
ತಾವು ಮದುವೆಯಾಗುವ ಹುಡುಗ ಹಾಗಿರಬೇಕು, ಹೀಗಿರಬೇಕು, ಅಪ್ಪ-ಅಮ್ಮನ ಜೊತೆ ಇರಬಾರದು. ಸೆಪರೇಟ್ ಆಗಿರಬೇಕು, ಪ್ರತ್ಯೇಕ ಮನೆ ಮಾಡಬೇಕು, ನನ್ನನ್ನಷ್ಟೇ ಪ್ರೀತಿಸಬೇಕು... ಹೀಗೆ ಮದುವೆಯಾಗುವ ಹುಡುಗಿಯರಿಗೆ ಭಾವಿ ಪತಿಯ ಬಗ್ಗೆ ಏನೇನೋ ಕನಸುಗಳು ಇರುವುದು ಸಹಜವೇ. ಅದರಲ್ಲಿಯೂ ಈಗಿನ ಹುಡುಗಿಯರಂತೂ ಅತ್ತೆ-ಮಾವನ ಸಹವಾಸವೇ ಬೇಡ ಎನ್ನುವವರೇ ಹೆಚ್ಚು. ಸಾಮಾನ್ಯ ಹೆಣ್ಣುಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಈ ರೀತಿ ಯೋಚನೆ ಮಾಡುವವರ ದೊಡ್ಡ ವರ್ಗವೇ ಇದೆ. ಆದರೆ, ಲಕ್ಷ್ಮೀ ಬಾರಮ್ಮ ಸೀರಿಯಲ್ ಲಕ್ಷ್ಮೀ ಅರ್ಥಾತ್ ಭೂಮಿಕಾ ರಮೇಶ್ ಅವರ ಕನಸು ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈಗಿನ ಹುಡುಗಿಯರೂ ಹೀಗೆಲ್ಲಾ ಇರೋಕೆ ಸಾಧ್ಯನಾ ಎಂದು ಹುಬ್ಬೇರಿಸುತ್ತಿದ್ದಾರೆ.
ಹೌದು. ಸುದ್ದಿಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಭೂಮಿಕಾ ಸುರೇಶ್ ಅವರು, ತಮ್ಮ ಭಾವಿ ಪತಿಯ ಬಗ್ಗೆ ಮಾತನಾಡಿದ್ದಾರೆ. 'ನಾನು ಸ್ವಲ್ಪ ಹಳೆಯ ರೀತಿಯ ಥಿಂಕಿಂಗ್ನವಳು. ಅದಕ್ಕಾಗಿಯೇ ನನ್ನನ್ನು ಓಲ್ಡ್ ಸ್ಕೂಲ್ ಎಂದೇ ಹೇಳ್ತಾರೆ. ಆದ್ರೆ ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ನನಗೆ ಹಾಗೆ ಇರುವುದೇ ಇಷ್ಟ ಎನ್ನುತ್ತಲೇ ಇಂದಿನ ಮಾಡರ್ನ್ ಹುಡುಗಿಯರಿಗಿಂತಲೂ ಭಿನ್ನವಾಗಿ ಯೋಚಿಸುತ್ತಿರುವವರು ಭೂಮಿಕಾ. ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಮತ್ತು ತೆಲಗು ಧಾರಾವಾಹಿಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿರುವ ನಟಿ ಭೂಮಿಕಾ ಇದೀಗ ತಮ್ಮ ಕನಸಿನ ಹುಡುಗನ ಬಗ್ಗೆ ಮಾತನಾಡಿದ್ದಾರೆ. ಆದರೆ, ತಾವು ಮದುವೆಯಾಗುವ ಹುಡುಗನ ವಿಷಯದಲ್ಲಿಯೂ ಇವರು ಯೋಚನೆ ಮಾಡ್ತಿರೋದು ಡಿಫರೆಂಟ್ ಆಗಿಯೇ.
