ಸೈಕಲ್ ಏರಿದ ಭಾಗ್ಯಾ! ಕಾರ್ ಏನಾಯ್ತು? ಸುಷ್ಮಾಗೆ ಅವಮಾನ ಮಾಡ್ಬೇಡಿ ಎಂದ ವೀಕ್ಷಕರು

ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಎಲ್ಲ ಹೋಗಿ ಈಗ ಸೈಕಲ್ ಬಂದಿದೆ.  ಭಾಗ್ಯ ಸೈಕಲ್ ನಲ್ಲಿ ಡಬ್ಬಾ ಸರ್ವೀಸ್ ಮಾಡ್ತಿರೋದನ್ನು ನೋಡಿದ ಫ್ಯಾನ್ಸ್, ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 
 


ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಭಾಗ್ಯಾ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾಳೆ. ಅಡುಗೆ ಆರ್ಡರ್ ತೆಗೆದುಕೊಂಡ ಭಾಗ್ಯಗೆ ಆರಂಭದಲ್ಲಿ ತನ್ವಿ ಅಡ್ಡಿಯಾದ್ಲು. ಎಷ್ಟೇ ಕಷ್ಟ ಬಂದ್ರೂ ಅಡುಗೆ ಮುಗಿಸಿದ ಭಾಗ್ಯಾ, ಸರಿಯಾದ ಟೈಂಗೆ ಅಡುಗೆ ತಲುಪಿಸಲು ಸೈಕಲ್ ಏರಿದ್ದಾಳೆ. ಚೂಡಿದಾರ ಧರಿಸಿ, ಸೈಕಲ್ ಓಡಿಸುತ್ತಿರುವ ಭಾಗ್ಯಾಳನ್ನು ನೀವು ಇಂದಿನ ಎಪಿಸೋಡ್ ನಲ್ಲಿ ನೋಡ್ಬಹುದು. ಆದ್ರೆ ಒಂದಾದ್ಮೇಲೆ ಒಂದು ಕಷ್ಟ ಭಾಗ್ಯಾಗೆ ಕಾಮನ್. ನಿರೀಕ್ಷೆಯಂತೆ ಭಾಗ್ಯಾಗೆ ದಾರಿ ಮಧ್ಯೆ ಮತ್ತೊಂದು ಸಮಸ್ಯೆ ಬಂದಿದೆ. 

ತಾಂಡವ್ ನಿಂದ ಬೇರೆಯಾಗಿ ಇಡೀ ಸಂಸಾರವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಿರುವ ಭಾಗ್ಯಾ,  ಅಡುಗೆ ಡಬ್ಬ ಸರ್ವೀಸ್ ಶುರು ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಆಗಾಗ ಎನ್ನುವಂತೆ ನಿಧಾನವಾಗಿ ಭಾಗ್ಯಾ ಡಬ್ಬ ಸರ್ವೀಸ್ ಗೆ ರೆಸ್ಪಾನ್ಸ್ ಸಿಗಲು ಶುರುವಾಗಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಭಾಗ್ಯಾಗೆ ಸಹಿ – ಕಹಿ ಎರಡೂ ಸಿಕ್ಕಿದೆ. ದಿನದ ಆರಂಭದಲ್ಲೇ ಅಡುಗೆ ಆರ್ಡರ್ ಪಡೆದ ಮನೆಯವರು, ಖುಷಿಯಾಗಿ ಹಬ್ಬದೂಟಕ್ಕೆ ತಯಾರಿ ನಡೆಸಿದ್ದರು. ಆದ್ರೆ ತನ್ವಿ ವಿಷ್ಯ ಭಾಗ್ಯಾಗೆ ಶಾಕ್ ನೀಡಿತ್ತು. 

Latest Videos

Kannada Entertainment Live: ಇನ್ಮುಂದೆ ತಮಿಳು ನಟ ವಿಜಯ್‌ಗೆ ʼದಳಪತಿʼ ಎನ್ನಬೇಡಿ! ಹೊಸ ಹೆಸರು ಕೊಟ್ಟ TVK!

ಅಪ್ಪ – ಅಮ್ಮನಿಗೆ ಮೋಸ ಮಾಡಿ ರೆಸಾರ್ಟ್ ಗೆ ಹೋಗಿದ್ದ ತನ್ವಿಯನ್ನು ಬಹಳ ಎಚ್ಚರಿಕೆಯಿಂದ ಮನೆಗೆ ಕರೆ ತಂದಿದ್ದಳು ಭಾಗ್ಯ. ಮನೆಗೆ ಬಂದ ತಾಂಡವ್, ಭಾಗ್ಯ ಮೇಲೆ ಕೂಗಾಡಿದ್ರೂ ನಂತ್ರ ಶ್ರೇಷ್ಠಾ ಬಣ್ಣ ಗೊತ್ತಾಗಿ, ಆಕೆಗೆ ಕಪಾಳ ಮೋಕ್ಷ ಮಾಡಿ, ದೊಡ್ಡ ರಾದ್ಧಾಂತ ಸೃಷ್ಟಿ ಮಾಡಿದ್ದ.

