ಸೀರಿಯಲ್‌ ಮಾಡೋಕೆ ಅಮ್ಮ ಒಪ್ಪಿಗೆ ಕೊಡ್ಲಿ ಅಂತ ಇ-ಮೇಲ್ ಬರೆದ 'ಲಕ್ಷ್ಮಿನಿವಾಸ' ಚಂದನಾ; ಅಮ್ಮನಿಂದ ಬಿತ್ತು ಒದೆ!

Published : Mar 10, 2025, 03:26 PM ISTUpdated : Mar 10, 2025, 03:56 PM IST
ಸೀರಿಯಲ್‌ ಮಾಡೋಕೆ ಅಮ್ಮ ಒಪ್ಪಿಗೆ ಕೊಡ್ಲಿ ಅಂತ ಇ-ಮೇಲ್ ಬರೆದ 'ಲಕ್ಷ್ಮಿನಿವಾಸ' ಚಂದನಾ; ಅಮ್ಮನಿಂದ ಬಿತ್ತು ಒದೆ!

ಸಾರಾಂಶ

ಚಂದನಾ ಅವರು 'ರಾಜಾ ರಾಣಿ' ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದರು. ತಾಯಿಯ ವಿರೋಧದ ನಡುವೆಯೂ ನಟನೆಯನ್ನು ಮುಂದುವರೆಸಿದರು. ನಂತರ ಬಿಗ್ ಬಾಸ್‌ನಲ್ಲಿ ಭಾಗವಹಿಸಿ, 'ಲಕ್ಷ್ಮಿ ನಿವಾಸ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ತೆಲುಗು ಸೀರಿಯಲ್ ಮತ್ತು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಜೊತೆ ಮದುವೆ ಗಾಸಿಪ್ ಹಬ್ಬಿತ್ತು, ಆದರೆ ಪ್ರತ್ಯಕ್ಷ್ ಅವರನ್ನು ವಿವಾಹವಾದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಜನರಿಗೆ ಸಖತ್ ಇಷ್ಟ ಆಗಿರುವುದು ಜಯಂತ್ ಮತ್ತು ಚಿನ್ನುಮರಿ ಜೋಡಿ. ಇಬ್ಬರ ಜಗಳ, ಪ್ರೀತಿ ಮತ್ತು ಮೋಸ ನೋಡಿ ಜನರು ಮರುಳಾಗುತ್ತಿದ್ದಾರೆ. ಲಕ್ಷ್ಮಿ ನಿವಾಸ ಜಾನು ಎಂದು ಜನಪ್ರಿಯತೆ ಪಡೆಯುವುದಕ್ಕೂ ಮುನ್ನ ರಾಜಾ ರಾಣಿ ಚಂದನಾ ಎಂದು ಹೆಸರು ಮಾಡಿದ್ದರು. ಅದಾದ ಮೇಲೆ ಬಂದಿದ್ದು ಬಿಗ್ ಬಾಸ್ ಆಫರ್. ಸಖತ್ ಸ್ಮೂತ್ ಆಗಿ ಜರ್ನಿ ಸಾಗಿಸಿಕೊಂಡು ಬರುತ್ತಿರುವ ಚಂದನಾ ಆರಂಭದಲ್ಲಿ ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾ? ಮನೆಯಲ್ಲಿ ಅಮ್ಮನ ಒಪ್ಪಿಗೆ ಪಡೆಯಲು ಮಾಡಿದ ಮಾಸ್ಟರ್ ಪ್ಲ್ಯಾನ್ ಹಂಚಿಕೊಂಡಿದ್ದಾರೆ.

