ಲಕ್ಷಲಕ್ಷ ಖರ್ಚು ಮಾಡಿ ಪ್ರಾಣಿಗಳನ್ನು ನೋಡಲು ಕಾಡಿಗೆ ಹೋಗುತ್ತೀನಿ, ಯಾವುದೂ ಫ್ರೀ ಅಲ್ಲ: ಅನುಪಮಾ ಗೌಡ

Published : Mar 10, 2025, 02:52 PM ISTUpdated : Mar 10, 2025, 02:55 PM IST
ಲಕ್ಷಲಕ್ಷ ಖರ್ಚು ಮಾಡಿ ಪ್ರಾಣಿಗಳನ್ನು ನೋಡಲು ಕಾಡಿಗೆ ಹೋಗುತ್ತೀನಿ, ಯಾವುದೂ ಫ್ರೀ ಅಲ್ಲ: ಅನುಪಮಾ ಗೌಡ

ಸಾರಾಂಶ

ಕಿರುತೆರೆ ನಟಿ ಅನುಪಮಾ ಗೌಡ ಸಫಾರಿ ವೆಚ್ಚದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೊಲಾಬೊರೇಷನ್ ಅಲ್ಲ, ಸ್ವಂತ ಹಣದಿಂದಲೇ ವನ್ಯಜೀವಿ ವೀಕ್ಷಣೆಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಅನುಭವ ಅಮೂಲ್ಯವೆಂದಿದ್ದಾರೆ. ರಕ್ಷಿತಾ ಪ್ರೇಮ್ ಅವರೊಂದಿಗಿನ ಪ್ರಾಣಿ ಪ್ರೀತಿಯ ಸಂಭಾಷಣೆಯನ್ನೂ ಹಂಚಿಕೊಂಡಿದ್ದಾರೆ. ಪ್ರಾಣಿಗಳು ಮನುಷ್ಯರಿಗಿಂತ ಉತ್ತಮವೆಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ನಿರೂಪಕಿ ಅನುಪಮಾ ಗೌಡ ಇತ್ತೀಚಿಗೆ ಕಾಡು ಪ್ರಾಣಿಗಳನ್ನು ನೋಡಲು ಸಫಾರ್ ಹೋಗುತ್ತಿದ್ದಾರೆ. ಲಕ್ಷ ಲಕ್ಷ ಖರ್ಚು ಮಾಡಿಕೊಂಡು ಕಾಡು ಪ್ರಾಣಿಗಳನ್ನು ನೋಡಿ ಸಫಾರಿ ಎಂಜಾಯ್ ಮಾಡುತ್ತಿದ್ದಾರೆ. ಅನುಪಮಾ ದುಡ್ಡು ಖರ್ಚು ಮಾಡಿಕೊಂಡು ಹೋಗುತ್ತಿದ್ದಾರಾ? ಯಾರಾದರೂ ಕೋಲಾಬೋರೇಟ್ ಮಾಡುತ್ತಿದ್ದಾರಾ? ಎದ್ದು ಎಲ್ಲಿಂದ ಬರುತ್ತೆ ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಅನುಪಮಾ ಉತ್ತರಿಸಿದ್ದಾರೆ. 

