ನಾಟ್ಯ ಮಯೂರಿ ಸುಧಾ ಚಂದ್ರನ್ ಜೊತೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ 'ಲಕ್ಷ್ಮೀ ಬಾರಮ್ಮ' ನಟಿ

Published : May 23, 2026, 10:20 PM IST
Bhoomika Ramesh

ಸಾರಾಂಶ

ಕನ್ನಡ ಕಿರುತೆರೆಯಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಭೂಮಿಕಾ ರಮೇಶ್, ತಮ್ಮ ನಟನೆ ಹಾಗೂ ಡ್ಯಾನ್ಸ್ ಮೂಲಕ ಜನ ಮನ ಗೆದ್ದಿದ್ದರು. ಸದ್ಯ ನಟಿ ನಾಟ್ಯ ದಿಗ್ಗಜೆ ಸುಧಾ ಚಂದ್ರನ್ ಜೊತೆ ನೃತ್ಯ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. 

ಲಕ್ಷ್ಮೀ ಬಾರಮ್ಮ ನಟಿ ಭೂಮಿಕಾ ರಮೇಶ್ ಗೆ ಒಲಿದು ಬಂದ ಅದೃಷ್ಟ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ನಲ್ಲಿ ಲಕ್ಷ್ಮೀ ಪಾತ್ರದ ಮೂಲಕ ಜನಮನ ಗೆದ್ದ ನಟಿ ಭೂಮಿಕಾ ರಮೇಶ್. ಪಾಪದ ಹುಡುಗಿ ಲಕ್ಷ್ಮೀಯಾಗಿ, ಅಕ್ಕಮ್ಮನ ಮುದ್ದಿನ ಲಡ್ಡು ಆಗಿ, ವೈಷ್ಣವ್ ನ ಮುದ್ದಿನ ಮಹಾಲಕ್ಷ್ಮೀಯಾಗಿ, ಕೊನೆಗೆ ಅತ್ತೆಗೆ ಬುದ್ದಿ ಕಲಿಸುವ ಸೊಸೆಯಾಗಿ ಅದ್ಭುತವಾಗಿ ನಟಿಸಿ, ಎಲ್ಲರನ್ನೂ ನಗಿಸಿ, ಅಳಿಸುವ ಪಾತ್ರದಲ್ಲಿ ಭೂಮಿಕಾ ರಮೇಶ್ ಮಿಂಚಿದ್ದರು. ನಟನೆಯಲ್ಲಿ ಮಾತ್ರವಲ್ಲದೇ ಡ್ಯಾನ್ಸ್ ಮಾಡೋದಲ್ಲೂ ಭೂಮಿಕಾ ನಂ 1. ಬಾಲ್ಯದಿಂದಲೇ ನೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಭೂಮಿಕಾ ಭರತನಾಟ್ಯ, ಸೇರಿ ಹಲವು ಪ್ರಕಾರದ ನೃತ್ಯಗಳಲ್ಲಿ ಪರಿಣತಿ ಪಡೆದಿದ್ದಾರೆ. ಹಾಗೂ ಕನ್ನಡ ಹಾಗೂ ತೆಲುಗಿ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ, ವಿಜೇತರೂ ಆಗಿದ್ದರು ಭೂಮಿಕಾ. ಇದೀಗ ಭೂಮಿಕಾ ತೆಲುಗಿನ ‘ಮೇಘ ಸಂದೇಶಂ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಲಕ್ಷ್ಮೀ ಬಾರಮ್ಮ ಬಳಿಕ ಮೇಘ ಸಂದೇಶಂಗೆ ನಾಯಕಿ

ಲಕ್ಷ್ಮೀ ಬಾರಮ್ಮ ಮಾಡುತ್ತಿರುವಾಗಲೇ ಭೂಮಿಕಾಗೆ ಜೀ ತೆಲುಗು ವಾಹಿನಿಯಿಂದ ‘ಮೇಘಸಂದೇಶಂ’ ಧಾರಾವಾಹಿಯಲ್ಲಿ ಭರತನಾಟ್ಯ ಡ್ಯಾನ್ಸರ್‌ ಆಗಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಈ ಧಾರಾವಾಹಿಲ್ಲಿ ‘ನನ್ನರಸಿ ರಾಧೆ’ ಹಾಗೂ ‘ತ್ರಿಪುರ ಸುಂದರಿ’ ಖ್ಯಾತಿಯ ನಟ ಅಭಿನವ್‌ ವಿಶ್ವನಾಥನ್‌ ನಾಯಕನಾಗಿ ನಟಿಸುತ್ತಿದ್ದಾರೆ. ಆ ಮೂಲಕ ತೆಲುಗು ಕಿರುತೆರೆಯಲ್ಲೂ ಸಹ ಮೋಡಿ ಮಾಡಿದರು ಭೂಮಿಕಾ. ಇದೀಗ ಮೇಘ ಸಂದೇಶಂ ಧಾರಾವಾಹಿ ಮೂಲಕ ನೃತ್ಯ ಮಯೂರಿ ಸುಧಾ ಚಂದ್ರನ್‌ ಅವರ ಜೊತೆಗೆ ಭೂಮಿಕಾ ರಮೇಶ್‌ ಅವರಿಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ. ಅಂದರೆ ಧಾರಾವಾಹಿಯಲ್ಲಿ ಇಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ. ಜೊತೆಯಾಗಿ ನೃತ್ಯ ಮಾಡಲಿದ್ದಾರೆ.

