ಕಾವ್ಯ ಗೌಡ ಗಂಡನ ಮನೆ ನಿಜಕ್ಕೂ ಯಾರಿಗೆ ಸೇರಿದ್ದು? ನೆಟ್ಟಿಗರ ಕೊಂಕು ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನಟಿ!

By Vaishnavi Chandrashekar  |  First Published Dec 9, 2024, 2:12 PM IST

ಕಾವ್ಯ ಗೌಡ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದ ಫಾಲೋವರ್ಸ್. ಕ್ಯೂರಿಯಾಸಿಟಿ ಮೆಚ್ಚಿದ ನಟಿ ಕೊಟ್ಟ ಖಡಕ್ ಉತ್ತರ ವೈರಲ್.....
 


ಗಾಂಧಾರಿ, ರಾಧಾ ರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ತಮ್ಮ ಫ್ಯಾಮಿಲಿ ಮತ್ತು ಬ್ಯುಸಿನೆಸ್‌ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಬಣ್ಣದ ಪ್ರಪಂಚದಿಂದ ದೂರ ಉಳಿದರೂ ಕೂಡ ಕಾವ್ಯ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ತಮ್ಮ ಜೀವನದ ಹ್ಯಾಪೆನಿಂಗ್‌ ವಿಚಾರಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ ಆದರೆ ಇದನ್ನು ಅಪಾರ್ಥ ಮಾಡಿಕೊಂಡು ವೈಯಕ್ತಿಕವಾಗಿ ಪ್ರಶ್ನೆ ಕೇಳುವವರೇ ಹೆಚ್ಚಾಗಿದ್ದಾರೆ. ಕಾವ್ಯ ಗೌಡ ವಾಸಿಸುತ್ತಿರುವುದು ಎಲ್ಲಿ? ಗಂಡ ಕಟ್ಟಿಸಿರುವ ಮನೆನಾ ಅಥವಾ ಅತ್ತೆ ಮಾವನ ಮನೆನಾ? ಬೆಂಗಳೂರಿನ ಯಾವ ಭಾಗದಲ್ಲಿ ಇಷ್ಟೋಂದು ದೊಡ್ಡ ಮನೆ ಕಟ್ಟಿಸಿದ್ದಾರೆ ಅನ್ನೋದು ತಮ್ಮ ಫಾಲೋವರ್ಸ್‌ಗೆ ಇರುವ ಪ್ರಶ್ನೆಗಳು. 

shravya_shetty13 ಎಂದು ಇನ್‌ಸ್ಟಾಗ್ರಾಂ ಖಾತೆಯಿಂದ ಫಾಲೋವರ್‌ ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಹಾಯ್ ಕಾವ್ಯ. ಕಲಾವಿದೆಯಾಗಿ ನೀವು ನಿಜಕ್ಕೂ ಹಲವರಿಗೆ ದೊಡ್ಡ ಸ್ಫೂರ್ತಿ ಆದರೆ ನಿಮ್ಮ ವೈಯಕ್ತಿಕ ವಿಚಾರದ ಬಗ್ಗೆ ಪ್ರಶ್ನೆ ಮಾಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿ. ನಿಮ್ಮ SIL (ಗಂಡನ ತಂಗಿ/ ಅಕ್ಕ) ಯಾಕೆ ಸದಾ ನಮ್ಮ ಮನೆ ಎಂದು ಬರೆದುಕೊಳ್ಳುತ್ತಾರೆ? ನನಗೆ ಗೊತ್ತು ನೀವು ಇದಕ್ಕೆ ಉತ್ತರ ನೀಡುವುದಿಲ್ಲ ಎಂದು ಆದರೆ ನಿಮ್ಮ ಅಭಿಮಾನಿಯಾಗಿ ಉತ್ತರ ನಿರೀಕ್ಷೆ ಮಾಡುತ್ತಿದ್ದೀನಿ. ನೀವೆಲ್ಲರೂ ಒಟ್ಟಿಗೆ ಇರುವುದಾ ಹಾಗೂ ನೀವು ವಾಸಿಸುತ್ತಿರುವುದು ಯಾರ ಮನೆ? ನಿಮ್ಮದಾ ಅಥವಾ ಆಕೆಯದ್ದಾ?' ಎಂದು ಕಾಮೆಂಟ್ ಮಾಡಿದ್ದಾರೆ.