ಮಾತು ಬಾರದ ಅರ್ಚಕ ನನಗೆ ನಾಣ್ಯ ತೋರಿಸಿದ್ರು, ಕಾರಣ ತಿಳಿದು ಶಾಕ್ ಆಯ್ತು; ಘಟನೆ ನೆನೆದ ಲಕ್ಷ್ಮೀ ಬಾರಮ್ಮ ನಟಿ
ನಟಿ ಹೇಳಿದ್ದೇನೆಂದರೆ, ನನಗೆ ಫ್ಯಾಮಿಲಿ ತುಂಬಾ ಮುಖ್ಯ. ಆದ್ದರಿಂದ ನನ್ನ ಪತಿಯಾಗುವವನೂ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಅದು ಎಷ್ಟರಮಟ್ಟಿಗೆ ಎಂದರೆ,, ಯಾವುದೋ ಒಂದು ಸಂದರ್ಭದಲ್ಲಿ, ನಾನು ಅಥವಾ ಯಾರಾದರೂ ಒಂದು ಕಡೆ ನನ್ನ ಮತ್ತು ಅವನ ಅಮ್ಮನನ್ನು ನಿಲ್ಲಿಸಿಕೊಂಡು ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡು ಎಂದಾಗ, ಅವನ ಆಯ್ಕೆ ಅಮ್ಮ ಆಗಿರಬೇಕೇ ವಿನಾ ನಾನಲ್ಲ ಎಂದಿರುವ ನಟಿ ಅದಕ್ಕೆ ಕಾರಣವನ್ನೂ ನೋಡಿದ್ದಾರೆ. ಒಂದು ವೇಲೆ ಅವನಿಗೆ ಏನಾದ್ರೂ ನಾನು ಮುಖ್ಯ ಎನ್ನುವುದಾಗಿದ್ದರೆ ಖಂಡಿತಾ ಮುಂದೊಂದು ದಿನಾ ಅವನು ನನ್ನನ್ನೂ ಬಿಟ್ಟು ಬಿಡುತ್ತಾನೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ, ಮೊದಲಿನಿಂದಲೂ ಜೊತೆಗಿರುವ ಅಮ್ಮನನ್ನು ಬಿಟ್ಟು ಆಗ ನಡುವೆ ಕಟ್ಟಿಕೊಂಡಿರುವ ಹೆಂಡತಿಯ ಪರ ನಿಲ್ಲುತ್ತಾರೆ ಎಂದರೆ, ಭವಿಷ್ಯದಲ್ಲಿ ಆತ ಸಂದರ್ಭ ಬಂದರೆ ನನ್ನನ್ನೂ ಬಿಡುವುದಕ್ಕೆ ಹಿಂಜರಿಯುವುದಿಲ್ಲ. ಆದ್ದರಿಂದ ಮೊದಲು ಆತ ಅಪ್ಪ-ಅಮ್ಮನಿಗೆ ರಿಸ್ಪೆಕ್ಟ್ ಕೊಡಬೇಕು. ಫ್ಯಾಮಿಲಿ ಹುಡುಗ ಆಗಿರಬೇಕು. ಫ್ಯಾಮಿಲಿಗೆ ಸಮಯ ಕೊಡಬೇಕು. ಮುಂದೊಂದು ದಿನ ನನ್ನ ಅಪ್ಪ-ಅಮ್ಮನಿಗೆ ವಯಸ್ಸಾದಾಗ ಅವರನ್ನು ಮಕ್ಕಳ ರೀತಿ ನೋಡಿಕೊಳ್ಳಬೇಕಾದ ಸಮಯ ಬರುತ್ತದೆ. ಆಗ ನಾನು ನನ್ನ ಅಪ್ಪ-ಅಮ್ಮನಿಗೆ ತಾಯಿಯಾದರೆ ಆತ ತಂದೆ ಸ್ಥಾನ ಕೊಡುವವನಾಗಿರಬೇಕು ಎಂದಿದ್ದಾರೆ.
ನಟಿಯ ಈ ಮಾತಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಇಂದಿನ ಹೆಣ್ಣುಮಕ್ಕಳಿಗೆ ನೀವು ಮಾದರಿ ಎಂದು ನಟಿಯನ್ನು ಹಾಡಿ ಕೊಂಡಾಡುತ್ತಿದ್ದಾರೆ. ಇನ್ನು ನಟಿ ಭೂಮಿಕಾ ಕುರಿತು ಹೇಳುವುದಾದರೆ, ಅವರು ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್. 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್.
ಉಯಿ ಅಮ್ಮಾ.. ಎಂದು ಚಿಂದಿ ಉಡಾಯಿಸಿದ ಶ್ರೀರಸ್ತು ಶುಭಮಸ್ತು ಬೆಡಗಿಯರು: ಡಾನ್ಸ್ ನೋಡಿ ಫ್ಯಾನ್ಸ್ ಸುಸ್ತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.