ಮೇಘ ಸಂದೇಶಂ ಧಾರಾವಾಹಿಯಲ್ಲಿ ಸುಧಾ ಚಂದ್ರನ್

ಸದ್ಯ ಮೇಘ ಸಂದೇಶಂ ಧಾರಾವಾಹಿಯಲ್ಲಿ ದೊಡ್ಡದೊಂದು ಟ್ವಿಸ್ಟ್ ಬಂದಿದೆ, ಇದೀಗ ರಿಲೀಸ್ ಆಗಿರುವ ಪ್ರೊಮೋದಲ್ಲಿ ಭೂಮಿ ದೇವರ ಮುಂದೆ ಕುಳಿತು ತನ್ನ ಸಮಸ್ಯೆ ಹೇಳಿಕೊಂಡು ಅಳುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಸುಧಾ ಚಂದ್ರನ್ ಅವರ ಎಂಟ್ರಿ ಕೂಡ ಆಗಲಿದೆ. ಸುಧಾ ಚಂದ್ರನ್ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ನಾಟ್ಯ, ನಟನೆ ಎರಡರಲ್ಲೂ ಪಳಗಿದ ಕಲಾವಿದೆ ಸುಧಾ ಚಂದ್ರನ್. ಅದ್ಭುತ ಭರತನಾಟ್ಯ ಕಲಾವಿದೆಯಾಗಿರುವ ಸುಧಾ ಒಂದು ಭೀಕರ ಅಪಘಾತದಲ್ಲಿ ಒಂದು ಕಾಲನ್ನೆ ಕಳೆದುಕೊಂಡಿದ್ದರು. ಹಾಗಂತ ನಟಿಯ ನೃತ್ಯ ಮಾಡುವ ಆಸೆ ಕಡಿಮೆಯಾಗಲಿಲ್ಲ. ತುಂಡಾದ ಕಾಲಿಗೆ ಕೃತಕ ಕಾಲನ್ನು ಜೋಡಿಸಿ, ನಟಿ ಛಲ ಬಿಡದೆ ಮತ್ತೆ ನೃತ್ಯ ಅಭ್ಯಾಸ ಮಾಡಿ, ವಿವಿಧೆಡೆಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಸಾಧನೆ ಮಾಡಿದ ಮಹಾನ್ ಸಾಧಕಿ ಇವರು. ಇಂತಹ ನೃತ್ಯ ದಿಗ್ಗಜರ ಜೊತೆ ನೃತ್ಯ ಮಾಡುವ ಕನಸು ಪ್ರತಿಯೊಬ್ಬ ನೃತ್ಯಪಟುವಿಗೂ ಇದ್ದೆ ಇರುತ್ತೆ. ಇದೀಗ ಭೂಮಿಕಾ ರಮೇಶ್ ಗೆ ಆ ಅದೃಷ್ಟ ಒಲಿದು ಬಂದಿದೆ. ಸೀರಿಯಲ್ ನಲ್ಲಿ ಏನಾಗುತ್ತೋ ಗೊತ್ತಿಲ್ಲ. ಆದರೆ ಭೂಮಿಕಾ, ಸುಧಾ ಚಂದ್ರನ್ ಜೊತೆಗೆ ‘ಅಲೈಪಾಯುದೆ ಕಣ್ಣಾ’ ಎನ್ನುವ ತಮಿಳು ಹಾಡಿಗೆ ಸೊಗಸಾಗಿ ಹೆಜ್ಜೆ ಹಾಕಿದ್ದು, ಆ ವಿಡೀಯೋ ಇದೀಗ ವೈರಲ್ ಆಗುತ್ತಿದೆ. ಅಭಿಮಾನಿಗಳು ವಿಡಿಯೋ ಮೆಚ್ಚಿಕೊಂಡು ನಟಿಯನ್ನು ಹೊಗಳಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

IPL ಅಬ್ಬರದ ನಡುವೆಯೂ ಗೃಹಿಣಿಯರ ಮನಗೆದ್ದು TRP ಚಾರ್ಟ್‌ನಲ್ಲಿ ಮುನ್ನುಗ್ಗುತ್ತಿರುವ ಟಾಪ್ 5 ಕನ್ನಡ ಸೀರಿಯಲ್ಸ್
ತುಳು ಸಂಪ್ರದಾಯಕ್ಕೆ ಮನಸೋತ ನಟಿ ಕರಿಷ್ಮಾ: ಮಂಗಳೂರು ಸ್ಟೈಲ್​ನಲ್ಲಿ ಸೀಮಂತ- ವಿಡಿಯೋ ವೈರಲ್​