ಲಕ್ಷ್ಮೀ ಅಮ್ಮನ ಕೈತುತ್ತಿನ ಬೆಳದಿಂಗಳೂಟಕ್ಕೆ ಭಾವುಕವಾಯ್ತು ಝೀ ಕನ್ನಡ ಕುಟುಂಬ!

By Pavna Das  |  First Published Dec 26, 2024, 1:31 PM IST

ಝೀ ಎಂಟರ್ಟೇನರ್ಸ್ ಹೊಸ ವರ್ಷದ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದು, ಇದೀಗ ವೇದಿಕೆ ಮೇಲೆ ಲಕ್ಷ್ಮೀ ನಿವಾಸ ಶ್ವೇತಾ ಝೀ ಕುಟುಂಬ ಸದಸ್ಯರಿಗೆ ಕೈತುತ್ತು ನೀಡಿದ್ದಾರೆ. 
 


ಕೈ ತುತ್ತು ಎಂದಾಕ್ಷಣ ನೆನಪಾಗೋದು ಹಂಸಲೇಖ ಮತ್ತು ಪ್ರಭಾಕರ್ (Tiger Prabhakar) ಅವರ ಜೋಡಿ ನೀಡಿದ ಅದ್ಭುತ ಹಾಡಾದ ‘ಕೈ ತುತ್ತು ಕೊಟ್ಟೋಳು ಐ ಲವ್ ಯೂ ಮೈ ಮದರ್ ಇಂಡಿಯಾ’ ಎನ್ನುವ ಹಾಡು. ಆ ಹಾಡಲೇನೋ ಸೆಳೆತ ಇದೆ, ಅಥವಾ ಕೈತುತ್ತಿನ ಪವರ್ ಹಾಗಿದೆಯೋ ಏನೋ ವರ್ಷಗಳು ಕಳೆದರೂ ಸಹ ಆ ಹಾಡು ಇವತ್ತಿಗೂ ಜನಮನದಲ್ಲಿ ಹಾಗೇ ಉಳಿದಿದೆ. ಆದರೆ ನಿಜವಾಗಿಯೂ ಅಮ್ಮನ ಅಥವಾ ಅಜ್ಜಿಯ ಕೈ ತುತ್ತಿನ ರುಚಿಯನ್ನು ಬಲ್ಲವರೇ ಬಲ್ಲರು ಅಲ್ವಾ? ಅಮ್ಮನ ಕೈತುತ್ತು ಅಮೃತಕ್ಕೆ ಸಮ ಅಂತಾರೆ. ಅದು ನಿಜಾ. 

ಅಪ್ಪ-ಮಗಳ ಮಧುರ ಬಾಂಧವ್ಯದ ಪಯಣ ಹಂಚಿಕೊಂಡ ರಾಮ್- ಸಿಹಿ!

Tap to resize

Latest Videos

undefined

ಹಿಂದೆಲ್ಲಾ ಕೈತುತ್ತು ನೀಡುವ ಕ್ರಮ ಹೆಚ್ಚಾಗಿ ನಡೆಯುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಅದು ತುಂಬಾನೆ ಕಡಿಮೆಯಾಗಿದೆ. ಯಾಕಂದ್ರೆ ನಾವೆಲ್ಲಾ ಮೊಬೈಲ್ ಗೆ ಗುಲಾಮರಾಗಿದ್ದೀವಿ.  ಹಾಗಾಗಿ ಅಮ್ಮನ ಕೈಯಲ್ಲೋ ಅಜ್ಜಿಯ ಕೈಯಲ್ಲೋ ಕೈತುತ್ತು ತಿನ್ನೋವಷ್ಟು ಸಮಯ ಇಲ್ಲ. ಹಿಂದಾದರೆ ಬೆಳದಿಂಗಳ ರಾತ್ರಿಯಲ್ಲಿ ಮನೆಯವರೆಲ್ಲಾ ಒಟ್ಟಾಗಿ ಅಂಗಳದಲ್ಲಿ ಕುಳಿತು ಮನೆಯ ಹಿರಿಯ ತಾಯಿ ಅನ್ನ, ಸಾರು, ಪಲ್ಯ ಎಲ್ಲವನ್ನು ಕಲಸಿ, ಕೈತುತ್ತು ನೀಡುತ್ತಿದ್ದರೆ, ಮನೆ ಮದಿಯೆಲ್ಲಾ ಜೊತೆಯಾಗಿ ಹರಟೆ ಹೊಡೆಯುತ್ತಾ ಕಷ್ಟ, ಸುಖವನ್ನು ಹೇಳುತ್ತಾ ಕಳೆಯುತ್ತಿದ್ದ ಕಾಲವಿತ್ತು. ಈಗ ಅದೆಲ್ಲಾ ಬರೀ ನೆನಪು ಅಷ್ಟೇ. ಇದೀಗ ಝೀ ಕನ್ನಡದ ಝೀ ಎಂಟರ್ಟೇನರ್ಸ್ ವೇದಿಕೆ ಬೆಳದಿಂಗಳಲ್ಲಿ ಕೈ ತುತ್ತು ತಿನ್ನುವ ಆ ಮಧುರ ನೆನಪನ್ನು ಮರುಕಳಿಸುವಂತೆ ಮಾಡಿದೆ. 

