
ಸೀರಿಯಲ್ಗಳು ಎಂದರೆ ಅದು ಕೇವಲ ನಟನೆ, ಅದು ರಿಯಲ್ ಅಲ್ಲಾ ಎಂದು ಗೊತ್ತಿದ್ದರೂ ಅದನ್ನು ತಮ್ಮ ಜೀವನದ ಭಾಗವಾಗಿಸಿಕೊಂಡವರು ಹಲವರು. ಧಾರಾವಾಹಿಯ ಪಾತ್ರದೊಳಗೆ ತಾವೂ ಪ್ರವೇಶಿಸಿ, ಆ ಪಾತ್ರವೇ ತಾವು ಎಂದು ಅಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಮಹಿಳೆಯರ ಸಂಖ್ಯೆ ಈ ಮಟ್ಟಿಗೆ ಹೆಚ್ಚಿಗೆ ಇದೆ. ಇದೇ ಕಾರಣಕ್ಕೆ ವಿಲನ್ ಪಾತ್ರಧಾರಿಗಳು ಎಷ್ಟೋ ಸಂದರ್ಭಗಳಲ್ಲಿ ಹೊರಗಡೆ ಹೋಗುವುದಕ್ಕೂ ಭಯ ಪಡುವ ಪರಿಸ್ಥಿತಿ ಇದೆ. ಇಂದು ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ ವಿಲನ್ಗಳು ನಟಿಯರೇ ಆಗಿರುವ ಕಾರಣ, ಇದಾಗಲೇ ಹಲವಾರು ನಟಿಯರು ತಮಗೆ ಹೊರಗಡೆ ಹೋದಾಗ ಆಗುವ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ. ನಿಜ ಜೀವನದಲ್ಲಿಯೂ ತಮ್ಮನ್ನು ವೀಕ್ಷಕರು ವಿಲನ್ ರೀತಿ ನೋಡುವುದಾಗಿ ಅವರು ಹೇಳಿದ್ದಾರೆ. ಎಷ್ಟೋ ಮಂದಿ, ತಮ್ಮ ಎದುರಿಗೇ ಬಂದು ಛೀಮಾರಿ ಹಾಕಿದ್ದನ್ನೂ ವಿವರಿಸಿದ್ದಾರೆ.
ಪರಿಸ್ಥಿತಿ ಹೀಗಿರುವಾಗ, ಇನ್ನು ಆ ನಟಿಯರ ಮಕ್ಕಳ ಗತಿ? ಅವರ ಶಾಲಾ-ಕಾಲೇಜುಗಳಲ್ಲಿ ಅವರ ಅಮ್ಮ ವಿಲನ್ ಎನ್ನುವುದು ತಿಳಿದಾಗ ಸೀರಿಯಲ್ ವೀಕ್ಷಕರು ಸಹಜವಾಗಿ ಮಕ್ಕಳನ್ನೂ ಅದೇ ರೀತಿ ನೋಡುವವರು ಇದ್ದಾರೆ. ಇದು ಮಕ್ಕಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರ ಬಗ್ಗೆಯೂ ಇದೀಗ ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್ ವಿಲನ್ ಕಾವೇರಿ ಪಾತ್ರಧಾರಿ ಸುಷ್ಮಾ ನಾಣಯ್ಯ ಅವರು ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ಈ ಸೀರಿಯಲ್ನಲ್ಲಿ ಕಾವೇರಿ ವಿಲನ್ ಆಗಲು ಕಾರಣ ಮಗ ವೈಷ್ಣವ್ ಮೇಲಿನ ಅಗತ್ಯಕ್ಕಿಂತ ಹೆಚ್ಚಿನ ಮಮಕಾರ. ಅದು ಎಷ್ಟರಮಟ್ಟಿಗೆ ಎಂದರೆ ಸೊಸೆ ಬಂದರೂ ಆಕೆ ಸಹಿಸಲಿಲ್ಲ. ಮೊದಲ ಆದ್ಯತೆ ತಾನೇ ಆಗಿರಬೇಕು ಎನ್ನುವ ಕಾರಣಕ್ಕೆ ಮಗನ ಜೀವನ ಹಾಳು ಮಾಡುತ್ತಿದ್ದಾಳೆ. ತನ್ನ ಮತ್ತು ಮಗನ ಮಧ್ಯೆ ಯಾರೂ ಬರಬಾರದು ಎಂದು ಕೊಲೆ ಮಾಡಲೂ ಹೇಸದ ಕ್ಯಾರೆಕ್ಟರ್ ಆಕೆಯದ್ದು.
ಅಮೃತಧಾರೆ ಪೆದ್ದು ಮಲ್ಲಿ, ಭಾರ್ಗವಿ ಆದ್ಮೇಲೆ ಹೀಗೆಲ್ಲಾ ಬದಲಾದ್ಲಾ? ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು!
