿದ್ದಾರೆ ಎಂದು ತಿಳಿದರೂ, ಅದನ್ನು ಮನೆಯವರ ಮುಂದೆ ಹೇಗೆ ಹೇಳುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

click me!