
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ( Lakshmi Nivasa Serial ) ಜಾಹ್ನವಿಯನ್ನು ಕಳೆದುಕೊಂಡಿರೋ ಜಯಂತ್‌ಗೆ ಇನ್ನೂ ಬುದ್ಧಿ ಬಂದಿಲ್ಲ. ತಾನು ಸ್ವತಂತ್ರ ಕೊಡದೆ ಕಟ್ಟಿ ಹಾಕಿದ್ದರಿಂದಲೇ ಜಾಹ್ನವಿ ಪ್ರಾಣ ಕಳೆದುಕೊಂಡಳು, ಅವಳು ಸಾಯೋಕೆ ತಾನೇ ಕಾರಣ ಅಂತ ಗೊತ್ತಿದ್ರೂ ಜಯಂತ್ ಮಾತ್ರ ಸುಮ್ಮನೆ ಇರುತ್ತಿಲ್ಲ. ಈಗ ಅವನು ಜಾನು ಫ್ರೆಂಡ್ ಗೂಬೆಯನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾನೆ.
ಜಾಹ್ನವಿ ಅವಳ ಫ್ರೆಂಡ್ ಜೊತೆ ಕ್ಲೋಸ್ ಇದ್ದರೂ ಆಗೋದಿಲ್ಲ, ಅವಳು ತಂದೆ-ತಾಯಿ ಜೊತೆ ಒಂದಿನ ಟೈಮ್ ಕಳೆದರೂ ಅವನಿಗೆ ಸಹಿಸೋಕೆ ಆಗೋದಿಲ್ಲ, ಇನ್ನು ವಿಶ್ವನಿಗೆ ಗೂಬೆ ಅಂತ ಕರೆದಿರೋದು ಈಗ ಜಯಂತ್‌ಗೆ ಗೊತ್ತಾಗಿದೆ. ಕೆಲವು ದಿನಗಳಿಂದ ಜಾಹ್ನವಿ ಯಾರನ್ನು ಗೂಬೆ ಅಂತ ಕರೆದಳು ಎನ್ನೋದರ ಹುಡುಕಾಟದಲ್ಲಿದ್ದನು, ಈಗ ಅವನಿಗೆ ಉತ್ತರ ಸಿಕ್ಕಿದೆ. ವಿಶ್ವನ ಮನೆಯಲ್ಲಿ ಜಾಹ್ನವಿ ಇರುವ ವಿಷ್ಯ ಗೊತ್ತಾದ್ರೆ ಇನ್ನೊಂದು ಮಹಾ ಯುದ್ಧ ಆಗುವುದು. ಜಾಹ್ನವಿ ಕಾಲೇಜಿನಲ್ಲಿದ್ದಾಗ ಅವಳ ಸ್ನೇಹಿತನಾಗಿದ್ದ ವಿಶ್ವನ ಜೊತೆ ಕ್ಲೋಸ್ ಆಗಿದ್ದಳು ಎನ್ನೋದು ಈಗ ಗೊತ್ತಾಗಿದೆ. ಈಗ ಅವನು ವಿಶ್ವನನ್ನು ಸುಮ್ಮನೆ ಬಿಡೋದಿಲ್ಲ.
ಜಾನುಳನ್ನು ಜಯಂತ್ ತುಂಬ ಪ್ರೀತಿ ಮಾಡ್ತಾನೆ, ಅವಳಿಲ್ಲ ಅಂತ ಬೇಸರದಲ್ಲಿದ್ದಾನೆ ಅಂತ ವಿಶ್ವ ಅಂದುಕೊಂಡಿದ್ದಾನೆ. ಆದರೆ ಜಯಂತ್ ಅತಿಯಾದ ಪ್ರೀತಿ, ಕಾಳಜಿ, ಪೊಸೆಸ್ಸಿವ್‌ನೆಸ್ ಏನು ಎನ್ನೋದು ಇನ್ನೂ ವಿಶ್ವನ ಅರಿವಿಗೆ ಬಂದಿಲ್ಲ. ಈಗ ವಿಶ್ವನನ್ನು ಕಾಪಾಡೋರು ಯಾರು? ವಿಶ್ವನನ್ನು ಕಾಪಾಡಲು ಹೋಗಿ ಜಾನು, ಜಯಂತ್‌ನ ಕಣ್ಣಿಗೆ ಬೀಳ್ತಾಳಾ? ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿದೆ.
ಲಕ್ಷ್ಮೀ ಹಾಗೂ ಶ್ರೀನಿವಾಸ್ ಮಗಳು ಜಾಹ್ನವಿಗೆ ಜಯಂತ್ ಎನ್ನುವವನ ಜೊತೆ ಮದುವೆ ಆಗುವುದು. ಜಯಂತ್ ಅನಾಥ. ಎಲ್ಲರನ್ನು ಕಳೆದುಕೊಂಡು, ಅನಾಥಾಶ್ರಮದಲ್ಲಿ ಬದುಕಿರೋ ಅವನಿಗೆ ಜಾಹ್ನವಿಯನ್ನು ಕಳೆದುಕೊಳ್ಳುವೆ ಎನ್ನುವ ಭಯ. ಅತಿಯಾದ ಕಾಳಜಿ, ಪ್ರೀತಿ, ಪೊಸೆಸ್ಸಿವ್‌ನೆಸ್, ಅನುಮಾನದಿಂದ ಅವಳನ್ನು ನೋಡಿ ಕಟ್ಟಿಹಾಕಿದ್ದನು. ಆರಂಭದಲ್ಲಿ ತನ್ನ ಗಂಡ ಅತಿಯಾಗಿ ಪ್ರೀತಿ ಮಾಡುತ್ತಾನೆ ಎಂದು ನಂಬಿಕೊಂಡಿದ್ದ ಅವಳಿಗೆ ಆಮೇಲೆ ಇದು ಪ್ರೀತಿಯಲ್ಲ, ತನಗೋಸ್ಕರ ಯಾರನ್ನು ಬೇಕಿದ್ರೂ ಸಾಯಿಸುವ ಸ್ವಾರ್ಥ ಎನ್ನೋದು ಅರ್ಥ ಆಗಿತ್ತು. ಹೀಗಾಗಿ ಅವಳು ಶ್ರೀಲಂಕಾ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದಳು. ಆದರೆ ಅವಳು ಸಾಯದೆ ಬದುಕಿದಳು. ಈಗ ವಿಶ್ವನ ಮನೆಯಲ್ಲಿ ತನ್ನ ಮನೆಯವರಿಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಬದುಕುತ್ತಿದ್ದಾಳೆ.
ಪಾತ್ರಧಾರಿಗಳು
ಜಯಂತ್- ದೀಪಕ್ ಸುಬ್ರಹ್ಮಣ್ಯ
ಜಾಹ್ನವಿ- ಚಂದನಾ ಅನಂತಕೃಷ್ಣ
ವಿಶ್ವ- ಭವಿಷ್ ಗೌಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.