ಡ್ರೆಸ್ಸಿಂಗ್ ಬಗ್ಗೆ ಕಾಮೆಂಟ್ ಮಾಡೋರಿಗೆ ಉಪೇಂದ್ರ ಡೈಲಾಗ್ ಮೂಲಕ ಚಮಕ್ ಕೊಟ್ಟ ‘ಬ್ರಹ್ಮಗಂಟು’ ನಟಿ

Published : May 23, 2026, 12:20 PM IST
Arathi Padubidri

ಸಾರಾಂಶ

ಆರತಿ ಪಡುಬಿದ್ರಿ ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡ ನಟಿ. ಸದ್ಯ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಸಂಜನಾ ಪಾತ್ರದಲ್ಲಿ ನಟಿಸುತ್ತಿರುವ ಆರತಿ, ತಮ್ಮ ಬೋಲ್ಡ್ ಡ್ರೆಸ್ಸಿಂಗ್ ಬಗ್ಗೆ ಕಾಮೆಂಟ್ ಮಾಡುವವರಿಗೆ ಉಪೇಂದ್ರ ಡೈಲಾಗ್ ಮೂಲಕ ಉತ್ತರ ಕೊಟ್ಟಿದ್ದಾರೆ. 

ಕನ್ನಡ ಕಿರುತೆರೆ ನಟಿ ಆರತಿ ಪಡುಬಿದ್ರಿ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಆರತಿ ಪಡುಬಿದ್ರಿ. ವೃತ್ತಿಯಲ್ಲಿ ವೈದ್ಯೆಯಾಗಿ ಪ್ರವೃತ್ತಿಯಾಗಿ ನಟಿಯಾಗಿರುವ ಇವರು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಅವತಾರಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ, ತಮ್ಮ ಟ್ರಾವೆಲ್, ಪಾರ್ಟಿ, ಟೂರ್ನಮೆಂಟ್ ಮೊದಲಾದ ಈವೆಂಟ್ ಗಳ ಫೋಟೊಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಹೆಚ್ಚಾಗಿ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವ ನಟಿ, ತಮ್ಮ ಬೋಲ್ಡ್ ಅವತಾರಕ್ಕಾಗಿ ಕೆಟ್ಟ ಕಾಮೆಂಟ್ ಗಳನ್ನು ಕೂಡ ಪಡೆಯುತ್ತಾರೆ. ಇದೀಗ ನಟಿ ತಮ್ಮ ಡ್ರೆಸ್ಸಿಂಗ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡುವವರಿಗೆ ತಿರುಗೇಟು ಕೊಟ್ಟಿದ್ದಾರೆ. ಅವರು ಏನು ಹೇಳಿದ್ರು ಅನ್ನೋದನ್ನು ತಿಳಿಯುವ ಮುನ್ನ ಆರತಿ ಪಡುಬಿದ್ರಿ ನಟನಾ ಜರ್ನಿ ಬಗ್ಗೆ ನೋಡೋಣ.