Tap to resize

Latest Videos

ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಇರ್ಲೇಬೇಕು, ಗಂಡ ಸರಿಯಾಗಿಲ್ಲ ಅಂದ್ರೆ ಬಿಟ್ಟು ಬಾ: ನಟಿ ಜ್ಯೋತಿಕಾ ತಾಯಿ ಖಡಕ್ ಮಾತು

ಕಾವ್ಯ ಉತ್ತರ ವೈರಲ್:

'ನಿಮ್ಮಂತವರಿಗೆ ನಾನು ಸ್ಫೂರ್ತಿಯಾಗಿರುವೆ ಎಂದು ಕೇಳಿ ಖುಷಿಯಾಗಿದೆ. ಈ ಮಾತುಗಳು ನಿಜಕ್ಕೂ ಖುಷಿ ಆಯ್ತು. ನಿಮ್ಮಲ್ಲಿ ಹುಟ್ಟುಕೊಂಡಿರುವ ಕ್ಯೂರಿಯಾಸಿಟಿ ಬಗ್ಗೆ ನನಗೆ ಅರ್ಥವಾಗುತ್ತದೆ ಅದರಲ್ಲೂ ಮೊತ್ತೊಬ್ಬರ ವೈಯಕ್ತಿಕ ಜೀವನ ಅಂದ್ರೆ ಇನ್ನೂ ಹೆಚ್ಚಿನ ಕ್ಯೂರಿಯಾಸಿಟಿ. ನನ್ನ ಜೀವನ ಕೆಲವೊಂದು ಜರ್ನಿಗಳನ್ನು ಮಾತ್ರ ಹಂಚಿಕೊಳ್ಳುವುದಕ್ಕೆ ಇಷ್ಟ ಪಡುತ್ತೀನಿ ಅಷ್ಟೆ. ಕೆಲವೊಂದು ವೈಯಕ್ತಿಕ ವಿಚಾರಗಳು ಅನ್ನೋದನ್ನು ಅರ್ಥ ಮಾಡಿಕೊಳ್ಳುತ್ತೀರಿ ಅಂದುಕೊಂಡಿದ್ದೀನಿ. ನನ್ನ ಅರ್ಥ ಮಾಡಿಕೊಂಡು ಜೊತೆಗೆ ಸಪೋರ್ಟ್ ಮಾಡುವ ಕಮ್ಯೂನಿಟಿಯನ್ನು ಪಡೆದಿರುವುದಕ್ಕೆ ಖುಷಿ ಇದೆ. ನನ್ನ ಗಂಡನಿಗೆ ಸಹೋದರಿ ಇದ್ದಾಳೆ ಅಥವಾ ಒಡ ಹುಟ್ಟಿದವರು ಇದ್ದಾರೆ ಎಂದು ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಎಲ್ಲಿಂದ ಈ ವಿಚಾರಗಳನ್ನು ಹುಡುಕುತ್ತೀರಾ ನನಗೆ ಗೊತ್ತಿಲ್ಲ. ಏನೇ ಇರಲಿ ಈ ಮನೆ ನಮ್ಮ ಮಾವನಿಗೆ ಸೇರಿದ್ದು. ನಿಮ್ಮ ಗೊಂದಲಗಳಿಗೆ ಉತ್ತರ ಕೊಟ್ಟಿದ್ದೀನಿ ಅನಿಸುತ್ತದೆ' ಎಂದು ಕಾವ್ಯ ಕಾಮೆಂಟ್‌ಗೆ ರಿಪ್ಲೈ ಮಾಡಿದ್ದಾರೆ.

click me!