'ಈಗ ಕೊಲಾಬೋರೇಷನ್‌ ಟ್ರೆಂಡ್ ಆಗಿರುವುದರಿಂದ ನಾನು ಕಾಡಿಗೆ ಹೋಗಿರುವುದು ಕೂಡ ಹಾಗೆ ಅಂದುಕೊಂಡುಬಿಟ್ಟಿದ್ದಾರೆ. ನನ್ನಲ್ಲಿ ಕೆಲವೊಂದು ನಂಬಿಕೆಗಳ ಇದೆ. ನಾನು ಎಲ್ಲವನ್ನು ಕೊಲಾಬೋರೇಟ್ ಮಾಡುವುದಿಲ್ಲ. ಒಂದು ಉಳಿಯುವ ಜಾಗ ತೆಗೆದುಕೊಳ್ಳಿ ಇಲ್ಲ ಅಂದ್ರೆ ಇದನ್ನು ಮಾಡಿ ಎಂದು ಬ್ಯಾಲೆನ್ಸ್ ತೆಗೆದುಕೊಳ್ಳುವುದು. ಆದರೆ ಸಫಾರಿ ವಿಚಾರದಲ್ಲಿ ಹಾಗಲ್ಲ...ಪ್ರಾಣಿಗಳನ್ನು ನೋಡಲು ಲಕ್ಷಗಟ್ಟಲೆ ಖರ್ಚು ಮಾಡಿ ಹೋಗಬೇಕು. ಒಂದು ವರ್ಷದಿಂದ ನಾನು ದುಡ್ಡು ಹಾಕಿಕೊಂಡು ಟ್ರಾವಲ್ ಮಾಡುತ್ತಿರುವುದು. ಒಂದೇ ಅತಿಗೆ ನಾವು ಮೂರ್ನಾಲ್ಕು ಪ್ರಾಣಿಗಳನ್ನು ನೋಡಲು ಆಗುವುದಿಲ್ಲ. ದಿನದಲ್ಲಿ ಎರಡು ಸಲ ಸಫಾರಿಗೆ ಹೋಗಬೇಕು ಕೆಲವೊಮ್ಮೆ ಇಡೀ ದಿನ ಸಫಾರಿ ಹೋಗಿರುತ್ತೀವಿ ಅದಕ್ಕೆಲ್ಲಾ ದುಡ್ಡು ಕೊಟ್ಟಿ ಹೋಗಿರುವುದು'ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಅನುಪಮಾ ಗೌಡ ಮಾತನಾಡಿದ್ದಾರೆ. 

ಡೇಟಿಂಗ್ ಗೀಟಿಂಗ್ ಇಲ್ಲ ನಾನು ಅಜ್ಜಿ ತರ ಯೋಚನೆ ಮಾಡ್ತೀನಿ, ಸಿಂಗಲ್ ಆಗಿದ್ದೀನಿ: ಚೈತ್ರಾ ಆಚಾರ್

ಸರ್ಕಾರದಿಂದ ನಡೆಸುವ ಫಾರೆಸ್ಟ್ ಸಫಾರಿ ಎಂದೂ ಫ್ರೀ ಆಗಿ ಮಾಡುವುದಿಲ್ಲ.  ಕೆಮ್ಮನಗುಂಡಿ ಸಫಾರಿ ಒಂದಕ್ಕೆ ನಮ್ಮನ್ನು ಹೋಸ್ಟ್‌ ಮಾಡಿದರು..ಅದೊಂದಕ್ಕೆ ಫ್ರೀ ಆಗಿ ಹೋಗಿರುವುದು. ವಿದೇಶದಲ್ಲಿ ಮಾಡುವ ಸಫಾರಿಗಳು ಸಿಕ್ಕಾಪಟ್ಟೆ ದುಬಾರಿ. ಟಾಂಜೇನಿಯಾದಲ್ಲಿ ಮೂರು ಲಕ್ಷ ರೂಪಾಯಿ ಖರ್ಚು ಆಗಿತ್ತು. ಒಂದು ಸಲ ಜೀವನದಲ್ಲಿ ಪ್ರಾಣಿಗಳನ್ನು ನೋಡೋಣ ಅನಿಸುತ್ತದೆ. ಪ್ರಾಣಿಗಳನ್ನು ಹತ್ತಿರದಿಂದ ನೋಡಿ ಖುಷಿಯಾಗಿದೆ, ಸಿಂಹದ ಮರಿಗಳನ್ನು ನೋಡಿ ಕಣ್ಣೀರಿಟ್ಟಿದ್ದೀನಿ. ಪ್ರತಿಯೊಂದು ಸಫಾರಿಯಲ್ಲಿ ಪ್ರಕೃತಿ ಏನಾದರೂ ಸ್ಪೆಷಲ್ ತೋರಿಸುತ್ತದೆ. ಇಷ್ಟು ದಿನ ನಾವು ಪ್ರಾಣಿಗಳು ಭೇಟಿಯಾಡುವುದು ನೋಡಬೇಕು ಅನಿಸುತ್ತಿತ್ತು ಆದರೆ ಇಂದು ಹುಲಿ ಜೀಬ್ರಾವನ್ನು ಹಿಡಿಯುವುದು ಎಷ್ಟು ನೋವು ಕೊಡುತ್ತದೆ ಎಂದು ಅಲ್ಲಿಗೆ ಹೋದ ಮೇಲೆ ಗೊತ್ತಾಗಿದ್ದು. ಸಾಯುವುದನ್ನು ನೋಡಿ ಅಳು ಬಂತು. ಆಗ ನಮ್ಮ ತಂದೆ ನೆನಪಾಗಿಬಿಟ್ಟರು. ಇದನ್ನು ನೋಡಿ ಅದೆಷ್ಟೋ ಜನ ಫ್ರೀಯಾಗಿ ಹೋಗುತ್ತಿದ್ದೀನಿ ಅಂದುಕೊಂಡರು. ಮನುಷ್ಯರಿಗಿಂತ ಪ್ರಾಣಿಗಳು ತುಂಬಾ ಬೆಸ್ಟ್‌. ನಾವು ಏನೂ ಜೋರಾಗಿ ಜಗಳ ಮಾಡದೆ ಕಿರಿಕಿರಿ ಮಾಡದೆ ಇದ್ದಾಗ ಪ್ರಾಣಿಗಳು ತುಂಬಾ ಆರಾಮ್ ಆಗಿ ಇರುತ್ತದೆ' ಎಂದು ಅನುಪಮಾ ಗೌಡ ಹೇಳಿದ್ದಾರೆ.

