ಮಗುವಿನಂತೆ ನಾಟಕ ಆಡ್ತಿದ್ದಾಳಾ ಕೀರ್ತಿ? ಫ್ಯಾನ್ಸ್ ಮಧ್ಯೆ ಶುರುವಾಗಿದೆ ತಿಕ್ಕಾಟ

Published : Dec 26, 2024, 11:38 AM ISTUpdated : Dec 26, 2024, 11:43 AM IST
ಮಗುವಿನಂತೆ ನಾಟಕ ಆಡ್ತಿದ್ದಾಳಾ ಕೀರ್ತಿ? ಫ್ಯಾನ್ಸ್ ಮಧ್ಯೆ ಶುರುವಾಗಿದೆ ತಿಕ್ಕಾಟ

ಸಾರಾಂಶ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ನಾಟಕವಾಡುತ್ತಾ ಲಕ್ಷ್ಮಿಗೆ ಮಣ್ಣು ಮುಕ್ಕಿಸುತ್ತಿದ್ದಾಳೆ. ವೈಷ್ಣವ್ ಮತ್ತು ಅವನ ಅತ್ತೆಗೆ ಅನುಮಾನ ಶುರುವಾಗಿದೆ. ಕೀರ್ತಿಯ ಈ ನಡೆ ವೀಕ್ಷಕರಿಗೆ ಇಷ್ಟವಾಗಿಲ್ಲ. ಆದ್ರೆ ಮಹಾಲಕ್ಷ್ಮಿಯನ್ನು ಒಳ್ಳೆಯವಳನ್ನಾಗಿ ಮಾಡಲು ಕೀರ್ತಿ ವಿಲನ್‌ ಮಾಡ್ತಿರೋದೂ ವೀಕ್ಷಕರಿಗೆ ಪ್ರಿಯವಾಗಿಲ್ಲ. ಕೀರ್ತಿ ಮತ್ತು ಮಹಾಲಕ್ಷ್ಮಿ ಫ್ಯಾನ್ಸ್‌ ಮಧ್ಯೆ ಇದೇ ವಿಷ್ಯಕ್ಕೆ ತಿಕ್ಕಾಟ ನಡೆಯುತ್ತಿದೆ.  ಸೀರಿಯಲ್‌ನಲ್ಲಿ ಮುಂದೇನಾಗುತ್ತೆ ಎಂಬ ಕುತೂಹಲ ವೀಕ್ಷಕರನ್ನು ಕಾಡುತ್ತಿದೆ. 

ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್ (Colors Kannada Lakshmi Baramma Serial) ಗೆ ಮತ್ತೊಂದು ಟ್ವಿಸ್ಟ್ ಸಿಗ್ತಿದೆ. ಇಷ್ಟು ದಿನ ಕೀರ್ತಿ ಎಲ್ಲವನ್ನೂ ಮರೆತಿದ್ದಾಳೆ, ಮಕ್ಕಳಂತೆ ಆಟವಾಡ್ತಿದ್ದಾಳೆ ಅಂತ ವೀಕ್ಷಕರು ಅಂದ್ಕೊಂಡಿದ್ದರು. ಆದ್ರೀಗ ಕೀರ್ತಿ ಬಣ್ಣ ನಿಧಾನವಾಗಿ ಬದಲಾದಂತಿದೆ. ಕೀರ್ತಿ ತನಗೇನೂ ನೆನಪಿಲ್ಲ ಎನ್ನುತ್ತಲೇ ಲಕ್ಷ್ಮಿಗೆ ಮಣ್ಣು ಮುಕ್ಕಿಸುವ ಕೆಲಸ ಮಾಡ್ತಿದ್ದಾಳೆ. ವೈಷ್ಣವ್ ಗೆ ಈಗಾಗಲೇ ಅನುಮಾನ ಬಂದಿದೆ. ಇನ್ನು ವೈಷ್ಣವ್ ಅತ್ತೆ ಕೂಡ, ಕೀರ್ತಿ ನಾಟಕವಾಡ್ತಿದ್ದಾಳೆ ಎಂಬ ಎಚ್ಚರಿಕೆಯನ್ನು ಮಹಾಲಕ್ಷ್ಮಿಗೆ ನೀಡಿದ್ದಾರೆ. ಕೀರ್ತಿಯನ್ನು ಈ ರೀತಿ ಬದಲಿಸಿದ್ದು ವೀಕ್ಷಕರಿಗೆ ಇಷ್ಟವಾಗಿಲ್ಲ. ಕೀರ್ತಿಯನ್ನೇ ಯಾವಾಗ್ಲೂ ತಪ್ಪು ಸ್ಥಾನದಲ್ಲಿ ಏಕೆ ನಿಲ್ಲಿಸ್ತೀರಾ ಎನ್ನುವ ಪ್ರಶ್ನೆಯನ್ನು ವೀಕ್ಷಕರು ಮಾಡಿದ್ದಾರೆ.