'ರಾಜಾ ರಾಣಿ ಸೀರಿಯ್‌ಗೆ ಆಡಿಷನ್‌ ಕೊಟ್ಟು ಅಮ್ಮನಿಗೆ ಹೇಳದೆ ಸೀರಿಯಲ್‌ ಒಪ್ಪಿಕೊಂಡು ಬಿಟ್ಟಿದ್ದೀನಿ. ವಾಟ್ಸಪ್ ಮೆಸೇಜ್ ಮಾಡಿದರೆ ತಕ್ಷಣ ನೋಡುತ್ತಾರೆ ಎಂದು ಹೆದರಿಕಂಡು ಮೇಲ್ ಮಾಡಿದ್ದೆ. ಅಮ್ಮ ಪ್ಲೀಸ್ ಇದು ಒಂದು ಒಪ್ಪಿಕೋ ಬೇರೆ ಯಾವುದೂ ಮಾಡುವುದಿಲ್ಲ ನಾನು ಚೆನ್ನಾಗಿ ಓದಿಕೊಳ್ಳುತ್ತೀನಿ. ಶೂಟಿಂಗ್‌ ಸೆಟ್‌ಗೆ ಹೋಗಿ ಹೋಮ್‌ವರ್ಕ್‌ ಮಾಡಿಕೊಳ್ಳುತ್ತೀನಿ' ಎಂದು ಬರೆದು ಬೇಡಿಕೊಂಡಿದ್ದೆ. ಇ-ಮೇಲ್ ನೋಡಿ ಒಂದು ರಂಪಾಟ ಮಾಡಿದರು ಅಮ್ಮ. ಸೀರಿಯಲ್‌ನಲ್ಲಿ ಬರುವ ಝೋಮ್ ಮತ್ತು ಪ್ಯಾನ್ ಎಲ್ಲಾ ನಮ್ಮ ಮನೆಯಲ್ಲಿ ಆಯ್ತು. ಅಮ್ಮ ಬೈದು ಮಂಗಳಾರತಿ ಮಾಡಿದರು. ಆಮೇಲೆ ಪ್ರೊಡ್ಯೂಸರ್ ಅಮ್ಮನಿಗೆ ಫೋನ್ ಮಾಡಿ ಮಾತನಾಡಿದರು. ಪ್ರಡ್ಯೂಸರ್ ತುಂಬಾ ಚೆನ್ನಾಗಿ ಮಾತನಾಡಿ ಅಮ್ಮನಿಗೆ ಒಪ್ಪಿಸಿದರು. ನಮ್ಮ ಅಕ್ಕನ ಮದುವೆ ಆದ ಮಾರನೇ ದಿನವೇ ಶೂಟಿಂಗ್‌ನಲ್ಲಿ ಭಾಗಿಯಾದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚಂದನಾ ಮಾತನಾಡಿದ್ದಾರೆ.

ಲಕ್ಷಲಕ್ಷ ಖರ್ಚು ಮಾಡಿ ಪ್ರಾಣಿಗಳನ್ನು ನೋಡಲು ಕಾಡಿಗೆ ಹೋಗುತ್ತೀನಿ, ಯಾವುದೂ ಫ್ರೀ ಅಲ್ಲ: ಅನುಪಮಾ ಗೌಡ

ರಾಜಾ ರಾಣಿ ಸೀರಿಯಲ್‌ ನಂತರ ಬಿಗ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದರು. ಅದಾದ ಮೇಲೆ ಹೂ ಮಳೆ ಧಾರಾವಾಹಿಯಲ್ಲಿ ಲಹರಿಯಾಗಿ ಮಿಂಚಿದ್ದರು. ಸದ್ಯ ಲಕ್ಷ್ಮಿ ನಿವಾಸ ಮಾಡುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ವರುಧಿನಿ ಪರಿಣಯಂ ಸೀರಿಯಲ್ ನಟಿಸಿದ್ದರು. ಹಾಗೂ ಹಾಡು ಕರ್ನಾಟಕ ಹಾಡ ರಿಯಾಲಿಟಿ ಶೋ ನಿರೂಪಣೆ ಮಾಡಿದ್ದಾರೆ. ಅಷ್ಟೇ ಅಲ್ಲ....ಡ್ಯಾನ್ಸಿಂಗ್ ಚ್ಯಾಂಪಿಯನ್ ಶೋನಲ್ಲಿ ಸ್ಪರ್ಧಿಸಿದ್ದಾರೆ. ಈ ಜರ್ನಿಯಲ್ಲಿ ಚಂದನಾ ಮತ್ತು ವಾಸುಕಿ ವೈಭವ್ ಮದುವೆ ಆಗುತ್ತಾರೆ ಎಂದ ಗಾಸಿಪ್ ಇತ್ತು ಆದರೆ ವಾಸುಕಿ ಮದುವೆ ಆಗಿದ್ದು ಬೇರೆಯವರನ್ನು, ಚಂದನಾ ಈಗ ಪ್ರತ್ಯಕ್ಷ್‌ ಎಂಬುವವರನ್ನು ಮದುವೆ ಆಗಿದ್ದಾರೆ. 

ಡೇಟಿಂಗ್ ಗೀಟಿಂಗ್ ಇಲ್ಲ ನಾನು ಅಜ್ಜಿ ತರ ಯೋಚನೆ ಮಾಡ್ತೀನಿ, ಸಿಂಗಲ್ ಆಗಿದ್ದೀನಿ: ಚೈತ್ರಾ ಆಚಾರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್: ಮೇಕಪ್ ಮಾಡ್ಕೊಳ್ಳೋ ಗ್ಯಾಪ್‌ನಲ್ಲಿ ಕಾವ್ಯಾಗೆ 'ಲವ್ ಪ್ರಪೋಸ್' ಮಾಡೇಬಿಟ್ಟ ಗಿಲ್ಲಿ ನಟ!
Bigg Boss: ಅಬ್ಬಬ್ಬಾ! ಗಿಲ್ಲಿ ಮೇಲೆ ಅಶ್ವಿನಿಗೆ ಇದೆಂಥ ಲವ್​? ನನ್ನ ಮನಸ್ಸು ಪರಿವರ್ತಿಸಿದ್ದೂ ಇವನೇ ಅಂದ ಧ್ರುವಂತ್​