ಝೀ ಎಂಟರ್ಟೇನರ್ಸ್ (Zee Entertainers) ಹೊಸ ವರ್ಷದ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದು, ಎಲ್ಲಾ ಸೀರಿಯಲ್ ಸದಸ್ಯರು ಈ ಶೋನಲ್ಲಿ ಭಾಗಿಯಾಗಿ ಸಂಭ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಲಕ್ಷ್ಮೀ ನಿವಾಸದ ಅಮ್ಮ ಲಕ್ಷ್ಮೀ ಅಂದ್ರೆ ಶ್ವೇತಾ (Shwetha) ಅವರು ಝೀ ಕುಟುಂಬದವರೆಲ್ಲರಿಗೂ ಅನ್ನವನ್ನು ಕಲಸಿ ಕೈತುತ್ತು ನೀಡಿದ್ದಾರೆ. ಹಿರಿಯ ನಟಿಯ ಕೈಯಿಂದ ಕೈತುತ್ತು ತಿಂದ ಝೀ ಕುಟುಂಬದ ಸದಸ್ಯರೆಲ್ಲರೂ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. 

ಸೈಕೋ ಜಯಂತ್ ಆಗಿ ಬದಲಾದ‌ ಚಿನ್ನುಮರಿ…ಮುದ್ದುಮರಿ ಮೇಲೆ ರಿವೇಂಜ್ ತೀರಿಸಿಕೊಂಡಿದ್ದು ಹೇಗೆ ನೋಡಿ…

ಶ್ವೇತಾ ಕುಟುಂಬದವರೆಲ್ಲರಿಗೂ ಕೈತುತ್ತು ನೀಡುತ್ತಾ, ತಾವು ಕಣ್ಣೀರು ಹಾಕಿ, ನನ್ನ ಕೈಯಿಂದ ನೀವೆಲ್ಲಾ ಊಟ ಮಾಡ್ತಿದ್ದೀರಿ, ನೀವೆಲ್ಲಾ ಚೆನ್ನಾಗಿರಬೇಕು ಎಂದು ಹೇಳಿದ್ದಾರೆ. ಲಕ್ಷ್ಮೀ ನಿವಾಸ (Lakshmi Nivasa) ನಟಿ ಭಾವನಾ ಅಂದ್ರೆ ದಿಶಾ ಮದನ್ ಹಾಗೂ ಬ್ರಹ್ಮಗಂಟು ನಟಿ ಸಂಜನಾ ಅಂದ್ರೆ ಆರತಿ ಪಡುಬಿದ್ರಿ ಕಂಬನಿ ಮಿಡಿದರೆ, ಅಮೃತಧಾರೆ ನಟಿ ಅಪೇಕ್ಷಾ ಅಂದ್ರೆ ಅಮೃತಾ ನಾಯ್ಕ್ (Amritha Naik)ಮನೆಯಲ್ಲಿ ಒಬ್ಬಳೇ ಇರ್ತೀನಿ, ಊಟ ಆಯ್ತ ಅಂತ ಕೇಳೋರು ಯಾರು ಇರಲ್ಲ, ಅಮ್ಮನ್ನ ತುಂಬಾ ಮಿಸ್ ಮಾಡಿಕೊಳ್ತೀನಿ ಎನ್ನುತ್ತಾ ಕಣ್ಣೀರಿಟ್ಟಿದ್ದಾರೆ. 

ಈ ಭಾವುಕ ಕ್ಷಣಗಳನ್ನು ನೋಡಿ ವೀಕ್ಷಕರೂ ಸಹ ಭಾವುಕರಾಗಿದ್ದು, ತಾಯಿಯ ಕೈ ತುತ್ತು ತಿನ್ನೋಕೆ ಅದೃಷ್ಟ ಇರ್ಬೇಕು ,ಅಮ್ಮಾ!! ಪದಗಳಲ್ಲಿ ವರ್ಣಿಸಲಾಗದ ಬಂಧ,  ತಾಯಿಯು ನೀಡೋ ಕೈತುತ್ತು ಅಮೃತಕ್ಕೆ ಸಮ, ತಾಯಿಯ ಮಡಿಲು ಸ್ವರ್ಗಕ್ಕಿಂತಲು ಮಿಗಿಲು, ಈ ನೋವು ಅಮ್ಮ ಇಲ್ಲದವರಿಗೆ ಮಾತ್ರ ಗೊತ್ತಾಗುತ್ತೆ ಎಂದು ಕಾಮೆಂಟ್ ಮೂಲಕ ಕೈತುತ್ತಿನ ಮಹತ್ವ ತಿಳಿಸಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!