ಕಲರ್ಸ್ ಕನ್ನಡ ಇನ್ಸ್ಟಾ ಖಾತೆ (Insta Account)ಯಲ್ಲಿ ಇಂದಿನ ಪ್ರೋಮೋ ಪೋಸ್ಟ್ ಮಾಡಿದೆ. ಅದ್ರಲ್ಲಿ ಕೀರ್ತಿ, ವೈಷ್ಣವ್ ಹಿಂದೆ ಬಿದ್ದಿದ್ದಾಳೆ.   ಕಾರಿನಲ್ಲಿ ಅಡಗಿಕೊಂಡು ಬರುವ ಕೀರ್ತಿ, ವೈಷ್ಣವ್ ಫಾಲೋ ಮಾಡ್ತಾಳೆ. ಇತ್ತ, ವೈಷ್ಣವ್ ಅತ್ತೆ ಸುಪ್ರೀತಾ, ಕೀರ್ತಿ ಮಗುವಿನಿಂತೆ ನಾಟಕವಾಡ್ತಿದ್ದಾಳೆ, ಅವಳಿಗೆ ಎಲ್ಲ ನೆನಪಿದೆ ಎಂದು ಮಹಾಲಕ್ಷ್ಮಿ ಮುಂದೆ ಹೇಳ್ತಿದ್ದಾಳೆ.  

ತಿಂಗಳಿಗೆ ಒಂದೆರಡು ಸಲ ಕೋರ್ಟ್‌ಗೆ ಹೋಗ್ತೀನಿ ,ನಿಜ ಸಾಕಾಗಿದೆ: ಕೇಸ್‌ ಸತ್ಯ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ

ವೈಷ್ಣವ್ ಹಾಗೂ ಲಕ್ಷ್ಮಿ ಖುಷಿಯಾಗಿರಬೇಕು ಎಂಬುದು ಸುಪ್ರೀತಾ ಬಯಕೆ. ಆದ್ರೆ ಕೀರ್ತಿ ಮತ್ತೆ ತಲೆನೋವಾಗಿದ್ದಾಳೆ. ವೈಷ್ಣವ್, ಮಹಾಲಕ್ಷ್ಮಿಯನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದ. ಸರ್ಪ್ರೈಸ್ ಇದೆ ಬಾ ಎಂದು ಮಹಾಲಕ್ಷ್ಮಿ ಕರೆದಿದ್ದ. ಆದ್ರೆ ಕೀರ್ತಿ ನನ್ನನ್ನು ಮಲಗಿಸು, ಹಾಡು ಹೇಳು ಅಂತ ಗಲಾಟೆ ಮಾಡಿ, ಲಕ್ಷ್ಮಿಯನ್ನು ವೈಷ್ಣವ್ ಜೊತೆ ಹೋಗಲು ಬಿಟ್ಟಿಲ್ಲ. ಇದ್ರಿಂದ ಕೀರ್ತಿ ಮೇಲೆ ಸುಪ್ರೀತಾಳಿಗೆ ಮತ್ತಷ್ಟು ಅನುಮಾನ ಶುರುವಾಗಿದೆ. 

