
ಚಿನ್ನುಮರಿ ಎಂದರೆ ಸಾಕು... ಸೀರಿಯಲ್ ಪ್ರಿಯರ ಕಣ್ಮುಂದೆ ಬರುವುದು ಸೈಕೋ ಜಯಂತ್ ಪತ್ನಿ ಜಾಹ್ನವಿ. ಗಂಡ ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಹುಚ್ಚನಂತೆ ಪ್ರೀತಿಸುತ್ತಾನೆ ಎಂದು ತಿಳಿದುಕೊಂಡಿರೋ ಜಾಹ್ನವಿಗೆ ಈಗ ತಾನೇ ತನ್ನ ಗಂಡನ ನಿಜವಾದ ಮುಖ ಗೊತ್ತಾಗುತ್ತಿದೆ. ತನ್ನನ್ನು ಪ್ರೀತಿಸಲು ಆತ ಯಾವ ಮಟ್ಟಿಗೆ ಇಳಿಯುತ್ತಿದ್ದಾನೆ ಎನ್ನುವ ವಿಷಯ ಈಗಷ್ಟೇ ಈ ಪೆದ್ದು ಪತ್ನಿಗೆ ಗೊತ್ತಾಗುತ್ತಿದೆ. ತಾನು ಊಟ ಕೊಟ್ಟೆ ಎನ್ನುವ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್ ಅನ್ನು ಥಳಿಸಿರುವುದರಿಂದ ಹಿಡಿದು, ತನ್ನ ಪ್ರೀತಿಯ ಮೊಲವನ್ನು ಬಿಟ್ಟು ಬಂದಿದ್ದು ಅಷ್ಟೇ ಅಲ್ಲದೇ ತಮ್ಮ ಸ್ವಂತ ಮನೆಯವರ ಮೇಲೂ ಕಾಳಜಿ ಮಾಡಿದರೆ ಗಂಡನಿಗೆ ವಿಪರೀತ ಕೋಪ ಬರುತ್ತದೆ ಎಂಬೆಲ್ಲಾ ವಿಷಯ ಈಗ ಅರಿವಿಗೆ ಬರುತ್ತಿದೆ. ಸೀರಿಯಲ್ ಟ್ವಿಸ್ಟ್ ಪಡೆದುಕೊಳ್ಳುತ್ತಿರುವ ನಡುವೆಯೇ ನಿಜ ಜೀವನದಲ್ಲಿಯೂ ಹಸೆಮಣೆ ಏರಿದ್ದಾಳೆ ಚಿನ್ನುಮರಿ. ಈ ಚಿನ್ನುಮರಿಯ ರಿಯಲ್ ಹೆಸರು ಚಂದನಾ ಅನಂತಕೃಷ್ಣ. ಈಚೆಗಷ್ಟೇ ಇವರ ಮದುವೆ ನಡೆದಿದೆ. ಉದ್ಯಮಿ ಆಗಿರುವ ಪ್ರತ್ಯಕ್ಷ್ ಅವರ ಜೊತೆ ಚಂದನಾ ಮದುವೆ ನಡೆದಿದ್ದು ಕಿರುತೆರೆ ಕಲಾವಿದರು ಸೇರಿದಂತೆ ಹಲವರು ಮದುವೆಗೆ ಬಂದು ಶುಭ ಹಾರೈಸಿದ್ದಾರೆ.