ಭಾಗ್ಯ ಮನೆಯಲ್ಲಿ ಹಬ್ಬದ ದಿನವೇ ಗುಡುಗು – ಸಿಡಿಲು ಸಮೇತ ಸುರಿದ ಮಳೆ ತಣ್ಣಗಾಗಿತ್ತು. ತನ್ವಿ ಗಲಾಟೆ ಒಂದು ಹಂತಕ್ಕೆ ಬಂದ್ಮೇಲೆ ಮತ್ತೆ ಅಡುಗೆಗೆ ಸಿದ್ದವಾದ ಭಾಗ್ಯಾ, ಸಮಯಕ್ಕೆ ಸರಿಯಾಗಿ ಹಬ್ಬದೂಟ ಸಿದ್ದ ಮಾಡಿದ್ದಾಳೆ. ಆದ್ರೆ ಅದನ್ನು ತೆಗೆದುಕೊಂಡು ಹೋಗೋದು ಹೇಗೆ ಎಂಬ ಪ್ರಶ್ನೆ ಬಂದಾಗ ಕಣ್ಣಿಗೆ ಸೈಕಲ್ ಕಾಣಿಸಿದೆ. ಸೈಕಲ್ ಗೆ ಊಟದ ಡಬ್ಬ ಕಟ್ಟಿಕೊಂಡ ಭಾಗ್ಯ, ಊಟ ನೀಡಲು ಹೊರಟಿದ್ದಾಳೆ. ಆದ್ರೆ ದಾರಿ ಮಧ್ಯೆ ಸೈಕಲ್ ಕೈಕೊಟ್ಟಿದೆ. ಸೈಕಲ್ ಪಂಚರ್ ಆಗಿದೆ. ಈಗೇನು ಮಾಡ್ಬೇಕು ಎಂಬುದು ಭಾಗ್ಯಾಗೆ ಗೊತ್ತಾಗ್ತಿಲ್ಲ. ವಿಷ್ಯ ಮನೆಯವರನ್ನು ತಲುಪಿದ್ದು, ಅಲ್ಲೂ ಎಲ್ಲರೂ ಟೆನ್ಷನ್ ನಲ್ಲಿದ್ದಾರೆ.

ಶಿರಸಿಯಲ್ಲಿ ಮದುವೆಯಾದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶುಭ ಲಕ್ಷ್ಮೀ;

ಕಲರ್ಸ್ ಕನ್ನಡ, ಇಂದಿನ ಪ್ರೋಮೋ ಬಿಡ್ತಾ ಇದ್ದಂತೆ ವೀಕ್ಷಕರು ಕಮೆಂಟ್ ಶುರು ಮಾಡಿದ್ದಾರೆ.  ಭಾಗ್ಯಾಳನ್ನು ರಕ್ಷಿಸೋಕೆ ಬರೋರು ಯಾರು? ಇದು ಸದ್ಯ ವೀಕ್ಷಕರನ್ನು ಕಾಡ್ತಿರುವ ಪ್ರಶ್ನೆಯಾಗಿದೆ. ಶ್ರೇಷ್ಠಾ, ಭಾಗ್ಯಾಗೆ ಸಹಾಯ ಮಾಡ್ತಾಳಾ, ಕಾರ್ ಡ್ರೈವಿಂಗ್ ಬಂದ್ರೂ ಭಾಗ್ಯಾ ಸೈಕಲ್ ಓಡಿಸ್ತಿರೋದು ಏಕೆ, ಎಲ್ಲೂ ಆಟೋ ಸಿಗ್ಲಿಲ್ವಾ ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಭಾಗ್ಯ ಹೊಸ ಕಾರ್ ಖರೀದಿ ಮಾಡಿದ್ರೂ ಸೈಕಲ್ ನಲ್ಲಿ ಹೋಗೋದನ್ನು ತೋರಿಸಿ, ನಮ್ಮನ್ನು ಮೂರ್ಖರನ್ನಾಗಿ ಮಾಡ್ತಿದ್ದಾರೆ ನಿರ್ದೇಶಕರು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. 

ಭಾಗ್ಯಾ ಸೈಕಲ್ ಏರಿರೋದನ್ನು ನೋಡಿ, ಕೆಲ ಫ್ಯಾನ್ಸ್ ಗೆ ಗೀತಾ ನೆನಪಾಗಿದೆ. ಸುಷ್ಮಾ ಬಹಳ ಒಳ್ಳೆ ನಟಿ, ಅವರಿಗೆ ಹಾಗೂ ನಮ್ಮಂದ ವೀಕ್ಷಕರಿಗೆ ಅವಮಾನ ಮಾಡ್ಬೇಡಿ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಕ್ರಿಯೇಟಿವ್ ಆಗಿ ಆಲೋಚನೆ ಮಾಡುವ ಬದಲು ನಿರ್ದೇಶಕರು ಇನ್ನೂ ಹಳೆ ಸ್ಟೈಲ್ ನಲ್ಲಿ ಆಲೋಚನೆ ಮಾಡ್ತಿದ್ದಾರೆ, ಈಗ ಭಾಗ್ಯಲಕ್ಷ್ಮಿಯಲ್ಲಿ ಡಬ್ಬಾದೇ ಕಥೆ ಎಂದು ಬಳಕೆದಾರರು ಬರೆದಿದ್ದಾರೆ.  
 

click me!