ಕಲರ್ಸ್ ಕನ್ನಡ ಪ್ರೋಮೋ ನೋಡಿದ ಫ್ಯಾನ್ಸ್ (Fans) ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಕೀರ್ತಿ ಪರ ಬ್ಯಾಟ್ ಬೀಸಿದ್ದಾರೆ. ಮಹಾಲಕ್ಷ್ಮಿಯನ್ನು ಒಳ್ಳೆಯವಳಾಗಿ ಮಾಡಲು ನೀವು ಕೀರ್ತಿಯನ್ನು ವಿಲನ್ ಮಾಡ್ತಿದ್ದೀರಿ. ಆರಂಭದಿಂದಲೂ ಅನ್ಯಾಯವಾಗಿದ್ದು ಕೀರ್ತಿಗೆ. ವೈಷ್ಣವ್ ಮನೆಯಲ್ಲೇ ಶತ್ರುಗಳಿದ್ದಾರೆ. ಆದ್ರೂ ಕೀರ್ತಿ ಮೇಲೆ ಆರೋಪ ಹೊರಿಸಲಾಗ್ತಿದೆ, ವೈಷ್ಣವ್ ಪಡೆಯಲು ಕೀರ್ತಿ ಇದನ್ನು ಮಾಡಿದ್ರೆ ತಪ್ಪೇನಿದೆ ಎಂದು ಕೆಲವರು ಕೀರ್ತಿ ಪರ ಮಾತನಾಡಿದ್ದಾರೆ. ಮತ್ತೆ ಕೆಲವರು ಮಹಾಲಕ್ಷ್ಮಿಗೆ ಬೆಂಬಲ ಸೂಚಿಸಿದ್ದಾರೆ. ಕೀರ್ತಿ ನಾಟಕವಾಡ್ತಿದ್ದಾಳೆ, ಎಚ್ಚರದಿಂದ ಇರು ಎಂದಿದ್ದಾರೆ. ಮಹಾಲಕ್ಷ್ಮಿ, ಕೀರ್ತಿಗೆ ಸಹಾಯ ಮಾಡಿದ್ದಾಳೆ. ಈಗ ಕೀರ್ತಿ ತಿರುಗಿ ಬೀಳೋದು ಒಳ್ಳೆಯದಲ್ಲ. ಬೆನ್ನ ಹಿಂದೆ ಚಾಕು ಹಾಕಬಾರದು. ಮಹಾಲಕ್ಷ್ಮಿ ಮೋಸ ಹೋಗ್ತಿದ್ದಾಳೆ, ಕಾವೇರಿ ನಂತ್ರ ಕೀರ್ತಿಯಿಂದ ವೈಷ್ಣವ್ ಮತ್ತು ಮಹಾಲಕ್ಷ್ಮಿ ಒಂದಾಗೋದು ತಪ್ಪಿದೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. 

ಗರಿಷ್ಠ ಸುರಕ್ಷತೆ, ದೇಶದ ಹೆಮ್ಮೆಯ ಟಾಟಾ ಕಾರು ಖರೀದಿಸಿದ ಬಿಗ್ ಬಾಸ್ ಖ್ಯಾ

ಇತ್ತ ಕಾವೇರಿ ಜೈಲಿನಲ್ಲಿದ್ರೂ ಸುಮ್ಮನಿಲ್ಲ. ಜೈಲಿನಿಂದಲೇ ಆಕೆ ಪ್ಲಾನ್ ಶುರು ಮಾಡಿದ್ದಾಳೆ. ಮನೆಯಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ತಿಳಿಯುವ ಪ್ರಯತ್ನ ಹಾಗೂ ನೆಮ್ಮದಿ ಕೆಡಿಸುವ ಪ್ರಯತ್ನ ನಿರಂತರವಾಗಿದೆ. ಕೀರ್ತಿ ಹಾಗೂ ಮಹಾಲಕ್ಷ್ಮಿಯಿಂದ ಕಾವೇರಿ ಜೈಲು ಸೇರುವಂತಾಗಿದೆ. ಇಷ್ಟಾದ್ರೂ ಕಾವೇರಿಗೆ ಬುದ್ದಿ ಬಂದಿಲ್ಲ. ಒಂದ್ಕಡೆ ಕಾವೇರಿ ಇನ್ನೊಂದು ಕಡೆ ಕೀರ್ತಿ. ಇಬ್ಬರನ್ನೂ ಮಹಾಲಕ್ಷ್ಮಿ ಹೇಗೆ ಎದುರಿಸ್ತಾಳೆ ಎಂಬುದು ಮುಂದಿರುವ ಪ್ರಶ್ನೆ. ಕೀರ್ತಿ ಬಣ್ಣ ಬಯಲಾಗುತ್ತಾ? ಮನೆಯವರು ಹೇಳಿದ ಮಾತನ್ನು ಕೇಳುವ ಮಹಾಲಕ್ಷ್ಮಿ, ಕೀರ್ತಿ ಸತ್ಯವನ್ನು ಹೊರಗೆ ಹಾಕ್ತಾಳಾ ಇಲ್ಲ ಕೀರ್ತಿಯೇ ಗೆಲುವು ಸಾಧಿಸ್ತಾಳಾ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡ್ಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್