ಈ ಕಾರಣಕ್ಕೆ 16ನೇ ವಯಸ್ಸಿಗೆ ಮನೆ ಬಿಟ್ಟು ಓಡಿ ಹೋದ ಸಂಯುಕ್ತ ಹೆಗ್ಡೆ; ಕಾರಣ ಕೇಳಿ ಬೆಚ್ಚಿಬಿದ್ದ ಕಿರಿಕ್ ಅಭಿಮಾನಿಗಳು!

'ನನ್ನ ಹುಟ್ಟುಹಬ್ಬದ ದಿನ ರಕ್ಷಿತಾ ಮೇಡಂ ಮೆಸೇಜ್ ಮಾಡಿದ್ದರು. ನೀನು ಸಫಾರಿಗೆ ಹೋಗುತ್ತಿರುವುದು ನೋಡಲು ಖುಷಿಯಾಗುತ್ತದೆ. ಒಮ್ಮೆ ಕಾಫಿಗೆ ಭೇಟಿ ಮಾಡೋಣ ಅಲ್ಲಿ ನಿಮ್ಮ ಸಫಾರಿಗಳ ಬಗ್ಗೆ ಮಾತನಾಡು...ನನಗೆ ಲೆಪರ್ಡ್‌ ಅಂದ್ರೆ ತುಂಬಾನೇ ಇಷ್ಟ. ನಿಮ್ಮ ನಂಬರ್ ತೆಗೆದುಕೊಳ್ಳುತ್ತೀನಿ ಎಂದು ಹೇಳಿದಾಗ ಬೇಡ ನಾನೇ ಕೊಡುತ್ತೀನಿ ಎಂದು ಕೊಟ್ಟರು. ಒಮ್ಮೆ ನನ್ನ ಸ್ನೇಹಿತನಿಗೆ ಕರೆ ಮಾಡಿದಾಗ ರಕ್ಷಿತಾ ಮೇಡಂ ಮಾತನಾಡಿಬಿಟ್ಟರು. ಹಲವು ಸಮಯಗಳ ಕಾಲ ಪ್ರಾಣಿಗಳ ಬಗ್ಗೆ ಮಾತನಾಡಿದರು. ಸೂಪರ್ ಸ್ಟಾರ್ ಆಗಿ ಎಷ್ಟು ಸಿಂಪಲ್ ಆಗಿ ನನ್ನೊಟ್ಟಿಗೆ ಮಾತನಾಡಿದ್ದು ಖುಷಿ ಆಯ್ತು' ಎಂದಿದ್ದಾರೆ ಅನುಪಮಾ ಗೌಡ. 

ಯಾಕೆ ಸಪ್ತಮಿ ಅಂತ ಹೆಸರಿಟ್ಟರು? 7ರ ಹಿಂದೆ ಇರುವ ಸೀಕ್ರೆಟ್‌ ರಟ್ಟು ಮಾಡಿದ ಕಾಂತಾರ ಸುಂದರಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?