ಇನ್ನು ಮದುವೆ ನಂತರದ ಕಾರ್ಯಗಳು, ಹನಿಮೂನ್, ಟೂರ್, ಟ್ರಿಪ್ ಅಂತೆಲ್ಲಾ ನಟಿ ಬಿಜಿಯಾಗುವುದು ಮಾಮೂಲು. ಹಾಗಿದ್ರೆ ಸೀರಿಯಲ್ ಕಥೆ ಏನು? ಚಂದನಾ ಅವರ ಜಾಗಕ್ಕೆ ಬೇರೆ ಯಾರಾದ್ರೂ ಬರ್ತಾರಾ ಎಂಬೆಲ್ಲಾ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಇದರ ನಡುವೆಯೇ ಚಂದನಾ ಅವರು, ತಮ್ಮ ಸಹೋದರಿ ಚಿನ್ಮಯಿ ಅನಂತಕೃಷ್ಣ ಅವರನ್ನು ಪರಿಚಯಿಸಿದ್ದಾರೆ. ಇವರಿಬ್ಬರೂ ಒಟ್ಟಿಗೇ ಇರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ದೇವುದೇವ್ ಎನ್ನುವವರು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಕ್ಕ-ತಂಗಿಇಬ್ಬರೂ ಸೇಮ್ ಟು ಸೇಮ್ ಕಾಣುತ್ತಿದ್ದಾರೆ. ಇವರಿಬ್ಬರೂ ಅವಳಿ-ಜವಳಿನಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ನೋಡಲು ಒಂದೇ ತೆರನಾಗಿ ಇರುವ ಕಾರಣ, ಅಕ್ಕ ಹನಿಮೂನ್‌ಗೆ ಹೋದ್ರೆ ಅಕ್ಕನ ಜಾಗದಲ್ಲಿ ತಂಗಿ ಬರುವ ಚಾನ್ಸ್ ಇದೆ ಎನ್ನುವುದು ನೆಟ್ಟಿಗರ ಲೆಕ್ಕಾಚಾರ. ಇಬ್ಬರೂ ನೋಡಲು ಕೂಡ ಒಂದೇ ರೀತಿ ಇರುವುದರಿಂದ ಕನ್‌ಫ್ಯೂಸ್ ಆಗಲ್ಲ, ಚಿನ್ನುಮರಿ ಪಾತ್ರಕ್ಕೆ ತಂಗಿನೂ ಸೂಟ್ ಆಗ್ತಾರೆ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
ದೇವರ ಆಶೀರ್ವಾದ ಪಡೆದು 1.6 ಲಕ್ಷ ಎಗರಿಸಿದ ಖದೀಮ! ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ 'ಭಕ್ತಿ'
ಇನ್ನು ಚಂದನಾ ಅವರು ಮದುವೆಯಾಗಿರುವ ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದು, ಚಿತ್ರನಟ ದಿವಂಗತ ಉದಯ್ ಹುತ್ತಿನಗದ್ದೆ - ನಟಿ ಲಲಿತಾಂಜಲಿ ದಂಪತಿಯ ಮಗನಾಗಿದ್ದಾರೆ. ನಟಿ ಚಂದನಾ ಅವರು ಚಿನ್ನುಮರಿ ಆಗುವ ಮುನ್ನ, ರಾಜಾ ರಾಣಿ ಸೀರಿಯಲ್‌ನಲ್ಲಿ ನಟಿಸಿದ್ದರು. ಆದರೆ ಇವರ ಫೇಮಸ್ ಆಗಿದ್ದು, ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ. ಬಿಗ್ ಬಾಸ್ ಕನ್ನಡ 7 ಹಾಗೂ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಗಳಲ್ಲಿ ಇವರು ಸ್ಪರ್ಧಿಸಿದ್ದರು. ಹೂಮಳೆ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಚಂದನಾ ಅನಂತಕೃಷ್ಣ ಇದೀಗ ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.
ಇನ್ನು ಪ್ರತ್ಯಕ್ಷ್ ಕುರಿತು ಹೇಳುವುದಾದರೆ, ಮೂಲತಃ ಚಿಕ್ಕಮಗಳೂರಿನವರು. ಇವರ ತಂದೆ ಉಯದ್ ಅವರು, ಕೆಲ ವರ್ಷ ಹಲವು ಚಿತ್ರಗಳಲ್ಲಿ ನಟಿಸಿದರು. 1987ರಲ್ಲಿ ತೆರೆ ಕಂಡಿದ್ದ ಆರಂಭ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದವರು. ಅಗ್ನಿಪರ್ವ , ಶುಭ ಮಿಲನ , ಜಯಭೇರಿ , ಉದ್ಭವ , ಅಮೃತ ಬಿಂದು , ಶಿವಯೋಗಿ ಅಕ್ಕಮಹಾದೇವಿ , ಉಂಡು ಹೋದ ಕೊಂಡು ಹೋದ , ಕ್ರಮ ಮುಂತಾದ ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಬಳಿಕ ಅವರು, ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮುಂದುವರೆಸಿದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದಾರೆ. 2022ರಲ್ಲಿ ಅವರು ನಿಧನರಾಗಿದ್ದು, ಪ್ರತ್ಯಕ್ಷ್ ಅವರೂ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಟೋಲ್‌ನಲ್ಲಿ ಲೇಟಾದ್ರೆ ದುಡ್ಡು ಕೊಡ್ಬೇಡಿ- ರೂಲ್ಸ್ ಹೇಳಿದ ಲಾಯರ್ ಜಗದೀಶ್‌ಗೇ ದಂಡ ಹಾಕಿ ಅನ್ನೋದಾ ನೆಟ್ಟಿಗರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.