ಇಂಥ ಪಾತ್ರಗಳನ್ನು ಅಮ್ಮ ಮಾಡುವಾಗ ಸಹಜವಾಗಿ ಅವರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ ಸುಷ್ಮಾ ನಾಣಯ್ಯ. ಸುಷ್ಮಾ ಅವರಿಗೆ ನಾಲ್ಕು ವರ್ಷದ ದಿವಿಯಾನಾ ಎಂಬ ಮಗಳು ಇದ್ದಾಳೆ. ಆಕೆಯ ಮೇಲೆ ತಮ್ಮ ಕಾವೇರಿ ಪಾತ್ರ ಪ್ರಭಾವ ಬೀರಬಾರದು ಹಾಗೂ ಅವಳ ಫ್ರೆಂಡ್ಸ್ ಕೇಳಿದ್ರೆ ಏನು ಹೇಳಬೇಕು ಎನ್ನುವ ಬಗ್ಗೆ ಚಿಕ್ಕವಳಿರುವಾಗಿನಿಂದಲೂ ಸ್ಪಷ್ಟವಾಗಿ ಹೇಳಿಕೊಟ್ಟಿದ್ದೆ ಎಂದಿದ್ದಾರೆ ಸುಷ್ಮಾ. ಸೀರಿಯಲ್ನಲ್ಲಿ ನೋಡುವಾಕೆ ನಿನ್ನ ಅಮ್ಮ ಅಲ್ಲ, ಅವಳು ಕಾವೇರಿ ಮಾತ್ರ. ಆಕೆ ಕೆಟ್ಟವಳು, ನಿನ್ನ ಅಮ್ಮ ಕೆಟ್ಟವಳು ಅಲ್ಲ ಎಂದು ಸೀರಿಯಲ್ ಆರಂಭದ ದಿನದಿಂದಲೂ ಹೇಳುತ್ತಿದ್ದೆ. ಅದು ಅವಳಿಗೆ ತಿಳಿದಿದೆ. ಶಾಲೆಯಲ್ಲಿ ಅಥವಾ ಆಕೆಯ ಯಾವುದೇ ಫ್ರೆಂಡ್ಸ್ ಇದರ ಬಗ್ಗೆ ಮಾತನಾಡಿದರೂ ಸೀರಿಯಲ್ನಲ್ಲಿ ಇರುವವರು ಕಾವೇರಿ ಆಂಟಿ, ನನ್ನ ಅಮ್ಮ ಅಲ್ಲ ಎನ್ನುತ್ತಾಳೆ. ಇದೊಂದು ಸೂಕ್ಷ್ಮ ವಿಷಯ. ಈ ಬಗ್ಗೆ ಮಕ್ಕಳಿಗೆ ಮೊದಲೇ ಹೇಳಬೇಕು. ಇಲ್ಲದಿದ್ದರೆ ತುಂಬಾ ಸಮಸ್ಯೆ ಆಗುತ್ತದೆ ಎಂದಿದ್ದಾರೆ ಸುಷ್ಮಾ.
ಅಂದಹಾಗೆ ಸುಷ್ಮಾ ಅವರು ಪ್ರತೀಕ್ ಎನ್ನುವವರನ್ನು ಮದುವೆಯಾಗಿದ್ದು, ದಿವಿಯಾನಾ ಮಗಳು ಇದ್ದಾಳೆ. ಮಗಳು ಹುಟ್ಟಿದ ಬಳಿಕ ಕೆಲ ಕಾಲ ನಟನೆಯಿಂದ ದೂರ ಇದ್ದ ಸುಷ್ಮಾ ಅವರು, ಇದೀಗ ಲಕ್ಷ್ಮೀ ಬಾರಮ್ಮಾ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ಕುತೂಹಲದ ವಿಷಯ ಏನೆಂದರೆ, ಲಕ್ಷ್ಮೀ ಬಾರಮ್ಮಾದಲ್ಲಿ ಅತ್ತೆ ರೋಲ್ ಮಾಡ್ತಿರೋ ಸುಷ್ಮಾ ಅವರಿಗೆ ಈಗ ವಯಸ್ಸು ಕೇವಲ 35 ಅಷ್ಟೇ, 4 ವರ್ಷದ ಮಗುವಿನ ಅಮ್ಮ. ಈ ಸೀರಿಯಲ್ನಲ್ಲಿ ಇವರ ಮಗ ಆಗಿರೋ ವೈಷ್ಣವ್ಗೂ, ಸುಷ್ಮಾ ಅವರಿಗೆ ಇರುವ ವಯಸ್ಸಿನ ಅಂತರ ನಾಲ್ಕೈದು ವರ್ಷಗಳಷ್ಟೇ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.