ಆರತಿ ಪಡುಬಿದ್ರಿ ನಟನೆ ಶುರುವಾಗಿದ್ದು ಹೀಗೆ

ನಟನೆ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಬೆಳೆಸಿರುವ ಆರತಿ ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದಾರೆ. ಜೊತೆಗೆ ಮಾಡೆಲಿಂಗ್ ನಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಬಾಲ್ಯದಿಂದಲೂ ನಟಿಸುವ ಆಸೆ ಇವರಲ್ಲಿತ್ತು. ನಟನೆಯಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದರು. ವೃತ್ತಿಯಲ್ಲಿ ವೈದ್ಯೆಯಾಗಿದ್ದರೂ ಕೂಡ, ಯಾವಾಗಲೂ ನಟಿಯಾಗಬೇಕೆಂಬ ಕನಸು ಕಾಣುತ್ತಿದ್ದರಂತೆ. ಮಾಡೆಲಿಂಗ್ ಮೂಲಕ ತಮ್ಮ ಕನಸನ್ನು ನನಸಾಗಿಸಲು ಒಂದು ಹೆಜ್ಜೆ ಮುಂದಿಟ್ಟರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ಹೂಮಳೆ ಧಾರಾವಾಹಿಯಲ್ಲಿ ಆರತಿ ನಾಯಕನ ಅಕ್ಕನಾಗಿ ನಟಿಸಿದ್ದರು. ಮೊದಲ ಸೀರಿಯಲ್ ನಲ್ಲಿ ಅದ್ಭುತ ನಟನೆಯ ಮೂಲಕ ಅಭಿಮಾನಿಗಳನ್ನು ಗೆದ್ದಿದ್ದರು. ಜೊತೆಗೆ ಇವರು ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದಾರೆ. ಮಾಡೆಲ್ ಆಗಿದ್ದವರೆಗೆ, ನಟನೆ ಮಾಡೋದು ಕ್ಯಾಮೆರಾ ಎದುರಿಸೋದು ಅಷ್ಟೇನೂ ಕಷ್ಟವಾಗಿರಲಿಲ್ಲವಂತೆ. ಇದಾದ ಬಳಿಕ ಜೀ ಕನ್ನಡದ ಜನಪ್ರಿಯ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಹಿರಿಯ ಅಕ್ಕ ಆರತಿ ಪಾತ್ರದಲ್ಲಿ ನಟಿಸಿದರು. ಈ ಎರಡೂ ಪಾತ್ರಗಳು ತುಂಬಾನೆ ಸರಳ, ಸಂಪ್ರದಾಯಸ್ಥ ಹುಡುಗಿಯ ಪಾತ್ರಗಳು. ಸದ್ಯ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅಹಂಕಾರಿ, ದುಡ್ಡು ಇದ್ದರೆ ಏನೂ ಬೇಕಾದರೂ ಮಾಡಬಹುದು ಎನ್ನುವ, ಕುಡಿತಕ್ಕೆ ದಾಸಳಾಗಿರುವ ಮಾಡರ್ನ್ ಹುಡುಗಿ ಸಂಜನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲಿಗೆ ನೆಗೆಟಿವ್ ಶೇಡ್ ಇದ್ದದು, ಸದ್ಯ ಬದಲಾಗಿ ಪಾಸಿಟಿವ್ ಆಗಿದೆ. ಧಾರಾವಾಹಿಯಲ್ಲಿ ನಟಿ ಹೇಗೆ ಬೋಲ್ಡ್ ಆಗಿ ಕಾಣಿಸುತ್ತಾರೋ, ನಿಜ ಜೀವನದಲ್ಲೂ ನಟಿ ಅಷ್ಟೇ ಬೋಲ್ಡ್.

ಬಗ್ಗೆ ಡ್ರೆಸ್ ಬಗ್ಗೆ ಮಾತನಾಡುವವರಿಗೆ ತಿರುಗೇಟು ಕೊಟ್ಟ ನಟಿ

ಇದೀಗ ಆರತಿ ಪಡುಬಿದ್ರಿ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಫೋಟೊಗಳ ವಿಡಿಯೋ ಹಂಚಿಕೊಂಡು ‘WHEN PEOPLE COMMENT ON MY OUTFITS’ ಎನ್ನುವ ಕ್ಯಾಪ್ಶನ್ ಕೊಟ್ಟು ರಿಯಾಲ್ ಸ್ಟಾರ್ ಉಪೇಂದ್ರ ಅವರ ‘ನಂಗೆ ಇಷ್ಟ ಬಂದ ಡ್ರೆಸ್ ನಾನು ಹಾಕೊಳ್ತೀನಿ, ನಾನು ಇಷ್ಟ ಬಂದ ಹಾಗೆ ಓಡಾಡ್ತೀನಿ, ನೀವು ಯಾರಯ್ಯ ಕೇಳೋದಕ್ಕೆ. ಹೇ ನನ್ ಮಕ್ಳ, ನಿಮಗೂ ಆಸೆ ಇದೆ ಈ ಥರ ಡ್ರೆಸ್ ಎಲ್ಲಾ ಹಾಕಿ ಓಡಾಡ್ಬೇಕು ಅಂತ, ನೀವು ಜನಗಳಿಗೋಸ್ಕರ ಬದುಕುತ್ತೀರಾ, ನಾನು ನನಗೋಸ್ಕರ ಬದುಕ್ತೀನಿ,’ ಎನ್ನುವ ಡೈಲಾಗ್ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈ ವಾರ ಅತಿ ಹೆಚ್ಚು TRP ಪಡೆದು ನಂಬರ್ 1 ಸ್ಥಾನ ಪಡೆದ ಸೀರಿಯಲ್ ಯಾವುದು?
ಆ ಥರ ಕಂಟೆಂಟ್‌ಗೆ ಆಪ್ಶನ್‌ ಕೊಟ್ಟು, IT BT ಉದ್ಯೋಗಿಗಳಿಗಿಂತ ಹೆಚ್ಚು ದುಡಿಯುತ್ತಿರೋ Sonu Srinivas Gowda!